ಗರ್ಭಾವಸ್ಥೆಯ ಮಹಿಳೆಯರಿಗೆ ನಿದ್ರಾಹೀನತೆ ಕಾಡುವುದು ಏಕೆ?

Posted By: Deepu
Subscribe to Boldsky

ಒಂದು ಕುಟುಂಬದಲ್ಲಿ ತಾಯಿಯ ಸ್ಥಾನ ಬಹಳ ಮಹತ್ತರವಾದದ್ದು. ಮನೆಯ ಪ್ರತಿಯೊಂದು ಚಿಕ್ಕ ಪುಟ್ಟ ಕೆಲಸದಿಂದ ಹಿಡಿದು ದೊಡ್ಡ ದೊಡ್ಡ ಜವಾಬ್ದಾರಿ ಕೆಲಸದ ವರೆಗೂ ಕಾಳಜಿವಹಿಸಬೇಕಾಗುತ್ತದೆ. ಒಂದು ಸಂಸಾರದ ನಿರ್ವಹಣೆಯಲ್ಲಿ ಸ್ತ್ರೀಯ ಪಾತ್ರ ಎಷ್ಟು ಮಹತ್ತರವಾದದ್ದೋ ಅಷ್ಟೇ ಕಾಳಜಿ ಹಾಗೂ ಜವಾಬ್ದಾರಿಯನ್ನು ಗರ್ಭಾವಸ್ಥೆಯಲ್ಲಿರುವ ಮಹಿಳೆ ಕಾರ್ಯನಿರ್ವಹಿಸಬೇಕಾಗುತ್ತದೆ. ತನ್ನ ದೇಹದಲ್ಲಿಯೇ ಇನ್ನೊಂದು ಪುಟ್ಟ ಮಗುವನ್ನು ಹೊತ್ತು ಅದರ ಆರೋಗ್ಯ ಹಾಗೂ ಆರೈಕೆಯ ಕುರಿತು ಶ್ರಮಿಸಬೇಕಾಗುತ್ತದೆ.

ಕೆಲವು ಸಮೀಕ್ಷೆಯ ಪ್ರಕಾರ ಶೇ.80 ರಷ್ಟು ಮಹಿಳೆಯರು ಗರ್ಭಾವಸ್ಥೆಯಲ್ಲಿ ನಿದ್ರಾಹೀನತೆಯನ್ನು ಅನುಭವಿಸುತ್ತಾರೆ ಎಂದು ವರದಿಯಾಗಿದೆ. ಹಾರ್ಮೋನ್‍ಗಳ ವ್ಯತ್ಯಾಸದಿಂದ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಅವುಗಳ ಕಾರಣಕ್ಕಾಗಿ ನಿದ್ರಾ ಹೀನತೆ ಉಂಟಾಗುವುದು. ಏಳರಿಂದ ಎಂಟನೇ ತಿಂಗಳಿಗೆ ಕಾಲಿಡುತ್ತಿದ್ದಂತೆಯೇ ಮಗುವಿನ ಬೆಳವಣಿಗೆಯೂ ಹೆಚ್ಚುವುದು. ಇದರೊಟ್ಟಿಗೆ ಗರ್ಭಿಣಿಯ ಹೊಟ್ಟೆ ಗಾತ್ರವೂ ಹೆಚ್ಚಾಗುವುದು. ಈ ಕಾರಣದಿಂದಲೂ ಸೂಕ್ತ ರೀತಿಯಲ್ಲಿ ಮಲಗಿ ನಿದ್ರಿಸಲು ಕಷ್ಟವಾಗುವುದು.

ಮಹಿಳೆಯರಲ್ಲಿ ಕಂಡುಬರುವ ಬಂಜೆತನಕ್ಕೆ ಕಾರಣಗಳೇನು?

ಗರ್ಭಾವಸ್ಥೆಯಲ್ಲಿ ಇರುವಾಗ ಆರೋಗ್ಯದಲ್ಲಿ ಉಂಟಾಗುವ ಅನೇಕ ಬದಲಾವಣೆಯನ್ನು ಮಹಿಳೆ ಸೂಕ್ತ ರೀತಿಯಲ್ಲಿ ಎದುರಿಸಬೇಕಾಗುತ್ತದೆ. ಆ ಸಮಯದಲ್ಲಿ ನಿದ್ರೆ ಅತ್ಯವಶ್ಯಕವಾಗಿದ್ದರೂ ನಿದ್ರೆ ಮಾಡಲು ಸಾಧ್ಯವಾಗದು. ಇದಕ್ಕೆ ಕಾರಣವೇನು? ಪರಿಣಾಮವೇನು ಎನ್ನುವ ಸೂಕ್ತ ವಿವರಣೆಯನ್ನು ಈ ಲೇಖನದ ಮುಂದಿನ ಭಾಗದಲ್ಲಿ ತಿಳಿಯಬಹುದು....

ಮಗುವಿನ ಚಲನವಲನ

ಮಗುವಿನ ಚಲನವಲನ

ಗರ್ಭಾವಸ್ಥೆಯ ಕೊನೆ ಹಂತಕ್ಕೆ ಬರುತ್ತಿದ್ದಂತೆ ಮಗುವಿನ ಬೆಳವಣಿಗೆಯೂ ಪೂರ್ಣಗೊಳ್ಳುತ್ತಾ ಬರುತ್ತದೆ. ಆಗ ಮಗು ಹೊಟ್ಟೆಯೊಳಗೆ ಹೆಚ್ಚು ಕೈಕಾಲುಗಳನ್ನು ಆಡಿಸುವ ಪ್ರಕ್ರಿಯೆಯನ್ನು ಮಾಡುತ್ತದೆ. ಈ ಕ್ರಿಯೆಯು ತಾಯಿ ನಿದ್ರಾವಸ್ಥೆಯಲ್ಲಿರುವಾಗ ಅತಿಯಾದರೆ ತಾಯಿಗೆ ನಿದ್ರಾಹೀನತೆ ಉಂಟಾಗುವುದು.

ಆತಂಕ

ಆತಂಕ

ಮಗುವಿನ ಕಾಳಜಿ ಹಾಗೂ ತನ್ನ ಪ್ರಸವದ ಕುರಿತು ಹೀಗೆ ಇನ್ನಿತರ ಆಲೋಚನೆಯು ಹೆಚ್ಚಾದಂತೆ ಮಾನಸಿಕವಾಗಿ ಒತ್ತಡ ಹಾಗೂ ಆತಂಕ ಹೆಚ್ಚುವುದು. ಇದು ರಾತ್ರಿವೇಳೆ ಮನಸ್ಸನ್ನು ಕಾಡುವುದು ಅಥವಾ ನಿದ್ರೆ ಬರದಂತೆ ಮಾಡುವುದು. ಇದು ಕೊನೆಯ ತ್ರೈಮಾಸಿಕದ ಅವಧಿಯಲ್ಲಿ ಸಾಮಾನ್ಯವಾದ ತೊಂದರೆ ಎಂದು ಸಹ ಹೇಳಲಾಗುತ್ತದೆ.

ಕಾಲುಗಳ ಸೆಳೆತ

ಕಾಲುಗಳ ಸೆಳೆತ

ಗರ್ಭಾವಸ್ಥೆಯಲ್ಲಿ ಕಾಲಿನ ಸೆಳೆತ ಸಾಮಾನ್ಯವಾಗಿ ಹೆಚ್ಚಾಗಿ ಇರುತ್ತದೆ. ಇದು ಎರಡನೇ ತ್ರೈಮಾಸಿಕದ ಅವಧಿಯಿಂದಲೇ ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಮೂರನೇ ತ್ರೈಮಾಸಿಕಕ್ಕೆ ಬಂದಂತೆ ಇನ್ನಷ್ಟು ದ್ವಿಗುಣವಾಗುವುದು. ರಾತ್ರಿ ನಿದ್ರೆ ಮಾಡುವಾಗ ಇದರ ಸೆಳೆತ ಹೆಚ್ಚಾಗುವುದರಿಂದಲೂ ಸಾಕಷ್ಟು ಪ್ರಮಾಣದ ನಿದ್ರೆ ಮಾಡಲು ಸಾಧ್ಯವಾಗದು.

ಆಗಾಗ ಮೂತ್ರ ವಿಸರ್ಜನೆಯ ಸಮಸ್ಯೆ

ಆಗಾಗ ಮೂತ್ರ ವಿಸರ್ಜನೆಯ ಸಮಸ್ಯೆ

ಗರ್ಭಾವಸ್ಥೆಯಲ್ಲಿ ಮೂತ್ರ ವಿಸರ್ಜನೆಯ ಸಮಸ್ಯೆಯು ಸಾಮಾನ್ಯವಾದದ್ದು ಎಂದು ಹೇಳಬಹುದು. ಈ ಸಂದರ್ಭದಲ್ಲಿ ತಾಯಿ ಹೆಚ್ಚು ಹೆಚ್ಚು ನೀರು ಕುಡಿಯಬೇಕಾದ ಅನಿವಾರ್ಯತೆ ಇರುತ್ತದೆ. ಇದರ ಪರಿಣಾಮವಾಗಿ ಪದೇ ಪದೇ ಮೂತ್ರವಿಸರ್ಜನೆಗೆ ಹೋಗಬೇಕಾಗುವುದು. ಅಲ್ಲದೆ ಭಾರವಾದ ಹೊಟ್ಟೆಯು ಒತ್ತಡವನ್ನು ಹೇರುವುದರಿಂದ ರಾತ್ರಿ ನಿದ್ರೆಯ ಸಮಯದಲ್ಲಿ ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕೆನ್ನುವ ಸಂವೇದನೆ ಉಂಟಾಗುತ್ತದೆ. ಇದು ಸಹ ಗರ್ಭಿಣಿಯ ನಿದ್ರಾ ಹೀನತೆಗೆ ಒಂದು ಪ್ರಮುಖ ಕಾರಣವಾಗಿ ಪರಿಣಮಿಸುತ್ತದೆ.

ಮಗುವಿನ ತುಳಿತ

ಮಗುವಿನ ತುಳಿತ

ಕೊನೆಯ ತ್ರೈಮಾಸಿಕಕ್ಕೆ ಬರುತಿದ್ದಂತೆ ಮಗುವಿನ ಚಟುವಟಿಕೆ ಹೆಚ್ಚಾಗಿರುತ್ತದೆ. ಒಟ್ಟೆಯ ಒಳಗೆ ಒತ್ತಡ ಉಂಟಾದಾಗ ಮಗು ತನ್ನ ಕಾಲುಗಳ ತುಳಿತವನ್ನು ಹೆಚ್ಚಿಸುತ್ತದೆ. ತಾಯಿ ನಿದ್ರೆ ಮಾಡುವಾಗ ಮಗುವಿಗೆ ಒತ್ತಡ ಉಂಟಾಗುವುದು ಆ ಸಂದರ್ಭದಲ್ಲಿ ಹೆಚ್ಚು ಕಾಲ್ತುಳಿತುಂಟಾಗುವುದು. ಇದು ತಾಯಿಯ ನಿದ್ರೆಯನ್ನು ಕೆಡಿಸುವುದು. ಮಗುವಿಗೆ ಅನುಕೂಲವಾಗುವಂತೆ ಯಾವ ಭಂಗಿಯಲ್ಲಿ ಮಲಗಬೇಕು ಎನ್ನುವುದನ್ನು ವೈದ್ಯರ ಸಲಹೆ ಪಡೆದುಕೊಳ್ಳಬೇಕು.

ಆಹಾರ

ಆಹಾರ

ಗರ್ಭಾವಸ್ಥೆಯಲ್ಲಿ ನಿದ್ರಾಹೀನತೆಗೆ ನೀವು ಸೇವಿಸುವ ಆಹಾರವೂ ಸಹ ಒಂದು ಪ್ರಮುಖ ಕಾರಣವಾಗಿರುತ್ತದೆ. ಕಾಫಿ, ಟೀ ಗಳನ್ನು ಹೆಚ್ಚು ಕುಡಿಯುವ ಅಭ್ಯಾಸ ಇರುವವರಿಗೆ ಈ ಸಮಸ್ಯೆ ಕಾಡಬಹುದು. ವೈದ್ಯರ ಸಲಹೆಯ ಮೇರೆಗೆ ನಿಮ್ಮ ರೂಢಿಯನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ.

ಕೆಟ್ಟ ಕನಸುಗಳು

ಕೆಟ್ಟ ಕನಸುಗಳು

ಕೆಲವರಿಗೆ ರಾತ್ರಿ ನಿದ್ರೆಯಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾಗುವುದು ಅಥವಾ ಕೆಟ್ಟ ಕನಸುಗಳನ್ನು ಕಂಡು ಎದ್ದೇಳುವುದು, ನಂತರ ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬರದಿರುವುದು ಇವೆಲ್ಲಾ ಕಾರಣಗಳು ಗರ್ಭಿಣಿಯ ನಿದ್ರಾ ಹೀನತೆಗೆ ಕಾರಣವಾಗುತ್ತದೆ. ಇಂತಹ ಸಮಸ್ಯೆಗಳ ನಿವಾರಣೆಗೆ ವೈದ್ಯರ ಸಲಹೆಯಂತೆ ಪರಿಹಾರ ಕಂಡುಕೊಳ್ಳುವುದು ಸೂಕ್ತ.

ಆದಷ್ಟು ಕರಿದ ತಿಂಡಿಗಳ ಸೇವನೆಯಿಂದ ದೂರವಿರಿ

ಆದಷ್ಟು ಕರಿದ ತಿಂಡಿಗಳ ಸೇವನೆಯಿಂದ ದೂರವಿರಿ

ರಾತ್ರಿ ಸಮಯ ಆದಷ್ಟು ಕಡಿಮೆ ಆಹಾರ ಸೇವಿಸಿ. ನೀವು ರಾತ್ರಿ ಭರ್ಜರಿಯಾಗಿ ಸೇವಿಸಿದಿರಿ ಎಂದಾದಲ್ಲಿ, ನೀವು ಸ್ವಯಂಚಾಲಿತವಾಗಿ ಅಜೀರ್ಣ ಸಮಸ್ಯೆಗಳಿಂದ ನೀವು ಬಳಲುತ್ತೀರಿ ಮತ್ತು ಅಸಿಡಿಟಿಯು ನಿಮ್ಮ ನಿದ್ದೆಗೆ ಭಂಗವನ್ನುಂಟು ಮಾಡುವುದು ಖಾತ್ರಿ.

ಅಗತ್ಯವಿದ್ದಲ್ಲಿ ಮಾತ್ರ ದ್ರವಾಹಾರ ಸೇವಿಸಿ

ಅಗತ್ಯವಿದ್ದಲ್ಲಿ ಮಾತ್ರ ದ್ರವಾಹಾರ ಸೇವಿಸಿ

ಗರ್ಭಾವಸ್ಥೆಯಲ್ಲಿ ಬಚ್ಚಲು ಮನೆಯೇ ಜಗತ್ತಿನ ಉತ್ತಮ ಸ್ಥಳ ಎಂದೆನಿಸಿಬಿಡುತ್ತದೆ. ಏಕೆಂದರೆ ಭ್ರೂಣದ ಒತ್ತಡವು ಗಾಳಿಗುಳ್ಳೆಯ ಮೇಲೆ ಬೀಳುವುದರಿಂದ ದಿನಕ್ಕೆ ಎರಡು ಬಾರಿಗಿಂತ ಹೆಚ್ಚು ಸಲ ರೆಸ್ಟ್ ರೂಮ್‎ಗೆ ಹೋಗಬೇಕು ಎಂದೆನಿಸುತ್ತದೆ. ರಾತ್ರಿ ಸಮಯದಲ್ಲಿ ಈ ಹೋಗುವಿಕೆಯನ್ನು ಕಡಿಮೆ ಮಾಡಲು ಆದಷ್ಟು ದ್ರವಾಹಾರಗಳನ್ನು ಅಗತ್ಯ ಸಮಯದಲ್ಲಿ ಮಾತ್ರ ಸ್ವೀಕರಿಸಿ.

ಹೀಟಿಂಗ್ ಪ್ಯಾಡ್ ಬಳಸಿ

ಹೀಟಿಂಗ್ ಪ್ಯಾಡ್ ಬಳಸಿ

ರಾತ್ರಿ ವೇಳೆ ನಿಮಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ, ನಿಮ್ಮ ದಿಂಬಿನ ಕೆಳಗೆ ಬಿಸಿ ನೀರಿನ ಬಾಟಲನ್ನು ಇರಿಸಿಕೊಳ್ಳಿ. ಬಾಟಲಿಯಿಂದ ಉಂಟಾಗುವ ಉಷ್ಣತೆಯು ನರಗಳನ್ನು ಶಾಂತವಾಗಿಸಿ, ನಿಮ್ಮ ಉತ್ತಮ ನಿದ್ದೆಗೆ ಸಹಕಾರಿಯಾಗಿರುತ್ತದೆ.

English summary

Reasons For Pregnancy Insomnia

Current surveys indicate that more than 80% of the pregnant women experience insomnia at least once. Here are the reasons for pregnancy insomnia.