For Quick Alerts
ALLOW NOTIFICATIONS  
For Daily Alerts

ಯಮ್ಮಿ ಬ್ರೇಕ್‌ಫಾಸ್ಟ್‌ಗಾಗಿ ಕೊತ್ತಂಬರಿ ಪರೋಟಾ

|

ಬೆಳಗ್ಗೆ ಬೇಗನೆದ್ದು ಬ್ರೇಕ್‌ಫಾಸ್ಟ್ ತಯಾರಿಸುವುದೆಂದರೆ ತಲೆನೋವಿನ ಕೆಲಸವೇ ಸರಿ. ಕಚೇರಿಯಲ್ಲಿ ಕೆಲಸ ಮಾಡುವ ನಾರಿಯರಿಗಂತೂ ಇದು ತುಂಬಾ ಕಷ್ಟಕರ ಕೆಲಸ. ಬೆಳಗ್ಗಿನ ತಿಂಡಿ ತಯಾರಿಸಿ ನಂತರ ಕಚೇರಿಗೆ ತೆರಳುವ ಧಾವಂತದಲ್ಲಿ ಅವರಿರುತ್ತಾರೆ. ಈ ಸಂದರ್ಭದಲ್ಲಿ ಅವರು ಸರಳವಾಗಿರುವ ಮತ್ತು ಆರೋಗ್ಯಕವಾದ ಬ್ರೇಕ್‌ಫಾಸ್ಟ್ ರೆಸಿಪಿಯತ್ತ ಮುಖ ಮಾಡುವುದು ಸಹಜವೇ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬ್ರೇಕ್‌ಫಾಸ್ಟ್‌ಗಾಗಿ ಆಲೂ ಭಟೂರಾ ರೆಸಿಪಿ!

ಇದನ್ನೇ ಗಮನದಲ್ಲಿಟ್ಟುಕೊಂಡು ನಾವಿಂದು ಸರಳವಾದ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗಾಗಿ ನಿಮ್ಮ ಮುಂದಿಡುತ್ತಿದ್ದೇವೆ. ಅದುವೇ ಕೊತ್ತಂಬರಿ ಸೊಪ್ಪಿನ ಪರೋಟಾ. ನಿಮ್ಮ ಮನೆಗಳಲ್ಲಿ ಕೊತ್ತಂಬರಿ ಸೊಪ್ಪು ಸಾಮಾನ್ಯವಾಗಿ ದೊರಕುತ್ತದೆ ಕೊತ್ತಂಬರಿ ಸೊಪ್ಪು ನಮ್ಮ ದಿನನಿತ್ಯದ ಅಡುಗೆಯಲ್ಲಿ ಅಗತ್ಯವಾಗಿ ಬೇಕೇ ಬೇಕು. ಉತ್ತಮ ಸುಗಂಧ ಹಾಗೂ ವಿಟಮಿನ್‌ಗಳಲ್ಲಿ ಹೇರಳವಾಗಿರುವ ಕೊತ್ತಂಬರಿ ಸೊಪ್ಪು ಆರೋಗ್ಯ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

Coriander Paratha For Breakfast

ಇವತ್ತಿನ ಬ್ರೇಕ್‌ಫಾಸ್ಟ್‌ಗಾಗಿ ಕೊತ್ತಂಬರಿ ಪರೋಟಾ ರೆಸಿಪಿ ಪ್ರಯತ್ನಿಸಿ ಮಾಡುವ ವಿಧಾನಕ್ಕಾಗಿ ಮುಂದೆ ಓದಿ:

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯಮ್ಮಿ ಗೋಧಿ ರವೆ ಉಪ್ಮಾ ರೆಸಿಪಿ!

ಪ್ರಮಾಣ: 4
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 5 ನಿಮಿಷಗಳು

ಸಾಮಾಗ್ರಿಗಳು:
.ಗೋಧಿ ಹುಡಿ - 2 ಕಪ್‌ಗಳು
.ಉಪ್ಪು - ರುಚಿಗೆ ತಕ್ಕಷ್ಟು
.ಎಣ್ಣೆ - 3 ಸ್ಪೂನ್

ಸ್ಟಫಿಂಗ್ ಮಾಡಲು:
.ಕೊತ್ತಂಬರಿ ಸೊಪ್ಪು - 1 ಕಪ್ ( ಕತ್ತರಿಸಿದ್ದು)
.ಕೊತ್ತಂಬರಿ ಹುಡಿ - 1 ಸ್ಪೂನ್
.ಜೀರಿಗೆ ಹುಡಿ - 1 ಸ್ಪೂನ್
.ಅರಶಿನ ಹುಡಿ - 1/2 ಸ್ಪೂನ್
.ಕಡಲೆ ಹಿಟ್ಟು - 1 ಸ್ಪೂನ್
.ಹಸಿಮೆಣಸು - 2 (ಕತ್ತರಿಸಿದ್ದು)
.ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
1. ಗೋಧಿ ಹುಡಿ, ಉಪ್ಪು ಮತ್ತು ಸಾಕಷ್ಟು ನೀರು ತೆಗೆದುಕೊಂಡು ಸ್ವಲ್ಪ ಗಟ್ಟಿ ಹಿಟ್ಟು ನಾದಿಕೊಳ್ಳಿ.

2.ಚೆನ್ನಾಗಿ ಕಲಸುತ್ತಾ 6 ಸಮಾನವಾದ ಭಾಗಗಳನ್ನಾಗಿ ಮಾಡಿ.

3.ಪ್ರತಿಯೊಂದು ಭಾಗವನ್ನೂ ದಪ್ಪನೆಯ ಚಪಾತಿ ಆಕಾರದಲ್ಲಿ ಲಟ್ಟಿಸಿಕೊಳ್ಳಿ.

4.ಬೌಲ್‌ನಲ್ಲಿ ಸ್ಟಫಿಂಗ್‌ನ ಎಲ್ಲಾ ಸಾಮಾಗ್ರಿಗಳನ್ನೂ ಮಿಶ್ರ ಮಾಡಿಕೊಳ್ಳಿ.

5.ಈ ಸ್ಟಫಿಂಗ್‌ನ ಒಂದು ಸ್ಪೂನ್‌ನಷ್ಟನ್ನು ಚಪಾತಿಯ ಮಧ್ಯ ಭಾಗದಲ್ಲಿ ಇರಿಸಿಕೊಳ್ಳಿ.

6.ಚಪಾತಿಯ ಬದಿಗಳನ್ನು ಮಡಚಿಕೊಳ್ಳಿ ಮತ್ತು ಸ್ಟಫಿಂಗ್ ಅನ್ನು ಸಂಪೂರ್ಣವಾಗಿ ಕವರ್ ಮಾಡಿಕೊಳ್ಳಿ.

7.ಪುನಃ ದಪ್ಪನೆಯ ಚಪಾತಿ ಆಕಾರದಲ್ಲಿ ಇದನ್ನು ಲಟ್ಟಿಸಿಕೊಳ್ಳಿ.

8.ತವಾ ಬಿಸಿ ಮಾಡಿಕೊಂಡು ಈ ಚಪಾತಿಯನ್ನು ಅದಕ್ಕೆ ಹಾಕಿ.

9.ಚಪಾತಿಯ ಎರಡೂ ಬದಿಗಳಿಗೆ ಎಣ್ಣೆ ಸವರಿ ಮತ್ತು ಚಪಾತಿ ಬಣ್ಣ ಗೋಲ್ಡನ್ ಕಂದು ಬರುವವರೆಗೆ ಕಾಯಿಸಿ.

10.ಇನ್ನಷ್ಟು ಚಪಾತಿಗಳನ್ನು ಮಾಡಲು ಇದೇ ವಿಧಾನವನ್ನು ಪುನರಾವರ್ತಿಸಿ.

ನಿಮ್ಮ ರುಚಿಯಾದ ಕೊತ್ತಂಬರಿ ಸೊಪ್ಪಿನ ಚಪಾತಿಯನ್ನು ಇಷ್ಟದ ಪದಾರ್ಥ ಮತ್ತು ಚಟ್ನಿಯೊಂದಿಗೆ ಸವಿಯಿರಿ.

English summary

Coriander Paratha For Breakfast

Getting up in the morning and preparing breakfast for all seems like a herculean task. Keeping this in mind today we have a simple and quick coriander paratha recipe for breakfast. Coriander leaves are generally found in every house.
Story first published: Saturday, March 22, 2014, 11:12 [IST]
X
Desktop Bottom Promotion