For Quick Alerts
ALLOW NOTIFICATIONS  
For Daily Alerts

ಈರುಳ್ಳಿ ನಿಪ್ಪಟ್ಟು

By Super
|

ಈರುಳ್ಳಿ ಬೆಲೆ ಸಿಕ್ಕಾಪಟ್ಟೆ ಕಡಿಮೆ ಆಗಿದೆ. ಬೇಗಬೇಗ ಈರುಳ್ಳಿಯನ್ನು ಹೆಚ್ಚಿ ಬಗೆಬಗೆ ತಿಂಡಿಮಾಡಿ ತಿಂದುಬಿಡಿ.

  • ವಾಣಿ ಪಿ. ನಾಯಿಕ

ಮದ್ದೂರಿನ ವಡೆಯಂತೆ ಕಾಣುವ ಅದಕ್ಕಿಂತಲೂ ಬಲು ರುಚಿ. ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವಾಗ ಮದ್ದೂರು ವಡೆ ನೋಡಿದಾಗಲೆಲ್ಲ ನೆನಪಿಗೆ ಬರದಿದ್ದರೆ ಕೇಳಿನೋಡಿ. ಇದನ್ನು ಗಂಟಲಲ್ಲಿ ಇಳಿಸುವುದು ಎಷ್ಟು ಸುಲಭವೋ ಅಷ್ಟೇ ಸುಲಭ ಈರುಳ್ಳಿ ನಿಪ್ಪಟ್ಟನ್ನು ಮಾಡುವುದು.

ಅಗತ್ಯವಾದ ಪದಾರ್ಥಗಳು :

2 ಕಪ್‌ -ಅಕ್ಕಿಹಿಟ್ಟು
1ಕಪ್‌ -ಚಿರೋಟಿ ರವೆ
1ಕಪ್‌-ಕಡಲೇ ಹಿಟ್ಟು
1/2 ಕಪ್‌-ಮೈದಾ ಹಿಟ್ಟು
1-ಈರುಳ್ಳಿ(ಸಣ್ಣಗೆ ಹೆಚ್ಚಬೇಕು)
2 ಟೀ ಚಮಚ -ಅಚ್ಚ ಖಾರದ ಪುಡಿ
ಒಂದು ಚಿಟಕಿ -ಸೋಡಾ
ಉಪ್ಪು (ರುಚಿಗೆ ತಕ್ಕಷ್ಟು)
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸ್ವಲ್ಪ
ಕರಿಯಲು ಎಣ್ಣೆ

ಮಾಡುವ ವಿಧಾನ : ಒಂದು ಪಾತ್ರೆಗೆ ಅಕ್ಕಿ ಹಿಟ್ಟು, ಚಿರೋಟಿ ರವೆ, ಮೈದಾ ಹಿಟ್ಟು, ಕಡಲೇ ಹಿಟ್ಟನ್ನು ಹಾಕಿ. ಅದೇ ಪಾತ್ರೆಗೆ ಸಣ್ಣಗೆ ಹೆಚ್ಚಿಕೊಂಡಿದ್ದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು, ಅಚ್ಚ ಖಾರದ ಪುಡಿ ಹಾಗೂ ಚಿಟಕಿ ಸೋಡಾವನ್ನು ಸೇರಿಸಿ, ಕೈಯಾಡಿಸಿ.

ನಂತರ ಎಷ್ಟು ಬೇಕೋ ಅಷ್ಟು ನೀರನ್ನು ಸೇರಿಸಿ ಮಿಶ್ರಣವನ್ನು ಕಲಸಿ. ಅದು ಚಪಾತಿ ಹಿಟ್ಟಿನಂತೆ ಗಟ್ಟಿಯಾಗಿರಬೇಕು. ಅಲ್ಲಿಗೆ ನಿಮ್ಮ ಅರ್ಧ ಕೆಲಸ ಮುಗಿಯಿತು.

ಕಲಸಿದ ಹಿಟ್ಟನ್ನು ಒಂದು ಪ್ಲಾಸ್ಟಿಕ್‌ ಕವರಿನ ಮೇಲೆ ದುಂಡಾಕಾರವಾಗಿ ಕೈಗೆ ಎಣ್ಣೆ ಸವರಿಕೊಂಡು ಕೈನಿಂದ ತಟ್ಟಿರಿ. ಹೀಗೆ ತಟ್ಟಿದ ನಿಪ್ಪಟ್ಟುಗಳನ್ನು ಎಣ್ಣೆಯಲ್ಲಿ ಕರಿದು ಬಿಡಿ. ಆಮೇಲೆ ಸಿದ್ಧವಾದ ನಿಪ್ಪಟ್ಟುಗಳನ್ನು ಬಾಯಿಗೆ ಇಳಿಸಿಬಿಡಿ. ಗರಿಗರಿ ನಿಪ್ಪಟ್ಟನ್ನು ಬಿಸಿ ಇರುವಾಗಲೇ ಸೇವಿಸಿದರೆ ಮಜಾ. ಇದನ್ನು ಸಾಯಂಕಾಲದ ಚಹಾದೊಡನೆ ಸೇವಿಸಬಹುದು. ಊಟದೊಡನೆಯೂ ಬಾಡಿಸಿಕೊಳ್ಳಲು ಹೇಳಿ ಮಾಡಿದಂಥ ತಿನಿಸು ಈ .

X
Desktop Bottom Promotion