For Quick Alerts
ALLOW NOTIFICATIONS  
For Daily Alerts

ಹೊಸರುಚಿ : ಸೌತೆಕಾಯಿ ಇಡ್ಲಿ

|
Cucumber idli
ಉದ್ದಿನಬೇಳೆ-ಅಕ್ಕಿ 1: 2 ಪ್ರಮಾಣದಲ್ಲಿ ಉಪಯೋಗಿಸಿ ಇಡ್ಲಿ ತಯಾರಿಸುವುದು ನಿಮಗೆಲ್ಲ ಗೊತ್ತೇ ಇದೆ. ಉದ್ದಿನಬೇಳೆಯ ಬದಲು ಸೌತೆಕಾಯಿ (ಮಂಗಳೂರು ಸೌತೆಯೂ ಆಗುತ್ತದೆ, ಮುಳ್ಳುಸೌತೆ ಕೂಡ ಆಗುತ್ತದೆ) ಹಾಕಿ ಇಡ್ಲಿ ಮಾಡಿದರೆ ಹೊಸರುಚಿಯಾಗುತ್ತದೆ.

ಬೇಕಾಗುವ ಪದಾರ್ಥಗಳು :

ಅಕ್ಕಿ 2 ಕಪ್
ತುರಿದ ಸೌತೆಕಾಯಿ 1 ಕಪ್
ಅವಲಕ್ಕಿ, ಹಿಡಿಯಷ್ಟು
ತೆಂಗಿನಕಾಯಿ ತುರಿ ಅರ್ಧ ಕಪ್
ರವಾ ಅರ್ಧ ಕಪ್
ಗಟ್ಟಿಮೊಸರು ಅರ್ಧ ಕಪ್

ತಯಾರಿಸುವ ವಿಧಾನ :

2 ಕಪ್‌ ಅಕ್ಕಿಯನ್ನು ಬಾಣಲೆಯಲ್ಲಿ ಸ್ವಲ್ಪವೇ ಹುರಿದು ಆರಿಸಿ ನೀರಲ್ಲಿ ನೆನೆಸಿಡಿ. ಎರಡು ಗಂಟೆಯಾದರೂ ಅಕ್ಕಿ ನೆನೆದ ಬಳಿಕ, 1 ಕಪ್‌ನಷ್ಟು ಸೌತೆ (ಸಿಪ್ಪೆ ತೆಗೆದು ಸಣ್ಣಗೆ ತುರಿದದ್ದು), ಒಂದು ಹಿಡಿ ಅವಲಕ್ಕಿ, 1/2 ಕಪ್‌ ತೆಂಗಿನಕಾಯಿ ತುರಿಯನ್ನೂ, ಚಿಟಿಕೆಉಪ್ಪು ಸೇರಿಸಿ ರುಬ್ಬಿಟ್ಟುಕೊಳ್ಳಿ. ನೀರು ಹಾಕಬೇಡಿ, ಹಿಟ್ಟು ದಪ್ಪವಾಗೇ ಇರಲಿ. ಈ ಮಿಶ್ರಣಕ್ಕೆ, ತುಪ್ಪದಲ್ಲಿ ಹುರಿದ ರವಾ 1/2 ಕಪ್‌, ಮತ್ತು ಗಟ್ಟಿಮೊಸರು 1/2 ಕಪ್‌ ಸೇರಿಸಿ. ಇಡ್ಲಿ ಸ್ಟಾಂಡ್‌ನಲ್ಲಿಟ್ಟು ಹಬೆಯ ಮೇಲೆ ಬೇಯಿಸಿ. ಘಮಘಮ ಪರಿಮಳದ ಸೌತೆಕಾಯಿ ಇಡ್ಲಿ ರೆಡಿ.

ನಿಮ್ಮ ಕ್ರಿಯೇಟಿವಿಟಿಯನ್ನವಲಂಬಿಸಿ ಇಡ್ಲಿಹಿಟ್ಟಿಗೆ ಕತ್ತರಿಸಿದ ಕೊತ್ತುಂಬರಿ ಸೊಪ್ಪು, ಹಸಿಮೆಣಸು ಅಥವಾ ನಿಮ್ಮದು ಸ್ವಲ್ಪ 'ಸಿಹಿ ಸವಿಯುವ ನಾಲಿಗೆ"ಯಾದರೆ ಬೆಲ್ಲ - ಹೀಗೆ ಕೊಂಚ ವೈವಿಧ್ಯವನ್ನೂ ತಂದುಕೊಳ್ಳಬಹುದು. ಒಮ್ಮೆ ಮಾಡಿ ನೋಡಿ, ಆನಂತರ ವಾರವಾರವೂ ಮಾಡುತ್ತಲೇ ಇರುವಿರಿ.

Story first published: Tuesday, October 13, 2009, 13:49 [IST]
X
Desktop Bottom Promotion