ಇಂತಹ ಆಹಾರಗಳನ್ನು ತಾಯಿ ಸೇವಿಸುವುದರಿಂದ ಹುಟ್ಟುವ ಮಗು ಬುದ್ಧಿವಂತವಾಗಿರುವುದು!

Posted By: Divya Pandith
Subscribe to Boldsky

ಹುಟ್ಟುವ ಮಗು ಹೆಚ್ಚು ಬುದ್ಧಿವಂತ ಮಗುವಾಗಿರಬೇಕು, ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದ ಕೂಡಿರಬೇಕು ಎನ್ನುವುದು ಪ್ರತಿಯೊಬ್ಬ ತಾಯಿಯ ಕನಸಾಗಿರುತ್ತದೆ. ಆದರೆ ತಾಯಿ ಸೇವಿಸುವ ಆಹಾರದಲ್ಲಿ ಸೂಕ್ತ ರೀತಿಯ ಫೋಷಕಾಂಶಗಳು ಇಲ್ಲದೆ ಹೋದರೆ ಮಗುವಿನ ಬೆಳವಣಿಗೆಯಲ್ಲಿ ತೊಂದರೆ ಉಂಟಾಗಬಹುದು. ಅದರಲ್ಲೂ ಪೋಲಿಕ್ ಆಮ್ಲ, ವಿಟಮಿನ್ ಡಿ ಸೇರಿದಂತೆ ಇನ್ನಿತರ ಪೂರಕ ಆಹಾರದ ಕೊರತೆ ಉಂಟಾಗಿದ್ದರೆ ಮಗುವಿನ ವರ್ತನೆಯಲ್ಲಿ ಸಮಸ್ಯೆ ಉಂಟಾಗುವುದು. ಜೊತೆಗೆ ಮಾನಸಿಕ ದುರ್ಬಲತೆಯೂ ಕಾಡುವ ಸಾಧ್ಯತೆಗಳಿರುತ್ತವೆ.

ಹಾಗಾಗಿ ಗರ್ಭಾವಸ್ಥೆಯಲ್ಲಿ ತಾಯಿ ಯಾವ ಬಗೆಯ ಆಹಾರವನ್ನು ಸೇವಿಸುತ್ತಾಳೆ? ತನ್ನ ಆರೋಗ್ಯ ಆರೈಕೆಯ ಜೊತೆಗೆ ಮಗುವಿನ ಆರೈಕೆಯು ಹೇಗೆ ನಡೆಯುವುದು ಎನ್ನುವುದನ್ನು ಸಹ ಪೂರಕ ರೀತಿಯಲ್ಲಿ ಚಿಂತನೆ ನಡೆಸುವ ಅಗತ್ಯವಿರುವುದು. ಕೆಲವು ವೈಜ್ಞಾನಿಕ ಸಂಶೋಧನೆ ಹಾಗೂ ಅಧ್ಯಯನಗಳ ಪ್ರಕಾರ ಗರ್ಭಾವಸ್ಥೆಯಲ್ಲಿ ಇರುವಾಗ ತಾಯಿ ಕೆಲವು ಆಯ್ದ ಆಹಾ ಪದಾರ್ಥಗಳನ್ನು ಸೇವಿಸುವುದರಿಂದ ಮಗುವಿನ ಬೆಳವಣಿಗೆಯೂ ಸೂಕ್ತ ರೀತಿಯಲ್ಲಾಗುವುದು. ಜೊತೆಗೆ ಬುದ್ಧಿವಂತ ಮಗು ಜನಿಸುವುದು ಎಂದು ಹೇಳಲಾಗುತ್ತದೆ... ನೀವು ಗರ್ಭಾವಸ್ಥೆಯಲ್ಲಿದ್ದೀರಿ, ನಿಮಗೆ ಹುಟ್ಟುವ ಮಗು ಬುದ್ಧಿವಂತ ಮಗುವಾಗಿರಬೇಕು ಎನ್ನುವ ಹಂಬಲವನ್ನು ಹೊಂದಿದ್ದೀರಿ ಎಂದಾದರೆ ಬೋಲ್ಡ್ ಸ್ಕೈ ನಿಮಗೆ ಅನುಕೂಲವಾಗಲು ಕೆಲವು ಸೂಕ್ತ ಮಾಹಿತಿಯನ್ನು ಪರಿಚಯಿಸಿಕೊಡುತ್ತಿದೆ... ತಪ್ಪದೆ ಓದಿ...

ಕೊಬ್ಬಿನ ಮೀನು

ಕೊಬ್ಬಿನ ಮೀನು

ಸಾಲ್ಮನ್, ಟ್ಯೂನಾ, ಮೆಕೆರೆಲ್ ಸೇರಿದಂತೆ ಇನ್ನಿತರ ಮೀನುಗಳು ಒಮೆಗಾ-3 ಕೊಬ್ಬಿನಾಮ್ಲವನ್ನು ಸಮೃದ್ಧವಾಗಿ ಹೊಂದಿರುತ್ತವೆ. ಇವು ಮಗುವಿನ ಮೆದುಳು ಬೆಳವಣಿಗೆಗೆ ಸಹಾಯಮಾಡುವುದು. ವಾರದಲ್ಲಿ ಎರಡಕ್ಕಿಂತ ಕಡಿಮೆ ಮೀನನ್ನು ತಿಂದ ತಾಯಿಯ ಮಗುವಿನ ಐಕ್ಯೂ ವಾರಕ್ಕೆ ಕಡಿಮೆ ಎಂದರೂ ಎರಡಕ್ಕಿಂತ ಹೆಚ್ಚು ಮೀನನ್ನು ಸೇವಿಸಿದ ತಾಯಿಯ ಮಗುವಿನ ಐಕ್ಯೂಗಿಂತ ಕಡಿಮೆ ಪ್ರಮಾಣದಲ್ಲಿತ್ತು ಎಂದು ಕೆಲವು ಅಧ್ಯಯನವು ದೃಢಪಡಿಸಿವೆ.

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ಕೋಲೀನ್ ಎನ್ನುವ ಅಮಿನೋ ಆ್ಯಸಿಡ್ ಇದ್ದು, ಇದು ಮಕ್ಕಳ ಮೆದುಳಿನ ಬೆಳವಣಿಗೆ ಮಾಡುತ್ತದೆ. ಗರ್ಭಿಣಿ ಮಹಿಳೆಯರು ದಿನದಲ್ಲಿ ಎರಡು ಮೊಟ್ಟೆ ತಿಂದರೆ ಗರ್ಭಿಣಿ ಮಹಿಳೆಯರಿಗೆ ಅರ್ಧದಷ್ಟು ಕೋಲೀನ್ ಸಿಗುತ್ತದೆ. ಮೊಟ್ಟೆಯಲ್ಲಿ ಪ್ರೋಟೀನ್ ಮತ್ತು ಕಬ್ಬಿನಾಂಶವಿರುವ ಕಾರಣದಿಂದ ಇದು ಜನನದ ವೇಳೆ ಮಗುವಿನ ತೂಕವನ್ನು ಹೆಚ್ಚಿಸುವುದು. ತೂಕ ಕಡಿಮೆಯಿರುವ ಮಕ್ಕಳ ಐಕ್ಯೂ ಕೂಡ ಕಡಿಮೆ ಇರುತ್ತದೆ.

ಮೊಸರು

ಮೊಸರು

ನಿಮ್ಮ ಗರ್ಭಾಶಯದೊಳಗೆ ಮಗುವಿನ ನರ ಕೋಶಗಳ ರಚನೆಗೆ ನಿಮ್ಮ ದೇಹವು ಶ್ರಮಿಸುತ್ತದೆ. ಇದಕ್ಕಾಗಿ ನೀವು ಹೆಚ್ಚುವರಿ ಪ್ರೋಟೀನ್ ಹೊಂದಿರಬೇಕು. ಪ್ರೋಟೀನ್ ಇತರ ಮೂಲಗಳಿಂದ ಹೊರತುಪಡಿಸಿ ಮೊಸರು ಮುಂತಾದ ಪ್ರೋಟೀನ್ ಸಮೃದ್ಧ ಆಹಾರಗಳನ್ನು ನೀವು ತಿನ್ನಬೇಕು. ಮೊಸರು ಸಹ ಕ್ಯಾಲ್ಸಿಯಂ ಅನ್ನು ಒಳಗೊಂಡಿರುತ್ತದೆ . ಇದು ಗರ್ಭಾವಸ್ಥೆಯಲ್ಲಿ ಅಗತ್ಯವಾಗಿರುತ್ತದೆ. ಹುಟ್ಟುವ ಮಗು ಉತ್ತಮ ಐಕ್ಯೂ ಹೊಂದುವುದು.

ಪಾಲಕ್, ಚಿಕನ್ ಮತ್ತು ಬೀನ್ಸ್

ಪಾಲಕ್, ಚಿಕನ್ ಮತ್ತು ಬೀನ್ಸ್

ಈ ಆಹಾರ ಪದಾರ್ಥಗಳಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ ಇರುತ್ತದೆ. ಅದು ನಿಮ್ಮ ಮಗು ಚುರುಕಾಗಿರುವಂತೆ ಮಾಡುವುದು. ಗರ್ಭಾವಸ್ಥೆಯಲ್ಲಿರುವ ತಾಯಂದಿರು ಇದನ್ನು ಸೇವಿಸುವುದು ಸೂಕ್ತ. ಇದರಿಂದ ಮಗುವಿನ ಜೀವಕೋಶಗಳಿಗೆ ಆಮ್ಲಜನಕವನ್ನು ಒದಗಿಸಲು ಕಬ್ಬಿಣಾಂಶ ಸಹಕರಿಸುತ್ತದೆ. ವೈದ್ಯರ ಸಲಹೆಯ ಮೇರೆಗೆ ಕಬ್ಬಿಣಾಂಶ ಹೊಂದಿರುವ ಪೂರಕ ಆಹಾರವನ್ನು ಸೇವಿಸಬೇಕು.

ಬೆರ್ರೀ ಹಣ್ಣುಗಳು

ಬೆರ್ರೀ ಹಣ್ಣುಗಳು

ಬೆರ್ರೀ ಹಣ್ಣುಗಳು, ಪಲ್ಲೆಹೂವುಗಳು, ಟೊಮೆಟೊಗಳು ಮತ್ತು ಕೆಂಪು ಬೀನ್ಸ್ ಮೊದಲಾದ ಹಣ್ಣುಗಳು ಉತ್ಕರ್ಷಣ ನಿರೋಧಕಗಳನ್ನು ಸಮೃದ್ಧವಾಗಿ ಒಳಗೊಂಡಿರುತ್ತವೆ. ಗರ್ಭಾವಸ್ಥೆಯಲ್ಲಿರುವ ತಾಯಂದಿರು ಇದನ್ನು ಸೇವಿಸಬೇಕು. ಈ ಹಣ್ಣುಗಳು ನಿಮ್ಮ ಮಗುವಿನ ಮಿದುಳಿನ ಅಂಗಾಂಶವನ್ನು ರಕ್ಷಿಸುತ್ತವೆ ಮತ್ತು ಅದರ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತದೆ.

ವಿಟಮಿನ್ ಡಿ

ವಿಟಮಿನ್ ಡಿ

ಶಿಶುಗಳ ಮಿದುಳಿನ ಬೆಳವಣಿಗೆಗೆ ಇದು ಮುಖ್ಯವಾಗಿದೆ. ಗರ್ಭಾವಸ್ಥೆಯಲ್ಲಿ ವಿಟಮಿನ್ ಡಿ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆಯಿರುವ ತಾಯಂದಿರು ಕಡಿಮೆ ಮಿದುಳಿನ ಶಕ್ತಿ ಹೊಂದಿರುವ ಶಿಶುಗಳಿಗೆ ಜನ್ಮ ನೀಡುತ್ತಾರೆ ಎಂದು ಅಧ್ಯಯನವು ತೋರಿಸಿದೆ. ಸೂರ್ಯನ ಬೆಳಕನ್ನು ಒಳಗೊಂಡು ನೀವು ವಿಟಮಿನ್ ಡಿ ಪೂರಕಗಳನ್ನು ಹೊಂದಿರಬೇಕು. ಮೊಟ್ಟೆ, ಚೀಸ್, ಯಕೃತ್ತು ಇತ್ಯಾದಿಗಳಲ್ಲಿ ವಿಟಮಿನ್ ಡಿ ಅಧಿಕ ಪ್ರಮಾಣದಲ್ಲಿ ಇರುತ್ತದೆ.

ಅಯೋಡಿನ್

ಅಯೋಡಿನ್

ಗರ್ಭಾವಸ್ಥೆಯಲ್ಲಿ ವಿಶೇಷವಾಗಿ ಮೊದಲ 12 ವಾರಗಳ ಅವಧಿಯಲ್ಲಿ ಅಯೋಡಿನ್ ಕೊರತೆ, ಮಕ್ಕಳಲ್ಲಿ ಕಡಿಮೆ ಐಕ್ಯೂ ಇರುತ್ತದೆ. ಗರ್ಭಾವಸ್ಥೆಯಲ್ಲಿ ನೀವು ಅಯೋಡಿಸ್ಡ್ ಉಪ್ಪು ತೆಗೆದುಕೊಳ್ಳಬೇಕು. ಇದಲ್ಲದೆ ಸಮುದ್ರ ಮೀನು, ಸಿಂಪಿ, ಮೊಟ್ಟೆ, ಮೊಸರನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬೇಕು. ಇವು ಅಯೋಡಿನ್ ಮೂಲವಾಗಿರುತ್ತವೆ.

ಫೋಲಿಕ್ ಆಮ್ಲದೊಂದಿಗೆ ಪ್ರಸವಪೂರ್ವ ಪೂರಕಗಳು

ಫೋಲಿಕ್ ಆಮ್ಲದೊಂದಿಗೆ ಪ್ರಸವಪೂರ್ವ ಪೂರಕಗಳು

ನಿಮ್ಮ ಮಗುವಿನಲ್ಲಿ ಮೆದುಳಿನ ಕೋಶಗಳ ರಚನೆಗೆ ಫೋಲಿಕ್ ಆಮ್ಲವು ಬಹಳ ಮುಖ್ಯ. 4 ವಾರಗಳ ಮೊದಲು ಫೋಲಿಕ್ ಆಮ್ಲವನ್ನು ತೆಗೆದುಕೊಂಡ ಗರ್ಭಿಣಿಯರು ಮತ್ತು ಗರ್ಭಾವಸ್ಥೆಯ 8 ವಾರಗಳ ನಂತರ ಸ್ವಲೀನತೆಯ ಶಿಶುಗಳಿಗೆ ಜನ್ಮ ನೀಡುವ 40 ಪ್ರತಿಶತದಷ್ಟು ಕಡಿಮೆ ಸಾಧ್ಯತೆಗಳಿವೆ ಎಂದು ಒಂದು ಸಂಶೋಧನೆಯು ತೋರಿಸಿದೆ. ಫಾಲಿಕ್ ಆಸಿಡ್ ಮೂಲಗಳು ಹಸಿರು ಎಲೆಗಳ ತರಕಾರಿಗಳು, ಸ್ಪಿನಾಚ್ ಮಸೂರದಲ್ಲಿ ಇರುತ್ತವೆ. ನೀವು ವಿಟಮಿನ್ ಬಿ 12 ಜೊತೆಗೆ ಫಾಲಿಕ್ ಆಸಿಡ್ ಪೂರಕವನ್ನು ತೆಗೆದುಕೊಳ್ಳಬೇಕು.

ಮೊಟ್ಟೆ ಮತ್ತು ಗಿಣ್ಣು

ಮೊಟ್ಟೆ ಮತ್ತು ಗಿಣ್ಣು

ವಿಟಮಿನ್ ಡಿ ಇರುವಂತಹ ಎಲ್ಲಾ ಆಹಾರಗಳನ್ನು ಸೇವಿಸಿ. ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಅತ್ಯಗತ್ಯ. ಗರ್ಭಿಣಿ ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟವು ಕಡಿಮೆಯಾಗಿದ್ದರೆ ಅಂತಹ ಮಹಿಳೆಯರ ಮಗುವಿನ ಬುದ್ಧಿಶಕ್ತಿಯು ಕಡಿಮೆಯಿರುತ್ತದೆ. ವಿಟಮಿನ್ ಡಿ ಮಾತ್ರೆಯೊಂದಿಗೆ ಸೂರ್ಯನ ಬೆಳಕಿಗೆ ಮೈಯೊಡ್ಡಬೇಕು. ಮೊಟ್ಟೆ, ಗಿಣ್ಣು, ಮಾಂಸ ಇತ್ಯಾದಿಯನ್ನು ತಿನ್ನಬೇಕು.

ನೇರಳೆ ಹಣ್ಣು

ನೇರಳೆ ಹಣ್ಣು

ನೇರಳೆ ಹಣ್ಣು, ಪಲ್ಲೆಹೂ, ಟೊಮೆಟೋ ಮತ್ತು ಕೆಂಪುಬೀಜಗಳು ಆ್ಯಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿದೆ ಮತ್ತು ಗರ್ಭಿಣಿ ಮಹಿಳೆಯರು ಇದನ್ನು ಸೇವಿಸಬೇಕು. ಇದು ಗರ್ಭದಲ್ಲಿರುವ ಮಗುವಿನ ಮೆದುಳಿನ ಅಂಗಾಂಶಗಳನ್ನು ರಕ್ಷಿಸಿ ಅದರ ಬೆಳವಣಿಗೆಗೆ ನೆರವಾಗುತ್ತದೆ.

English summary

Pregnancy Foods That Make Your Baby Smarter In the Womb

It is a dream of every mother to have smart and intelligent babies. All this depends on a mother's diet. If a mother is not taking proper supplements such as folic acid, vitamin D, iron etc, then there are chances that their deficiency may cause the baby to be born mentally weak with behavioral problems too. What women eat during pregnancy affects the physical and mental development of their child.