For Quick Alerts
ALLOW NOTIFICATIONS  
For Daily Alerts

ಚಪಾತಿ ರೋಲ್ : ನಿಮಗೆ ಕಷ್ಟ, ಮಕ್ಕಳಿಗೆ ಇಷ್ಟ

|
Roti roll
ರೋಲ್ ಮಾಡಿರುವ ರೋಟಿ ಅಥವಾ ಚಪಾತಿಗಳೆಂದರೆ ಮಕ್ಕಳಿಗೆ ಇಷ್ಟ. ಫ್ರೂಟ್ ಜಾಮ್ ಅನ್ನು ಚಪಾತಿಗೆ ಹಾಕಿ ರೋಲ್ ಮಾಡಿ ತಿನ್ನುವುದು ಮಕ್ಕಳ ರೂಢಿ. ಆದ್ರೆ ಈ ಬಾರಿ ಈ ಡಿಫರೆಂಟ್ ಮಸಾಲ ಬೆರೆಸಿದ ರೋಟಿಯನ್ನ ರೋಲ್ ಮಾಡಿ ಟೇಸ್ಟ್ ಮಾಡೋದಕ್ಕೆ ಕೊಡಿ, ಇದು ಮಕ್ಕಳಿಗೆ ಮಾತ್ರವಲ್ಲ. ನಿಮಗೂ ಕೂಡ ಅಚ್ಚುಮೆಚ್ಚಾಗುತ್ತೆ.

ರೋಟಿ ರೋಲ್ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು:
* ಗೋಧಿ ಹಿಟ್ಟು
* ಸಣ್ಣದಾಗಿ ಹೆಚ್ಚಿದ ಪನ್ನೀರು
* ಕತ್ತರಿಸಿದ ಈರುಳ್ಳಿ, ದುಂಡು ಮೆಣಸಿನ ಕಾಯಿ, ಹಸಿರು ಮೆಣಸಿನ ಕಾಯಿ
* ಅರಿಶಿನ, ಉಪ್ಪು, ಕೆಂಪು ಮೆಣಸಿನ ಪುಡಿ
* ಚಾಟ್ ಮಸಾಲ

ಮಾಡುವ ವಿಧಾನ: ಬಾಣಲೆಯಲ್ಲಿ ಮೊದಲು ಕತ್ತರಿಸಿದ ಈರುಳ್ಳಿ, ದುಂಡು ಮೆಣಸಿನ ಕಾಯಿ ಮತ್ತು ಹಸಿರು ಮೆಣಸಿನ ಕಾಯಿಯನ್ನು ಎಣ್ಣೆಯಲ್ಲಿ ಹುರಿದುಕೊಳ್ಳಬೇಕು. ಅದು ಕೆಂಪಗೆ ಆದ ನಂತರ ಅರಿಶಿನದ ಪುಡಿ, ಉಪ್ಪು ಮತ್ತು ಕೆಂಪು ಮೆಣಸಿನ ಪುಡಿ ಹಾಕಬೇಕು. ಈಗ ಗೋಧಿ ಹಿಟ್ಟಿನಿಂದ ರೋಟಿ, ಪರೋಟ ಅಥವಾ ಚಪಾತಿ ತಯಾರಿಸಿಕೊಳ್ಳಬೇಕು. ನಂತರ ಪನ್ನೀರು ಮತ್ತು ಈರುಳ್ಳಿಯನ್ನು ಮಿಶ್ರಣ ಮಾಡಿಕೊಂಡು ಸ್ವಲ್ಪ ಟೊಮೊಟೊ ಸಾಸ್, ಚಾಟ್ ಮಸಾಲ ಹಾಕಬೇಕು.

ಈಗ ರೋಟಿ ಅಥವಾ ಚಪಾತಿಯ ಒಳಗೆ ಈ ಮಿಶ್ರಣವನ್ನು ಹಾಕಿ ಸುರುಳಿ ಸುತ್ತಬೇಕು. ಈಗ ರೋಟಿ ರೋಲ್ ರೆಡಿಯಾಗಿದೆ. ಇದನ್ನು ಬಿಸಿಬಿಸಿಯಾಗಿ ತಿಂದರೆ ಇನ್ನೂ ಚೆಂದ. ಬೇಕೆಂದರೆ ಕೊತ್ತಂಬರಿ ಚಟ್ನಿಯನ್ನೂ ಈ ಮಿಶ್ರಣಕ್ಕೆ ಬೆರೆಸಿದರೆ ಇನ್ನೂ ಸ್ಪೈಸಿಯಾಗಿರುತ್ತೆ.

English summary

Franky roti roll | Franky roti roll recipe | ಬೆಳಗಿನ ತಿಂಡಿ | ರೋಟಿ ರೋಲ್ ರೆಸಿಪಿ

Franky roll is all time favorite dish of kids and can be made quickly too. Today we will check out the different recipe for franky roti roll.
Story first published: Wednesday, August 10, 2011, 14:44 [IST]
X
Desktop Bottom Promotion