Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿ ಮಹಿಳೆಯರಲ್ಲಿ ವಿಟಮಿನ್ ಡಿ ಹೆಚ್ಚಿರಬೇಕು ಯಾಕೆ?
ಗರ್ಭಿಣಿ ಮಹಿಳೆಯರಿಗೆ ಬೇಕಾಗುವಂತಹ ಹಲವಾರು ರೀತಿಯ ಪೋಷಕಾಂಶಗಳು ತಿನ್ನುವಂತಹ ಆಹಾರದಿಂದ ಲಭ್ಯವಾಗುತ್ತದೆ. ಇನ್ನು ಕೆಲವು ವಿಟಮಿನ್ ಹಾಗೂ ಖನಿಜಾಂಶಗಳನ್ನು ಮಾತ್ರೆಗಳ ಮೂಲಕ ಸೇವಿಸಬೇಕಾಗುತ್ತದೆ. ಗರ್ಭಿಣಿ ಮಹಿಳೆಯನ್ನು ಪರೀಕ್ಷೆ ಮಾಡಿದ ಬಳಿಕ ವೈದ್ಯರು ವಿಟಮಿನ್ ಮಾತ್ರೆಗಳನ್ನು ಬರೆದುಕೊಡಬಹುದು.
ಅದರಲ್ಲೂ ವಿಟಮಿನ್ ಡಿ ಮಾತ್ರೆ ಸೇವನೆಯಿಂದ ಗರ್ಭದಲ್ಲಿರುವ ಮಗುವಿನ ಪ್ರತಿರೋಧಕ ಶಕ್ತಿಯು ಹೆಚ್ಚುವುದು. ಇದರಿಂದ ಶ್ವಾಸಕೋಶದ ಸೋಂಕು ಹಾಗೂ ಅಸ್ತಮಾದಂತಹ ಸಮಸ್ಯೆಯು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ.
ಅಸ್ತಮಾದ ಕೆಲವೊಂದು ಲಕ್ಷಣಗಳು ಸಣ್ಣ ಮಕ್ಕಳಲ್ಲೇ ಕಂಡುಬರುವುದು. ಗರ್ಭದಲ್ಲೇ ಕೆಲವೊಂದು ಮಕ್ಕಳಿಗೆ ಅಸ್ತಮಾದ ಸೋಂಕು ಹರಡಿ ಇದು ಆರಂಭದಲ್ಲೇ ಮಕ್ಕಳಲ್ಲಿ ಕಂಡು ಬರುತ್ತದೆ ಎಂದು ಲಂಡನ್ ನ ಕಿಂಗ್ಸ್ ಕಾಲೇಜಿನ ಕ್ಯಾಥೆರಿನ್ ಹಾರ್ವ್ಯಲೊವಿಝ್ ತನ್ನ ಅಧ್ಯಯನದಲ್ಲಿ ತಿಳಿಸಿದ್ದಾರೆ.

ಗರ್ಭಿಣಿ ಮಹಿಳೆಯರು ಮೂರನೇ ಹಾಗೂ ನಾಲ್ಕನೇ ಹಂತದಲ್ಲಿ ವಿಟಮಿನ್ ಡಿ3 4,400 ಐಯು(ಇಂಟರ್ ನ್ಯಾಶನಲ್ ಯುನಿಟ್) ನ್ನು ತೆಗೆದುಕೊಳ್ಳುವ ಬದಲಿಗೆ ಪ್ರತಿದಿನ 400 ಐಯು ಸೇವನೆ ಮಾಡಲು ಸೂಚಿಸಲಾಗಿರುವುದನ್ನು ಅಧ್ಯಯನವು ಪರಿಗಣಿಸಿದೆ. ಇದರಿಂದ ಮಗುವಿನ ಪ್ರತಿರೋಧಕ ಶಕ್ತಿಯು ಮತ್ತಷ್ಟು ಹೆಚ್ಚಾಗಿದೆ.
ಗರ್ಭಿಣಿ ಮಹಿಳೆಯರಲ್ಲಿ ವಿಟಮಿನ್ ಡಿ ಮಟ್ಟವು ಹೆಚ್ಚಾಗಿರುವಷ್ಟು ಜನಿಸಿದ ಮಗುವಿನಲ್ಲಿ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು ಎಂದು ಜರ್ನಲ್ ಆಪ್ ಅಲರ್ಜಿ ಮತ್ತು ಕ್ಲಿನಿಕಲ್ ಇಮ್ಯೂನೊಲಾಜಿ ಹೇಳಿದೆ. ಜನಿಸಿದ ಮಗುವಿನಲ್ಲಿ ಪ್ರತಿರೋಧಕ ಶಕ್ತಿಯು ಹೆಚ್ಚಿದಷ್ಟು ಅಸ್ತಮಾ ಬರುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ ಎನ್ನುವುದಕ್ಕೆ ಸಾಕ್ಷ್ಯಗಳನ್ನು ನೀಡಲಾಗಿದೆ.
ಇದರಿಂದಾಗಿ ಮಗುವಿಗೆ ಬಾಲ್ಯದಲ್ಲಿ ಶ್ವಾಸಕೋಶದ ಸಮಸ್ಯೆಯನ್ನು ಸುಧಾರಿಸಲು ತುಂಬಾ ನೆರವಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ವಿಟಮಿನ್ ಡಿ ಮತ್ತು ಪ್ರತಿರೋಧಕ ಶಕ್ತಿಯ ನಡುವಿನ ಸಂಬಂಧದ ಬಗ್ಗೆ ನಡೆಸಿರುವ ತನಿಖೆಯು ಇನ್ನೂ ಪ್ರಾಯೋಗಿಕ ಹಂತದಲ್ಲಿದೆ.
ಗರ್ಭಿಣಿ ಮಹಿಳೆಯರಲ್ಲಿ ಹೆಚ್ಚಿನ ವಿಟಮಿನ್ ಡಿ ಇರುವುದರಿಂದ ಹುಟ್ಟುವ ಮಗುವು ಯಾವುದೇ ರೀತಿಯ ಶ್ವಾಸಕೋಶ ಹಾಗೂ ಅಸ್ತಮಾದಂತಹ ಸೋಂಕಿಗೆ ಒಳಗಾಗುವುದು ತಪ್ಪುತ್ತದೆ ಎಂದು ಮೊದಲ ಸಲ ನಾವು ತೋರಿಸಿಕೊಟ್ಟಿದ್ದೇವೆ. ಮುಂದಿನ ಅಧ್ಯಯನಗಳಲ್ಲಿ ಮಗುವಿನ ಪ್ರತಿರೋಧಕ ಪ್ರಭಾವದ ಬಗ್ಗೆ ಗಮನಹರಿಸಲಾಗುವುದು ಎಂದು ಆಕೆ ತಿಳಿಸಿದ್ದಾರೆ.



Click it and Unblock the Notifications
