Just In
Don't Miss
- News
Karnataka Budget 2021 Live Updates; ಬಜೆಟ್ ಮಂಡಿಸಲಿದ್ದಾರೆ ಯಡಿಯೂರಪ್ಪ
- Movies
ಬಿಗ್ಬಾಸ್: ಒಂದು ವಾರದಲ್ಲಿ ಪ್ರಶಾಂತ್ ಸಂಬರ್ಗಿ ಬದಲಾಯಿಸಿರುವ ಬಟ್ಟೆ ಎಷ್ಟು ಗೊತ್ತೆ?
- Sports
ಆತನಲ್ಲಿ ನನಗಿಂತಲೂ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವಿದೆ: ರವಿಶಾಸ್ತ್ರಿ
- Finance
ಮಾರ್ಚ್ 07ರಂದು ಚಿನ್ನದ ಬೆಲೆ ಯಾವ ನಗರದಲ್ಲಿ ಹೆಚ್ಚು ಬೆಲೆ?
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನೈಸರ್ಗಿಕವಾಗಿ ಎದೆಹಾಲು ಹೆಚ್ಚಿಸಿಕೊಳ್ಳಲು ಈ ಆಹಾರವೇ ಬೆಸ್ಟ್
ತಾಯಿಯ ಎದೆ ಹಾಲು ಮಗುವಿಗೆ ಅಮೃತ ಸಮಾನ. ತಾಯಿ ಮಗುವಿಗೆ ಕನಿಷ್ಠ ಮೂರು ವರ್ಷದವರೆಗೂ ಸಾಕಷ್ಟು ಎದೆಹಾಲು ಕುಡಿಸಿದ್ದೇ ಆದರೆ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ದೀರ್ಘಕಾಲ ಮಗುವಿಗೆ ಬಹುತೇಕ ಆರೋಗ್ಯ ಸಮಸ್ಯೆಗಳು ಬಾಧಿಸುವುದಿಲ್ಲ ಎಂಬುದು ವೈಜ್ಞಾನಿಕವಾಗಿ ಹಾಗೂ ಆಯುರ್ವೇದ ಪದ್ಧತಿಯ ಪ್ರಕಾರವೂ ಸಾಬೀತಾಗಿದೆ.
ಆದರೆ ಇತ್ತೀಚೆಗೆ ತಾಯಂದಿರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಎದೆಹಾಲಿನ ಕೊರತೆ. ಅಸಮತೋಲಿತ ಹಾರ್ಮೋನು, ಫಲವತ್ತತೆ ಸಮಸ್ಯೆ ಸೇರಿದಂತೆ ಹಲವಾರು ಕಾರಣಗಳಿವೆ. ನೀವೂ ಎದೆಹಾಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಮತ್ತು ನಿಮ್ಮ ನವಜಾತ ಶಿಶುವಿಗೆ ಹಾಲುಣಿಸಲು ಕಷ್ಟವಾಗಿದ್ದರೆ ಇಲ್ಲಿ ಹೇಳುವ ಕೆಲವು ಸಲಹೆಗಳನ್ನು ಪಾಲಿಸಿ. ಎದೆಹಾಲನ್ನು ನೈಸರ್ಗಿಕವಾಗಿ ಹೆಚ್ಚಿಸಲು ನೀವು ಸೇವಿಸಬಹುದಾದ ಕೆಲವು ಆರೋಗ್ಯಕರ ಆಹಾರ ಪದಾರ್ಥಗಳ ಪಟ್ಟಿ ಇಲ್ಲಿವೆ:

ಶತಾವರಿ
ಸಸ್ಯದ ಜಾತಿಯ ಶತಾವರಿ ಆಯುರ್ವೇದದಲ್ಲಿ ಪ್ರಸಿದ್ಧವಾಗಿದೆ. ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುವುದರ ಜೊತೆಗೆ, ಈ ಆಯುರ್ವೇದ ಸಸ್ಯವು ಸ್ತನ್ಯಪಾನ ಮಾಡುವ ತಾಯಿಯ ಹಾಲುಣಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆರೋಗ್ಯಯುತ, ಪೌಷ್ಠಿಕ ಹಾಗೂ ಹೆಚ್ಚಿನ ಎದೆಹಾಲು ಉತ್ಪತಿಗೆ ಶತಾವರಿ ಅತ್ಯದ್ಭುತ ಮನೆಮದ್ದು.

ಬಾದಾಮಿ ಹಾಲು
ಬಾದಾಮಿ ಹಾಲನ್ನು ಕುಡಿಯುವುದರಿಂದ ಎದೆಹಾಲು ಉತ್ಪಾದಿಸುವ ಸಾಮರ್ಥ್ಯ ಹೆಚ್ಚುತ್ತದೆ ಎಂದು ಆಯುರ್ವೇದ ಹೇಳುತ್ತದೆ. 8-10 ಬಾದಾಮಿಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಅದರ ಸಿಪ್ಪೆ ತೆಗೆಯಿರಿ. ನಂತರ ಇದನ್ನು ಪೇಸ್ಟ್ ಮಾಡಿ ಹಾಲಿನ ಜತೆಗೆ ಬೆರೆಸಿ ಕುಡಿಯಿರಿ. ಎದೆಹಾಲನ್ನು ಹೆಚ್ಚಿಸುವ ಅತ್ಯುತ್ಕೃಷ್ಟ ಆಹಾರ ಇದಾಗಿದೆ.

ದಾಲ್ಚಿನ್ನಿ
ದಾಲ್ಚಿನ್ನಿ ಸಹ ಎದೆಹಾಲನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತದೆ. ದಾಲ್ಚಿಯನ್ನು ಚಹಾ ಪುಡಿಯಲ್ಲಿ ಸೇರಿಸಿ ಸೇವಿಸುವುದು ಸುಲಭ ಉಪಾಯ, ಅದರೆ ಇತರೆ ಯಾವುದೇ ರೂಪದಲ್ಲಾದರೂ ದಾಲ್ಚಿನ್ನಿಯನ್ನು ಸೇವಿಸಬಹುದು. ಇದು ಮಸಾಲೆಯುಕ್ತವಾಗಿದ್ದು, ಸುಗಂಧವನ್ನು ಹೊಂದಿದೆ. ಆದರೆ ನೆನಪಿರಲಿ ದಾಲ್ಚಿನ್ನಿ ಸೇವನೆ ಮಿತವಾಗಿರಲಿ, ಹೆಚ್ಚಾಗದಂತೆ ನೋಡಿಕೊಳ್ಳಿ.

ಸೋಂಪಿನ ಬೀಜಗಳು
ಸೋಂಪಿನ ಬೀಜಗಳು ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಹಾಲಿನ ಉತ್ಪಾದನೆಗೆ ಮತ್ತಷ್ಟು ಸಹಾಯ ಮಾಡುತ್ತದೆ. ತಮ್ಮ ಒಂಬತ್ತನೇ ಮಾಸದಲ್ಲಿರುವವರು ಹಾಗೂ ಮಗುವಿನ ಅಮ್ಮಂದಿರು ಒಂದು ಚಮಚ ಸೋಂಪಿನ ಬೀಜಗಳನ್ನು ಬೆಚ್ಚಗಿನ ನೀರಿನಲ್ಲಿ ಅಥವಾ ಚಹಾ ಮಾಡಿ ಸಹ ಸೇವಿಸಬಹುದು. ಇನ್ನೂ ಹೆಚ್ಚು ಪರಿಣಾಮಕಾರಿ ಫಲಿತಾಂಶಕ್ಕಾಗಿ ಸೋಂಪನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಕುಡಿಯಬಹುದು.

ಬೆಳ್ಳುಳ್ಳಿ ಮತ್ತು ಶುಂಠಿ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ, ಸಣ್ಣ ಕಾಯಿಲೆಗಳಿಂದ ನಿಮ್ಮನ್ನು ದೂರವಿಡುವವರೆಗೆ ಶುಂಠಿ ಮತ್ತು ಬೆಳ್ಳುಳ್ಳಿ ನೂರಾರು ಪ್ರಯೋಜನಗಳನ್ನು ನಿಮ್ಮ ದೇಹಕ್ಕೆ ನೀಡುತ್ತದೆ. ಅದರಲ್ಲೂ ಹೆರಿಗೆಯಾದ ನಂತರ ಮೊದಲ ತಿಂಗಳು ತಾಯಂದಿರು ಸಾಮಾನ್ಯವಾಗಿ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ತಿನ್ನಲು ಸೂಚಿಸಲಾಗುತ್ತದೆ, ಇದಕ್ಕೆ ಕಾರಣ ಎದೆಹಾಲು ಸ್ಥಿರವಾಗಿ ಉತ್ಪಾದಿಸಲು ಸಾಧ್ಯವಾಗುತ್ತದೆ. ಇದನ್ನು ಅಡುಗೆಗಳಲ್ಲಿ ಬೆರೆಸಿ ರಸಂ, ಬೆಳಗಿನ ತಿಂಡಿ, ಮಧ್ಯಾಹ್ನದ ಊಟದಲ್ಲಿ ಮಿಶ್ರಣ ಮಾಡಿ ನೀಡಬಹುದು. ಆದರೆ ಅತಿಯಾದರ ಸಮಸ್ಯೆಯಾಗಬಹುದಾದ್ದರಿಂದ ಮಿತವಾಗಿ ನೀಡಬೇಕು.

ದಾಳಿಂಬೆ ರಸ
ನಿಮ್ಮ ಹಾಲು ಉತ್ಪಾದಿಸುವ ಸಾಮರ್ಥ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸಲು ದಾಳಿಂಬೆ ರಸ ಸಹ ಮತ್ತೊಂದು ಆರೋಗ್ಯಕರ ಮಾರ್ಗವಾಗಿದೆ. ಇದು ರಕ್ತ ಶುದ್ಧೀಕರಣ, ಕಫ ದೋಷ ಮತ್ತು ಪಿತ್ತ ದೋಷ ಹೊಂದಿರುವ ಮಹಿಳೆಯರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.
ಹಾಲು ಸಾಮರ್ಥ್ಯವನ್ನು ಹೆಚ್ಚಿಸಲು ಹಾಲುಣಿಸುವ ತಾಯಂದಿರಿಂದ ಸುರಕ್ಷಿತವಾಗಿ ತಿನ್ನಬಹುದಾದ ಇತರ ಆರೋಗ್ಯಕರ ಆಹಾರ ಪದಾರ್ಥಗಳು ಓಟ್ ಮೀಲ್, ಬೆಲ್ಲ, ಮೆಂತ್ಯ ಬೀಜಗಳು ಮತ್ತು ದೇಸಿ ತುಪ್ಪ.