ಗರ್ಭಾವಸ್ಥೆಯಲ್ಲಿ ಕಾಡುವ ಒತ್ತಡಕ್ಕೆ ಮುಕ್ತಿ ಹಾಡುವುದು ಹೇಗೆ?

Posted By: Jaya subramanya
Subscribe to Boldsky

ಮಹಿಳೆ ಇಂದು ಹಲವಾರು ಪಾತ್ರಗಳನ್ನು ನಿಭಾಯಿಸುತ್ತಾಳೆ. ಮನೆ ಮತ್ತು ಕಚೇರಿ ಎರಡರಲ್ಲೂ ಸಮರ್ಥವಾಗಿ ಆಕೆ ತನ್ನ ಕರ್ತವ್ಯವನ್ನು ನಿಭಾಯಿಸುತ್ತಾಳೆ. ಆದರೆ ಇಂದಿನ ಒತ್ತಡದ ಜೀವನ ಪದ್ಧತಿಯಿಂದ ಆಕೆಗೆ ಸುಸ್ತು, ಆಯಾಸ, ಬಳಲಿಕೆ, ಕೋಪ ಮೊದಲಾದ ಅಂಶಗಳೂ ಕೂಡ ಕಾಡುತ್ತಲೇ ಇರುತ್ತದೆ. ಇನ್ನು ಹೆಣ್ಣು ಗರ್ಭಾವಸ್ಥೆಯಲ್ಲಿರುವಾಗ ಈ ಕೋಪ, ಹತಾಶೆ ಕೊಂಚ ಜಾಸ್ತಿಯೇ ಇದ್ದು ಇದರಿಂದ ನಿಮ್ಮ ಭ್ರೂಣಕ್ಕೆ ಹಾನಿಯುಂಟಾಗುತ್ತದೆ ಎಂಬ ಅಂಶವನ್ನು ನೀವು ತಿಳಿದಿದ್ದೀರಾ? ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ಬರುವ ಅತ್ಯಂತ ಮಧುರವಾದ ಕ್ಷಣವಾಗಿದೆ.

ಈ ಮಧುರವಾದ ಕ್ಷಣವನ್ನು ನೀವು ಕ್ಷಣ ಕ್ಷಣವೂ ಅನುಭವಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿ ನಿಮಗುಂಟಾಗದಂತೆ ನಿಮ್ಮ ಮಗುವಿನೊಂದಿಗಿರುವ ಕ್ಷಣವನ್ನು ನೀವು ಆಸ್ವಾದಿಸಬೇಕು ಎಂದಾದಲ್ಲಿ ಕೆಲವೊಂದು ಅಂಶಗಳನ್ನು ನೀವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಒಂದು ಅಧ್ಯಯನದಲ್ಲಿ ಹೇಳುವಂತೆ ಒತ್ತಡವು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿದ್ದು ಇದನ್ನು ನಿಯಂತ್ರಣದಲ್ಲಿರಿಸುವುದನ್ನು ನಾವು ಮಾಡಬೇಕಾಗುತ್ತದೆ.

ನೀವು ಅಧಿಕ ಒತ್ತಡದಲ್ಲಿ ಬಳಲುತ್ತಿದ್ದೀರಿ ಎಂದಾದಲ್ಲಿ ನಿಮ್ಮ ದೈನಂದಿನ ಕೆಲಸಗಳಲ್ಲಿ ನೀವು ಮಾಡುವ ದೋಷಗಳು ಇದಕ್ಕೆ ಕಾರಣವಾಗಿರುತ್ತದೆ. ನೀವು ಗರ್ಭಾವಸ್ಥೆಯಲ್ಲಿ ತೆಗೆದುಕೊಳ್ಳುವ ಒತ್ತಡಗಳು ಹೆಚ್ಚು ರೀತಿಯಲ್ಲಿ ನಿಮ್ಮ ಮಗುವಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಒತ್ತಡವನ್ನು ಕಡಿಮೆ ಮಾಡುವಂತಹ ಕೆಲವೊಂದು ಕ್ರಮಗಳನ್ನು ನೀವು ಕೈಗೊಳ್ಳಬೇಕಾಗುತ್ತದೆ. ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳೋಣ....

ನೀವು ಮೆಚ್ಚುವ ಸಂಗತಿಗಳನ್ನು ಮಾಡಿ

ನೀವು ಮೆಚ್ಚುವ ಸಂಗತಿಗಳನ್ನು ಮಾಡಿ

ನೀವು ಮನೆಯಲ್ಲಿ ಒಬ್ಬರೇ ಇದ್ದ ಸಮಯದಲ್ಲಿ ಆದಷ್ಟು ನಿಮ್ಮ ಮನಸ್ಸಿಗೆ ಮೆಚ್ಚುವಂತಹ ಕೆಲಸಗಳನ್ನು ಮಾಡಿ. ಗರ್ಭಾವಸ್ಥೆಯಲ್ಲಿ ಆದಷ್ಟು ವಿಶ್ರಾಂತಿಯನ್ನು ನೀವು ತೆಗೆದುಕೊಳ್ಳಬೇಕು. ಸಂಗೀತವನ್ನು ಆಲಿಸಿ ಇಲ್ಲವೇ ಪುಸ್ತಕವನ್ನು ಓದಿ. ಇದು ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಸಂರಕ್ಷಿಸುತ್ತದೆ.

ಯೋಗ ಮಾಡಿ

ಯೋಗ ಮಾಡಿ

ಯೋಗದಲ್ಲಿ ಪ್ರಧಾನವಾಗಿ ಪ್ರಾಣಾಯಾಮ, ಧ್ಯಾನವನ್ನು ನೀವು ಅನುಸರಿಸಬೇಕು. ಪ್ರಶಾಂತವಾದ ಸ್ಥಳವನ್ನು ಆರಿಸಿಕೊಂಡು ಮೌನವಾಗಿ ಧ್ಯಾನವನ್ನು ಕೈಗೊಳ್ಳಿ. ಇದರಿಂದ ನಿಮ್ಮ ಒತ್ತಡ ಕೊಂಚ ತಹಬಂದಿಗೆ ಬರುತ್ತದೆ.

ನಿಮ್ಮ ದೇಹವನ್ನು ಸ್ವೀಕರಿಸಿ

ನಿಮ್ಮ ದೇಹವನ್ನು ಸ್ವೀಕರಿಸಿ

ಗರ್ಭಾವಸ್ಥೆಯಲ್ಲಿ ಹೆಚ್ಚಿನ ಸ್ತ್ರೀಯರು ತಮ್ಮ ದೇಹದಲ್ಲಿನ ಬದಲಾವಣೆಗಳನ್ನು ಅರಿತುಕೊಂಡು ಒತ್ತಡಕ್ಕೆ ಒಳಗಾಗುತ್ತಾರೆ. ಇದರಲ್ಲಿ ಪ್ರಮುಖವಾದುದು ಹೆಚ್ಚುತ್ತಿರುವ ತೂಕವಾಗಿದೆ. ಅಂತೆಯೇ ತಮ್ಮ ಹಿಂದಿನ ದೇಹ ವಿನ್ಯಾಸಕ್ಕೆ ತಾವು ಮರಳಬಹುದೇ ಎಂಬ ಆತಂಕ ಅವರಲ್ಲಿ ಮನೆ ಮಾಡುತ್ತದೆ. ಇದರ ಬಗ್ಗೆ ನೀವು ಚಿಂತಿಸಬೇಕಾದ ಅಗತ್ಯವಿಲ್ಲ. ಹೆರಿಗೆಯ ನಂತರ ಸೂಕ್ತ ವ್ಯಾಯಾಮ ಮತ್ತು ಕಟ್ಟು ನಿಟ್ಟಿನ ಆಹಾರ ಪದ್ಧತಿಗಳನ್ನು ಅನುಸರಿಸಿಕೊಂಡು ಹೆಚ್ಚಿನ ತೂಕವನ್ನು ನೀವು ಕಳೆದುಕೊಳ್ಳಬಹುದಾಗಿದೆ.

ನಿಮ್ಮ ಆಹಾರದಲ್ಲಿ ಒಮೇಗಾ-3 ಹೆಚ್ಚು ಪ್ರಮಾಣದಲ್ಲಿರಲಿ

ನಿಮ್ಮ ಆಹಾರದಲ್ಲಿ ಒಮೇಗಾ-3 ಹೆಚ್ಚು ಪ್ರಮಾಣದಲ್ಲಿರಲಿ

ಒಮೇಗಾ -3 ಇರುವ ಆಹಾರವನ್ನು ನೀವು ಹೆಚ್ಚು ಪ್ರಮಾಣದಲ್ಲಿ ಸೇವಿಸುವುದು ನಿಮ್ಮನ್ನು ಚಟುವಟಿಕೆಯಿಂದ ಇರಿಸುತ್ತದೆ. ಇದು ಟ್ರೈಪೊಟನ್ ಎಂದು ಕರೆಯಲಾದ ಅಮಿನೊ ಆಸಿಡ್ ಅನ್ನು ವರ್ಧಿಸುತ್ತದೆ. ಈ ಹಾರ್ಮೋನು ನಿಮಗೆ ಒಳ್ಳೆಯ ನಿದ್ದೆಯನ್ನು ಒದಗಿಸಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ

ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ

ನಿಮ್ಮ ಪತಿ ಅಥವಾ ಮನೆಯ ಸದಸ್ಯರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಇದರಿಂದ ನಿಮ್ಮ ಮನದ ದುಗುಡ ಕೊಂಚ ಹಗುರಾಗುತ್ತದೆ ಮತ್ತು ಅವರು ನಿಮ್ಮೊಂದಿಗೆ ಸದಾ ಕಾಲ ಇರುತ್ತಾರೆ. ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಅವರು ಸಹಾಯ ಮಾಡುತ್ತಾರೆ.

ಹೆಚ್ಚು ನಿದ್ದೆ ಮಾಡಿ

ಹೆಚ್ಚು ನಿದ್ದೆ ಮಾಡಿ

ನಿದ್ದೆಯು ಒತ್ತಡದ ಹಾರ್ಮೋನನ್ನು ತಹಬಂದಿಗೆ ತರುತ್ತದೆ. ಗರ್ಭಾವಸ್ಥೆಯಲ್ಲಿ ನಿಮ್ಮ ದೇಹವು ಹೆಚ್ಚು ನಿತ್ರಾಣಗೊಳ್ಳುತ್ತದೆ ಮತ್ತು ಈ ಸಮಯದಲ್ಲಿ ವಿಶ್ರಾಂತಿ ಅಗತ್ಯವಿದೆ. ಸಾಕಷ್ಟು ನಿದ್ದೆ ಮಾಡುವುದು ಒಳಿತಾಗಿದೆ.

ನಿಮ್ಮ ಮಗುವಿನೊಂದಿಗೆ ಮಾತನಾಡಿ

ನಿಮ್ಮ ಮಗುವಿನೊಂದಿಗೆ ಮಾತನಾಡಿ

23 ವಾರಗಳ ನಂತರ ನಿಮ್ಮ ಮಗು ನಿಮ್ಮ ಮಾತುಗಳನ್ನು ಆಲಿಸಲು ಪ್ರಾರಂಭಿಸುತ್ತದೆ. ಆದ್ದರಿಂದ ಆದಷ್ಟು ನಿಮ್ಮ ಮಗುವಿನೊಂದಿಗೆ ಸಂಭಾಷಣೆಯನ್ನು ನಡೆಸಿ. ಇದರಿಂದ ನಿಮ್ಮ ಮತ್ತು ಮಗುವಿನ ನಡುವೆ ಬಾಂಧವ್ಯ ಇನ್ನೂ ಗಟ್ಟಿಯಾಗುತ್ತದೆ. ನಿಮಗೂ ಕೊಂಚ ನಿರಾಳತೆ ದೊರೆಯುತ್ತದೆ ಹಾಗೂ ಹೆರಿಗೆಯ ಸಮಯದಲ್ಲಿ ನೀವು ಸಾಕಷ್ಟು ಧೈರ್ಯವನ್ನು ಪಡೆದುಕೊಳ್ಳುತ್ತೀರಿ.

ಉದ್ಯೋಗವನ್ನು ಬಿಡಿ

ಉದ್ಯೋಗವನ್ನು ಬಿಡಿ

ನೀವು ಒತ್ತಡದ ಕೆಲಸದಲ್ಲಿದ್ದೀರಿ ಎಂದಾದಲ್ಲಿ ಆ ಕೆಲಸವನ್ನು ಬಿಡಿ. ನಿಮ್ಮ ಒತ್ತಡವು ನಿಮಗೆ ಮತ್ತು ನಿಮ್ಮ ಮಗುವಿಗೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಮಗುವಿಗಿಂತ ಹೆಚ್ಚು ಮುಖ್ಯ ಮತ್ಯಾವುದೂ ಇಲ್ಲ ಎಂಬುದನ್ನು ಮರೆಯಬೇಡಿ.

ನಿಮ್ಮ ಯೋಚನೆಗಳನ್ನು ಧನಾತ್ಮಕವಾಗಿಸಿಕೊಳ್ಳಿ

ನಿಮ್ಮ ಯೋಚನೆಗಳನ್ನು ಧನಾತ್ಮಕವಾಗಿಸಿಕೊಳ್ಳಿ

ಗರ್ಭಾವಸ್ಥೆ ಮತ್ತು ಹೆರಿಗೆಯ ಕುರಿತು ಹೆಚ್ಚಿನವರು ತಮಗೆ ತೋಚಿದಂತೆ ಮಾತನಾಡಬಹುದು. ಇದರಿಂದ ನಿಮ್ಮ ಭಯ ಆತಂಕ ಇನ್ನಷ್ಟು ಹೆಚ್ಚುವ ಸಾಧ್ಯತೆ ಇರುತ್ತದೆ. ಇದಕ್ಕೆ ಬದಲಾಗಿ ತಜ್ಞರಿಂದ ಮಾಹಿತಿಯನ್ನು ಪಡೆದುಕೊಂಡು ಅವರು ನೀಡುವ ಸೂಚನೆಗಳನ್ನು ಮಾತ್ರವೇ ಸ್ವೀಕರಿಸಿ.

ಸಹಾಯ ಪಡೆದುಕೊಳ್ಳಿ

ಸಹಾಯ ಪಡೆದುಕೊಳ್ಳಿ

ನಿಮ್ಮ ಮಗುವಿನ ಹೆರಿಗೆಯ ನಂತರ ಅವರನ್ನು ನೋಡಿಕೊಳ್ಳುವುದು ಕೊಂಚ ಪ್ರಯಾಸದ ಕೆಲಸವಾಗಿರುತ್ತದೆ. ಈ ಸಮಯದಲ್ಲಿ ನುರಿತ ಶುಶ್ರೂಕಿಯನ್ನು ಸಹಾಯವನ್ನು ಪಡೆದುಕೊಳ್ಳಿ. ನಿಮ್ಮ ಮಗು ಮತ್ತು ತಾಯಿಯ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವ ದಾದಿಯನ್ನು ಗೊತ್ತು ಮಾಡಿಕೊಳ್ಳಿ.

English summary

How To Manage Stress And Anxiety During Pregnancy

Pregnancy is a very exciting phase, especially for the first-time mums. It also gives them an exhilarating feeling. Moving on to the next chapter of their lives and taking care of a young one who will totally be dependent on them for the next 20 years of their lives is certainly overwhelming. In case you are experiencing even some of these symptoms, it is time to kick back and relax. Here are a few ways to manage stress and anxiety during pregnancy, take a look.