For Quick Alerts
ALLOW NOTIFICATIONS  
For Daily Alerts

ನವರಾತ್ರಿ ಸ್ಪೆಷಲ್ ಹೆಸರು ಬೇಳೆ ಪೂರಿ

|
Moong Dal
ಹೆಸರು ಬೇಳೆ ಪೂರಿಯನ್ನು ಹಸಿಮೆಣಸಿನ ಚಟ್ನಿನೊಂದಿಗೆ ತಿನ್ನಲು ತುಂಬ ರುಚಿಯಾಗಿರುತ್ತದೆ. ನವರಾತ್ರಿಯ ಸಮಯದಲ್ಲಿ ಈ ಪೂರಿಯನ್ನು ಹೆಚ್ಚಾಗಿ ಮಾಡುತ್ತಾರೆ. ಈ ಹೆಸರು ಬೇಳೆ ಪೂರಿಯನ್ನು ಮಾಡುವ ವಿಧಾನ ನೋಡಿ ಹೀಗಿದೆ.

ಬೇಕಾಗುವ ಸಾಮಾಗ್ರಿಗಳು:

1. ಮೈದಾ 1 ಕಪ್
2. ಹೆಸರು ಬೇಳೆ 1/2 ಕಪ್
3. ಕೆಂಪು ಮೆಣಸು 2
4. ಜೀರಿಗೆ ಪುಡಿ 1/2 ಚಮಚ
5. ಏಲಕ್ಕಿ 2
6. ಸ್ವಲ್ಪ ಇಂಗು ಮತ್ತು ಗರಂ ಮಸಾಲ
7. ಬೆಳ್ಳುಳ್ಳಿ 2
8. ಡಾಲ್ಚಿನ್ನಿ ಸ್ವಲ್ಪ
9. ಎಣ್ಣೆ
10. ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ:

1. ಹೆಸರು ಬೇಳೆಯನ್ನು ಒಂದು ರಾತ್ರಿ ನೀರಿನಲ್ಲಿಟ್ಟು ನಂತರ ನೀರನ್ನು ಚೆಲ್ಲಿ, ಹಿಟ್ಟು ಗಟ್ಟಿಯಾಗಿರುವಂತೆ ಅರಿಯಿರಿ.

2. ಎಣ್ಣೆಯನ್ನು ಬಾಣಲೆಗೆ ಹಾಕಿ ಅದಕ್ಕೆ ಇಂಗು ಮತ್ತು ಜೀರಿಗೆ ಪುಡಿ ಹಾಕಿ ಅದರಲ್ಲಿ ಆ ಹಿಟ್ಟನ್ನು ಹಾಕಿ ಹುರಿಯಿರಿ.

3. ಅದಕ್ಕೆ ಉಪ್ಪು, ಗರಂ ಮಸಾಲ, ಮೆಣಸಿನ ಪುಡಿ, ಕತ್ತರಿಸಿದ ಕೆಂಪು ಮೆಣಸು, ಬೆಳ್ಳುಳ್ಳಿ ಹಾಕಿ ಆ ಮಿಶ್ರಣ ಹಳದಿ -ಕಂದು ಬಣ್ಣಕ್ಕೆ ಬರುವರೆಗೆ ತಿರುಗಿಸಿ.

4. ಈಗ ಆ ಮಿಶ್ರಣದಲ್ಲಿ ಏಲಕ್ಕಿ ಪುಡಿಯನ್ನು ಬೆರೆಸಿ ಅದನ್ನು ಒಲೆ ಅಥವಾ ಗ್ಯಾಸ್ ನಿಂದ ತೆಗೆದು ಆರಲು ಇಡಿ.

5.ನಂತರ ಹದ ಬಿಸಿ ನೀರಿನಲ್ಲಿ ಮೈದವನ್ನು ಹಾಕಿ ಕಲಸಿ, ಸ್ವಲ್ಪ ಉಪ್ಪು ಮತ್ತು ತುಪ್ಪ ಹಾಕಿ ಮೃದುವಾದ ಹಿಟ್ಟುವನ್ನಾಗಿ ಮಾಡಿ.

6. ಈಗ ಆ ಹಿಟ್ಟಿನಿಂದ ಚಿಕ್ಕ ಪೂರಿ ಮಾಡಿ ಅದಕ್ಕೆ ಹುರಿದ ಹೆಸರು ಬೇಳೆ ಮಿಶ್ರಣವನ್ನು ಸೇರಿಸಿ. ನಂತರ ಪೂರಿಯ ತುದಿಗಳನ್ನು ನಿಧಾನಕ್ಕೆ ಸೇರಿಸಿ, ನಂತರ ಅದನ್ನು ಪೂರಿಯಾಗೆ ಉಂಡೆ ಕಟ್ಟಿ.

7. ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಅದು ಹುದಿ ಬರುತ್ತಿರುವಾಗ ಪೂರಿ ಉಂಡೆಯನ್ನು ಹಾಕಿ ಅದು ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ.

ಇದನ್ನು ಟೊಮೆಟೋ ರಸ, ಅಥವಾ ಹಸಿಮೆಣಸಿನ ಚಟ್ನಿಯೊಂದಿಗೆ ಸೇರಿಸಿ ತಿನ್ನಲು ಬಲು ರುಚಿಯಾಗಿರುತ್ತದೆ.

English summary

Recipe For Moong Dal Kachori | Special Food For Navaratri | ಹೆಸರು ಬೇಳೆ ಪೂರಿ ಮಾಡುವ ವಿಧಾನ | ನವರಾತ್ರಿಗೆ ವಿಶೇಷ ಅಡುಗೆ

Dal stuffed puri or kachori is a tasty snack for Navratri made with moong dal. During Navratri, people have snacks like moong dal ki kachori with green chilli chutney which is tasty too. Here is the recipe for moong dal ki kachori.
Story first published: Tuesday, October 4, 2011, 13:33 [IST]
X
Desktop Bottom Promotion