For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಒರೆಗಾನೊ(ದೊಡ್ಡಪತ್ರೆ) ಎಣ್ಣೆ ಬಳಕೆ ಸುರಕ್ಷಿತವೇ?

|

ಒರೆಗಾನೊ ಎಣ್ಣೆ ಎಂದರೆ ಅದು ಭಾರತೀಯರಿಗೆ ತುಂಬಾ ಹೊಸತಾಗಿ ಕಂಡುಬಂದರೂ ಇದನ್ನು ವಿದೇಶಗಳಲ್ಲಿ ಹಿಂದಿನಿಂದಲೂ ಬಳಸಿಕೊಂಡು ಬರಲಾಗುತ್ತದೆ. ಈಗ ಹೆಚ್ಚಾಗಿ ಸೂಪರ್ ಮಾರ್ಕೆಟ್ ಗಳಲ್ಲಿ ಒರೆಗಾನೊ ಎಣ್ಣೆಯು ಲಭ್ಯವಿದೆ. ಈ ಎಣ್ಣೆಯನ್ನು ಒರೆಗಾನೊದ ಎಲೆ ಹಾಗೂ ಅದರ ಚಿಗುರುಗಳಿಂದ ತಯಾರಿಸಲಾಗುತ್ತದೆ.

While Your Pregnant Is It Safe To Use Oregano Oil

ಒರೆಗಾನೊದಲ್ಲಿ ಇರುವಂತಹ ಕೆಲವೊಂದು ಆಂಟಿಆಕ್ಸಿಡೆಂಟ್, ಉರಿಯೂತ ಶಮನಕಾರಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇದನ್ನು ಗಿಡಮೂಲಿಕೆ ಔಷಧಿಗಳಲ್ಲಿ ಕೂಡ ಬಳಕೆ ಮಾಡುವಂತೆ ಮಾಡಿದೆ. ಈ ಲೇಖನದಲ್ಲಿ ಒರೆಗಾನೊ ಎಣ್ಣೆಯನ್ನು ಗರ್ಭಿಣಿಯರು ಬಳಸಬಹುದೇ ಎಂದು ನಾವು ತಿಳಿದುಕೊಳ್ಳಲಿದ್ದೇವೆ.

ಗರ್ಭಧಾರಣೆ ವೇಳೆ ಒರೆಗಾನೊ ಎಣ್ಣೆ ಸುರಕ್ಷಿತವೇ?

ಗರ್ಭಧಾರಣೆ ವೇಳೆ ಒರೆಗಾನೊ ಎಣ್ಣೆ ಸುರಕ್ಷಿತವೇ?

ಗರ್ಭಧಾರಣೆ ವೇಳೆ ಒರೆಗಾನೊ ಎಣ್ಣೆ ಬಳಕೆ ಮಾಡುವುದು ಸುರಕ್ಷಿತವಲ್ಲವೆಂದು ಹೇಳಲಾಗಿದೆ. ಯಾಕೆಂದರೆ ಇದು ಅಡ್ಡಪರಿಣಾಮಗಳನ್ನು ಬಿರಬಹುದು ಮತ್ತು ಇದರಿಂದ ಅಲರ್ಜಿ ಉಂಟು ಮಾಡಬಹುದು. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಗರ್ಭಕೋಶದಲ್ಲಿ ಉತ್ತೇಜನ ಉಂಟು ಮಾಡುವುದು ಮತ್ತು ಇದರಿಂದ ಅಕಾಲಿಕ ಹೆರಿಗೆ ಆಗಬಹುದು. ಗರ್ಭದಾರಣೆ ವೇಳೆ ಇದನ್ನು ಬಳಸುವುದರಿಂದ ಆಗುವ ಕೆಲವು ತೊಂದರೆಗಳ ಬಗ್ಗೆ ಇನ್ನೂ ಅಧ್ಯಯನಗಳು ನಡೆಯುತ್ತಲಿದೆ ಮತ್ತು ಇದು ಬಾಹ್ಯ ಮತ್ತು ಆಂತರಿಕ ಬಳಕೆಗೆ ಸುಕ್ಷಿತವಲ್ಲ ಎಂದು ಹೇಳಲಾಗಿದೆ.

ಗರ್ಭಧಾರಣೆ ವೇಳೆ ಒರೆಗಾನೊ ಎಣ್ಣೆಯ ಅಡ್ಡಪರಿಣಾಮಗಳು

ಗರ್ಭಧಾರಣೆ ವೇಳೆ ಒರೆಗಾನೊ ಎಣ್ಣೆಯ ಅಡ್ಡಪರಿಣಾಮಗಳು

  • ಗರ್ಭಧಾರಣೆ ವೇಳೆ ಒರೆಗಾನೊ ಎಣ್ಣೆ ಬಾಹ್ಯ ಮತ್ತು ಆತಂರಿಕ ಬಳಕೆ ಮಾಡಿದರೆ ಅದರಿಂದ ಆಗುವ ಕೆಲವೊಂದು ಅಡ್ಡಪರಿಣಾಮಗಳು.
  • ಅಲರ್ಜಿ

    • ಲಾಮಿಯೇಸಿ ಕುಟುಂಬಕ್ಕೆ ಸೇರಿರುವಂತಹ ಒರೆಗಾನೊ ಗಿಡವು ಅಲರ್ಜಿ ಉಂಟು ಮಾಡಬಹುದು. ಇಂತಹ ಜಾತಿಯ ಗಿಡಗಳಿಂದ ಅಲರ್ಜಿಗೆ ಒಳಗಾಗುತ್ತಿದ್ದರೆ ಅಂತಹವರು ಇದನ್ನು ಬಳಸಬಾರದು. ಒರೆಗಾನೊ ಎಣ್ಣೆಯ ಜತೆಗೆ ಅಡ್ಡ ಪ್ರತಿಕ್ರಿಯೆ ಉಂಟು ಮಾಡುವ ಕೆಲವು ಗಿಡಗಳೆಂದರೆ ಅದು ತುಳಸಿ, ಲ್ಯಾವೆಂಡರ್, ಪುದೀನಾ.
    • ಔಷಧಿಗೆ ಪ್ರತಿಕ್ರಿಯೆ

      • ಒರೆಗಾನೊ ಎಣ್ಣೆಯು ಕೆಲವೊಂದು ಔಷಧಿಗಳಿಗೆ ಪ್ರತಿಕ್ರಿಯೆ ನೀಡಬಹುದು. ಇದರಲ್ಲಿ ಮಧುಮೇಹಕ್ಕೆ ಬಳಸುವಂತಹ ಔಷಧಿಯು ಒಂದಾಗಿದೆ. ಇದು ಔಷಧಿಗೆ ಪ್ರತಿಕ್ರಿಯೆ ನೀಡಬಹುದು ಮತ್ತು ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ತೀವ್ರವಾಗಿ ಕಡಿಮೆ ಆಗುವುದು.
      • ರಕ್ತಸ್ರಾವದ ಅಪಾಯ

        • ರಕ್ತಸ್ರಾವದ ಸಮಸ್ಯೆ ಇರುವವರಲ್ಲಿ ಒರೆಗಾನೊ ಎಣ್ಣೆಯು ಅಪಾಯವನ್ನು ಹೆಚ್ಚಿಸಬಹುದು. ರಕ್ತ ಹೆಪ್ಪುಗಟ್ಟುವಿಕೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು.
        • ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಒರೆಗಾನೊ ಎಣ್ಣೆ ಬಳಕೆ ಮಾಡಿದರೆ ಅದರಿಂದ ಗರ್ಭಪಾತವಾಗುವ ಸಾಧ್ಯತೆಯು ಇದೆ ಎಂದು ತಜ್ಞರು ಹೇಳಿದ್ದಾರೆ.
        • ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

          ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

          • ಒರೆಗಾನೊ ಎಣ್ಣೆ ಬಳಕೆ ಬಳಿಕ ನಿಮಗೆ ಈ ಕೆಳಗಿನ ಲಕ್ಷಣಗಳು ಕಾಣಿಸುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಿ
          • ವಾಕರಿಕೆ ಮತ್ತು ವಾಂತಿ
          • ಅತಿಸಾರ
          • ಮಾಂಸಖಂಡ ನೋವು
          • ನಿಶ್ಯಕ್ತಿ
          • ಹೊಟ್ಟೆ ಸೆಳೆತ ಮತ್ತು ರಕ್ತಸ್ರಾವ
          •  ಒರೆಗಾನೊ ಎಣ್ಣೆಯ ಸಾಮಾನ್ಯ ಲಾಭಗಳು

            ಒರೆಗಾನೊ ಎಣ್ಣೆಯ ಸಾಮಾನ್ಯ ಲಾಭಗಳು

            • ಒರೆಗಾನೊ ಎಣ್ಣೆಯನ್ನು ಕೆಲವೊಂದು ಖಾದ್ಯಗಳಲ್ಲಿ ರುಚಿ ಹೆಚ್ಚಿಸಲು ಬಳಕೆ ಮಾಡಲಾಗುತ್ತದೆ.
            • ಪ್ರತಿರೋಧಕ ಶಕ್ತಿ

              • ಪ್ರಾಣಿಗಳ ಮೇಲೆ ನಡೆಸಿರುವಂತಹ ಕೆಲವೊಂದು ಅಧ್ಯಯನಗಳಿಂದ ತಿಳಿದುಬಂದಿರುವ ವಿಚಾರವೆಂದರೆ ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗುಣವು ಪ್ರತಿರೋಧಿಕ ಶಕ್ತಿ ವೃದ್ಧಿಸುವುದು. ಬಾಹ್ಯವಾಗಿ ಇದನ್ನು ಬಳಕೆ ಮಾಡಿದರೂ ಹೆಚ್ಚಿನ ಲಾಭಗಳು ಸಿಗುವುದು.
              • ಶ್ವಾಸಕೋಶದ ಆರೋಗ್ಯ

                • ಬಾಹ್ಯವಾಗಿ ಒರೆಗಾನೊ ಎಣ್ಣೆಯನ್ನು ಬಳಕೆ ಮಾಡಿಕೊಂಡು ಅದರಿಂದ ಶೀತ ಮತ್ತು ಕೆಮ್ಮನ್ನು ಕಡಿಮೆ ಮಾಡಬಹುದು. ಆದರೆ ವೈಜ್ಞಾನಿಕವಾಗಿ ಇದು ಸಾಬೀತು ಆಗಬೇಕಾಗಿದೆ.
                • ಉರಿಯೂತ ಶಮನಕಾರಿ

                  • ಒರೆಗಾನೊವನ್ನು ಬಾಹ್ಯ ಮತ್ತು ಆಂತರಿಕವಾಗಿ ಬಳಕೆ ಮಾಡಿದಾಗ ಅದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಕಾರ್ವಾಕ್ರೋಲ್ ಮತ್ತು ಥೈಮೋಲ್ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.
                  • ಹೊಟ್ಟೆಯ ಆರೋಗ್ಯ

                    • ಒರೆಗಾನೊ ಎಣ್ಣೆಯನ್ನು ಆಹಾರದಲ್ಲಿ ಬಳಕೆ ಮಾಡುವುದರಿಂದ ಅದು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿ ಆಗಿರುವುದು ಎಂದು ಹಲವಾರು ಅಧ್ಯಯನಗಳಿಂದ ತಿಳಿದುಬಂದಿದೆ. ಇದು ಕರುಳಿನ ಕ್ರಿಯೆಯನ್ನು ಕೂಡ ಹೆಚ್ಚಿಸುವುದು. ಕರುಳಿನ ಪರಾವಲಂಬಿಗಳನ್ನು ಇದು ಕ್ರಿಯಾಶೀಲವಾಗಿಸಿಕೊಂಡು ಹೊಟ್ಟೆಯ ಆರೋಗ್ಯ ಕಾಪಾಡುವುದು.
                    • ತೂಕ ಇಳಿಸಲು

                      • ಒರೆಗಾನೊ ಎಣ್ಣೆಯಲ್ಲಿ ಇರುವಂತಹ ಕಾರ್ವಾಕೋಲ್ ಮತ್ತು ಜೈವಿಕ ಸಕ್ರಿಯ ಗುಣವು ತೂಕ ಇಳಿಸಲು ಸಹಕಾರಿ. ಆದರೆ ಇದರ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿದೆ.
                      • ನೋವು ನಿವಾರಕ

                        • ಒರೆಗಾನೊ ಎಣ್ಣೆ ಬಾಹ್ಯವಾಗಿ ಬಳಕೆ ಮಾಡಿದರೆ ಅದರಿಂದ ನೋವು ನಿವಾರಣೆ ಆಗುವುದು ಎಂದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿದೆ. ಇದರಲ್ಲಿ ಇರುವಂತಹ ಕಾರ್ವಾಕೋಲ್ ಅಂಶವು ಇದಕ್ಕೆ ಕಾರಣವಾಗಿದೆ.
                        • ಸೋಂಕು

                          • ಒರೆಗಾನೊ ಎಣ್ಣೆಯಲ್ಲಿ ಇರುವಂತಹ ಸೂಕ್ಷ್ಮಾಣು ವಿರೋಧಿ ಗುಣಗಳು ಚರ್ಮದ ಗಾಯ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಇದನ್ನು ಆಂಟಿಬಯೋಟಿಕ್ ಆಗಿಯೂ ಬಳಕೆ ಮಾಡಬಹುದು ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.
                          • ಅರೊಮಾಥೆರಪಿ ಚಿಕಿತ್ಸೆಗೆ ಒರೆಗಾನೊ ಎಣ್ಣೆಯನ್ನು ಕೆಲವೊಂದು ಔಷಧಿಗಳು ಬಳಕೆ ಮಾಡುತ್ತವೆ. ಇದು ಗರ್ಭಿಣಿಯರಲ್ಲಿ ಆರಾಮವಾಗಿರಲು ಮತ್ತು ಅಹಿತಕರವನ್ನು ನಿವಾರಣೆ ಮಾಡಲು ನೆರವಾಗುವುದು. ಒರೆಗಾನೊ ಎಣ್ಣೆಯನ್ನು ವೆಪೊರ್ಸ್ ಆಗಿ ಬಳಕೆ ಮಾಡುವುದು ತುಂಬಾ ಸುರಕ್ಷಿತವೆಂದು ಪರಿಗಣಿಸಲಾಗಿದೆ.
English summary

Is It Safe To Use Oregano Oil During Pregnancy

Here we are discussing about While Your Pregnant Is It Safe To Use Oregano Oil. In this post tells you if it is safe to use oil of oregano during pregnancy, its uses in general, and its side effects. Read more.
X
Desktop Bottom Promotion