For Quick Alerts
ALLOW NOTIFICATIONS  
For Daily Alerts

ಗರ್ಭವತಿಯರ ಆರೋಗ್ಯ ರಕ್ಷಣೆಯಲ್ಲಿ ಕೇಸರಿಯ ಕಾರುಬಾರು!!

By Anuradha Yogesh
|

ಮೊಡವೆ, ಕಪ್ಪು ಕಲೆ, ಅತಿಸಾರ, ಚರ್ಮದ ಕಾಯಿಲೆಗಳು, ದುರ್ಬಲತೆ ನಿವಾರಣೆಗೆ ಮತ್ತು ಮೆಮೊರಿ ಬೂಸ್ಟ್ ಮಾಡುವ ಚಿಕಿತ್ಸೆಯಲ್ಲಿ ಬಳಸಲಾಗುವ ಅತ್ಯಮೂಲ್ಯ ಮೂಲಿಕೆಯೇ ಈ ಕೇಸರಿ! "ಇರಿಡೇಸಿ" ಕುಟುಂಬಕ್ಕೆ ಸೇರಿರುವ ಕ್ರೋಕಸ್ ಸ್ಯಾಟಿವಸ್ ಲಿನ್ನ ಎಂಬ ಲ್ಯಾಟಿನ್ ಹೆಸರು ಹೊಂದಿರುವ ಈ ಮೂಲಿಕೆಯ ಬಗ್ಗೆ ಕೇಳದೇ ಇರುವವರು ಇರಲಿಕ್ಕಿಲ್ಲ.

ಹಿಂದಿಯಲ್ಲಿ ಕೇಸರ್, ಇಂಗ್ಲೀಷಿನಲ್ಲಿ ಸ್ಯಾಫ್ರನ್, ಅರೇಬಿಕ್‌ನಲ್ಲಿ ಜಫ್ರಾನ್, ಬಂಗಾಳಿಯಲ್ಲಿ ಕುಂಕುಂ, ಗುಜರಾತಿಯಲ್ಲಿ ಕೇಸರ್, ಕನ್ನಡದಲ್ಲಿ ಕೇಸರಿ, ಮರಾಠಿಯಲ್ಲಿ ಕೇಸರ್, ತಮಿಳಿನಲ್ಲಿ ಕುಂಕುಮಪ್ಪು, ತೆಲುಗಿನಲ್ಲಿ ಕುಕುಮ ಪುಬ್ಬಾ ಎಂದೆಲ್ಲ ಕರೆಯಲ್ಪಡುವ ಈ ಮೂಲಿಕೆಯನ್ನು ಅನೇಕ ತರಹದ ಸಿಹಿ ತಿಂಡಿಗಳ ತಯಾರಿಕೆ ಹಾಗು ಪ್ರಮುಖವಾಗಿ ಬಿರಿಯಾನಿ ತಯಾರಿಕೆಯಲ್ಲೂ ಬಳಸಲಾಗುತ್ತದೆ ಕೇಸರಿಯ ಕಂಪು ಪ್ರತಿಯೊಬ್ಬರನ್ನೂ ಸೆಳೆಯುವದು. ಅದರಲ್ಲೂ ಪ್ರಮುಖವಾಗಿ ಗರ್ಭವತಿಯರ ಆರೈಕೆಗೆ ಎಲ್ಲರ ಮನೆಯಲ್ಲಿ ವಿಶೇಷ ಕಾಳಜಿ ವಹಿಸಲಾಗುತ್ತದೆ. ಅವರಿಗೆ ಹಿಡಿಸುವ ಎಲ್ಲ ತಂಡಿ ತಿನಿಸುಗಳನ್ನು ಕೇಳಿದ ಕೂಡಲೇ ಕೊಡಲಾಗುವದು, ಕಾರಣ ಎಲ್ಲರಿಗೂ ಆರೋಗ್ಯವಾಗಿರುವ ಸುಂದರ ಮಗು ಬೇಕು.

ಕೇಸರಿ ದುಬಾರಿಯಾದರೂ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು ಕಣ್ರೀ...

ಅಷ್ಟೇ ಅಲ್ಲ ಈ ಕೇಸರಿ ಗರ್ಭ ಧರಿಸಿದ ಸಮಯದಿಂದ ಸೇವಿಸಿದರೆ ಮಗುವಿನ ತ್ವಚೆಯ ಬಣ್ಣವನ್ನು ತುಂಬಾ ಸುಂದರಗೊಳಿಸುವದು ಎಂಬ ನಂಬಿಕೆಯಿದೆ. ಇದರಿಂದ ಗರ್ಭಿಣಿಗೆ ಬಿಸಿ ಹಾಲಿನ ಜೊತೆಗೆ ಬೆರೆಸಿ ಕುಡಿಯಲು ಕೊಡಲಾಗುತ್ತದೆ. ಅದೆಲ್ಲ ಸರಿ, ನಿಮಗೆ ಕೇಸರಿ ಹೇಗೆ ಬೆಳೆಯುತ್ತದೆ? ಎಲ್ಲಿ ಬೆಳೆಯುತ್ತದೆ? ಇದರಿಂದೇನಾದರೂ ಅಡ್ಡ ಪರಿಣಾಮಗಳಿವೆಯೇ? ಇನ್ನಿತರ ವಿಶೇಷಗಳು ಏನೇನಿವೇ ಎಂದು ತಿಳಿಯುವ ಹಾಗೂ ಕುತೂಹಲ ತಣಿಸಿಕೊಳ್ಳುವ ಆಸೆ ಇದ್ದರೆ, ಈ ಲೇಖನವನ್ನು ತಪ್ಪದೇ ಓದಿ.

ಏನಿದು ಕೇಸರಿ? ಕೇಸರಿಯು 6-10 ಇಂಚುಗಳಷ್ಟು ಎತ್ತರಕ್ಕೆ ಬೆಳೆಯುವ ಒಂದು ಸಣ್ಣ ಮೂಲಿಕೆಯಾಗಿದೆ. ಈ ಮೂಲಿಕೆಯಲ್ಲಿ ಬೆಳೆಯುವ ಹೂವಿನ ಕಳಂಕವೇ ಈ ಕೇಸರಿಯ ಎಸಳಾಗಿದೆ. ಹೂವಿಗೆ ಕ್ರೋಕಸ್ ಸ್ಯಾಟಿವಸ್ ಹೂವು ಎಂದು ಕರೆಯಲಾಗುತ್ತದೆ. ಒಂದು ಹೂವಿಗೆ ಮೂರೇ ಎಸಳುಗಳು ದೊರೆಯುವವು, ಈ ಹೂವಿನ ಎಸಳನ್ನು ಯಾವುದೇ ಯಂತ್ರವನ್ನು ಬಳಸಿ ತೆಗೆಯಲು ಸಾಧ್ಯವಿಲ್ಲ. ಮನುಷ್ಯರೇ ತಮ್ಮ ಕೈಯ್ಯಿಂದಲೇ ಬಿಡಿಸಬೇಕು. ಈ ಕಾರಣಗಳಿಂದಾಗಿಯೇ ಕೇಸರಿಯು ಅಷ್ಟೊಂದು ಹೆಚ್ಚಿನ ಬೆಲೆಯುಳ್ಳದ್ದಾಗಿದೆ. ಭಾರತದಲ್ಲಿ ಈ ಮೂಲಿಕೆಯನ್ನು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.....

ಕೇಸರಿಯ ವಿವಿಧ ಉಪಯೋಗಗಳು ಯಾವುವು?

ಕೇಸರಿಯ ವಿವಿಧ ಉಪಯೋಗಗಳು ಯಾವುವು?

ಅಡುಗೆಗಳಲ್ಲಿ...

ಕೇಸರಿಯನ್ನು ಪ್ರಮುಖವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ.ಇದನ್ನು ಅನೇಕ ಶ್ರೀಮಂತ ಭಕ್ಷ್ಯಗಳಾದ ಬಿರಿಯಾನಿ, ಪುಲಾವ್, ಮಾಂಸದ ಮೇಲೋಗರವನ್ನು ತಯಾರಿಸಲು ಬಳಸಲಾಗುತ್ತದೆ. ಇದನ್ನು ಖೀರ್ ಮತ್ತು ಹಲ್ವದಲ್ಲಿನ ಪರಿಮಳ ಮತ್ತು ಸಿಹಿತಿಂಡಿಗಳ ಬಣ್ಣಕ್ಕಾಗಿ ಬಳಸಲಾಗುತ್ತದೆ.

ಸೌಂದರ್ಯವರ್ಧನೆಯಲ್ಲಿ...

ಸೌಂದರ್ಯವರ್ಧನೆಯಲ್ಲಿ...

ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ಸೌಂದರ್ಯವರ್ಧಕ ಕ್ರೀಮ್‌ಗಳಲ್ಲೂ ಇದು ಪ್ರಮುಖ ಸ್ಥಾನವನ್ನು ಪಡೆದಿದೆ. ಇದನ್ನು ಅನೇಕ ಆಯುರ್ವೇದದ ಸೌಂದರ್ಯ ಉತ್ಪನ್ನಗಳಲ್ಲಿಯೂ ಬಳಸಲಾಗುತ್ತದೆ, ಕುಂಕುಮಾದಿ ತೈಲಮ್ ಜನಪ್ರಿಯ ಉದಾಹರಣೆಯಾಗಿದೆ.

ಆರೋಗ್ಯವರ್ಧನೆಯಲ್ಲಿ...

ಕೇಸರಿಗೆ ಆರೋಗ್ಯ ವರ್ಧನೆಯ ಗುಣವೂ ಇದೆ. ಅಜೀರ್ಣ, ಬಂಜೆತನ, ತಲೆಯ ಕೂದಲು ಉದುರುವುದನ್ನು ತಡೆಯಲು ಮತ್ತು ಕ್ಯಾನ್ಸರ್ ಗುಣಪಡಿಸಲು ಔಷಧಿಗಳಲ್ಲಿ ಸೇರಿಸಲಾಗುತ್ತದೆ. ಮುಟ್ಟಿನ ನೋವು ನಿವಾರಣೆಯಲ್ಲಿ... ಮುಟ್ಟು ಪ್ರತಿಯೊಂದು ಹೆಣ್ಣಿನ ಜೀವನದ ಒಂದು ಅವಿಭಾಜ್ಯ ಪ್ರಕ್ರಿಯೆ ಆಗಿದೆ ಎಂದರೆ ತಪ್ಪಾಗಲಾರದು. ಅನೇಕ ಮಹಿಳೆಯರು ಪಿ.ಎಮ್.ಎಸ್ ನಿಂದ ಬಳಲುತ್ತಾರೆ. ಅಲೋಪತಿಯ ವಿವಿಧ ಔಷಧಿಗಳ ಸೇವನೆಯಿಂದಲೂ ಕೆಲವೊಮ್ಮೆ ಈ ನೋವು ನಿಯಂತ್ರಣಕ್ಕೆ ಬರುವದಿಲ್ಲ. ಕೇಸರಿಯ ಸೇವನೆಯಿಂದ ಬಹಳ ಮಟ್ಟಿಗೆ ಈ ನೋವು ನಿವಾರಿಸಬಹುದೆನ್ನಲಾಗುತ್ತದೆ.

 ಗರ್ಭದಲ್ಲಿರುವ ಮಗುವಿನ ಮೈಬಣ್ಣ ಸುಧಾರಿಸುವದರಲ್ಲಿ...

ಗರ್ಭದಲ್ಲಿರುವ ಮಗುವಿನ ಮೈಬಣ್ಣ ಸುಧಾರಿಸುವದರಲ್ಲಿ...

ಕೇಸರಿಯನ್ನು ಬಳಸಿದರೆ ನಮ್ಮ ಚರ್ಮದ ಬಣ್ಣ ಮತ್ತು ವಿನ್ಯಾಸವನ್ನು ಸುಧಾರಿಸಬಹುದೆಂದು ಸಂಶೋಧನೆಗಳಿಂದ ಸಾಬೀತಾಗಿದೆ. ಆದರೆ ತಾಯಿ ಬಳಸಿದರೆ ಗರ್ಭದಲ್ಲಿರುವ ಮಗುವಿನ ತ್ವಚೆಯ ಬಣ್ಣ ಚೆನ್ನಾಗಿ ಆಗುವದೆಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಈಗ, ವಿಜ್ಞಾನವು ಇದನ್ನು ಒಂದು ಮಿಥ್ಯ ಎಂದು ಪರಿಗಣಿಸುತ್ತದೆ. ಹಾಗಂತ ಗರ್ಭಾವಸ್ಥೆಯಲ್ಲಿ ಇದರ ಬಳಕೆಯಿಂದ ಯಾವುದೇ ಲಾಭಗಳಿಲ್ಲ ಎಂದರ್ಥವಲ್ಲ, ಗರ್ಭಿಣಿಯಾಗಿದ್ದಾಗ ಅದನ್ನು ಬಳಸುವುದರಿಂದ ಇತರೇ ಅನೇಕ ಪ್ರಯೋಜನಗಳಿವೆ. ಮುಂದೆ ಓದಿ ತಿಳಿಯಿರಿ. ಅದೆಲ್ಲ ಇರಲಿ, ಮೊದಲು ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಸೇವಿಸುವುದು ಸುರಕ್ಷಿತವೇ ಎಂದು ತಿಳಿದುಕೊಳ್ಳೋಣ. ಕೇಸರಿಯು ನಿಮಗೆ ಸುಂದರ ತ್ವಚೆಯ ಮಗುವಿಗೆ ಜನ್ಮ ನೀಡಲು ಸಹಾಯ ಮಾಡುವ ಖಾತರಿಯಿಲ್ಲವಾದರೂ, ಅದು ಇತರ ಪೌಷ್ಟಿಕಾಂಶದ ಮೌಲ್ಯ ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಗರ್ಭಧಾರಣೆಯೊಂದಿಗೆ ಬರುವ ಸ್ನಾಯು ನೋವು ಮತ್ತು ಬೆಳಗಿನ ಸಮಯದಲ್ಲಿ ಕಾಡುವ ಇರಿಟೇಶೇನ್‌ಅನ್ನು ಶಮನ ಮಾಡುವದು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಹ ಸುಧಾರಿಸುವದು, ನೀವು ಉತ್ತಮವಾಗಿ ತಿನ್ನಲು ಅನುವು ಮಾಡಿಕೊಡುತ್ತದೆ. ಆದರೆ ಪ್ರತಿದಿನವೂ ಕೆಲವು ಕೇಸರಿ ದಳಗಳಿಗಿಂತ ಹೆಚ್ಚಿಗೆ ಸೇವಿಸಬಾರದು, ಏನಾದರೂ ಅಡ್ಡಪರಿಣಾಮಗಳಾದಾವು ಜೋಕೆ. ಯಾವುದೇ ಆಗಲಿ ಇತಿಮಿತಿಯಲ್ಲಿ ಸೇವಿಸಿದರೆ ತೊಂದರೆ ಇರುವದಿಲ್ಲ.

ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಬಳಸುವದರಿಂದ ಆಗುವ ಪ್ರಯೋಜನಗಳು.....

ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಬಳಸುವದರಿಂದ ಆಗುವ ಪ್ರಯೋಜನಗಳು.....

1. ಮೂಡ್ ಸ್ವಿಂಗ್ಸ್ ನಿಯಂತ್ರಣ

ಮೇಲೆ ಹೇಳಿದಂತೆ, ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಸೇವಿಸಿದರೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಗರ್ಭಿಣಿಯಾಗಿದ್ದಾಗ ಆಗುವ ಮೂಡ ಚೇಂಜಿಸ್‌ಅನ್ನು ನಿಯಂತ್ರಿಸುವದು. ಕೇಸರಿ ಆಯಾಸ ಪರಿಹಾರ ಮಾಡುವದಲ್ಲದೆ, ಖಿನ್ನತೆ ನಿವಾರಕವಾಗಿ ವರ್ತಿಸುತ್ತದೆ. ಇದು ಹ್ಯಾಪಿನೆಸ್ ಹಾರ್ಮೋನ್ ಸಿರೊಟೋನಿನ್ ಬಿಡುಗಡೆಗೆ ಸಹಾಯ ಮಾಡುತ್ತದೆ ಮತ್ತು ಇದು ಮೂಡ್ ಅನ್ನು ಎತ್ತಿ ಹಿಡಿಯುತ್ತದೆ.ನಿಮ್ಮ ಗರ್ಭಾವಸ್ಥೆಯ ಕ್ಲಿಷ್ಟಕರ ಸಮಯವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಅಪಾಯಕಾರಿಯಾಗಬಹುದು, ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ

ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ

ಉಬ್ಬರಿಕೆ ಅಥವಾ ಮಲಬದ್ಧತೆಗಳಿಂದ ನೀವು ತೊಂದರೆಗೊಳಗಾದರೆ, ನಿಮ್ಮ ಆಹಾರದಲ್ಲಿ ಕೇಸರಿ ಬೇಕೇಬೇಕು. ಗರ್ಭಾವಸ್ಥೆಯಲ್ಲಿ ಈ ಸಮಸ್ಯೆಗಳು ತೀವ್ರಗೊಳ್ಳುತ್ತವೆ. ಕೇಸರಿಯನ್ನು ಬಳಸಿಕೊಂಡಾಗ ಜೀರ್ಣಾಂಗ ವ್ಯವಸ್ಥೆಗೆ ಹೆಚ್ಚಿನ ರಕ್ತದ ಸಂಚಾರವಾಗಿ ಸರಾಗವಾಗಿ ಜೀರ್ಣಕ್ರಿಯೆ ನಡೆಯುವ ಹಾಗೆ ಸಹಾಯ ಮಾಡುತ್ತದೆ.

ಮಾರ್ನಿಂಗ್ ಸಿಕ್‌ನೆಸ್‌ನಿಂದ ಬಿಡುಗಡೆ

ಮಾರ್ನಿಂಗ್ ಸಿಕ್‌ನೆಸ್‌ನಿಂದ ಬಿಡುಗಡೆ

ಅನೇಕ ಗರ್ಭಿಣಿಯರು ಮಾರ್ನಿಂಗ್ ಸಿಕ್‌ನೆಸ್‌ನಿಂದ ಬಳಲುತ್ತಾರೆ. ಇದರಿಂದ ಪದೇ ಪದೇ ವಾಂತಿ ಕಾಡುವದು. ಕೇಸರಿಯ ಬಳಕೆಯಿಂದ ಈ ಸಮಸ್ಯೆಗೆ ಬಹಳ ಒಳ್ಳೆಯ ಉಪಶಮನ ಕಂಡುಕೊಳ್ಳಬಹುದು.ಕೇಸರಿಯು ಗರ್ಭಾವಸ್ಥೆಯ ಅವಧಿಯನ್ನು ಹೆಚ್ಚು ಆರಾಮದಾಯಕವಾಗಿರುಸುತ್ತದೆ.

ನೋವು ನಿವಾರಕ

ನೋವು ನಿವಾರಕ

ಪ್ರೆಗ್ನೆನ್ಸಿ ಗರ್ಭಿಣಿಯರ ದೇಹದಲ್ಲಿ ಬಹಳಷ್ಟು ಬದಲಾವಣೆಗಳನ್ನು ಉಂಟುಮಾಡುತ್ತದೆ. ವಿಸ್ತರಿಸುವ ಗರ್ಭವು ಆಂತರಿಕ ಅಂಗಗಳು ಮತ್ತು ಮೂಳೆ ರಚನೆಗಳನ್ನು ಬದಲಾಯಿಸುವದು. ಈ ಎಲ್ಲಾ ಬದಲಾವಣೆಗಳು ಸೆಳೆತ ಮತ್ತು ನೋವಿಗೆ ಕಾರಣವಾಗುತ್ತವೆ. ಕೇಸರಿ ನೋವು ನಿವಾರಕವಾಗಿ ಕೆಲಸ ಮಾಡುವದು. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಇತರೆ ಔಷಧಿಗಳಿಂದ ಆಗುವ ಅಡ್ಡ ಪರಿಣಾಮಗಳನ್ನು ತಡೆಯಲು ಕೇಸರಿಯನ್ನು ನೋವು ನಿವಾರಕವಾಗಿ ಬಳಸಬಹುದು.

ಹೃದಯದ ಆರೋಗ್ಯವನ್ನು ಕಾಪಾಡುವುದು

ಹೃದಯದ ಆರೋಗ್ಯವನ್ನು ಕಾಪಾಡುವುದು

ಬಸುರಿಯ ಹೃದಯದ ಮೇಲೆ ಹೆಚ್ಚಿದ ಒತ್ತಡ ಉಂಟಾಗಿ ಅಂತಿಮವಾಗಿ ಹೃದ್ರೋಗಗಳಿಗೆ ಕಾರಣವಾಗಬಹುದು. ಗರ್ಭಿಣಿಯ ದೇಹದಲ್ಲಿನ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಕೇಸರಿಯನ್ನು ಸೇವಿಸುವುದು ಅಗತ್ಯ.

ಕೇಸರಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಕೇಸರಿ ಕಬ್ಬಿಣದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆ. ಕಬ್ಬಿಣದ ಮಾತ್ರೆಗಳ ಸೇವನೆಯಿಂದ ಅನೇಕ ಗರ್ಭಿಣಿಯರು ಮಲಬಧ್ಧತೆಯನ್ನು ಅನುಭವಿಸುವರು. ಈ ಸಮಸ್ಯೆ ತಡೆಯಲು ಕಬ್ಬಿಣಂಶ ಸಮೃದ್ಧವಾಗಿರುವ ಕೇಸರಿ ಸೇವನೆ ಮಾಡಬೇಕು.ಇದರಿಂದ ಗರ್ಭಧಾರಣೆಯ ಸಮಯದಲ್ಲಿ ನಿಮ್ಮ ಹಿಮೋಗ್ಲೋಬಿನ್ ಮಟ್ಟವು ಹೆಚ್ಚಾಗಿ, ನೀವು ಆರೋಗ್ಯದಿಂದ ಕಂಗೊಳಿಸುವಿಸಿರಿ.

ಕೂದಲು ಉದುರುವದನ್ನು ಕಡಿಮೆ ಮಾಡುತ್ತದೆ

ಕೂದಲು ಉದುರುವದನ್ನು ಕಡಿಮೆ ಮಾಡುತ್ತದೆ

ಅನೇಕ ಗರ್ಭಿಣಿಯರು ಬಾಚಿದರೆ ಸಾಕು ಜೊಂಪೆ ಜೊಂಪೆಯಾಗಿ ಕೂದಲು ಕಳೆದುಕೊಳ್ಳುತ್ತಾರೆ. ಇದರಿಂದ ಮಹಿಳೆ ಹೌಹಾರುವದಂತೂ ಸುಳ್ಳಲ್ಲ. ಕೆಲವರಿಗೆ ಹೆರಿಗೆಯ ನಂತರ ಕೂದಲು ಉದುರುವುದು. ಇದು ಗರ್ಭಿಣಿ ಮಹಿಳೆಯರನ್ನು ಸಾಕಷ್ಟು ಖಿನ್ನತೆಗೆ ದೂಡುವದು. ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ಮತ್ತು ಮತ್ತಷ್ಟು ಕೂದಲ ನಷ್ಟವನ್ನು ಕಡಿಮೆ ಮಾಡಲು ಗರ್ಭಿಣಿಯರು ಕೇಸರಿ ಹಾಲುನ್ನು ನೆತ್ತಿಗೆ ಅನ್ವಯಿಸಬಹುದು.

ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ

ಉತ್ತಮ ನಿದ್ರೆ ಮಾಡಲು ಸಹಾಯ ಮಾಡುತ್ತದೆ

ಗರ್ಭಿಣಿಯರ ಸಮಸ್ಯೆಗಳ ಪಟ್ಟಿಯಲ್ಲಿ ನಿದ್ದೆ ಬಾರದಿರುವದು ಟಾಪ್ ಪ್ಲೇಸ್‌ನಲ್ಲಿ ಇರುತ್ತದೆ. ಕೇಸರಿ ಬಲವಾದ ನಿದ್ರಾಜನಕ ಪರಿಣಾಮವನ್ನು ಹೊಂದಿದೆ. ಬೆಳೆಯುತ್ತಿರುವ ಹೊಟ್ಟೆ ಮತ್ತು ವಿವಿಧ ನೋವುಗಳು ರಾತ್ರಿಯಲ್ಲಿ ಸರಾಗವಾಗಿ ನಿದ್ರೆ ಮಾಡಲು ಬಿಡದೆ ಪದೇ ಪದೇ ನಿದ್ರಾಭಂಗವಾಗುವದು. ರಾತ್ರಿಯಲ್ಲಿ ಸ್ವಲ್ಪ ಕೇಸರಿ ಹಾಲು ಕುಡಿಯುವುದರಿಂದ ನಿಮಗೆ ಸಂತೃಪ್ತಿಯ ನಿದ್ರೆ ದೊರೆಯುತ್ತದೆ.

ಚರ್ಮದ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ

ಚರ್ಮದ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ

ಗರ್ಭಾವಸ್ಥೆಯಲ್ಲಿ ಮಗುವಿನ ಆರೈಕೆ ಮತ್ತು ಬೆಳವಣಿಗೆಗಾಗಿ ಅನೇಕ ಹಾರ್ಮೋನುಗಳು ಸ್ರವಿಸುತ್ತಿರುತ್ತವೆ. ಕೆಲವೊಮ್ಮೆ ಇವು ಚರ್ಮದ ತೊಂದರೆಗಳನ್ನು ಉಂಟುಮಾಡುತ್ತವೆ. ಗರ್ಭಾವಸ್ಥೆಯ ಮಾಸ್ಕ್ ಎಂದೂ ಕರೆಯಲ್ಪಡುವ ಮೆಲಾಸ್ಮ, ಗರ್ಭಿಣಿಯಾಗಿದ್ದಾಗ ಕಂಡುಬರುವ ಸಾಮಾನ್ಯ ದೂರು. ಈ ಅವಸ್ಥೆಯಲ್ಲಿ ಕೆಲವು ಮಹಿಳೆಯರಲ್ಲಿ ಮೊಡವೆಗಳು ಕೂಡ ಕಾಣಿಸಿಕೊಳ್ಳುತ್ತವೆ.ಈ ಪರಿಸ್ಥಿತಿಗಳನ್ನು ತಡೆಗಟ್ಟಲು ಕೇಸರಿ ಸಹಾಯ ಮಾಡುತ್ತದೆ.

ಅಲರ್ಜಿಯನ್ನು ದೂರವಿರಿಸಲು

ಅಲರ್ಜಿಯನ್ನು ದೂರವಿರಿಸಲು

ಗರ್ಭಧಾರಣೆಯ ಕಾರಣದಿಂದಾಗಿ ಮಹಿಳೆಯಲ್ಲಿ ರೋಗ ಪ್ರತಿರೋಧಕತೆ ಸ್ವಲ್ಪ ಕುಂಠಿಗೊಳ್ಳುತ್ತದೆ. ಇದರಿಂದ ಪದೇ ಪದೇ ಶೀತ ಮತ್ತು ಇತರ ಸಾಮಾನ್ಯ ತೊಂದರೆಗಳನ್ನು ಅನುಭವಿಸಬೇಕಾಗಬಹುದು. ಕೇಸರಿಯನ್ನು ಸೇವಿಸುವುದರಿಂದ ಶೀತ ಹತ್ತಿರ ಸುಳಿಯದೇ ಹೆದರಿಹೋಗುತ್ತದೆ !

ಎಲೆಕ್ಟ್ರೋಲೈಟ್‌ಗಳ ಸಮತೋಲನ ಕಾಪಾಡುತ್ತದೆ

ಎಲೆಕ್ಟ್ರೋಲೈಟ್‌ಗಳ ಸಮತೋಲನ ಕಾಪಾಡುತ್ತದೆ

ಗರ್ಭಿಣಿಯರಿಗೆ ಪೊಟ್ಯಾಸಿಯಮ್ ಪ್ರಮುಖ ಪೋಷಕಾಂಶವಾಗಿದೆ. ಇದರ ಕೊರತೆಯಿಂದ ಅನೇಕ ಗರ್ಬಧರಿಸಿದ ಮಹಿಳೆಯರಿಗೆ ಸ್ನಾಯು ಸೆಳೆತ ಕಂಡುಬರುವದು. ಕೇಸರಿಯು ಪೊಟ್ಯಾಸಿಯಮ್ ಅನ್ನು ಒಳಗೊಂಡಿದೆ, ಇದು ಎಲೆಕ್ಟ್ರೋಲೈಟ್‌ಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಮೂಲಕ ಮೂತ್ರಪಿಂಡಗಳ ಸ್ಥಿತಿಯನ್ನು ಕೂಡ ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ.

 ಬಾಯಿಯ ಆರೋಗ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ

ಬಾಯಿಯ ಆರೋಗ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ

ಯಾವತ್ತೂ ಕಾಣಿಸಿಕೊಳ್ಳದ ಹಲ್ಲು ಮತ್ತು ಒಸಡುಗಳ ನೋವು ಈ ಸ್ಥಿತಿಯಲ್ಲಿ ಕಂಡುಬಂದರೆ ಗಾಭರಿ ಬೇಡ. ಇದೆಲ್ಲ ಹಾರ್ಮೋನುಗಳ ಕಾರಬಾರು. ಸ್ವಲ್ಪ ಕೇಸರಿಯನ್ನು ಸೇವಿಸುವುದರಿಂದ ಒಸಡುಗಳ ನೋವನ್ನು ಶಮನಗೊಳಿಸಹುದು.

ಮಗುವಿನ ಚಲನವಲನಗಳನ್ನು ಗಮನಿಸಲು ಸಹಾಯ ಮಾಡುವದು

ಮಗುವಿನ ಚಲನವಲನಗಳನ್ನು ಗಮನಿಸಲು ಸಹಾಯ ಮಾಡುವದು

5 ತಿಂಗಳ ಗರ್ಭಾವಸ್ಥೆಯಲ್ಲಿ ನಿಧಾನವಾಗಿ ಮಗುವಿನ ಚಲನವಲನಗಳ ಅನುಭವವಾಗುವದು. ಇದು ಮುಖ್ಯ ಕೂಡ. ಚಲನವಲನ ಕಂಡು ಬಂದಿಲ್ಲವೆಂದರೆ ಏನೋ ತೊಂದರೆಯಾಗಿದೆ ಎಂದು ಅರಿಯಬೇಕು. ನೀವು ಕೇಸರಿ ಹಾಲು ಪ್ರಯತ್ನಿಸಬಹುದು, ನೀವು ಹಾಲನ್ನು ಸೇವಿಸಿದ ತಕ್ಷಣವೇ ನಿಮ್ಮ ಮಗು ಚಲನವಲನ ತೋರಿಸುತ್ತದೆ. ದೇಹದ ತಾಪಮಾನದಲ್ಲಾಗುವ ಬದಲಾವಣೆಯೇ ಇದಕ್ಕೆ ಕಾರಣ. ಯಾವುದೇ ವಸ್ತುವು ಅತಿಯಾಗಿ ಸೇವಿಸಿದರೆ ಅಡ್ಡಪರಿಣಾಮಗಳಂತೂ ತಪ್ಪಿದ್ದಲ್ಲ, ಬನ್ನಿ ಕೇಸರಿಯ ಅಡ್ಡಪರಿಣಾಮಗಳ ಬಗ್ಗೆ ಓದಿ ನೋಡೋಣ.

ಇದು ಕೆಲವೊಮ್ಮೆ ಗರ್ಭಪಾತಕ್ಕೆ ಕಾರಣವಾಗಬಹುದು

ಇದು ಕೆಲವೊಮ್ಮೆ ಗರ್ಭಪಾತಕ್ಕೆ ಕಾರಣವಾಗಬಹುದು

ಕೇಸರಿಯು ದೇಹದ ಉಷ್ಣಾಂಶವನ್ನು ಹೆಚ್ಚಿಸುತ್ತದೆ, ಇದರಿಂದ ಕೆಲವೊಮ್ಮೆ ಗರ್ಭಕೋಶದ ಸಂಕೋಚನಗಳಿಗೆ ಕಾರಣವಾಗಬಹುದು, ಗರ್ಭಪಾತವಾಗುವ ಸಾಧ್ಯತೆಗಳಿವೆ. ನಿಮ್ಮ ವೈದ್ಯರೊಂದಿಗೆ ಮಾತನಾಡಿ ಕೇಸರಿಯನ್ನು ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸಿ.

ಇದು ಹೈಪರ್ ಸೆನ್ಸಿಟಿವಿಟಿಗೆ ಕಾರಣವಾಗಬಹುದು

ಇದು ಹೈಪರ್ ಸೆನ್ಸಿಟಿವಿಟಿಗೆ ಕಾರಣವಾಗಬಹುದು

ಕೇಸರಿ ಎಲ್ಲಾ ಮಹಿಳೆಯರಿಗೂ ಉತ್ತಮವಲ್ಲ. ಕೆಲವರು ಇದಕ್ಕೆ ಹೈಪರ್ ಸೆನ್ಸಿಟಿವ್ ಆಗಿರಬಹುದು. ಅಂತಹ ಮಹಿಳೆಯರಲ್ಲಿ, ಕೇಸರಿಯು ಬಾಯಿ ಒಣಗುವಿಕೆ, ತಲೆನೋವು, ವಾಕರಿಕೆ ಮತ್ತು ಆತಂಕಗಳಿಗೆ ಕಾರಣವಾಗಬಹುದು.

 ವಾಂತಿಗೆ ಕಾರಣವಾಗಬಹುದು

ವಾಂತಿಗೆ ಕಾರಣವಾಗಬಹುದು

ಮಾರ್ನಿಂಗ್ ಸಿಕ್‌ನೆಸ್‌ ಶಮನಗೊಳಿಸುವದರಲ್ಲಿ ಕೇಸರಿಯು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇದು ಕೆಲವು ಮಹಿಳೆಯರಲ್ಲಿ ವಾಂತಿಗೆ ಕಾರಣವಾಗಬಹುದು.ಮಹಿಳೆಯರು ಕೇಸರಿಯ ವಾಸನೆ ಅಥವಾ ಪರಿಮಳವನ್ನು ತಡೆದುಕೊಳ್ಳಲು ಸಾಧ್ಯವಾಗದೆ ಕೆಲವೊಮ್ಮೆ ವಾಂತಿಗೆ ಕಾರಣವಾಗಬಹುದು.

ಇತರ ಸಂಭಾವ್ಯ ಅಡ್ಡಪರಿಣಾಮಗಳು

ಇತರ ಸಂಭಾವ್ಯ ಅಡ್ಡಪರಿಣಾಮಗಳು

ಕೇಸರಿ ಕೆಲವೊಮ್ಮೆ ರಕ್ತಸ್ರಾವ, ಮೂರ್ಛೆಹೋಗುವದು, ಸಮತೋಲನ ತಪ್ಪುವದು, ತಲೆತಿರುಗುವುದು, ಮರಗಟ್ಟುವಿಕೆ ಮತ್ತು ಕಾಮಾಲೆಗೆ ಕೂಡ ಕಾರಣವಾಗಬಹುದು. ಹಾಗಾದರೆ ಗರ್ಭಿಣಿಯರು ಕೇಸರಿಯನ್ನು ಸೇವಿಸುವ ಪ್ರಾರಂಭಿಸಲು ಉತ್ತಮ ಸಮಯ ಯಾವುದು? ಕೇಸರಿಯು ದೇಹದ ಉಷ್ಣಾಂಶವನ್ನು ಹೆಚ್ಚಿಸಿ ಗರ್ಭಕೋಶದ ಸಂಕೋಚನವನ್ನು ಉಂಟುಮಾಡಬಹುದು. ಈ ಕಾರಣದಿಂದಾಗಿ,ಗರ್ಭಾವಸ್ಥೆಯು ಇನ್ನೂ ಸ್ಥಿರವಾಗಿರದಿದ್ದಾಗ ತಾಯಂದಿರು ಅದನ್ನು ಮೊದಲ ತ್ರೈಮಾಸಿಕದಲ್ಲಿ ಬಳಸಿಕೊಳ್ಳುವುದು ಸೂಕ್ತವಲ್ಲ. ಮೊದಲನೇ ತ್ರೈಮಾಸಿಕದ ನಂತರ ಕೇಸರಿಯನ್ನು ತೆಗೆದುಕೊಳ್ಳುವುದು ಉತ್ತಮ. ಕೇಸರಿಯನ್ನು ಸೇವಿಸುವ ಮೊದಲು ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿಯೇ ಮುಂದುವರೆಯಿರಿ. ನಿಮಗೆ ಗರ್ಭಧಾರಣೆಯ ಕೆಲವೊಂದು ಕಾಂಪ್ಲಿಕೇಶನ್ಸ್ ಇದ್ದರೆ ಕೇಸರಿನಿಂದ ದೂರವಿರುವದೇ ಉತ್ತಮವಾಗಿದೆ.

ಕೇಸರಿಯ ಸೇವನೆಯ ಪ್ರಮಾಣ..

ಕೇಸರಿಯ ಸೇವನೆಯ ಪ್ರಮಾಣ..

ಒಂದು ದಿನದಲ್ಲಿ 10 ಗ್ರಾಂ ಗಿಂತ ಹೆಚ್ಚಿನ ಕೇಸರಿಯನ್ನು ಸೇವಿಸಬಾರದು. ಶಿಫಾರಸು ಮಾಡಲಾದ ಮೊತ್ತಕ್ಕಿಂತ ನೀವು ಹೆಚ್ಚು ತೆಗೆದುಕೊಂಡರೆ, ಅದು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು ಮತ್ತು ನಿಮ್ಮ ಹುಟ್ಟಲಿರುವ ಮಗುವಿಗೆ ಅಪಾಯಕಾರಿಯಾಗಬಹುದು.

ಕೇಸರಿಯನ್ನು ಸರಿಯಾಗಿ ತೆಗೆದುಕೊಳ್ಳುವುದು ಹೇಗೆ?

ಕೇಸರಿಯನ್ನು ಸರಿಯಾಗಿ ತೆಗೆದುಕೊಳ್ಳುವುದು ಹೇಗೆ?

ಕೇಸರಿ ಹಾಲು

ಸ್ವಲ್ಪ ಹಾಲಿನೊಂದಿಗೆ ಕೇಸರಿಯನ್ನು ಕೆಲವು ಎಳೆಗಳನ್ನು ಕುದಿಸಿ. ಬೆಚ್ಚಗಾದಮೇಲೆ ಅದನ್ನು ಕುಡಿಯಿರಿ. ಬಾದಾಮಿ ಮತ್ತು ಪಿಸ್ತಾದೊಂದಿಗೆ ಕೇಸರಿ. ಕೆಲವು ಪಿಸ್ತಾ ಮತ್ತು ಬಾದಾಮಿಗಳೊಂದಿಗೆ ಎರಡು ಅಥವಾ ಮೂರು ಎಸಳುಗಳ ಕೇಸರಿಯನ್ನು ಸೇರಿಸಬೇಕು. ಇದನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಹಾಲಿನೊಂದಿಗೆ ಕುದಿಸಿ. ನಿಮ್ಮ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ. ನೀವು ಇದನ್ನು ಬೆಚ್ಚಗಿರುವಾಗ ಅಥವಾ ಶೀತಲವಾಗಿರುವಾಗ ಕೂಡ ಕುಡಿಯಬಹುದು.

ಸೂಪ್ ಮತ್ತು ಮೇಲೋಗರಗಳಲ್ಲಿ ಇದನ್ನು ಬಳಸಿ

ಸೂಪ್ ಮತ್ತು ಮೇಲೋಗರಗಳಲ್ಲಿ ಇದನ್ನು ಬಳಸಿ

ರುಚಿಕರವಾದ ಅಡುಗೆಯ ಪರಿಮಳ ಇನ್ನಷ್ಟು ಹೆಚ್ಚಿಸಲು ಒಂದೆರಡು ಕೇಸರಿ ದಳಗಳನು ಹಾಕಿದರೆ ಸಾಕು.ಪರಿಮಳ ಇಮ್ಮಡಿಗೊಂಡು ಹಸಿವೆ ಹೆಚ್ಚುವದು. ಕೇಸರಿಯನ್ನು ಸೇರಿಸುವುದರಿಂದ ಸೂಪ್‌ಗಳು ಮತ್ತು ಮಸಾಲೆ ಮೇಲೋಗರಗಳು ಇನ್ನೂ ಉತ್ತಮವಾಗಿರುತ್ತವೆ.ಇದನ್ನು ಕ್ಯಾನ್ಸರ್, ಕಣ್ಣಿನ ಆರೋಗ್ಯ, ನಿದ್ರಾಹೀನತೆ, ಬ್ರೇನ್ ಹೆಲ್ತ್ ಕಾಪಾಡಲು, ಲಿವರ್ ಕಾರ್ಯದಕ್ಷತೆ ಸುಧಾರಿಸಲು, ಕಾಮೋತ್ತೇಜಕವಾಗಿ, ಒಣ ಚರ್ಮದ ಚಿಕಿತ್ಸೆಗಾಗಿ ಕೂಡ ಬಳಸಲಾಗುತ್ತದೆ. ಹೀಗೆ ಪರಿಮಳಗಳ ರಾಜ ಕೇಸರಿಯ ಬಳಕೆಯನ್ನು ಸ್ವಲ್ಪ ಎಚ್ಚರಿಕೆಯಿಂದ ಹಿತಮಿತವಾಗಿ ಬಳಸಿದರೆ, ಆರೋಗ್ಯವೂ ಸುಧಾರಿಸುವದು ಹಾಗು ರುಚಿಯೂ ಹೆಚ್ಚುವದು!!

English summary

Saffron (Kesar) During Pregnancy: All That You Should Know

In India, saffron is one of the most commonly used spices. It is used in sweets and desserts just as much as it is cooked into dishes that are savoury or call for meat. It is used for its immense medicinal value. Pregnancy is a time when people go out of their way to get some saffron for the mother-to-be's consumption. A pregnant woman is advised by everyone around her to make sure to drink milk that has saffron added to it. The lore has it that drinking milk boiled with saffron makes the baby's complexion very fair.
X
Desktop Bottom Promotion