ಗರ್ಭಾವಸ್ಥೆಯಲ್ಲಿ ಕಾಲಿನ ಸೆಳೆತ, ಇದಕ್ಕೆ ವಿಶ್ರಾಂತಿಯೇ ಸರಿಯಾದ ಚಿಕಿತ್ಸೆ

By: Hemanth
Subscribe to Boldsky

ದೇಹದ ಯಾವುದೇ ಭಾಗದಲ್ಲಿ ನೋವಿದ್ದರೂ ಅದರಿಂದ ನಿದ್ರೆ ಕೆಡುವುದು ಖಚಿತ. ನಿದ್ರೆ ಸರಿಯಾಗಿ ಆಗದೇ ಇದ್ದಾಗ ಇತರ ರೋಗಗಳು ಕಾಣಿಸಿಕೊಳ್ಳಬಹುದು. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಸರಿಯಾದ ನಿದ್ರೆ ಅತ್ಯಗತ್ಯ. ಕಾಲುಗಳು ಬಳಲಿದಂತೆ ಆಗಿ ವಿಶ್ರಾಂತಿ ಇಲ್ಲದೆ ಇದ್ದರೆ ಆಗ ನಿದ್ರೆ ಕೂಡ ಸರಿಯಾಗಿ ಆಗುವುದಿಲ್ಲ.

ಗರ್ಭಾವಸ್ಥೆಯಲ್ಲಿ ಕಾಡುವ ಕಾಲಿನ ನೋವು, ಸೆಳೆತಗಳಿಗೆ ಆರೈಕೆ ಹೀಗಿರಲಿ...

ಇದು ಗರ್ಭಿಣಿ ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆ. ಆದರೆ ಗರ್ಭಿಣಿ ಮಹಿಳೆಯರಿಗೆ ಕಾಲಿನ ಸೆಳೆತ ಹಾಗೂ ವಿಶ್ರಾಂತಿ ಇಲ್ಲದೆ ಇರುವುದರಿಂದ ಸರಿಯಾಗಿ ನಿದ್ರೆ ಮಾಡಲು ಆಗಲ್ಲ. ಗರ್ಭಿಣಿ ಮಹಿಳೆಯರಲ್ಲಿ ರಾತ್ರಿ ವೇಳೆಯೇ ಕಾಲಿನ ನೋವು ಕಾಣಿಸಿಕೊಳ್ಳುವುದರಿಂದ ನಿದ್ರೆ ಕೆಡುವುದು ಖಚಿತ. ಕಾಲಿನ ಸೆಳೆತ ಕಾಣಿಸಿಕೊಂಡರೆ ಅದರಿಂದ ಗರ್ಭಿಣಿ ಮಹಿಳೆಯರಿಗೆ ದಿನನಿತ್ಯದ ಕೆಲಸ ಮಾಡಲು ಸಾಧ್ಯವಾಗಲ್ಲ ಎಂದು ಕೆಲವೊಂದು ಅಧ್ಯಯನಗಳು ಕೂಡ ಹೇಳಿವೆ. ಇದರ ಬಗ್ಗೆ ಮತ್ತಷ್ಟು ತಿಳಿಯಿರಿ.

ನಿದ್ರೆ ಹಾಳಾಗಲು ಕಾರಣವೇನು?

ನಿದ್ರೆ ಹಾಳಾಗಲು ಕಾರಣವೇನು?

ಕಾಲಿಗೆ ವಿಶ್ರಾಂತಿ ಇಲ್ಲದೆ ಇರುವುದರಿಂದ ಕಾಲುಗಳು ನಿಯಂತ್ರಣವಿಲ್ಲದೆ ತಿರುಗಿಸುತ್ತಾ ಇರಬೇಕಾಗುತ್ತದೆ. ಇದು ರಾತ್ರಿ ವೇಳೆ ಹೆಚ್ಚಾಗಿ ನಡೆಯುತ್ತಿರುತ್ತದೆ. ಇದರಿಂದ ದೇಹಕ್ಕೆ ನಿದ್ರೆ ಬರುವುದಿಲ್ಲ. ಕಾಲುಗಳು ಚಲನೆಯಲ್ಲಿರುವ ಕಾರಣ ದೇಹಕ್ಕೆ ವಿಶ್ರಾಂತಿ ಸಿಗದು.

ಈ ಕಾಯಿಲೆಗೆ ಯಾರು ಗುರಿಯಾಗುವರು?

ಈ ಕಾಯಿಲೆಗೆ ಯಾರು ಗುರಿಯಾಗುವರು?

ಗರ್ಭಧಾರಣೆಯ ಮೂರನೇ ಹಂತದಲ್ಲಿ ಶೇ.35ರಷ್ಟು ಮಹಿಳೆಯರು ಇಂತಹ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ಒಂದೇ ವಾರದಲ್ಲಿ ಹಲವಾರು ಸಲ ಇಂತಹ ಸಮಸ್ಯೆಗೆ ಗುರಿಯಾದವರು ಇದ್ದಾರೆ.

ಹಗಲಿನ ವೇಳೆ ಮಲಗುವುದು

ಹಗಲಿನ ವೇಳೆ ಮಲಗುವುದು

ಹಗಲಿನ ಸಮಯದಲ್ಲಿ ಗರ್ಭಿಣಿ ಮಹಿಳೆಯರು ಹೆಚ್ಚು ಕೆಲಸ ಮಾಡದೆ ವಿಶ್ರಾಂತಿ ಪಡೆಯುತ್ತಾ ಇರುತ್ತಾರೆ. ಆದರೆ ಕಾಲಿಗೆ ವಿಶ್ರಾಂತಿ ಇಲ್ಲದೆ ಇರುವಂತಹ ಗರ್ಭಿಣಿ ಮಹಿಳೆಯರನ್ನು ಇತರರಿಗೆ ಹೋಲಿಸಿದರೆ ಅವರು ಹಗಲಿನ ಸಮಯದಲ್ಲಿ ವಿಶ್ರಾಂತಿಯಲ್ಲಿರುತ್ತಾರೆ. ಹಗಲಿನಲ್ಲಿ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದು ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಿಗೆ ಒಳ್ಳೆಯದಲ್ಲ.

ಗರ್ಭಧಾರಣೆಯ ಹಂತ

ಗರ್ಭಧಾರಣೆಯ ಹಂತ

ಗರ್ಭಧಾರಣೆಯ ವೇಳೆ ಮಹಿಳೆಯರು ಹಲವಾರು ಹಂತಗಳನ್ನು ದಾಟಬೇಕಾಗುತ್ತದೆ. ದೇಹದಲ್ಲಿ ಆಗುವಂತಹ ಕೆಲವೊಂದು ಬದಲಾವಣೆಗಳು ತುಂಬಾ ಸಮಸ್ಯೆ ಉಂಟು ಮಾಡುವುದು. ಇಂತಹ ಕೆಲವು ಸಮಸ್ಯೆಯೊಂದಿಗೆ ಕಾಲಿಗೆ ವಿಶ್ರಾಂತಿಯಿಲ್ಲದೆ ಇರುವ ಸಮಸ್ಯೆಯೂ ಕಾಣಿಸಿಕೊಂಡರೆ ಅಗ ಗರ್ಭಧಾರಣೆ ಸಮಯವು ತುಂಬಾ ಕಠಿಣವಾಗಿರುವುದು.

ಇದಕ್ಕೆ ಕಾರಣವೇನು?

ಇದಕ್ಕೆ ಕಾರಣವೇನು?

ಹಾರ್ಮೋನುಗಳಲ್ಲಿನ ಬದಲಾವಣೆ, ರಕ್ತಚಲನೆಯ ಸಮಸ್ಯೆ, ಫೋಲೇಟ್ ಮತ್ತು ಕಬ್ಬಿನಾಂಶ, ಚಯಾಪಚಯಾ ಕ್ರಿಯೆ ಮತ್ತು ಮಾನಸಿಕ ನಡವಳಿಕೆಯು ಇದಕ್ಕೆ ಕಾರಣವಾಗಿರಬಹುದು.

ಚಿಕಿತ್ಸೆ ನೆರವಾಗಬಹುದು

ಚಿಕಿತ್ಸೆ ನೆರವಾಗಬಹುದು

ಕಾಲಿಗೆ ವಿಶ್ರಾಂತಿ ಇಲ್ಲದೆ ಇರುವ ಸಮಸ್ಯೆಯ ನಿವಾರಣೆಗೆ ಚಿಕಿತ್ಸೆಯಿದೆ. ಇದು ಗರ್ಭಿಣಿ ಮಹಿಳೆಯರಿಗೆ ಪರಿಣಾಮಕಾರಿ ಎಂದು ಅಧ್ಯಯನಗಳು ತಿಳಿಸಿವೆ.

ನಿದ್ದೆ ಕೆಡಿಸುವ ಕಾಲುಗಳ ಸ್ನಾಯು ಸೆಳೆತಕ್ಕೆ ಸೂಕ್ತ ಮನೆಮದ್ದು

English summary

Restless Leg Syndrome During Pregnancy

We all know the fact that restless leg syndrome can kill sleep quality. And when pregnant women suffer from this disorder, the impact is more as pregnant women need more sleep. Restless leg syndrome can lead to daytime drowsiness in pregnant women as the quality of sleep gets hampered during the nights.
Subscribe Newsletter