For Quick Alerts
ALLOW NOTIFICATIONS  
For Daily Alerts

ಮೊಳಕೆ ಬರಿಸಿದ ಹೆಸರುಕಾಳಿನ ರೊಟ್ಟಿ

|
Green Gram Roti
ಬೆಳಗ್ಗಿನ ತಿಂಡಿಗೆ ರೊಟ್ಟಿ ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಕರ್ನಾಟಕದಲ್ಲಿ ರೊಟ್ಟಿ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಅದರಲ್ಲೂ ಅಕ್ಕಿ ಅಥವಾ ರಾಗಿ ರೊಟ್ಟಿ ರುಚಿ ತುಂಬಾ ಚಿರಪರಿಚಿತ, ಆದರೆ ಹೆಸರು ಕಾಳಿನ ರೊಟ್ಟಿ ರುಚಿ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಮೊಳಕೆ ಬರಿಸಿದ ಹೆಸರು ಕಾಳಿನಿಂದ ರುಚಿಕರವಾದ ರೊಟ್ಟಿ ಮಾಡಬಹುದಾಗಿದ್ದು, ಇದನ್ನು ಮಾಡುವ ವಿಧಾನ ನೋಡಿ ಇಲ್ಲಿದೆ.

ಈ ರೊಟ್ಟಿ ಡಯಟ್ ಮಾಡುವವರಿಗೆ ತುಂಬಾ ಒಳ್ಳೆಯದು. ದಿನಾ ಹೆಸರು ಕಾಳನ್ನು ಮೊಳಕೆ ಬರಿಸಿ ಅದನ್ನು ಬೆಳಗ್ಗೆ ತಿನ್ನುತ್ತಿದ್ದರೆ ಬೋರಾಗುವುದು. ಅದರ ಬದಲು ಈ ರೊಟ್ಟಿ ಮಾಡಿ ದಿನಾ ತಿಂದರೂ ಬೋರಾಗುವುದಿಲ್ಲ, ಬಾಯಿಗೆ ರುಚಿ, ಆರೋಗ್ಯಕ್ಕೆ ಒಳ್ಳೆಯದು.

ಬೇಕಾಗುವ ಸಾಮಾಗ್ರಿಗಳು:
* ಮೊಳಕೆ ಬರಿಸಿದ ಹೆಸರು ಕಾಳು 2 ಕಪ್
* ಶುಂಠಿ ಒಂದು ಇಂಚಿನಷ್ಟು
* ಬೇಯಿಸಿದ ಆಲೂಗೆಡ್ಡೆ 1
* ಈರುಳ್ಳಿ 1
* ಹಸಿ ಮೆಣಸಿನ ಕಾಯಿ 4-5
* ಸ್ವಲ್ಪ ಕೊತ್ತಂಬರಿ ಸೊಪ್ಪು
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಮೊಳಕೆ ಬರಿಸಿದ ಹೆಸರುಕಾಳು, ಶು೦ಠಿ ಮತ್ತು ಸ್ವಲ್ಪ ನೀರು ಹಾಕಿಕೊ೦ಡು ಗಟ್ಟಿಯಾಗಿ ರುಬ್ಬಿಕೊಳ್ಳಬೇಕು.

2. ನ೦ತ ರುಬ್ಬಿದ ಮಿಶ್ರಣಕ್ಕೆ ಬೇಯಿಸಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನ ಕಾಯಿ, ಜೀರಿಗೆ ಮತ್ತು ಕೊತ್ತ೦ಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಕಲೆಸಬೇಕು.

3. ನಂತರ ಈ ಮಿಶ್ರಣದಿಂದ ರೊಟ್ಟಿ ತಟ್ಟಬೇಕು.

4. ಈಗ ತವಾ ಬಿಸಿ ಮಾಡಿ ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಅದರಲ್ಲಿ ಈ ತಟ್ಟಿದ ರೊಟ್ಟಿ ಹಾಕಿ ಬೇಯಿಸಬೇಕು.

ಈ ರೊಟ್ಟಿಯನ್ನು ಗಟ್ಟಿಯಾದ ಗ್ರೇವಿ ಅಥವಾ ಚಟ್ನಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ, ಅಲ್ಲದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಈ ರೊಟ್ಟಿಯನ್ನು ಕಾಯಿ ಚಟ್ನಿ, ಪಲ್ಯ ಅಥವಾ ಗ್ರೇವಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

English summary

Green Gram Roti | Variety Of Roti Recipe | ಹೆಸರು ಕಾಳಿನ ರೊಟ್ಟಿ ರೆಸಿಪಿ | ಅನೇಕ ಬಗೆಯ ರೊಟ್ಟಿ ರೆಸಿಪಿ

Roti one of the healthy breakfast , which will widely prepare in Karnataka. Usually we prepare Roti by flour or Ragi flour. But today we can learn to prepare Roti by using sports green gram.
Story first published: Wednesday, June 27, 2012, 10:19 [IST]
X
Desktop Bottom Promotion