For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಾಡುವ ಸಮಸ್ಯೆಗಳಿಗೆ ಸುಲಭ ಪರಿಹಾರಗಳು

By Divya Pandith
|

ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯ ದೇಹವು ಹಲವಾರು ರೂಪಾಂತರಗಳಿಗೆ ಒಳಗಾಗುತ್ತದೆ. ಬದಲಾಗುತ್ತಿರುವ ದೇಹದ ಸ್ಥಿತಿ ಹಾಗೂ ತೂಕವನ್ನು ಸಹಿಸಿಕೊಳ್ಳಲು ಸ್ವಲ್ಪ ಕಷ್ಟ ಎನಿಸಬಹುದು. ಗರ್ಭಾವಸ್ಥೆಯಲ್ಲಿ ದೈಹಿಕ ಬದಲಾವಣೆಯನ್ನು ಅನುಭವಿಸುತ್ತಾ ಹೋದಂತೆ ಮಾನಸಿಕ ಸ್ಥಿತಿಯಲ್ಲೂ ಕೊಂಚ ಬದಲಾವಣೆಯನ್ನು ಅನುಭವಿಸಬೇಕಾಗುತ್ತದೆ. ಎಲ್ಲಾ ಬಗೆಯ ಮಾನಸಿಕ ಸ್ಥಿತಿಯನ್ನೂ ಸಹ ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕಾಗುವುದು.

ಮಾನಸಿಕ ಬದಲಾವಣೆ ಉಂಟಾದಂತೆ ದೈಹಿಕವಾಗಿಯೂ ಬಹಳ ಸೂಕ್ಷ್ಮತೆಯನ್ನು ಪಡೆದುಕೊಳ್ಳುವುದು. ಬಹುಬೇಗ ಸೋಂಕುಗಳ ಪೀಡಿತಕ್ಕೆ ಒಳಗಾಗುವುದು, ಶೀತ, ಜ್ವರ, ದಣಿವು, ಸೀನುವಿಕೆ, ಮೂಗು ಸೋರುವುದು, ಗಂಟಲು ಕಿರಿಕಿರಿ ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಇಂತಹ ಸಂದರ್ಭದಲ್ಲಿ ಯಾವುದೇ ಬಗೆಯ ಔಷಧಗಳನ್ನು ಸೇವಿಸುವ ಹಾಗಿರುವುದಿಲ್ಲ. ಅದು ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.

ಹಾಗಾಗಿ ಗರ್ಭಿಣಿಯರು ರೋಗಗಳಿಗೆ ತುತ್ತಾದ ನಂತರ ಕಾಳಜಿ ವಹಿಸುವ ಬದಲು, ರೋಗಗಳು ಬರದಂತೆ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಆಗ ಯಾವುದೇ ಬಗೆಯ ಅನಾರೋಗ್ಯದ ಸಮಸ್ಯೆಯನ್ನು ಎದುರಿಸಬೇಕಾಗುವುದಿಲ್ಲ. ಹಾಗೊಮ್ಮೆ ಎಚ್ಚರ ವಹಿಸಿದರೂ ಆರೋಗ್ಯದಲ್ಲಿ ಶೀತ, ಕೆಮ್ಮುಗಳಂತಹ ಅನಾರೋಗ್ಯ ಉಂಟಾದರೆ ಯಾವೆಲ್ಲಾ ಎಚ್ಚರಿಕೆ ವಹಿಸಬಹುದು ಎನ್ನುವ ಸಂಕ್ಷಿಪ್ತ ವಿವರಣೆಯನ್ನು ಬೋಲ್ಡ್ ಸ್ಕೈ ನಿಮಗೆ ಪರಿಚಯಿಸುತ್ತಿದೆ....

ಫ್ಲೂ ಲಸಿಕೆಯನ್ನು ಪಡೆಯಿರಿ

ಫ್ಲೂ ಲಸಿಕೆಯನ್ನು ಪಡೆಯಿರಿ

ಶೀತವನ್ನು ತಡೆಗಟ್ಟಲು ಉತ್ತಮ ವೈದ್ಯಕೀಯ ಮಾರ್ಗಗಳಿಲ್ಲ. ಮೂರನೆಯ ತ್ರೈಮಾಸಿಕದಲ್ಲಿ ಕೂಡ ಗರ್ಭಾವಸ್ಥೆಯಲ್ಲಿ ಇರುವಾಗ ಯಾವುದೇ ಸಮಯದಲ್ಲಿ ತೆಗೆದು ಕೊಳ್ಳಬಹುದು. ಫ್ಲೂ ಲಸಿಕೆ ಪಡೆಯುವುದರಿಂದ ಮಗುವಿನ ಮೇಲೆ ಯಾವುದೇ ಪರಿಣಾಮ ಬೀರದು. ಗರ್ಭಾವಸ್ಥೆಯಲ್ಲಿ ಇದು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.

ನಿಯಮಿತವಾಗಿ ಕೈಗಳನ್ನು ತೊಳೆಯಿರಿ

ನಿಯಮಿತವಾಗಿ ಕೈಗಳನ್ನು ತೊಳೆಯಿರಿ

ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಶೀತ ಮತ್ತು ಕೆಮ್ಮನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ. ನೆಗಡಿಯುಂಟಾದ ವ್ಯಕ್ತಿಗಳ ಕೈಗಳನ್ನು ಸ್ಪರ್ಶಿಸುವುದು ಅಥವಾ ಅವರ ಉಸಿರನ್ನು ತೆಗೆದುಕೊಳ್ಳುವುದನ್ನು ಮಾಡದಿರಿ. ಇದರಿಂದಲೂ ಶೀತ ನೆಗಡಿ ಉಂಟಾಗುವ ಸಾಧ್ಯತೆಗಳಿರುತ್ತವೆ. ಯಾರನ್ನೇ ಸ್ಪರ್ಶಿಸಿದರೂ ಬೆಚ್ಚಗಿನ ನೀರಿನಲ್ಲಿ ಕೈತೊಳೆಯುವುದನ್ನು ಮರೆಯದಿರಿ.

 ಹ್ಯಾಂಡ್ ಸ್ಯಾನಿಟೈಜರ್ ಬಳಸಿ

ಹ್ಯಾಂಡ್ ಸ್ಯಾನಿಟೈಜರ್ ಬಳಸಿ

ಮನೆಯಿಂದ ಆಚೆ ಹೋದಾಗ ಪದೇ ಪದೇ ಕೈತೊಳೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಹ್ಯಾಂಡ್ ಸ್ಯಾನಿಟೈಜರ್ಅನ್ನು ನಿಮ್ಮ ಬಳಿ ಇರಿಸಿಕೊಳ್ಳಿ. ಕೆಲವರಿಗೆ ಹ್ಯಾಂಡ್ ಸ್ಯಾನಿಟೈಜರ್ನ ಆಲ್ಕೋಹಾಲ್ ವಾಸನೆಯು ವಾಕರಿಕೆಯನ್ನು ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮಾರುಕಟ್ಟೆಯಲ್ಲಿ ದೊರೆಯುವ ಹಣ್ಣಿನ ವಾಸನೆ ಭರಿತವಾಗಿರುವುದನ್ನು ಆಯ್ಕೆಮಾಡಿಕೊಳ್ಳಿ.

ದ್ರವ ಸೇವನೆಯನ್ನು ಹೆಚ್ಚಿಸಿ

ದ್ರವ ಸೇವನೆಯನ್ನು ಹೆಚ್ಚಿಸಿ

ಹೆಚ್ಚು ದ್ರವ ಪದಾರ್ಥಗಳನ್ನು ಹೊಂದುವುದರಿಂದ ಶೀತ ನೆಗಡಿಯಿಂದ ಪಾರಾಗಬಹುದು. ದ್ರವ ಪದಾರ್ಥ ಎಂದರೆ ಕೇವಲ ನೀರು ಅಥವಾ ಹಣ್ಣಿನ ರಸ ಎಂದರ್ಥವಲ್ಲ. ಚಹಾವನ್ನು ಸೇವಿಸಬಹುದು. ಆದರೆ ಕೆಫೀನ್ ಮಗುವಿಗೆ ವ್ಯತಿರಿಕ್ತ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಹರ್ಬಲ್ ಚಹಾಗಳು ಉತ್ತಮ ಆಯ್ಕೆಯಾಗಿದೆ.

ಸಮತೋಲನ ಆಹಾರ

ಸಮತೋಲನ ಆಹಾರ

ಸರಿಯಾದ ಆಹಾರವನ್ನು ಸೇವಿಸುವುದರಿಂದ ಕೆಮ್ಮು ಮತ್ತು ಶೀತವನ್ನು ಸುಲಭವಾಗಿ ತಡೆಯಬಹುದು. ನಿಮ್ಮ ಆಹಾರದಲ್ಲಿ ಎಲ್ಲಾ ವಿಟಮಿನ್ ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಾಯ ಮಾಡಲು ಅವುಗಳನ್ನು ಸೇವಿಸಬೇಕು. ಶೀತವನ್ನು ನಿಯಂತ್ರಣದಲ್ಲಿರುವ ವಿಟಮಿನ್ ಸಿ ಆಧಾರಿತ ಹಣ್ಣು, ತರಕಾರಿ ಅಥವಾ ಆಹಾರ ಪದಾರ್ಥಗಳನ್ನು ಹೊಂದುವುದು ಉತ್ತಮ ಆಯ್ಕೆಯಾಗುವುದು.

ಒತ್ತಡ ಮುಕ್ತರಾಗಿರಿ

ಒತ್ತಡ ಮುಕ್ತರಾಗಿರಿ

ಮಾನಸಿಕ ಅಥವಾ ದೈಹಿಕ ಒತ್ತಡ ಹೆಚ್ಚಾದಂತೆ ರೋಗ ನಿರೋಧಕ ಶಕ್ತಿಯು ಕುಂದುತ್ತಾ ಬರುತ್ತದೆ. ಹಾಗಾಘಿ ಆದಷ್ಟು ಮಾನಸಿಕವಾಗಿ ಹಾಗೂ ದೈಹಿಕವಾಗಿ ವಿಶ್ರಾಂತ ಮನಸ್ಸನ್ನು ಹೊಂದಿರಿ. ದಿನದ ಕೆಲವು ಚಟುವಟಿಕೆಯೊಂದಿಗೆ ವಿಶ್ರಾಂತಿ, ಲಘು ವ್ಯಾಯಾಮ, ಧ್ಯಾನಗಳನ್ನು ಕೈಗೊಳ್ಳಬೇಕು.

 ಶೀತ ಪೀಡಿತ ವ್ಯಕ್ತಿಗಳಿಂದ ದೂರವಿರಿ

ಶೀತ ಪೀಡಿತ ವ್ಯಕ್ತಿಗಳಿಂದ ದೂರವಿರಿ

ಈ ಸಮಯದಲ್ಲಿ ಆದಷ್ಟು, ಶೀತ, ಕೆಮ್ಮು, ಜ್ವರ ಅಥವಾ ಇನ್ಯಾವುದೇ ಸೋಂಕು ಭರಿತ ಕಾಯಿಲೆಗಳ ವ್ಯಕ್ತಿಗಳು ಇದ್ದರೆ ಅವರಿಂದ ಆದಷ್ಟು ದೂರದಲ್ಲಿರಿ. ಏಕೆಂದರೆ ಸಾಂಕ್ರಾಮಿಕ ಕಾಯಿಲೆಯು ಬಹು ಬೇಗ ದೇಹವನ್ನು ಆವರಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಮುಖವನ್ನು ಮುಟ್ಟಬೇಡಿ

ಮುಖವನ್ನು ಮುಟ್ಟಬೇಡಿ

ನಿಮ್ಮ ಕೈಗಳಿಂದ ಅನೇಕ ಕೆಲಸಗಳನ್ನು ಅಥವಾ ಏನನ್ನಾದರೂ ಮುಟ್ಟುತ್ತಿರುತ್ತೀರಿ. ಎಲ್ಲಾ ಸಮಯದಲ್ಲೂ ಕೈ ತೊಳೆಯುವ ಗೋಜಿಗೆ ಹೋಗದಿರಬಹುದು. ಹಾಗಾಗಿ ಕೈಗಳಲ್ಲಿ ಅನೇಕ ಸೂಕ್ಷ್ಮಾಣುಗಳು ಸಂಗ್ರಹವಾಗಿರುತ್ತವೆ. ಅಂತಹ ಕೈಗಳಿಂದ ಪದೇ ಪದೇ ಮುಖವನ್ನು ಮುಟ್ಟಿಕೊಳ್ಳುತ್ತಿದ್ದರೆ, ಸೂಕ್ಷ್ಮಾಣುಗಳು ಉಸಿರಿನ ಮೂಲಕ ದೇಹವನ್ನು ಆವರಿಸಿ, ಅನಾರೋಗ್ಯನ್ನು ಉಂಟುಮಾಡುತ್ತದೆ.

ನಿಮ್ಮ ಸುತ್ತಲಿರುವ ಜಾಗಗಳನ್ನು ಸ್ವಚ್ಛಗೊಳಿಸಿ

ನಿಮ್ಮ ಸುತ್ತಲಿರುವ ಜಾಗಗಳನ್ನು ಸ್ವಚ್ಛಗೊಳಿಸಿ

ನೀವು ಇರುವ ಪರಿಸರವನ್ನು ಆದಷ್ಟು ಶುಚಿಯಿಂದ ಇರುವಂತೆ ನೋಡಿಕೊಳ್ಳಿ. ಸುತ್ತಲೂ ಬ್ಯಾಕ್ಟೀರಿಯಾ, ಸೂಕ್ಷ್ಮಾಣುಗಳು ಬೆಳೆಯುತ್ತಿರುತ್ತವೆ. ಚಳಿಗಾಲದಂತಹ ಸಮಯದಲ್ಲಿ ಇನ್ನಷ್ಟು ತೇವಾಂಶ ಹೆಚ್ಚಾಗಿರುತ್ತವೆಯಾದ್ದರಿಂದ ಆದಷ್ಟು ಬೆಚ್ಚಗಿನ ಉಡುಗೆ ತೊಡುಗೆಯನ್ನು ಧರಿಸುವುದು ಮರೆಯದಿರಿ.

English summary

Tips To Prevent Frequent Cold And Cough During Pregnancy

During the time of pregnancy, the body of a woman keeps undergoing trans formations. It takes time to adjust oneself to all these. Some may even find it difficult to cope with the growing bump and the weight gained in the body. Pregnant women have plenty of issues to deal with, which are part and parcel of this phase. When an illness occurs during this time, it only gets worse.
X
Desktop Bottom Promotion