For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಆರೋಗ್ಯಕ್ಕೆ 'ನಿಂಬೆ ಜ್ಯೂಸ್' ಬಹಳ ಒಳ್ಳೆಯದು

By Sushma Charhra
|

ಪ್ರತಿ ಮಹಿಳೆಯು ತನ್ನ ಜೀವನದ ಗರ್ಭಾವಸ್ಥೆ ಹಂತಕ್ಕಾಗಿ ಕಾಯುತ್ತಿರುತ್ತಾಳೆ ಆದರೆ ಸಂದರ್ಬದಲ್ಲಿ ಕೆಲವು ಪ್ರಮುಖ ಸಲಹೆಗಳನ್ನು ಕೂಡ ಆಕೆ ಕೇಳಿಸಿಕೊಳ್ಳಬೇಕಾಗುತ್ತದೆ. ಕುಟುಂಬದಲ್ಲಿ ಹೆಣ್ಣೊಬ್ಬಳು ಗರ್ಭವತಿ ಎಂದು ತಿಳಿದ ಕೂಡಲೇ, ಎಲ್ಲರೂ ಒಂದಷ್ಟು ಸಲಹೆ ಸೂಚನೆಗಳನ್ನು, ಹಾಗೇ ಮಾಡಬೇಕು, ಹೀಗೆ ಮಾಡಬಾರದು, ಅದು ಮಾಡಿದರೆ ಒಳ್ಳೆಯದು, ಇದು ಮಾಡಿದರೆ ಕೆಟ್ಟದ್ದು, ಅದನ್ನು ತಿನ್ನು, ಇದನ್ನು ತಿನ್ನಬೇಡ ಎಂದು ಒಂದಷ್ಟು ಮಾರ್ಗದರ್ಶನಗಳ ಸುರಿಮಳೆ ಗರ್ಭಿಣಿ ಹೆಣ್ಣಿನ ಕಿವಿಗೆ ಬೀಳಲು ಶುರುವಾಗಿ ಬಿಡುತ್ತದೆ. ಹೀಗೆ ಕೇಳಿಸಿಕೊಳ್ಳುವ ಎಲ್ಲಾ ಸಲಹೆಗಳು ಗರ್ಭಿಣಿಗೆ ಯಾವುದು ತನ್ನ ಮಗುವಿಗೆ ಒಳ್ಳೆಯದು ಅಥವಾ ಯಾವುದು ಕೆಟ್ಟದ್ದು ಎಂಬ ಗೊಂದಲವನ್ನು ಸೃಷ್ಟಿ ಮಾಡಿ ಬಿಡುತ್ತದೆ.

ಗರ್ಭಿಣಿಯರಿಗೆ ಬಹಳ ಪ್ರಮುಖವಾಗಿ ಸಿಗುವ ಸಲಹೆ ಯಾವುದು ಎಂದರೆ ಯಾವ ಆಹಾರವನ್ನು ತಿನ್ನಬೇಕು, ಯಾವುದು ತಿನ್ನಬಾರದು, ಅವರ ಡಯಟ್ ನಲ್ಲಿ ಏನಿರಬೇಕು, ಯಾವ ಆಹಾರವು ಆಕೆಯ ಮಗುವಿಗೆ ಎಫೆಕ್ಟ್ ಮಾಡುತ್ತೆ ಎಂಬ ಬಗ್ಗೆ ಹೆಚ್ಚಿನವರು ಸಲಹೆಗಳನ್ನು ಕೊಡುತ್ತಾರೆ. ಅಂತವುಗಳಲ್ಲಿ ಬಹಳಷ್ಟು ಆಹಾರಗಳನ್ನು ಗರ್ಭಿಣಿ ತಿನ್ನಬಾರುದು, "ನೋ-ನೋ" ಸೇವಿಸಬಾರದು, ಎಂಬುದಾಗಿ ಸೂಚನೆ ನೀಡುವುದುಂಟು.

ಅಷ್ಟೇ ಅಲ್ಲ, ಗರ್ಭಿಣಿಯರಿಗೆ ಸಲಹೆ ನೀಡಲು, ಅವರು ಓದಿ ತಿಳಿದುಕೊಳ್ಳಲು ಕೂಡ ಹಲವು ಮೂಲಗಳು ಮಾಹಿತಿಯನ್ನು ಒದಗಿಸುತ್ತವೆ ಕೂಡ. ಆದರೆ, ಒಂದು ವಿಚಾರ ನೆನಪಿಡಿ ಎಲ್ಲಾ ಮೂಲಗಳಲ್ಲಿರುವ ಮಾಹಿತಿಯೂ ಸರಿಯಾದ ಮಾಹಿತಿ ಆಗಿರುವುದಿಲ್ಲ.ಕೆಲವು ಮೂಲಗಳಿಂದ ಓದುವ ಮಾಹಿತಿಗಳು ಹೆಚ್ಚು ಗೊಂದಲವನ್ನು ಸೃಷ್ಟಿ ಮಾಡಿಬಿಡುತ್ತದೆ ಮತ್ತು ಆಶ್ಚರ್ಯ ಮತ್ತು ಆಘಾತಕ್ಕೂ ಕಾರಣವಾಗುತ್ತದೆ. ಅವುಗಳನ್ನು ಓದುವುದರಿಂದಾಗಿ ನಮ್ಮ ತಲೆಯಲ್ಲಿ ಮತ್ತೊಂದಿಷ್ಟು ಪ್ರಶ್ನಾರ್ತಕ ಚಿಹ್ನೆಗಳು ಹುಟ್ಟಿಕೊಳ್ಳುತ್ತದೆ.

ಹಳೆಯ ಕಾಲದ ಕೆಲವು ನಂಬಿಕೆಗಳು ಅಥವಾ ಹಿಂದಿನವರು ತಲೆಮಾರಿನಿಂದ ತಲೆಮಾರಿಗೆ ಹೇಳಿಕೊಂಡು ಬಂದಿರುವ ಕೆಲವು ಅನುಭವಗಳು, ತಿಳುವಳಿಕೆಗಳು ನಿಜಕ್ಕೂ ನಂಬಲು ಅರ್ಹವೇ, ಸತ್ಯವೇ ಎಂಬುದು ಕೆಲವೊಮ್ಮೆ ದೊಡ್ಡ ಪ್ರಶ್ನಾರ್ತಕವಾಗುತ್ತದೆ ಕೂಡ. ಅಂತಹ ಕೆಲವು ಸಲಹೆಗಳಿಗೆ ವೈಜ್ಞಾನಿಕ ಕಾರಣಗಳಿದ್ದರೂ, ಇನ್ನೂ ಕೆಲವು ಸಲಹೆಗಳಿಗೆ ವೈಜ್ಞಾನಿಕವಾಗಿ ಯಾವುದೇ ಕಾರಣಗಳೂ ಇಲ್ಲ ಮತ್ತು ಅದನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸಲು ಸಾಧ್ಯವಾಗಿಲ್ಲ.

ಆದರೆ ನಮ್ಮ ಜೀವನದಲ್ಲಿ ತುಂಬಾ ಪ್ರಾಮುಖ್ಯವಾದ ಹಂತಗಳಲ್ಲಿ ಒಂದಾದ ಪ್ರಗ್ನೆನ್ಸಿಯಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಯಾರೂ ಕೂಡ ಬಯಸುವುದಿಲ್ಲ. ಹಾಗಾಗಿ ಬೋಲ್ಡ್ ಸ್ಕೈ ನಿಮ್ಮ ಗೊಂದಲದ ಪ್ರಶ್ನೆ ಯೊಂದಕ್ಕೆ ಉತ್ತರಿಸಿ ನಿಮ್ಮ ಸಹಾಯಕ್ಕೆ ಬರಲು ಇಚ್ಛಿಸುತ್ತಿದೆ. ಪ್ರತಿದಿನ ಗರ್ಭಿಣಿಯು ತನ್ನ ಡಯಟ್ ವಿಚಾರದಲ್ಲಿ ಅಥವಾ ಆಹಾರದ ವಿಚಾರದಲ್ಲಿ ಭಾರೀ ದೊಡ್ಡ ಗೊಂದಲವನ್ನು ಹೊಂದಿರುತ್ತಾಳೆ. ಆದರೆ, ನಾವಿಲ್ಲಿ ಕೆಲವು ನಂಬಲು ಅನರ್ಹವಾದ ನಂಬಿಕೆಗಳ ಬಗ್ಗೆ ಹೇಳುತ್ತಿದ್ದೇವೆ. ಹೆಚ್ಚಿನವರು ನಂಬಿಕೆ ಇಟ್ಟಿರುವ ಈ ವಿಚಾರವು ಖಂಡಿತ ನಿಮ್ಮ ಮಗುವಿಗೆ ಮತ್ತು ನಿಮ್ಮ ಆರೋಗ್ಯಕ್ಕೆ ಯಾವುದೇ ಅಹಿತವನ್ನು ಮಾಡುವುದಿಲ್ಲ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ, ಈ ಲೇಖನವು ನಿಮಗೆ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲೂ ಇರುವ ನಿಂಬೆಯ ಜ್ಯೂಸ್ ನ್ನು ಗರ್ಭಿಣಿಯರು ಕುಡಿಯಬಾರದು ಎಂಬ ಸುಳ್ಳಿನ ಸುತ್ತಲಿನ ಸತ್ಯವನ್ನು ಬಿಚ್ಚಿಡಲಿದೆ.

 ನಿಂಬೆಯ ಸೇವನೆ ಗರ್ಭಿಣಿಯರಿಗೆ ಆರೋಗ್ಯಕಾರಿಯೇ?

ನಿಂಬೆಯ ಸೇವನೆ ಗರ್ಭಿಣಿಯರಿಗೆ ಆರೋಗ್ಯಕಾರಿಯೇ?

ನಿಂಬೆಯನ್ನು ವಿಟಮಿನ್ ಮತ್ತು ಪೋಷಕಾಂಶಗಳಿಂದ ಭರ್ತಿ ಯಾಗಿರುವ ಪವರ್ ಹೌಸ್ ಎಂದು ಕರೆಯಬಹುದು. ಅಂದ ಮೇಲೆ ಅದು ನಿಮಗೆ ಆರೋಗ್ಯಕಾರಿಯೇ ಆಗಿರಬೇಕು ಅಲ್ಲವೇ? ಆದರೆ ಕೆಲವು ಮಹಿಳೆಯರಿಗೆ ಅಥವಾ ಅತಿಯಾಗಿ ಸೇವನೆ ಮಾಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಎದೆಯುರಿ ಸಮಸ್ಯೆಯು ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ ಅದು ಗರ್ಭಾವಸ್ಥೆಯ ಅಂತಿಮ ಹಂತಗಳಲ್ಲಾಗಿರಬಹುದು. ಆದರೆ ಈ ವಿಚಾರ ಸತ್ಯವೇ ಆಗಿದ್ದರೂ ಅದರಲ್ಲಿ ಪೋಷಕಾಂಶಗಳು ಭರ್ತಿಯಾಗಿವೆ ಮತ್ತು ಅದು ನಿಮ್ಮ ಆರೋಗ್ಯಕ್ಕೆ ಬಹಳ ಅನುಕೂಲವನ್ನು ಮಾಡುತ್ತದೆ ಎಂಬುದು ಮಾತ್ರ ಅಕ್ಷರಶಃ ಸತ್ಯ ವಿಚಾರವಾಗಿದೆ.

ನಿಂಬೆಯ ಸೇವನೆ ಗರ್ಭಿಣಿಯರಿಗೆ ಆರೋಗ್ಯಕಾರಿಯೇ?

ನಿಂಬೆಯ ಸೇವನೆ ಗರ್ಭಿಣಿಯರಿಗೆ ಆರೋಗ್ಯಕಾರಿಯೇ?

ನಿಂಬೆಯಲ್ಲಿ ವಿಟಮಿನ್ ಸಿ ಮತ್ತು ಎ, ಫೋಲೆಟ್, ಕಬ್ಬಿಣಾಂಶ, ಮೆಗ್ನೇಷಿಯಂ, ಪಾಸ್ಫರಸ್, ನಿಯಾಸಿನ್, ರಿಬೋಫ್ಲೇವಿನ್, ಮತ್ತು ಇತರೆ ಹಲವಾರು ನ್ಯೂಟ್ರಿಯಂಟ್ಸ್ ಗಳಿದ್ದು, ಅದು ಭ್ರೂಣವನ್ನು ಆರೋಗ್ಯವಾಗಿ ಮತ್ತು ಖುಷಿಯಾಗಿ ಇಡಲು ಸಹಕಾರಿಯಾಗಿದೆ. ಹಾಗಾಗಿ ನಿಂಬೆಯ ರಸವನ್ನು ಪ್ರತಿಯೊಬ್ಬ ಗರ್ಭಿಣಿ ತಾಯಿಯೂ ತನ್ನ ಡಯಟ್ ನಲ್ಲಿ ಸೇರಿಸಿಕೊಳ್ಳುವುದು ಬಹಳ ಮುಖ್ಯವಾದ ವಿಚಾರವಾಗಿದೆ. ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡುವುದು ಪ್ರಮುಖ ವಿಚಾರವೇ ಆಗಿರುತ್ತದೆ. ಅತಿಯಾದರೆ ಅಮೃತವೂ ವಿಷವಾಗಿರುತ್ತದೆ. ಹಾಗಾಗಿ ಇದರ ಧನಾತ್ಮಕ ಪರಿಣಾಮಗಳನ್ನು ಪಡೆಯಲು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು. ಅತಿಯಾದರೆ ಋಣಾತ್ಮಕ ಪರಿಣಾಮಗಳೂ ಆಗಬಹುದು ಎಂಬುದು ನೆನಪಿನಲ್ಲಿ ಇರಲಿ.

ನಿಂಬೆಯ ಸೇವನೆಯು ಗರ್ಭಿಣಿಯರಿಗೆ ಯಾವುದಾದರೂ ಎಫೆಕ್ಟ್ ಮಾಡುತ್ತಾ?

ನಿಂಬೆಯ ಸೇವನೆಯು ಗರ್ಭಿಣಿಯರಿಗೆ ಯಾವುದಾದರೂ ಎಫೆಕ್ಟ್ ಮಾಡುತ್ತಾ?

ನಿಂಬೆ ಮತ್ತು ನಿಂಬೆಯ ರಸವು ಯಾವುದೇ ಕಾರಣಕ್ಕೂ ಗರ್ಭಿಣಿಯರಿಗೆ ತೊಂದರೆ ಉಂಟು ಮಾಡುವುದಿಲ್ಲ. ಬದಲಾಗಿ ಸಾಕಷ್ಟು ಅನುಕೂಲಗಳನ್ನೇ ಮಾಡುತ್ತದೆ. ಇದು ಪ್ರಮುಖವಾಗಿ ಮಾರ್ನಿಂಗ್ ಸಿಕ್ ನೆಸ್ ಅಂದರೆ ಮುಂಜಾವಿನಲ್ಲಿ ಕಂಡುಬರುವ ತಲೆಸುತ್ತುವಿಕೆ, ವಾಂತಿ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಜೊತಗೆ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ನೆರವಿಗೆ ಬರುತ್ತದೆ.ಗರ್ಭಾವಸ್ಥೆಯಲ್ಲಿ ನಿರಂತರವಾಗಿ ಎಲ್ಲಾ ಹಂತಗಳಲ್ಲೂ ರಕ್ತದ ಒತ್ತಡವನ್ನು ಪರೀಕ್ಷೆ ಮಾಡುತ್ತಲೇ ಇರಬೇಕಾಗುತ್ತದೆ. ಪ್ರಮುಖವಾಗಿ, ಹಲವಾರು ಹಣ್ಣಿನ ರಸಗಳು ಗರ್ಭಾವಸ್ಥೆಯಲ್ಲಿ ಅನೂಕೂಲವನ್ನೇ ಮಾಡುತ್ತದೆ. ಆದರೆ ಅದರ ಸೇವನೆಯ ಪ್ರಮಾಣದ ಮೇಲೆ ಅದು ನಿರ್ಧರಿತವಾಗಿರುತ್ತದೆ ಅಷ್ಟೇ, ಯಾವುದೇ ಆಗಲಿ, ಏನೇ ಆಗಲಿ ನೀವೆಷ್ಟು ಸೇವಿಸುತ್ತೀರಿ ಎಂಬುದರ ಆಧಾರದ ಮೇಲೆ ಅದರ ಕೆಟ್ಟ ಅಥವಾ ಒಳ್ಳೆಯ ಪರಿಣಾಮಗಳು ನಿರ್ಧರಿತವಾಗುತ್ತದೆ. ಒಂದು ಲೋಟ ನಿಂಬೆಯ ರಸವು ಒಂದು ಸ್ಪೂನ್ ಸಕ್ಕರೆ ಅಥವಾ ಚಿಟಿಕೆ ಉಪ್ಪು ಸೇರಿಸಿ ಸೇವನೆ ಮಾಡಿದರೆ ಖಂಡಿತ ಅದು ಗರ್ಭಿಣಿ ತಾಯಿಯ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.

ನಿಂಬೆರಸ ಮಿಶ್ರಿತ ನೀರು

ನಿಂಬೆರಸ ಮಿಶ್ರಿತ ನೀರು

ನಿಂಬೆರಸ ಮಿಶ್ರಿತ ನೀರನ್ನು ಗರ್ಭಿಣಿಯರು ಸೇವಿಸುವುದರಿಂದ ಉಂಟಾಗುವ ಕೆಲವು ಲಾಭಗಳ ಬಗ್ಗೆ ಈ ಕೆಳಗೆ ನಮೂದಿಸಲಾಗಿದೆ:

• ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ

• ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ

• ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

• ಮೂಳೆಯ ಆರೋಗ್ಯವನ್ನು ತಾಯಿ ಮತ್ತು ಮಗು ಇಬ್ಬರಲ್ಲೂ ಹೆಚ್ಚಿಸುತ್ತದೆ

• ಕಾಲುಗಳಲ್ಲಿ ನೋವು ಇದ್ದರೆ ಅದರ ನಿವಾರಣೆಗೆ ಸಹಕಾರಿ

• ಹೆರಿಗೆ ನೋವನ್ನು ಸುಲಭಗೊಳಿಸುತ್ತದೆ.

 ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ

ಅತಿಯಾದ ರಕ್ತದೊತ್ತಡವು ಹೆಚ್ಚಿನ ಗರ್ಭಿಣಿ ಸ್ತ್ರೀಯರನ್ನು ಕಾಡುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಮಗುವಿನ ಬರುವಿಕೆಯ ಕುತೂಹಲ ಮತ್ತು ಆತಂಕವು ರಕ್ತದೊತ್ತಡವನ್ನು ಹೆಚ್ಚಿಸಿರುತ್ತೆ. ಗರ್ಭಾವಸ್ಥೆಯ ಆರಂಭವಾದ ನಂತರದ ದಿನಗಳ ಪರಿಣಾಮಗಳು ರಕ್ತದೊತ್ತಡವನ್ನು ಹೆಚ್ಚಿಸುವುದರಿಂದಾಗಿ ಇದು ಭ್ರೂಣದ ಬೆಳವಣಿಗೆಗೆ ಮಾರಕವಾಗಬಹುದು. ಆದರೆ ನಿಂಬೆಯ ರಸವನ್ನು ಸೇವಿಸುವುದರಿಂದಾಗಿ ರಕ್ತದ ಒತ್ತಡವು ನಿಯಂತ್ರಣದಲ್ಲಿ ಇರುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಕೂಡ ಇದು ನೆರವಿಗೆ ಬರುತ್ತದೆ.

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ

ನಿಂಬೆ ಜ್ಯೂಸ್ ನಲ್ಲಿ ವಿಟಮಿನ್ ಸಿ ಅಂಶವು ಶ್ರೀಮಂತವಾಗಿರುವುದರಿಂದಾಗಿ, ತಾಯಿಯಲ್ಲಿ ಅಧಿಕವಾಗಬೇಕಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಬಹಳವಾಗಿ ನೆರವು ನೀಡುತ್ತದೆ. ಗರ್ಭಾವಸ್ಥೆಯಲ್ಲಿ ನಮ್ಮ ರೋಗ ನಿರೋಧಕಶಕ್ತಿಯು ಕುಗ್ಗುತ್ತದೆ, ಅದು ನಮ್ಮನ್ನು ಅನೇಕ ಕಾಯಿಲೆಗಳಿಗೆ ಒಳಗಾಗುವಂತೆ ಮಾಡಬಹುದು. ಹಾಗಾಗಿ ನಿಯಿಮಿತವಾಗಿ ನಿಂಬೆಯ ರಸವನ್ನು ಸೇವನೆ ಮಾಡುವುದರಿಂದಗಿ ರೋಗ ನಿರೋಧಕ ಶಕ್ತಿಯನ್ನು ಅಧಿಕ ಗೊಳಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಜೀರ್ಣಕ್ರಿಯೆ ಮತ್ತು ಮಲಬದ್ಧತೆ ಸಮಸ್ಯೆಯನ್ನು ಹೆಚ್ಚಿನ ಸ್ತ್ರೀಯರು ತಮ್ಮ ಗರ್ಭಾವಸ್ಥೆಯಲ್ಲಿ ಅನುಭವಿಸಿಯೇ ಅನುಭವಿಸುತ್ತಾರೆ. ನಿಂಬೆಯ ರಸವು ಜೀರ್ಣಕ್ರೆಯಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಅಧ್ಬುತವಾಗಿ ಹೊಂದಿದೆ ಮತ್ತು ಅಜೀರ್ಣ ಉಂಟಮಾಡುವ ಎಲ್ಲಾ ಅಂಶಗಳನ್ನು ನಿವಾರಿಸಿ ನಿಮ್ಮ ಹೊಟ್ಟೆಯ ಸಮಸ್ಯೆಗೆ ಪರಿಹಾರ ನೀಡುವ ತಾಕತ್ತು ಇದಕ್ಕಿದೆ. ಇದು ಮಲಬದ್ಧತೆಗೆ ಪರಿಹಾರವನ್ನು ಪಡೆಯಲು ಸಹಾಯ ಮಾಡುವ ಕೊಲೊನ್ನ ಪೆರಿಸ್ಟಾಲ್ಟಿಕ್ ಚಲನೆಯನ್ನು ಸಹ ಮಾಡುತ್ತದೆ.

ಮೂಳೆಯ ಆರೋಗ್ಯವನ್ನು ತಾಯಿ ಮತ್ತು ಮಗು ಇಬ್ಬರಲ್ಲೂ ಹೆಚ್ಚಿಸುತ್ತದೆ

ಮೂಳೆಯ ಆರೋಗ್ಯವನ್ನು ತಾಯಿ ಮತ್ತು ಮಗು ಇಬ್ಬರಲ್ಲೂ ಹೆಚ್ಚಿಸುತ್ತದೆ

ನಿಂಬೆಯ ರಸವು ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲಗಳಾಗಿದ್ದು, ಇದು ನಿಮ್ಮ ಮಗುವಿನ ಬೆಳವಣಿಗೆಗೆ ಬಹಳವಾಗಿ ನೆರವು ನೀಡುತ್ತದೆ.ಗರ್ಭಿಣಿ ತಾಯಿಗೂ ಕೂಡ ಆಕೆಯ ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂನ ಅಗತ್ಯವಿರುತ್ತದೆ ಮತ್ತು ನಿಂಬೆಯ ರಸವು ಕಡಿಮೆ ಕ್ಯಾಲ್ಸಿಯಂ ಮಟ್ಟದಿಂದ ಉಂಟಾಗುವ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಿಮಗೆ ನೆರವು ನೀಡುತ್ತದೆ.ಮೆಗ್ನೇಷಿಯಂ ಭ್ರೂಣದ ನರವ್ಯೂಹದ ರಚನೆ ಮತ್ತು ಮೆದುಳಿನ ಜೀವಕೋಶದ ರಚನೆಗೆ ಸಹಾಯ ಮಾಡುತ್ತದೆ.

ಕಾಲುಗಳಲ್ಲಿ ನೋವು ಇದ್ದರೆ ಅದರ ನಿವಾರಣೆಗೆ ಸಹಕಾರಿ

ಕಾಲುಗಳಲ್ಲಿ ನೋವು ಇದ್ದರೆ ಅದರ ನಿವಾರಣೆಗೆ ಸಹಕಾರಿ

ಗರ್ಭಿಣಿ ಮಹಿಳೆಯರು ಸಾಮಾನ್ಯವಾಗಿ ಕಾಲುಗಳು ಊದಿಕೊಳ್ಳುವುದು ಮತ್ತು ನೋವಿನ ಸಮಸ್ಯೆಯನ್ನು ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿಅನುಭವಿಸುತ್ತಾರೆ. ನಿಂಬೆಯ ರಸವು ಕೇವಲ ನೋವಿನ ಸಮಸ್ಯೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲ ಬದಲಾಗಿ ಇದರಿಂದ ಉಂಟಾಗುವ ಕಿರಿಕಿರಿಯನ್ನು ತಪ್ಪಿಸಲು ಕೂಡ ನೆರವು ನೀಡುತ್ತದೆ.

ಹೆರಿಗೆ ನೋವನ್ನು ಸುಲಭಗೊಳಿಸುತ್ತದೆ

ಹೆರಿಗೆ ನೋವನ್ನು ಸುಲಭಗೊಳಿಸುತ್ತದೆ

ಆಶ್ಚರ್ಯಕರಾವಾದ ವಿಚಾರ ಏನು ಅಂದರೆ ನಿಂಬೆಯ ರಸವನ್ನು 5 ನೇ ತಿಂಗಳ ನಂತರ ಪ್ರತಿದಿನ ಸೇವಿಸುವುದರಿಂದ ನಿಮ್ಮ ದೇಹವು ಹೆರಿಗೆ ನೋವನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆಯುತ್ತದೆ ಮತ್ತು ದೇಹವು ಹೆರಿಗೆ ನೋವನ್ನು ಕಡಿಮೆಗೊಳಿಸುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದ ವೈಜ್ಞಾನಿಕ ವಾಗಿಯೂ ಸಾಬೀತು ಪಡಿಸಲಾಗಿದ್ದು ಯಾವ ಮಹಿಳೆಯರು ನಿಂಬೆ ಜ್ಯೂಸ್ ಸೇವನೆ ಮಾಡಿದ್ದಾರೋ ಅವರ ಹೆರಿಗೆ ನೋವಿನ ಪ್ರಮಾಣ ಸೇವನೆ ಮಾಡದೇ ಇರುವವರಿಗಿಂತ ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುತ್ತದೆಯಂತೆ. ಗರ್ಭಾವಸ್ಥೆ ಅನ್ನು ಒಬ್ಬ ಮಹಿಳೆ ಮತ್ತು ಆಕೆಯ ಮಗುವಿನ ಪ್ರಮುಖ ಘಟ್ಟವಾಗಿರುತ್ತದೆ ಮತ್ತು ಮಹಿಳೆಯರಿಂದ ಮಹಿಳೆಗೆ ಇದರ ಅನುಭವ ವಿಭಿನ್ನ ವಾಗಿರುತ್ತದೆ. ಹಾಗಾಗಿ, ಯಾವಾಗಲೂ ನಿಮ್ಮ ಗೈನೋಕಾಲಜಿಸ್ಟ್ ಬಳಿ ಚರ್ಚೆ ನಡೆಸಿ ನಿಮ್ಮ ಗರ್ಭಾವಸ್ಥೆಯಲ್ಲಿ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ವೈದ್ಯರು ಅದರಲ್ಲೇ ಸರ್ಟಿಫಿಕೇಷನ್ ಪಡೆದಿರುವವರಾಗಿರುತ್ತಾರೆ ಮತ್ತು ನಿಮಗೆ ಸರಿಯಾದ ಮಾರ್ಗದರ್ಶನ ನೀಡಲು ಯೋಗ್ಯರಾಗಿತ್ತಾರೆ.

English summary

Can Lemon Juice Affect Pregnancy?

Lemons are considered to be powerhouses of different vitamins and minerals. That is supposed to be healthy, right? But apparently, consuming lemons may aggregate gastric problems and heart burns in women, mostly in the latter parts of the pregnancy. While this may be true, it doesn't negate the fact that they are extremely nutritious. In this article will help you debunk a common myth surrounding the consumption of lemon juice during pregnancy.
X
Desktop Bottom Promotion