Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕೆಲವು ಮಹಿಳೆಯರಿಗೆ ಗರ್ಭ ಧರಿಸಲು ವಿಳಂಬವಾಗುವುದು ಯಾಕೆ?
ಹಿಂದಿನ ಕಾಲದಲ್ಲಿ ಬಂಜೆತನದ ಸಮಸ್ಯೆ ಇತ್ತಾದರೂ ಅದು ತುಂಬಾ ಕಡಿಮೆಯೆನ್ನಬಹುದು. ಸಾವಿರಲ್ಲಿ ಹತ್ತು ಮಂದಿಗೆ ಇಂತಹ ಸಮಸ್ಯೆ ಇದ್ದಿರಬಹುದು. ಹಿಂದೆ ಮಹಿಳೆಯರು ಬೇಗನೆ ಗರ್ಭಧರಿಸುತ್ತಾ ಇದ್ದರು. ಇಷ್ಟು ಮಾತ್ರವಲ್ಲದೆ ಯಾವುದೇ ಸಮಸ್ಯೆಯಿಲ್ಲದೆ ಕೆಲವು ಮಕ್ಕಳಿಗೆ ಜನ್ಮ ನೀಡುತ್ತಾ ಇದ್ದರು.
ಆದರೆ ಇಂದಿನ ದಿನಗಳಲ್ಲಿ ಮಹಿಳೆಯರು ಹಾಗೂ ಪುರುಷರಲ್ಲಿ ಫಲವತ್ತತೆ ಪ್ರಮಾಣವು ಕಡಿಮೆಯಾಗುತ್ತಾ ಇದೆ. ಜೀವನಶೈಲಿ, ಒತ್ತಡ ಹಾಗೂ ಹವಾಮಾನ ಹೀಗೆ ಹಲವಾರು ಕಾರಣಗಳನ್ನು ಇದಕ್ಕೆ ಪಟ್ಟಿ ಮಾಡಬಹುದು. ಮಹಿಳೆಯರಲ್ಲಿ ಫಲವತ್ತತೆ ಕಡಿಮೆಯಾಗುತ್ತಾ ಇರುವಂತೆ ಪುರುಷರಲ್ಲೂ ವೀರ್ಯ ಗಣತಿ ಪ್ರಮಾಣವು ಕಡಿಮೆಯಾಗುತ್ತಾ ಇದೆ ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ...

ಗರ್ಭಕಂಠ
ಗರ್ಭಾಶಯ ಮತ್ತು ಯೋನಿಯ ನಡುವಿನ ಹಾದಿಯಂತೆ ಗರ್ಭಕಂಠವು ಕೆಲಸ ಮಾಡುತ್ತದೆ. ಗರ್ಭಕಂಠದ ಮೂಲಕವಾಗಿ ವೀರ್ಯವು ಗರ್ಭಾಶಯವನ್ನು ತಲುಪಬೇಕಾಗಿದೆ. ಗರ್ಭಕಂಠದಲ್ಲಿ ಯಾವುದೇ ರೀತಿಯ ಸಮಸ್ಯೆಯಿದ್ದರೂ ಮಹಿಳೆಯರಲ್ಲಿ ಗರ್ಭಧಾರಣೆಯಾಗಲು ಹೆಚ್ಚಿನ ಸಮಯ ಬೇಕಾಗಬಹುದು.

ಪಿಎಚ್ ಸಮತೋಲನ
ಯೋನಿಯ ವಾತಾವರಣವು ಫಲವತ್ತತೆಯ ಅಂಡಾಣು ಉತ್ಪತ್ತಿಯಾಗಲು ಸಹಕಾರಿಯಾಗಿರಬೇಕು. ಪಿಎಚ್ ಮಟ್ಟವು ಹೆಚ್ಚು ಅಥವಾ ತುಂಬಾ ಕಡಿಮೆ ಇದ್ದರೆ ಅದರಿಂದ ಫಲವತ್ತತೆಯ ಅಂಡಾಣು ಉತ್ಪತ್ತಿಗೆ ಕಷ್ಟವಾಗಬಹುದು.

ಹಾನಿ
ಗರ್ಭಾಶಯದ ತಂತುರೂಪಗಳು, ಗಾಯದ ಅಂಗಾಂಶ, ಸೋಂಕುಗಳು, ಫಾಲೋಪಿಯನ್ ಟ್ಯೂಬ್ ಸಮಸ್ಯೆಗಳು, ಎಂಡೊಮೆಟ್ರಿಯೊಸಿಸ್, ಪಾಲಿಪ್ಸ್ ಮತ್ತು ಇತರ ಕೆಲವೊಂದು ವೈದ್ಯಕೀಯ ಸಮಸ್ಯೆಗಳು ಫಲವತ್ತತೆ ಮೇಲೆ ಪರಿಣಾಮ ಉಂಟುಮಾಡಬಹುದು. ವೀರ್ಯ ಮತ್ತು ಅಂಡಾಣು ಸೇರುವ ನಡುವೆ ಯಾವುದೇ ರೀತಿಯ ಸಮಸ್ಯೆಯಿದ್ದರೂ ಅದರಿಂದ ಗರ್ಭಧರಿಸಲು ವಿಳಂಬವಾಗಬಹುದು. ಗರ್ಭಾಶಯಕ್ಕೆ ಅಂಡಾಣುಗಳನ್ನು ವಿಳಂಬವಾಗಿಸುವಂತಹ ಪ್ರಕ್ರಿಯೆಯು ಗರ್ಭಧಾರಣೆಯನ್ನು ವಿಳಂಬವಾಗಿಸಬಹುದು.

ಪಿಸಿಓಎಸ್
ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ಅಂಡಾಣು ಉತ್ಪತ್ತಿಯ ಪ್ರಕ್ರಿಯೆಗೆ ತೊಂದರೆ ಉಂಟು ಮಾಡಬಹುದು ಮತ್ತು ಇದರಿಂದ ಗರ್ಭಧಾರಣೆ ವಿಳಂಬವಾಗಬಹುದು.

ಸರಳ ಸಮಸ್ಯೆಗಳು
ಅತಿಯಾಗಿ ಆಲ್ಕೋಹಾಲ್ ಸೇವನೆ, ಬೊಜ್ಜು, ಅನಿಯಮಿತ ಋತುಚಕ್ರ ಮತ್ತು ಸ್ರಾವವು ಗರ್ಭಧಾರಣೆಗೆ ಸಮಸ್ಯೆ ಉಂಟು ಮಾಡಬಹುದು.

ವಯಸ್ಸು
35ರ ಹರೆಯದ ಬಳಿಕ ಗರ್ಭಧರಿಸಲು ಪ್ರಯತ್ನಿಸುವ ಮಹಿಳೆಯರಿಗೆ ಬೇಗನೆ ಗರ್ಭಧರಿಸಲು ಕಷ್ಟವಾಗಬಹುದು. ವಯಸ್ಸಿನೊಂದಿಗೆ ಕೆಲವೊಂದು ಸಮಸ್ಯೆಗಳು ಕಾಡಬಹುದು. ಈ ವಯಸ್ಸಿನಲ್ಲಿ ಗುಣಮಟ್ಟದ ಅಂಡಾಣು ಸಂಖ್ಯೆಯು ಕಡಿಮೆಯಾಗುವುದು ಮತ್ತು ಅಂಡಾಣುವಿನ ಸಂಖ್ಯೆಯು ಕಡಿಮೆಯಾಗಬಹುದು. ಗರ್ಭಾಶಯವು ಅಂಡಾಣು ಬಿಡುಗಡೆಯ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು.

ಇತರ ಸಮಸ್ಯೆಗಳು
ದೇಹದಲ್ಲಿ ಕೊಬ್ಬಿನಾಂಶವು ತುಂಬಾ ಕಡಿಮೆ ಇರುವ ಮಹಿಳೆಯರು ಕೂಡ ಗರ್ಭ ಧರಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಲೈಂಗಿಕವಾಗಿ ಹರಡುವಂತಹ ರೋಗಗಳಾದ ಗೊನೋರಿಯಾ, ಕ್ಲಮೈಡಿಯಾ ಮತ್ತು ಪೆಲ್ವಿಕ್ ಉರಿಯೂತದಿಂದಲೂ ಬಂಜೆತನ ಉಂಟಾಗಬಹುದು.



Click it and Unblock the Notifications
