For Quick Alerts
ALLOW NOTIFICATIONS  
For Daily Alerts

ಈವತ್ತಿನ ಸ್ಪೆಷಲ್ ಕ್ಯಾರೆಟ್ ಪರೋಟ

|

ಸಾಮಾನ್ಯವಾಗಿ ಪರೋಟ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಆಲೂ ಅಥವ ಗೋಬಿ ಪರೋಟ ಅಲ್ಲವೆ. ಈವತ್ತು ಬೋಲ್ಡ್ ಸ್ಕೈ ಸ್ವಲ್ಪ ಭಿನ್ನವಾದ ಹೊಸ ರುಚಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಅದೇ ಕ್ಯಾರೆಟ್ ಪರೋಟ. ಚುಮು ಚುಮು ಚಳಿಯಲ್ಲಿ ಬೆಳಗಿನ ತಿಂಡಿಗೆ ಬಿಸಿ ಬಿಸಿ ಪರೋಟ ಸವಿಯಲು ಚೆನ್ನ ಅನ್ನಿಸುತ್ತದೆ ಅಲ್ಲವೇ?
ಬನ್ನಿ ಹಾಗಿದ್ದರೆ ಕ್ಯಾರೆಟ್ ಪರೋಟ ಮಾಡೋದು ಹೇಗೆ ಎಂದು ನೋಡೋಣ.

Breakfast Special: Gajar Ka Paratha

ಬೇಕಾಗುವ ಸಾಮಗ್ರಿಗಳು
ಪರೋಟದ ಹೂರಣಕ್ಕೆ:

1. ಕ್ಯಾರೆಟ್- 5 (ತುರಿದು ಕೊಳ್ಳಿ)
2. ಶುಂಠಿ- 1 (ತುರಿದು ಕೊಳ್ಳಿ)
3. ಹಸಿಮೆಣಸಿನ ಕಾಯಿ- 2 (ಕತ್ತರಿಸಿಕೊಳ್ಳಿ)
4. ಅರಿಶಿಣ ಪುಡಿ- 1/2 ಟೀಚಮಚ
5. ಅಚ್ಚ ಖಾರದ ಪುಡಿ- 1 ಟೀಚಮಚ
6. ಮಾವಿನ ಪುಡಿ- 1 ಟೀಚಮಚ
7. ಜೀರಿಗೆ ಪುಡಿ- 1 ಟೀಚಮಚ
8. ಉಪ್ಪು ರುಚಿಗೆ ತಕ್ಕಷ್ಟು
9. ಎಣ್ಣೆ 1 ಟೀಚಮಚ

ಪರೋಟ ಮಾಡಲು:

1. ಗೋಧಿ ಹಿಟ್ಟು- 2 ಕಪ್
2. ಉಪ್ಪು ಸ್ವಲ್ಪ
3. ನೀರು- 1 ಕಪ್
4. ಎಣ್ಣೆ- 4 ಟೀಚಮಚ

ಮಾಡುವ ವಿಧಾನ
1. ಕ್ಯಾರೆಟ್ ತುರಿದುಕೊಂಡು ಅದನ್ನು ಹಿಂಡಿ ಅದರ ರಸ ತೆಗೆದುಬಿಡಿ.
2. ಬಾಣಲಿಯಲ್ಲಿ ಎಣ್ಣೆ ಕಾಯಿಸಿಕೊಂಡು ಅದಕ್ಕೆ ತುರಿದ ಶುಂಠಿಯನ್ನು ಹಾಕಿ ಹುರಿಯಿರಿ.
3. ನಂತರ ಕ್ಯಾರೆಟ್ ತುರಿ, ಉಪ್ಪು, ಹಸಿಮೆಣಸಿನಕಾಯಿ, ಜೀರಿಗೆ ಪುಡಿ, ಮಾವಿನ ಪುಡಿ, ಅಚ್ಚ ಖಾರದ ಪುಡಿ, ಅರಿಶಿಣ ಪುಡಿ ಹಾಕಿ ಸಣ್ಣ ಉರಿಯಲ್ಲಿ 4-5 ನಿಮಿಷ ಹುರಿಯಿರಿ.
4.ನಂತರ ಮುಚ್ಚಳ ಮುಚ್ಚಿ 5-6 ನಿಮಿಷಗಳವರೆಗೆ ಬೇಯಿಸಿ.
5. ಬೆಂದ ನಂತರ ಅದನ್ನು ಒಲೆಯಿಂದ ಇಳಿಸಿ ತಣ್ಣಗಾಗಲು ಬಿಡಿ.
6. ಈಗ ಪರೋಟ ಮಾಡಲು ಹಿಟ್ಟನ್ನು ಕಲಸಿಕೊಳ್ಳಿ
7. ಸಣ್ಣ ಉಂಡೆ ಮಾಡಿಕೊಂಡು ಸಣ್ಣ ಚಪಾತಿ ಹಾಗೆ ಲಟ್ಟಿಸಿಕೊಳ್ಳಿ.
8.ಇದರೊಳಗೆ ಮಾಡಿಟ್ಟುಕೊಂಡ ಕ್ಯಾರೆಟ್ ಪಲ್ಯ/ಹೂರಣವನ್ನು ಇಟ್ಟು ಮುಚ್ಚಿ.
9. ಅದನ್ನು ನಿಧಾನವಾಗಿ ಗುಂಡಗೆ ತಟ್ಟಿ.
10 ನಂತರ ಹೆಂಚಿನ ಮೇಲೆ ಎರಡೂ ಬದಿಯಲ್ಲಿ ಚೆನ್ನಾಗಿ ಸುಡಿ.

ಕ್ಯಾರೆಟ್ ಪರೋಟವನ್ನು ಉಪ್ಪಿನಕಾಯಿ ಅಥವ ಕರ್ರಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

English summary

Breakfast Special: Gajar Ka Paratha

Stuffed paratha always brings aloo paratha or gobi paratha into our mind. But today we have a different kind of paratha. It is gajar ka paratha or carrot paratha.
Story first published: Friday, December 20, 2013, 12:49 [IST]
X
Desktop Bottom Promotion