For Quick Alerts
ALLOW NOTIFICATIONS  
For Daily Alerts

ಮಕ್ಕಳ ಅಚ್ಚುಮೆಚ್ಚಿನ ತಿಂಡಿ ದೋಸೆ ಬ್ರೆಡ್ಡು

By * ಮನೋರಮಾ ಜೋಯಿಶ, ವರ್ಜಿನಿಯ
|

ಕರಾವಳಿ ಪ್ರದೇಶದಲ್ಲಿ ಹುಟ್ಟಿ ಬೆಳೆದವರು 'ಬ್ರೆಡ್ಡು ದೋಸೆ' ತಿಂದಿರುತ್ತೀರ ಅಥವಾ ಕೇಳಿರುತ್ತೀರ, ಅಲ್ಲವೇ? ನಾನೀಗ ಹೇಳಲು ಹೊರಟಿರುವುದು ಬ್ರೆಡ್ ದೋಸೆಯ ಬಗ್ಗೆಯಲ್ಲ, ದೋಸೆ ಬ್ರೆಡ್ಡಿನ ಕುರಿತು. ನಮ್ಮ ಮನೆಯ ಮತ್ತು ಮಗಳು ಸ್ನೇಹಾಳ ಮೆಚ್ಚಿನ ಹೊಸರುಚಿ. ಶಾಲೆಗೆ ಹೋಗುವ ಮಕ್ಕಳಿಗೆ ಲಂಚ್ ಬಾಕ್ಸಲ್ಲಿ ಕೊಟ್ಟರೆ ಇಷ್ಟಪಟ್ಟು, ಪುನಃ ಬೇಕೆಂದು ಕೇಳುವ ತಿಂಡಿ. ಹಲವು ಬಾರಿ ಮನೆಯಲ್ಲಿ ಬ್ರೆಡ್ಡು ಇರುತ್ತೆ ಮತ್ತು ಅಲ್ಪ ಸ್ವಲ್ಪ ದೋಸೆ ಹಿಟ್ಟು ಇರುತ್ತೆ ... ಇಷ್ಟೇ ಸಾಕು ನಿಮ್ಮ ದೋಸೆ ಬ್ರೆಡ್ಡಿಗೆ.

ಬೇಕಾಗುವ ಪದಾರ್ಥಗಳು :

ಬ್ರೆಡ್
ದೋಸೆ ಹಿಟ್ಟು
ಉಪ್ಪು

ಮಾಡುವ ರೀತಿ :

* ಬ್ರೆಡ್ಡನ್ನು ಬಿಸಿ ಕಾವಲಿಯ ಮೇಲೆ ಹೊಂಬಣ್ಣ ಬರುವ ವರೆಗೆ ಎರಡೂ ಬದಿ ಕಾಯಿಸಿ.

* ಬರ್ನರ್ ಈಗ ಲೋ ಸೆಟ್ಟಿಂಗ್ನಲ್ಲಿ ಇರಲಿ [ದೋಸೆ ಹಿಟ್ಟು ಕೈಗೆ ಎಟಕುವಂತೆ ಇದ್ದರೆ ಕೆಲಸ ಸುಲಭ].

* ಸ್ವಲ್ಪ ದೋಸೆ ಹಿಟ್ಟನ್ನು ಬ್ರೆಡ್ಡಿನ ಒಂದು ಬದಿಯ ಮೇಲೆ ಎರೆದು, ಬ್ರೆಡ್ಡನ್ನು ನಿಧಾನವಾಗಿ ಮಗುಚಿ ಹಾಕಿ. ಬೇಕಿದ್ದರೆ ಸ್ವಲ್ಪ ಉಪ್ಪು ಉದುರಿಸಿ.

* ಒಂದು ನಿಮಿಷದ ಬಳಿಕ ಪುನಃ ಮಗುಚಿ ಹಾಕಿ.. ಈಗ ನಿಮ್ಮ ದೋಸೆ ಬ್ರೆಡ್ಡು ರೆಡಿ.


ವಿ.ಸೂ :

1) ಎಲ್ಲಾ ದೋಸೆ ಹಿಟ್ಟು ಉಪಯೋಗಿಸಿ ಇದನ್ನು ಮಾಡಬಹುದು.

2) ನೆನಪಿಡಿ - ಉತ್ತಪ್ಪ ಅಥವಾ ದಪ್ಪ ಹಿಟ್ಟು(ಸಜ್ಜಿಗೆ ರೊಟ್ಟಿ) ನಿದಾನವಾಗಿ ಬೇಯುತ್ತೆ.

3) ಬ್ರೆಡ್ಡಿನ ಎರಡೂ ಬದಿ ದೋಸೆ ಎರೆದರೆ ಇದರ ರುಚಿ ಕಡಿಮೆ.

4) ಬಿಸಿ ಬಿಸಿ ತಿಂದರೆ ರುಚಿ ಹೆಚ್ಚು, ಆರೋಗ್ಯಕ್ಕೂ ಒಳ್ಳೇದು.

5) ಮಕ್ಕಳ ಟಿಫಿನ್ ಬಾಕ್ಸಿಗೆ ಹಾಕಬೇಕಿದ್ದರೆ ಹಾಟ್ ಬಾಕ್ಸಲ್ಲಿ ಹಾಕಿ, ಮಗುವಿಗೆ ಬಿಸಿ ಬ್ರೆಡ್ ದೋಸೆ ತಿನ್ನಲು ಅನುವಾಗುತ್ತದೆ.

English summary

Dosa bread recipe | Recipe for children | Breakfast for children | ದೋಸೆ ಬ್ರೆಡ್ ರೆಸಿಪಿ | ಮಕ್ಕಳು ಮೆಚ್ಚುವ ತಿಂಡಿ | ಮಕ್ಕಳಿಗಾಗಿ ಬೆಳಗಿನ ತಿಂಡಿ

Here is new variety of Dosa Bread recipe by Manorama Joisha, Vergenia. Alway try to give different and variety of recipe to children. This special breakfast is just for you children.
X
Desktop Bottom Promotion