For Quick Alerts
ALLOW NOTIFICATIONS  
For Daily Alerts

ಪ್ಲಾಸ್ಟಿಕ್‌ನಲ್ಲಿ ಶೇಖರಿಸಿದ ಪದಾರ್ಥ ಗರ್ಭಿಣಿಯರಿಗೆ ಬಹಳ ಅಪಾಯಕಾರಿ

|

ಗರ್ಭಾವಸ್ಥೆ ಪ್ರತಿ ಮಹಿಳೆಯ ಕನಸಾಗಿದ್ದು ಜೀವನವನ್ನೇ ಪರಿವರ್ತಿಸುವ ಅನುಭವವೂ ಹೌದು, ವಿಶೇಷವಾಗಿ ಇದು ಆಕೆಯ ಮೊದಲ ಗರ್ಭಧಾರಣೆಯಾಗಿದ್ದರೆ ಇದು ಇನ್ನೂ ಹೆಚ್ಚು. ಮೂರು ಹೆತ್ತವಳು ಆರು ಹೆತ್ತವಳಿಗೆ ಹೇಳಿದಳಂತೆ ಎಂಬ ಗಾದೆಯ ಪ್ರಕಾರ ಪ್ರತಿಯೊಬ್ಬರೂ ಗರ್ಭಿಣಿಗೆ ಹೀಗೆ ಮಾಡು, ಮಾಡದಿರು, ಇದು ತಿನ್ನು ಇದು ತಿನ್ನದಿರು ಆಹಾರದ ಬಗ್ಗೆ ಹೆಚ್ಚಿನ ಜಾಗರೂಕರಾಗಿರು ಎಂದು ಹೇಳುವವರೇ! ಇವನ್ನೆಲ್ಲಾ ಕೇಳಿ ಅಗತ್ಯವಿದ್ದುದನ್ನು ಮಾತ್ರ ಇರಿಸಿಕೊಂಡು ಉಳಿದುದನ್ನು ನಿರ್ಲಕ್ಷಿಸುವ ಮತ್ತು ಗರ್ಭಾವಸ್ಥೆಯಲ್ಲಿ ಆಕೆ ನಿಗಾ ಇಡಬೇಕಾದ ಕೆಲವಾರು ವಿಷಯಗಳಿವೆ.

ಸೇವಿಸುವ ಮತ್ತು ಸೇವಿಸಬಾರದ ಆಹಾರಗಳ ಬಗ್ಗೆ ಅನೇಕ ಮಾರ್ಗಸೂಚಿಗಳಿದ್ದರೂ, ಗರ್ಭಿಣಿ ಮಹಿಳೆಯರಿಗೆ ಪ್ಲಾಸ್ಟಿಕ್ ಪಾತ್ರೆಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಮತ್ತು ಗರ್ಭಾವಸ್ಥೆಯಲ್ಲಿ ಶಾಖವನ್ನು ಉಂಟುಮಾಡುವ ಆಹಾರಗಳ ಬಗ್ಗೆಯೂ ಎಚ್ಚರಿಕೆ ನೀಡಲಾಗುತ್ತದೆ. ತಜ್ಞರು ಈ ಪ್ಲಾಸ್ಟಿಕ್ ಪಾತ್ರೆಗಳು ಮತ್ತು ಶಾಖವನ್ನು ಉಂಟುಮಾಡುವ ಆಹಾರಗಳಿಂದ ಗರ್ಭಿಣಿಯರಿಗೆ ಏನು ಎಚ್ಚರಿಕೆ ನೀಡುತ್ತಾರೆ ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ:

ಪ್ಲಾಸ್ಟಿಕ್ ಡಬ್ಬಿಗಳು (Plastic containers)

ಪ್ಲಾಸ್ಟಿಕ್ ಡಬ್ಬಿಗಳು (Plastic containers)

ಇಂದು ಆಹಾರ ಬಿಸಿ ಮಾಡಲು ಮೈಕ್ರೋವೇವ್ ಅವನ್ ಗಳ ಬಳಕೆ ವ್ಯಾಪಕವಾಗಿದೆ ಹಾಗೂ ಈ ಕಾರ್ಯಕ್ಕೆಂದೇ ಮೈಕ್ರೋವೇವ್ ಅವನ್ ಸೇಫ್ ಎಂಬ ಮುದ್ರಣ ಇರುವ ಪ್ಲಾಸ್ಟಿಕ್ ಡಬ್ಬಿಗಳು ದೊರಕುತ್ತವೆ. ಆದರೆ ಇವುಗಳಲ್ಲಿ ಬಿಸಿ ಮಾಡಿದ ಆಹಾರ ಗರ್ಭವತಿಯರಲ್ಲಿ ಗರ್ಭಪಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಬೋಸ್ಟನ್‌ನಲ್ಲಿ ನಡೆದ ಅಮೇರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್‌ನ ವಾರ್ಷಿಕ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಿದ ವರದಿಯಲ್ಲಿ, ಈ ಬಗೆಯ ವಿವಿಧ ಪ್ಲಾಸ್ಟಿಕ್‌ಗಳಲ್ಲಿ ಕಂಡುಬರುವ ರಾಸಾಯನಿಕಗಳೊಂದಿಗಿನ ಹೆಚ್ಚಿನ ಮಟ್ಟದ ಸಂಪರ್ಕವು ಗರ್ಭಪಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಳ್ಳುವ ಕೆಲವು ರೀತಿಯ ಪ್ಲಾಸ್ಟಿಕ್‌ಗಳಿಂದ ಸೋರುವ ಬಿಸ್ಫೆನಾಲ್ ಎ [BPA] ಎಂಬ ರಾಸಾಯನಿಕದ ಇರುವಿಕೆ ಆಹಾರದಲ್ಲಿದ್ದರೆ ಈ ಅಪಾಯ ಹೆಚ್ಚುತ್ತದೆ ಎಂಬುದನ್ನು ಖಚಿತಪಡಿಸಲಾಗಿದೆ.

ಬಿಪಿಎ ಬಳಕೆ ಹೆಚ್ಚು

ಬಿಪಿಎ ಬಳಕೆ ಹೆಚ್ಚು

ಇಂದು ಹೆಚ್ಚು ವ್ಯಾಪಕವಾಗಿ ಬಳಸಲಾಗುವ ರಾಸಾಯನಿಕಗಳಲ್ಲಿ ಒಂದಾದ ಬಿಪಿಎ ಅನ್ನು ಅತಿ ಹೆಚ್ಚು ಗ್ರಾಹಕರು ಬಳಸುವ ಶ್ರೇಣಿಯ ಉತ್ಪನ್ನಗಳಾದ ನೀರಿನ ಬಾಟಲಿಗಳು, ನೆಲಹಾಸು, ಆಹಾರ ಮತ್ತು ಪಾನೀಯಗಳ ಪಾತ್ರೆಗಳಲ್ಲಿ ಕಾಣಬಹುದು. ಮೈಕ್ರೋವೇವ್ ನ ಅಧಿಕ ಆವರ್ತನಗಳ ಮೂಲಕ ಎದುರಾಗುವ ತಾಪಮಾನಕ್ಕೆ ಒಡ್ಡಿಕೊಳ್ಳುವ ಇಂತಹ ಗ್ರಾಹಕ ಉತ್ಪನ್ನಗಳಿಂದ ಬಿಪಿಎ ಮಾನೋಮರ್‌ ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡಬಹುದು ಅಥವಾ ಆಮ್ಲೀಯ ಮತ್ತು / ಅಥವಾ ಕ್ಷಾರೀಯ ಪರಿಸ್ಥಿತಿಗಳನ್ನು ಆಹಾರದಲ್ಲಿ ಉಂಟುಮಾಡಬಹುದು. ಈ ರಾಸಾಯನಿಕ ಆಹಾರದಲ್ಲಿ ಕರಗುವ ಕಾರಣ, ಇದು ಅತ್ಯಲ್ಪ ಪ್ರಮಾಣದಲ್ಲಿದ್ದರೂ ಸರಿ, ಈ ರಾಸಾಯನಿಕ ಇದನ್ನು ಸೇವಿಸುವವರಿಗೆ ಆರೋಗ್ಯದ ಮೇಲೆ ಪ್ರಭಾವ ಬೀರುವುದಂತೂ ಖಂಡಿತ.

ಶಿಶುಗಳು ಮತ್ತು ಭ್ರೂಣಗಳ ಮೇಲೆ ಬಿಪಿಎ ಮಾಡುವ ವ್ಯಾಪಕ ಪರಿಣಾಮಗಳನ್ನು ವಿವಿಧ ಅಧ್ಯಯನಗಳು ವರದಿ ಮಾಡಿವೆ. ಈ ಪರಿಣಾಮಗಳಲ್ಲಿ ಪ್ರಮುಖವಾದವು ಎಂದರೆ ಮೆದುಳಿನ ಕ್ಷಮತೆ ಉಡುಗುವುದು ಮತ್ತು ನಡವಳಿಕೆಯ ಮೇಲೆ ಪ್ರಭಾವ ಬೀರುವುದು. ಗರ್ಭದಲ್ಲಿರುವ ಶಿಶುವಿನ ಮೇಲೆ ಬಿಪಿಎ ಬೀರುವ ಪರಿಣಾಮದಲ್ಲಿ ಅತ್ಯಂತ ಘೋರ ಎಂದರೆ "ಆತಂಕ-ತರಹದ ನಡವಳಿಕೆಯನ್ನು"("anxiety-like behaviour") ಅಭಿವೃದ್ಧಿಪಡಿಸುವುದು.

ಶಿಶುಗಳಲ್ಲಿನ ನಡವಳಿಕೆಯ ವೈಪರೀತ್ಯ

ಶಿಶುಗಳಲ್ಲಿನ ನಡವಳಿಕೆಯ ವೈಪರೀತ್ಯ

ಈ ರಾಸಾಯನಿಕದ ಪ್ರಭಾವದ ಅವಧಿಯು ಗರ್ಭಧಾರಣೆ ಮತ್ತು ಹಾಲುಣಿಸುವಿಕೆಯ ಸಮಯದಲ್ಲಿ ಸೀಮಿತಗೊಳಿಸಿದ್ದರೂ ಬಿಪಿಎ ಪರಿಣಾಮಗಳು ಕಂಡುಬರುತ್ತವೆ. ಶಿಶುಗಳಲ್ಲಿನ ನಡವಳಿಕೆಯ ವೈಪರೀತ್ಯಗಳು ಮೆದುಳಿನಲ್ಲಿನ ಬದಲಾವಣೆಯನ್ನು ಪ್ರಕಟಿಸಲು ಸಮಯ ತೆಗೆದುಕೊಳ್ಳಬಹುದಾದರೂ, ವಿಭಿನ್ನ ಗರ್ಭಾವಸ್ಥೆಯ ಅವಧಿಯಲ್ಲಿ ಮೆದುಳಿನ ಬೆಳವಣಿಗೆಯ ವ್ಯಾಪ್ತಿ ಮತ್ತು ಸ್ವರೂಪ ಬದಲಾಗುವುದನ್ನು ಗಮನಿಸಲಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ [NCBI] ಪ್ರಕಾರ, "ಗರ್ಭಧಾರಣೆಯ ಕೊನೆಯ ಹಂತದಲ್ಲಿ ಭ್ರೂಣದ ಮೇಲೆ ಬಿಪಿಎ ಪ್ರಭಾವದ ಸೂಕ್ಷ್ಮತೆ ಹೆಚ್ಚುತ್ತಾಅ ಹೋಗುತ್ತದೆ, ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ವಿವಿಧ ಪ್ರಸವಪೂರ್ವ ಅವಧಿಗಳಲ್ಲಿ ಹುಟ್ಟಿದ ಮರಿಗಳಲ್ಲಿ ಕಂಡುಬರುವ ವರ್ತನೆಯ ಪರಿಣಾಮಗಳಿಂದ ಇದನ್ನು ನಿರ್ಣಯಿಸಲಾಗುತ್ತದೆ".

ಶಾಖವನ್ನು ಉಂಟುಮಾಡುವ ಆಹಾರಗಳು

ಶಾಖವನ್ನು ಉಂಟುಮಾಡುವ ಆಹಾರಗಳು

ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳ ಮೂಲಕ ಅಧಿಕ ತಾಪಮಾನ ಮತ್ತು ಗರ್ಭಧಾರಣೆಯ ಪ್ರತಿಕೂಲ ಫಲಿತಾಂಶಗಳಾದ ಹೆರಿಗೆ, ಅವಧಿಪೂರ್ವ ಜನನ, ಜನ್ಮಜಾತ ಹೃದಯದ ದೋಷಗಳು ಮತ್ತು ಕಡಿಮೆ ಜನನ ತೂಕ [LBW] ಗಳ ನಡುವಿನ ಸಂಬಂಧವನ್ನು ವರದಿ ಮಾಡಿದೆ. ಗರ್ಭವತಿಯ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣದಲ್ಲಿನ ನರಗಳ ಮೇಲೆ ಗರ್ಭಿಣಿಯ ದೇಹದ ತಾಪಮಾನವು ಪರಿಣಾಮ ಬೀರುತ್ತದೆ. ಪ್ರಯೋಗಾಲಯದ ಸಂಶೋಧನೆ ಮತ್ತು ಅಧ್ಯಯನಗಳು ಗರ್ಭಾವಸ್ಥೆಯಲ್ಲಿ ಶಾಖ-ಸಂಬಂಧಿತ ದೋಷಗಳನ್ನು ಕಂಡುಹಿಡಿದಿದೆ. ಗರ್ಭಧಾರಣೆಯ ಮೊದಲ ತ್ರೈಮಾಸಿಕ ಅವಧಿಯಲ್ಲಿ ಪ್ರಮುಖ ಅಂಗಗಳ ರಚನೆಯು ಸಂಭವಿಸುತ್ತದೆ. ಈ ಅವಧಿಯಲ್ಲಿ ಗರ್ಭವತಿಯದ ದೇಹದ ಶಾಖದ ಪರಿಣಾಮವು ಕೆಲವು ಜನ್ಮ ದೋಷಗಳೊಂದಿಗೆ ಸಂಬಂಧ ಹೊಂದಿದೆ. ನಂತರದ ತ್ರೈಮಾಸಿಕದಲ್ಲಿ ಶಾಖದ ಪರಿಣಾಮದಿಂದ, ಭ್ರೂಣದ ತ್ವರಿತ ಬೆಳವಣಿಗೆ ಮತ್ತು ಬೆಳವಣಿಗೆ ಇದ್ದಾಗ, ಮೃತ ಸ್ಥಿತಿಯ ಹೆರಿಗೆ ಅಥವಾ ಅವಧಿಪೂರ್ವ ಜನನಕ್ಕೆ ಕಾರಣವಾಗಬಹುದು.

ಜನ್ಮ ದೋಷ

ಜನ್ಮ ದೋಷ

ಮೊದಲ ತ್ರೈಮಾಸಿಕದಲ್ಲಿ ಶಾಖದ ಪರಿಣಾಮದಿಂದ ಜನ್ಮ ದೋಷಗಳಿಗೆ ಕಾರಣವಾಗಬಹುದು ಮತ್ತು ಎರಡನೆಯ ಮತ್ತು ಮೂರನೆಯ ತ್ರೈಮಾಸಿಕದಲ್ಲಿ ಮೃತ ಸ್ಥಿತಿಯ ಹೆರಿಗೆ ಅಥವಾ ಅವಧಿಪೂರ್ವ ಹೆರಿಗೆಗೆ ಕಾರಣವಾಗಬಹುದು. ಆದರೆ ದೇಹದ ಶಾಖ ಹೆಚ್ಚಿದ್ದರೆ ಗರ್ಭಧಾರಣೆಯಾದ್ಯಂತ ಕಡಿಮೆ ಜನನ ತೂಕದ ಅಪಾಯದ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ, ಗರ್ಭಾವಸ್ಥೆಯ ಹಲವಾರು ಕಾರ್ಯಗಳಿಂದ ಗರ್ಭವತಿಯಯ ದೇಹದ ಮುಖ್ಯ ಉಷ್ಣತೆಯು ಹೆಚ್ಚೇ ಇರುತ್ತದೆ, ಇರಲೂಬೇಕು.

ಅಲ್ಲದೇ ಸ್ವಾಭಾವಿಕವಾಗಿ ಕೊಂಚ ದೇಹದ ತೂಕ ಹೆಚ್ಚಾಗುವುದು ದೇಹದ ಮೇಲ್ಮೈ ವಿಸ್ತೀರ್ಣವೂ ಹೆಚ್ಚುತ್ತದೆ. ತನ್ಮೂಲಕ ದೇಹದ ದ್ರವ್ಯರಾಶಿಯ ಅನುಪಾತವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಗರ್ಭಿಣಿ ಮಹಿಳೆಯರಲ್ಲಿ ಶಾಖ ತಂಪುಗೊಳ್ಳುವುದನ್ನು ಕೊಂಚ ಕಷ್ಟಕರವಾಗಿಸುತ್ತದೆ. ಇದರ ಜೊತೆಗೇ, ಅಭಿವೃದ್ಧಿ ಹೊಂದುತ್ತಿರುವ ಭ್ರೂಣದ ಜೀವರಾಸಾಯನಿಕ ಕ್ರಿಯೆಗಳ ಬೇಡಿಕೆಗಳೂ ಗರ್ಭಿಣಿ ಮಹಿಳೆಯ ದೇಹದಲ್ಲಿ ಶಾಖವನ್ನು ಹೆಚಿಸುತ್ತವೆ. ಪರಿಣಾಮವಾಗಿ ನಿರ್ಜಲೀಕರಣವು ಗರ್ಭಿಣಿ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಗರ್ಭಧಾರಣೆಯ ಕಡೆಯ ಹಂತಗಳಲ್ಲಿದ್ದರೆ, ನಿರ್ಜಲೀಕರಣವು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸುತ್ತದೆ, ಇದು ಬೇಗನೇ ಪ್ರಸವ ವೇದನೆ ಎದುರಾಗಲೂ ಕಾರಣವಾಗಬಹುದು. ಈ ಕಾರಣಗಳಿಂದಾಗಿಯೇ ಗರ್ಭಿಣಿಯರು ಸೇವಿಸುವ ಆಹಾರದಲ್ಲಿ ಶಾಖವನ್ನು ಉಂಟುಮಾಡುವ ಆಹಾರವನ್ನು ಕಡಿಮೆ ಮಾಡಲು ಅಥವಾ ಸಂಪೂರ್ಣವಾಗಿ ತ್ಯಜಿಸಲು ಸೂಚಿಸಲಾಗುತ್ತದೆ.

ಸಾಮಾನ್ಯವಾಗಿ, ಶಾಖವನ್ನು ಉಂಟುಮಾಡುವ ಆಹಾರಗಳೆಂದರೆ - ಎಣ್ಣೆಯುಕ್ತ ಅಥವಾ ಹುರಿದ ಆಹಾರಗಳು, ಮಸಾಲೆಯುಕ್ತ ಆಹಾರಗಳು, ಬಲಿಯದ ಅಥವಾ ಕಾಯಿಯಾಗಿರುವ ಪೊಪ್ಪಾಯಿ, ಅನಾನಸ್ ಮತ್ತು ಬಿಳಿಬದನೆ ಮೊದಲಾದವು. ಉಳಿದಂತೆ, ದೇಹದ ತಾಪಮಾನವನ್ನು ಹೆಚ್ಚಿಸುವ ಯಾವುದೇ ಆಹಾರವಾದರೂ ಸರಿ, ಇದನ್ನು ಮಿತಗೊಳಿಸಬೇಕು ಅಥವಾ ಬಾಣಂತನ ಮುಗಿಯುವವರೆಗಾದರೂ ಸೇವಿಸಬಾರದು.

ಈ ಹಣ್ಣುಗಳು ಗರ್ಭಿಣಿಯರಿಗೆ ಬೇಡ

ಈ ಹಣ್ಣುಗಳು ಗರ್ಭಿಣಿಯರಿಗೆ ಬೇಡ

ನಿಯಂತ್ರಿತ ಇನ್ ವಿವೋ ಮತ್ತು ಇನ್ ವಿಟ್ರೊ ಔಷಧೀಯ ವಿಧಾನಗಳ (in vivo and in vitro) ಮೂಲಕ ಕಂಡುಕೊಳ್ಳಲಾದ ಮಾಹಿತಿ ಎಂದರೆ, "ಹಸಿ ಪಪ್ಪಾಯಿಯ ತಿರುಳಿನ ಸಂಕುಚಕ ಪರಿಣಾಮವು ಗರ್ಭದ ಸ್ನಾಯುಗಳ ಸೆಡೆತ (tetanic spasms) ದೊಂದಿಗೆ ನೇರವಾದ ಸಂಬಂಧ ಹೊಂದಿದೆ" ಎಂದು ಕಂಡುಹಿಡಿಯಲಾಗಿದೆ. ಆದರೆ ಗರ್ಭಿಣಿ ಮಹಿಳೆಯರು ಚೆನ್ನಾಗಿ ಹಣ್ಣಾಗಿರುವ ಪೊಪ್ಪಾಯಿಯನ್ನು ಸೇವಿಸುವುದರಿಂದ ಯಾವುದೇ ಅಪಾಯವಿಲ್ಲ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ. ಆದರೆ ಕಾಯಿಯಾಗಿರುವ ಪೊಪ್ಪಾಯಿ ಮಾತ್ರ ಗರ್ಭಿಣಿಯರು ಯಾವುದೇ ಕಾರಣಕ್ಕೂ ಸೇವಿಸಬಾರದು. ಇದರಿಂದ ಅವಧಿಪೂರ್ವ ಪ್ರಸವ ಅಥವಾ ಗರ್ಭಾವಸ್ಥೆಯ ಪ್ರಾರಂಭಿಕ ಹಂತಗಳಲ್ಲಿ ಗರ್ಭಪಾತ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.

ಇದೇ ಪ್ರಕಾರ, ಅನಾನಾಸು- ಹಣ್ಣಾಗಿರಲಿ, ಕಾಯಿಯೇ ಇರಲಿ, ಇದರ ಸೇವನೆಯನ್ನು ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಶಿಫಾರಸು ಮಾಡಲಾಗುವುದಿಲ್ಲ. ಸಾಂಪ್ರಾದಾಯಿಕ ಔಷಧದಲ್ಲಿ, ಅನಾನಾ ಹಣ್ಣನ್ನು ಗರ್ಭಪಾತಕ್ಕೆ ಕಾರಣವಾಗುವಂತೆ ಅಥವಾ ಗರ್ಭಪಾತಕ್ಕೆ ಕಾರಣವಾಗುವ ಔಷಧಿಯಾಗಿ ಬಳಸಲಾಗುತ್ತದೆ. ಹಣ್ಣಾಗಿರುವ ಅನಾನಾಸ್ ಹಣ್ಣನ್ನು ಕೆಲವು ಸಂಸ್ಕೃತಿಗಳಲ್ಲಿ ಗರ್ಭಪಾತವನ್ನು ಪ್ರಚೋದಿಸಲು ಸಾಂಪ್ರದಾಯಿಕ ಔಷಧಿಯ ರೂಪದಲ್ಲಿ ಸೇವಿಸಲು ನೀಡಲಾಗುತ್ತದೆ. ಇತರ ಸಂಸ್ಕೃತಿಗಳಲ್ಲಿ ಇನ್ನೂ ಬಲಿಯದ ಎಳೆಯ ಅನಾನಾಸ್‌ನ ರಸವನ್ನು ಇದೇ ಪರಿಣಾಮಕ್ಕಾಗಿ ಬಳಸುತ್ತವೆ ಎಂದು ತಿಳಿದುಬಂದಿದೆ.

 ಈ ಆಹಾರಗಳು ಗರ್ಭಿಣಿಯರಿಗೆ ತರವಲ್ಲ

ಈ ಆಹಾರಗಳು ಗರ್ಭಿಣಿಯರಿಗೆ ತರವಲ್ಲ

ಪ್ಲೇಸ್ಕ್ ಮತ್ತು ಹ್ಯಾಗನ್ (Placek& Hagen) ಎಂಬ ಸಂಸ್ಥೆ ನಡೆಸಿದ ಅಧ್ಯಯನವೊಂದರಲ್ಲಿ, ಗರ್ಭಾವಸ್ಥೆಯಲ್ಲಿ 'ಬಿಸಿ' ಮತ್ತು 'ಕಪ್ಪು' ಆಹಾರಗಳು ಸೇವಿಸುವುದು ಅಪಾಯಕಾರಿ ಎಂದು ತಿಳಿದುಬಂದಿದೆ. ಈ ಅಧ್ಯಯನದ ಪ್ರಕಾರ, 'ಬಿಸಿ' ಆಹಾರಗಳಲ್ಲಿ ಕೋಳಿ, ಮೀನು, ಬಿಳಿಬದನೆ, Palmyra sprouts, ಮಾವು - ಹಣ್ಣಾಗಿದ್ದರೂ ಮತ್ತು ಕಾಯಿಯಾಗಿದ್ದರೂ, ಹುಳಿ ವಸ್ತುಗಳು, ಪೊಪ್ಪಾಯಿ ಮತ್ತು ಅನಾನಾಸ್ ಮೊದಲಾದವು ಒಳಗೊಂಡಿವೆ.

ಅಧ್ಯಯನದ ಪ್ರಕಾರ 'ಕಪ್ಪು' ಆಹಾರಗಳು ಎಂದರೆ ನೇರಳೆ ಹಣ್ಣು ಮತ್ತು ಕಪ್ಪು ದ್ರಾಕ್ಷಿ ಮೊದಲಾದ ಗಾಢ ಬಣ್ಣಗಳ ಹಣ್ಣುಗಳನ್ನು ಹೊಂದಿವೆ. ಗರ್ಭಾವಸ್ಥೆಯಲ್ಲಿ ಸೂಕ್ತ ಆಹಾರದ ಪ್ರಾಮುಖ್ಯತೆಯ ಬಗ್ಗೆ ಎಷ್ಟು ಹೇಳಿದರೂ ಸಾಲದು. ಗರ್ಭವತಿಯ ಆಹಾರ ಸಮತೋಲನಗೊಳಿಸಬೇಕು ಮತ್ತು ಎಲ್ಲಾ ಆರೋಗ್ಯವಂತ ವಯಸ್ಕರಿಗೆ ಅನ್ವಯವಾಗುವ ಸಾಮಾನ್ಯ ಶಿಫಾರಸುಗಳನ್ನು ಆಧರಿಸಿರಬೇಕು.

ಸಮತೋಲಿತ ಆಹಾರದಲ್ಲಿ, ಸಸ್ಯಾಧಾರಿತ ಆಹಾರಗಳು ಮತ್ತು ಕ್ಯಾಲೋರಿ ರಹಿತ ಪಾನೀಯಗಳನ್ನು ಹೇರಳವಾಗಿ ಸೇವಿಸಬೇಕು, ಮಾಂಸಾಧಾರಿತ ಆಹಾರಗಳನ್ನು ತಿನ್ನುವುದೇ ಬೇಡ ಎಂದಲ್ಲ, ಆದರೆ ಮಿತ ಪ್ರಮಾಣದಲ್ಲಿರಬೇಕು.

ಸಂಜೆಯ ತಿಂಡಿಗಳು, ಮತ್ತು ಕುರುಕು ಆಹಾರಗಳ ಬಯಕೆ ಗರ್ಭಿಣಿಯರಿಗೆ ಅತಿ ಹೆಚ್ಚಾಗಿರುತ್ತದೆ. ಆದರೆ ಇವುಗಳ ಪ್ರಮಾಣವನ್ನು ಮಿತಗೊಳಿಸಬೇಕು. ಗರ್ಭಾವಸ್ಥೆ ಮತ್ತು ಬಾಣಂತನದ ದಿನಗಳಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಪೂರಕವಾಗುವಂತಿರಬೇಕು. ಸಮತೋಲದ ಮತ್ತು ವಿವಿಧ ಪೋಷಕಾಂಶಗಳಿರುವ ವ್ಯಾಪಕ ಆಹಾರಗಳನ್ನು ಗರ್ಭಿಣಿಗೆ ಇಷ್ಟವಿಲ್ಲದಿದ್ದರೂ ಸರಿ, ಸೇವಿಸಬೇಕು. ಗರ್ಭಾವಸ್ಥೆಯಲ್ಲಿ ಗರ್ಭವತಿಯ ಆಹಾರಕ್ರಮ ಆರೋಗ್ಯಕರವಾಗಿದ್ದಷ್ಟೂ ಹುಟ್ಟಲಿರುವ ಮಗುವಿನ ಆರೋಗ್ಯವೂ ಉತ್ತಮವೇ ಆಗಿರುತ್ತದೆ.

ಗರ್ಭಧಾರಣೆಯಾದ ದಿನದಿಂದ ತೊಡಗಿ ಮುಂದಿನ ಸಾವಿರ ದಿನಗಳನ್ನು ವೈದ್ಯರು ಸೂಕ್ಷ್ಮ ಎಂದು ಪರಿಗಣಿಸುತ್ತಾರೆ. ಏಕೆಂದರೆ ಈ ದಿನಗಳಲ್ಲಿ ಗರ್ಭವತಿಯ ದೇಹದಿಂದ ಹೊರ ಜೀವವೊಂದು ಈ ಜಗತ್ತಿಗೆ ಬರುತ್ತದೆ ಮತ್ತು ಹರಡದ ಕಾಯಿಲೆಗಳು ಎದುರಾಗುವ ಸಾಧ್ಯತೆಗಳೂ ಈ ಸಮಯದಲ್ಲಿ ಹೆಚ್ಚುತ್ತದೆ. ಹಾಗಾಗಿ, ಯಾವುದೇ ರೋಗಗಳು ಇಲ್ಲದಂತಹ ಆರೋಗ್ಯಕರ ಗರ್ಭಾವಸ್ಥೆ ಮತ್ತು ಬಾಣಂತನವನ್ನು ಪಡೆಯಲು ಆಹಾರ ಮತ್ತು ಆರೋಗ್ಯದ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸುವುದು ಅತಿ ಅಗತ್ಯವಾಗಿದೆ.

English summary

Plastic Containers And Heat-Inducing Foods Are Harmful During Pregnancy

Here we are discussing about Plastic Containers And Heat-Inducing Foods Are Harmful During Pregnancy. Let us take a look at the threat to pregnant women posed by plastic containers and heat-inducing foods. Read more.
Story first published: Friday, May 8, 2020, 14:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X