ಗರ್ಭಿಣಿ ಮಹಿಳೆಯರು ನಿಯಮಿತವಾಗಿ ದಾಳಿಂಬೆ ಸೇವಿಸುವುದು ಒಳ್ಳೆಯದು

Posted By: Hemanth
Subscribe to Boldsky

ಗರಿಗರಿ ಬೀಜಗಳನ್ನು ಹೊಂದಿರುವಂತಹ ದಾಳಿಂಬೆಯಲ್ಲಿ ದೇಹಕ್ಕೆ ಬೇಕಾಗುವ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದನ್ನು ಪ್ರತಿಯೊಬ್ಬರು ಸೇವನೆ ಮಾಡಬಹುದು. ಅದರಲ್ಲೂ ಗರ್ಭಿಣಿ ಮಹಿಳೆಯರು ದಾಳಿಂಬೆ ಸೇವನೆ ಮಾಡಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಸಿಗುವುದು.

ಬೇರೆಯವರು ಏನು ಹೇಳುತ್ತಾರೆ ಎನ್ನುವುದನ್ನು ಮರೆತು, ನಿಮ್ಮದೇ ಆಗಿರುವಂತಹ ಆಹಾರ ಕ್ರಮ ಪಾಲಿಸಿಕೊಂಡು ಹೋದರೆ ಅದು ಗರ್ಭಿಣಿಯರಿಗೆ ಒಳ್ಳೆಯದು. ಗರ್ಭಿಣಿಯರು ದಾಳಿಂಬೆ ತಿನ್ನಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ವಾದ ಪ್ರತಿವಾದಗಳು ಇದ್ದೇ ಇರುತ್ತದೆ. ಅವುಗಳಿಗೆ ಅವರು ತಮ್ಮದೇ ಆಗಿರುವಂತಹ ಸಮರ್ಥನೆ ಕೂಡ ನೀಡುವರು. ಆದರೆ ಗರ್ಭಿಣಿಯರು ದಾಳಿಂಬೆ ಸೇವನೆ ಮಾಡುವುದು ಅತೀ ಅಗತ್ಯವೆಂದು ಈ ಲೇಖನದ ಮೂಲಕ ನೀವು ತಿಳಿದುಕೊಳ್ಳಬಹುದು....

ದಾಳಿಂಬೆ ಮೂಲಕ ಪೋಷಕಾಂಶಗಳು ಸಿಗುವುದು

ದಾಳಿಂಬೆ ಮೂಲಕ ಪೋಷಕಾಂಶಗಳು ಸಿಗುವುದು

ನೀವು ಗರ್ಭಿಣಿಯಾಗಿದ್ದು, ಅತ್ಯಧಿಕ ಮಟ್ಟದ ಪೋಷಕಾಂಶಗಳು ದೇಹಕ್ಕೆ ಸಿಗಬೇಕೆಂದು ನಿಮಗೆ ಅನಿಸುತ್ತಿದ್ದರೆ ಆಗ ನೀವು ದಾಳಿಂಬೆ ಸೇವಿಸುವುದನ್ನು ಪರಿಗಣಿಸಬೇಕು. ಹೆಚ್ಚಿನವರು ದಾಳಿಂಬೆಯ ರುಚಿಯಿಂದ ಅದನ್ನು ಇಷ್ಟಪಡುವರು ಮತ್ತು ಹಸಿವಾಗುವಾಗ ಅಧಿಕ ಕ್ಯಾಲರಿ ತಿಂಡಿಗಳನ್ನು ಸೇವಿಸುವುದಕ್ಕೆ ಇದೇ ಪರ್ಯಾಯ.

ದಾಳಿಂಬೆ ಮೂಲಕ ಪೋಷಕಾಂಶಗಳು ಸಿಗುವುದು

ದಾಳಿಂಬೆ ಮೂಲಕ ಪೋಷಕಾಂಶಗಳು ಸಿಗುವುದು

ನಿಮಗೆ ಅಲರ್ಜಿ ಇಲ್ಲವೆಂದಾದರೆ ದಾಳಿಂಬೆ ಸೇವನೆ ಮಾಡಬಹುದು ಎಂದು ವೈದ್ಯರು ಕೂಡ ಸಲಹೆ ನೀಡುವರು. ಇದು ನಿಮಗೆ ಮತ್ತು ನಿಮ್ಮ ಗರ್ಭದಲ್ಲಿರುವ ಮಗುವಿಗೆ ಹೆಚ್ಚಿನ ಪೋಷಕಾಂಶ ನೀಡುವ ಕಾರಣದಿಂದ ದಾಳಿಂಬೆ ಗರ್ಭಿಣೆಯರು ಸೇವನೆ ಮಾಡಬಾರದು ಎನ್ನುವುದಕ್ಕೆ ಯಾವುದೇ ಕಾರಣಗಳು ಇಲ್ಲ.ಗರ್ಭಿಣಿಯರಿಗೆ ಸಿಹಿ ತಿನ್ನುವಂತಹ ಆಸೆಯಾಗುತ್ತಿದ್ದರೆ ಆಗ ಒಂದು ಮುಷ್ಟಿ ದಾಳಿಂಬೆ ತೆಗೆದುಕೊಂಡು ತಿನ್ನಿ. ನೀವು ದಾಳಿಂಬೆ ಜ್ಯೂಸ್ ಕೂಡ ಕುಡಿಯಬಹುದು. ಇದು ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುವುದು.

 ಗರ್ಭಧಾರಣೆ ವೇಳೆ ಬೇಕಾಗುವ ಪೋಷಕಾಂಶಗಳು

ಗರ್ಭಧಾರಣೆ ವೇಳೆ ಬೇಕಾಗುವ ಪೋಷಕಾಂಶಗಳು

ಎರಡನೇ ಹಾಗೂ ಮೂರನೇ ಹಂತದಲ್ಲಿ ಗರ್ಭಿಣಿ ಮಹಿಳೆಯರಿಗೆ ದಿನಕ್ಕೆ ಸುಮಾರು 300 ಹೆಚ್ಚು ಕ್ಯಾಲರಿ ಬೇಕಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ. ಇದರೊಂದಿಗೆ ಪೋಷಕಾಂಶಗಳು ಕೂಡ ಬೇಕಾಗುವುದು. ಇದರಿಂದ ಗರ್ಭಿಣಿಯಾಗಿರುವ ವೇಳೆ ದಾಳಿಂಬೆ ಸೇವನೆ ಮಾಡುವುದರಿಂದ ಕ್ಯಾಲರಿ ಮತ್ತು ಪೋಷಕಾಂಶಗಳು ಸಿಗುವುದು. ಇದು ರುಚಿ ಮಾತ್ರವಲ್ಲದೆ, ಗರ್ಭಧಾರಣೆ ವೇಳೆ ಹಲವಾರು ರೀತಿಯ ಆರೋಗ್ಯ ಲಾಭ ಕೂಡ ನೀಡುವುದು.

ಗರ್ಭಧಾರಣೆ ವೇಳೆ ದಾಳಿಂಬೆ ಸೇವನೆಯಿಂದ ಸಿಗುವ ಲಾಭಗಳು?

ಗರ್ಭಧಾರಣೆ ವೇಳೆ ದಾಳಿಂಬೆ ಸೇವನೆಯಿಂದ ಸಿಗುವ ಲಾಭಗಳು?

ಗರ್ಭಧಾರಣೆ ವೇಳೆ ದಾಳಿಂಬೆ ಸೇವನೆಯಿಂದ ಸಿಗುವ ಆರೋಗ್ಯ ಲಾಭಗಳು

*ಗರ್ಭಧಾರಣೆ ವೇಳೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯ. ಅದರಲ್ಲೂ ಗರ್ಭಧಾರಣೆಯ ಕೊನೆಯ ಹಂತದಲ್ಲಿ ಮಲಬದ್ಧತೆಯಂತಹ ಸಮಸ್ಯೆ ಕಾಣಿಸಿಕೊಳ್ಳುವುದು ಇದೆ.

ನಾರಿನಾಂಶ ಹೆಚ್ಚಾಗಿರುವ ಆಹಾರವನ್ನು ಸೇವನೆ ಮಾಡುವುದರಿಂದ ಈ ಸಮಸ್ಯೆ ನಿವಾರಣೆ ಮಾಡಬಹುದು ಮತ್ತು ಹಲವಾರು ಸಮಸ್ಯೆಗಳು ಪರಿಹಾರವಾಗುವುದು. ದಾಳಿಂಬೆಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ ಮತ್ತು ಅರ್ಧ ಕಪ್ ದಾಳಿಂಬೆ ಸೇವನೆ ಮಾಡಿದರೆ ಅದರಿಂದ ನಿಮ್ಮ ಹೊಟ್ಟೆಯ ಕ್ರಿಯೆಗಳು ಸರಿಯಾಗಿ ನಿಯಂತ್ರಿಸಲ್ಪಡುವುದು. ಇದರಿಂದ ಮಲಬದ್ಧತೆಯಂತಹ ಸಮಸ್ಯೆ ಕಡಿಮೆಯಾಗುವುದು.

ಗರ್ಭಧಾರಣೆ ವೇಳೆ ದಾಳಿಂಬೆ ಸೇವನೆಯಿಂದ ಸಿಗುವ ಲಾಭಗಳು?

ಗರ್ಭಧಾರಣೆ ವೇಳೆ ದಾಳಿಂಬೆ ಸೇವನೆಯಿಂದ ಸಿಗುವ ಲಾಭಗಳು?

ಕೆಲವು ಗರ್ಭಿಣಿ ಮಹಿಳೆಯರಿಗೆ ರಕ್ತಹೀನತೆಯಂತಹ ಸಮಸ್ಯೆ ಕಾಣಿಸಿಕೊಳ್ಳುವುದು. ಇಂತಹ ಸಮಸ್ಯೆ ಇರುವಂತಹ ಗರ್ಭಿಣಿಯರು, ವೈದ್ಯರು ಸೂಚಿಸಿರುವ ಕಬ್ಬಿನಾಂಶದ ಮಾತ್ರೆಗಳ ಸಹಿತ ಕಬ್ಬಿನಾಂಶ ಅಧಿಕವಾಗಿರುವಂತಹ ಆಹಾರಗಳನ್ನು ಸೇವಿಸಬೇಕು. ಇದರಿಂದ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗುವುದು. ಕಬ್ಬಿಣಾಂಶದ ಕೊರತೆಯಿಂದಾಗಿ ಗರ್ಭಿಣಿ ಮಹಿಳೆಯರಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಿಂದ ಅಕಾಲಿಕ ಹೆರಿಗೆ ಮತ್ತು ಜನನದ ವೇಳೆ ಮಗುವಿನ ತೂಕ ಕಡಿಮೆಯಾಗಬಹುದು. ದಾಳಿಂಬೆ ಸೇವನೆ ಮಾಡುವುದರಿಂದ ನಿಮಗೆ ಪ್ರತಿನಿತ್ಯಕ್ಕೆ ಬೇಕಾಗಿರುವ ಕಬ್ಬಿನಾಂಶವು ಸಿಗುವುದು.

ಗರ್ಭಧಾರಣೆ ವೇಳೆ ದಾಳಿಂಬೆ ಸೇವನೆಯಿಂದ ಸಿಗುವ ಲಾಭಗಳು?

ಗರ್ಭಧಾರಣೆ ವೇಳೆ ದಾಳಿಂಬೆ ಸೇವನೆಯಿಂದ ಸಿಗುವ ಲಾಭಗಳು?

ದೇಹದಲ್ಲಿ ಕಬ್ಬಿನಾಂಶ ಹೀರಿಕೊಳ್ಳಲು ವಿಟಮಿನ್ ಸಿ ಅಗತ್ಯವಿದೆ. ದಾಳಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಇದರಿಂದ ದೇಹವು ಕಬ್ಬಿನಾಂಶವನ್ನು ಸರಿಯಾಗಿ ಹೀರಿಕೊಳ್ಳುವಂತೆ ಇದು ಮಾಡುವುದು.

ಗರ್ಭಿಣಿ ಮಹಿಳೆಯರು ದಾಳಿಂಬೆ ಸೇವಿಸಿದರೆ ಇರುವ ಅಪಾಯಗಳು

ಗರ್ಭಿಣಿ ಮಹಿಳೆಯರು ದಾಳಿಂಬೆ ಸೇವಿಸಿದರೆ ಇರುವ ಅಪಾಯಗಳು

ದಾಳಿಂಬೆ ಹಣ್ಣಿನ ಸೇವನೆಯಿಂದ ಗರ್ಭಿಣಿ ಮಹಿಳೆಯರಿಗೆ ಸಿಗುವ ಲಾಭದ ಬಗ್ಗೆ ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಇನ್ನು ಅದರ ಸೇವನೆಯಿಂದ ಇರುವ ಅಪಾಯಗಳ ಬಗ್ಗೆ ತಿಳಿಯುವ.....

*ದಾಳಿಂಬೆ ಸೇವನೆ ಮಾಡುವಾಗ ಅದರ ಸಿಪ್ಪೆಯ ಅಂಶವನ್ನು ಸೇವನೆ ಮಾಡಿದರೆ ಅದರಿಂದ ಅಕಾಲಿಕ ಹೆರಿಗೆಯಾಗುವ ಸಾಧ್ಯತೆಯಿದೆ.

*ದಾಳಿಂಬೆ ಜ್ಯೂಸ್ ಮಾಡಿ ಕುಡಿಯುದಾದರೆ ಅದು ಮಿತ ಪ್ರಮಾಣದಲ್ಲಿರಲಿ. ಇದರಲ್ಲಿ ಹೆಚ್ಚಿನ ಕ್ಯಾಲರಿ ಇರುತ್ತದೆ.

* ಗರ್ಭಿಣಿ ಮಹಿಳೆಯರಿಗೆ ನೀಡಲಾಗುವಂತಹ ಕಬ್ಬಿನಾಂಶದ ಮಾತ್ರೆ ಮತ್ತು ಕ್ಯಾಲ್ಸಿಯಂ ಮಾತ್ರೆ ಬಿಟ್ಟು ಬೇರೆ ಯಾವುದೇ ಮಾತ್ರೆಗಳ ಸೇವನೆ ಮಾಡುತ್ತಲಿದ್ದರೆ ಆಗ ನೀವು ವೈದ್ಯರ ಸಲಹೆ ಪಡೆದುಕೊಂಡು ದಾಳಿಂಬೆ ಸೇವನೆ ಮಾಡಿದರೆ ತುಂಬಾ ಒಳ್ಳೆಯದು. ರಕ್ತದೊತ್ತಡ ಮತ್ತು ರಕ್ತ ತೆಳುಗೊಳಿಸುವ ಔಷಧಿ ಸೇವನೆ ಮಾಡುತ್ತಿದ್ದರೆ ದಾಳಿಂಬೆ ವರ್ಜ್ಯ.

ಗರ್ಭಿಣಿ ಮಹಿಳೆಯರಿಗೆ ಬೇಕಾಗುವ ಪೋಷಕಾಂಶ ನೀಡುವುದು

ಗರ್ಭಿಣಿ ಮಹಿಳೆಯರಿಗೆ ಬೇಕಾಗುವ ಪೋಷಕಾಂಶ ನೀಡುವುದು

*ಗರ್ಭಿಣಿ ಮಹಿಳೆಯರಿಗೆ ಕ್ಯಾಲ್ಸಿಯಂ, ವಿಟಮಿನ್ ಡಿ, ಕಬ್ಬಿನಾಂಶ, ಪ್ರೋಟೀನ್ ಮತ್ತು ಫಾಲಟೆಯಂತಹ ಹಲವಾರು ಪೋಷಕಾಂಶಗಳು ಬೇಕಾಗುವುದು. ಅರ್ಧ ಕಪ್ ದಾಳಿಂಬೆ ಸೇವನೆ ಮಾಡಿದರೆ ಅದರಿಂದ 72 ಕ್ಯಾಲರಿ ಮತ್ತು 9 ಮಿ.ಗ್ರಾಂ. ಕ್ಯಾಲ್ಸಿಯಂ ದೇಹಕ್ಕೆ ಸಿಗುವುದು.

*ಅರ್ಧ ಕಪ್ ದಾಳಿಂಬೆಯಲ್ಲಿ ದೇಹಕ್ಕೆ ದಿನಕ್ಕೆ ಬೇಕಾಗುವ 27 ಮಿ.ಗ್ರಾಂ. ಕಬ್ಬಿನಾಂಶದಲ್ಲಿ 0.26 ಮಿ.ಗ್ರಾಂನಷ್ಟು ಒದಗಿಸುವುದು. ದಿನಕ್ಕೆ ಬೇಕಾಗಿರುವ 800 ಮೈಕ್ರೋಗ್ರಾಂನಲ್ಲಿ 33 ಮೈಕ್ರೋಗ್ರಾಂ ಫಾಲಟೆ ಮತ್ತು ಬೇಕಾಗಿರುವ 71 ಗ್ರಾಂ ಪ್ರೋಟೀನ್ ನಲ್ಲಿ 1.45 ಗ್ರಾಂನ್ನು ಒದಗಿಸುವುದು.

*ಅರ್ಧ ಕಪ್ ದಾಳಿಂಬೆಯಲ್ಲಿ 8.9 ಮಿಲಿಗ್ರಾಂ ವಿಟಮಿನ್ ಸಿ ಇದೆ. ಇದರಿಂದ ನಿಮ್ಮ ದೇಹವು ಸೇವಿಸುವ ಆಹಾರ ಮತ್ತು ಮಾತ್ರೆಗಳಲ್ಲಿ ಇರುವ ಕಬ್ಬಿನಾಂಶ ಹೀರಿಕೊಳ್ಳಲು ಇದು ನೆರವಾಗುವುದು.

*ದಾಳಿಂಬೆ ಹಣ್ಣು ಮತ್ತು ಅದರ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಒಂದಲ್ಲ ಒಂದು ರೀತಿಯ ಲಾಭವಿದೆ. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಇದು ತುಂಬಾ ಒಳ್ಳೆಯದು. ನಿಮಗೆ ಯಾವುದೇ ರೀತಿಯ ಗೊಂದಲವಿದ್ದರೆ ಆಗ ನೀವು ಹೋಗಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದು ದಾಳಿಂಬೆ ಸೇವಿಸಿ. ಅವರು ಒಪ್ಪಿಗೆ ನೀಡಿದರೆ ನಿಮ್ಮ ಆಹಾರ ಕ್ರಮದಲ್ಲಿ ಇದನ್ನು ಸೇರಿಸಿಕೊಳ್ಳಿ.

English summary

Is It Okay To Have Pomegranate During Pregnancy

Pomegranate is one such fruit that is loved by many. And if you are pregnant, this is one fruit that provides all the nutrients that are required for your body. Doctors also advise you to have pomegranate and it is a completely safe to have it during pregnancy, until you don't have any other allergies.