For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ನವರಾತ್ರಿಯ ಉಪವಾಸಕ್ಕೆ ಯೋಗ್ಯ ರೀತಿಯ ಸಲಹೆಗಳು...

By Divya
|

ನವರಾತ್ರಿಯಲ್ಲಿ ಉಪವಾಸದಿಂದ ಇರುವುದು ಪವಿತ್ರವಾದ ಪದ್ಧತಿ. ಇಂತಹ ಪವಿತ್ರ ಆಚರಣೆಗೆ ರೋಗಿಗಳು, ಮುದುಕರು ಹಾಗೂ ಮಕ್ಕಳು ನಿಷಿದ್ಧರಾಗಿರುತ್ತಾರೆ ಎಂಬುದು ಧಾರ್ಮಿಕ ನೀತಿಯ ನಿಲುವು. ಆದರೆ ಗರ್ಭಾವಸ್ಥೆಯಲ್ಲಿರುವವರು ಉಪವಾಸದ ಸಮಯದಲ್ಲಿ ಏನು ಮಾಡಬೇಕು ಎನ್ನುವುದು ಚರ್ಚಿಸಬೇಕಾದ ವಿಚಾರ. ಗರ್ಭಿಣಿಯರ ದೈಹಿಕ ಆರೋಗ್ಯ ಬಹಳ ಸೂಕ್ಷ್ಮತೆಯನ್ನು ಹೊಂದಿರುತ್ತವೆಯಾದ್ದರಿಂದ, ಊಟ-ತಿಂಡಿಗಳ ಸೇವನೆಯ ಬಗ್ಗೆ ಹೆಚ್ಚು ಗಮನ ನೀಡಲೇ ಬೇಕು. ಇದು ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎನ್ನುವುದನ್ನು ಕ್ಷಣ ಮಾತ್ರಕ್ಕೂ ಮರೆಯುವ ಹಾಗಿಲ್ಲ.

ಮೊದಲ ತ್ರೈಮಾಸಿಕದ ಹಂತದಲ್ಲಿ ಮಗು ಹಾಗೂ ತಾಯಿಯ ದೇಹದಲ್ಲಿ ಬಹಳ ಸೂಕ್ಷ್ಮತೆ ಇರುತ್ತದೆ. ಈ ಸಮಯದಲ್ಲಿ ಉಪವಾಸದ ಯೋಚನೆಯನ್ನೂ ಮಾಡಬಾರದು. ಅಂತೆಯೇ ಎರಡನೇ ತ್ರೈಮಾಸಿಕದಲ್ಲೂ ಅಷ್ಟೆ. ಮೂರನೇ ತ್ರೈಮಾಸಿಕದ ಹಂತದಲ್ಲಿದ್ದರೆ ಉಪವಾಸವು ಹೆಚ್ಚು ಸಮಯದವರೆಗೆ ಮುಂದುವರಿಯಬಾರದು. ವೈದ್ಯರ ಸಲಹೆ ಪಡೆದು, ಕಾಲ ಕಾಲಕ್ಕೆ ಸೂಕ್ತವಾದ ಹಣ್ಣು-ಹಂಪಲು, ಊಟ-ತಿಂಡಿಯನ್ನು ಸೇವಿಸುತ್ತಿರಬೇಕು.

ನಿಮ್ಮ ಮಗು ನಿಮ್ಮ ಪೋಷಣೆಯ ಮೇಲೆಯೇ ಅವಲಂಬಿತವಾಗಿರುತ್ತದೆ ಎನ್ನುವುದನ್ನು ಮರೆಯದಿರಿ. ಉಪವಾಸದ ಹೆಸರಿನಲ್ಲಿ ಆಹಾರವಿಲ್ಲದೆ ಉಪವಾಸ ಮಾಡುವುದು ಅಪಾಯಕಾರಿ ಚಟುವಟಿಕೆಯಾಗಿರುತ್ತದೆ. ನವರಾತ್ರಿಯನ್ನು ಪ್ರತಿವರ್ಷವೂ ಆಚರಿಸುತ್ತಾ ಬಂದಿದ್ದು, ಈ ಬಾರಿ ಅದನ್ನು ಕೈ ಬಿಡುವ ಮನಸ್ಸಿಲ್ಲದ ಗರ್ಭಿಣಿಯರಿಗೆ ಇಲ್ಲಿದೆ ಕೆಲವು ಆರೋಗ್ಯಕರವಾದ ಉಪವಾಸದ ಸಲಹೆಗಳು...

ನೀರನ್ನು ಕುಡಿಯುತ್ತಿರಬೇಕು

ನೀರನ್ನು ಕುಡಿಯುತ್ತಿರಬೇಕು

ಮಗುವಿಗೆ ನೀರಿನ ಅಗತ್ಯತೆ ಹೆಚ್ಚಾಗಿಯೇ ಇರುವುದರಿಂದ ಉಪವಾಸದ ಹೆಸರಿನಲ್ಲಿ ನೀರನ್ನು ಸೇವಿಸದೇ ಇರಬಾರದು. ಆಗಾಗ ನೀರನ್ನು ಕುಡಿಯುತ್ತಿದ್ದರೆ ಮಗುವಿನ ಆರೋಗ್ಯವೂ ಉತ್ತಮ ಹಂತದಲ್ಲಿಯೇ ಇರುತ್ತದೆ.

 ವೈದ್ಯರನ್ನು ಸಂಪರ್ಕಿಸಿ

ವೈದ್ಯರನ್ನು ಸಂಪರ್ಕಿಸಿ

ನಿಮಗೆ ನೀವೇ ಉಪವಾಸದ ಕಟ್ಟುಪಾಡನ್ನು ಹಾಕಿಕೊಳ್ಳಬೇಡಿ. ವೈದ್ಯರನ್ನು ಭೇಟಿಯಾಗಿ, ಉಪವಾದ ವಿಚಾರದ ಕುರಿತು ಚರ್ಚಿಸಿ. ವೈದ್ಯರು ನಿಮ್ಮ ಆರೋಗ್ಯ ಹಾಗೂ ಮಗುವಿನ ಆರೈಕೆಯ ದೃಷ್ಟಿಯಿಂದ ಏನೆಲ್ಲಾ ಹೇಳುತ್ತಾರೆ ಎನ್ನುವುದಕ್ಕೆ ಆಧ್ಯತೆ ನೀಡಿ. ಹಾಗೇ ನಡೆದುಕೊಳ್ಳಿ.

ಆರೋಗ್ಯಕರ ಆಹಾರವನ್ನು ಸೇವಿಸಿ

ಆರೋಗ್ಯಕರ ಆಹಾರವನ್ನು ಸೇವಿಸಿ

ನಿಮ್ಮ ಮಗುವಿನ ಬೆಳವಣಿಗೆಗೆ ಪ್ರತಿ ಕ್ಷಣವೂ ಆರೈಕೆಯ ಅಗತ್ಯತೆ ಇರುತ್ತದೆ. ಉಪವಾಸ ಮಾಡುವ ಮನಸ್ಸನ್ನು ಹೊಂದಿದ್ದರೆ, ಆಗಾಗ ತಾಜಾ ಹಣ್ಣುಗಳನ್ನು ಸೇವಿಸಿ. ಹಾಲು ಮತ್ತು ನೀರಿನ ಬಳಕೆಯೂ ನಿಯಮಿತವಾಗಿ ಸೇವಿಸುತ್ತಿರಿ.

ದೀರ್ಘ ಕಾಲದ ಉಪವಾಸ ಮಾಡಬೇಡಿ

ದೀರ್ಘ ಕಾಲದ ಉಪವಾಸ ಮಾಡಬೇಡಿ

ಆರೋಗ್ಯವಾಗಿರುವವರು ದಿನವಿಡೀ ಉಪವಾಸ ಮಾಡುತ್ತಾರೆ. ಆದರೆ ಗರ್ಭಿಣಿಯರು ಆ ಬಗೆಯ ದೀರ್ಘಾವಧಿಯ ಉಪವಾಸ ಮಾಡಬಾರದು. ದೀರ್ಘಾವಧಿಯ ಉಪವಾಸದಿಂದ ರಕ್ತ ಹೀನತೆ, ಆಯಾಸ, ಆಮ್ಲತೆ, ತಲೆ ನೋವು ಸೇರಿದಂತೆ ಇನ್ನಿತರ ಅನಾರೋಗ್ಯದ ಸಮಸ್ಯೆಗಳು ಉದ್ಭವವಾಗುವವು. ಇವು ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುವುದು.

ಉಪ್ಪಿನಂಶದಿಂದ ದೂರವಿರಬೇಡಿ...

ಉಪ್ಪಿನಂಶದಿಂದ ದೂರವಿರಬೇಡಿ...

ಕೆಲವರು ಉಪ್ಪು ಸೇವಿಸದೆ ಉಪವಾಸ ಮಾಡುತ್ತಾರೆ. ಆದರೆ ಗರ್ಭಿಣಿಯರು ಉಪ್ಪು ತಿನ್ನುವುದನ್ನು ಮರೆಯಬಾರದು. ಉಪ್ಪು ಮಗುವಿನ ಆರೋಗ್ಯ ರಕ್ಷಣೆಗೆ ಸಹಾಯ ಮಾಡುತ್ತದೆ. ಅಲ್ಲದೆ ಅನೇಕ ರೋಗಗಳನ್ನು ತಡೆಗಟ್ಟುವುದು.

ವಿಶ್ರಾಂತಿಯೂ ಅಗತ್ಯ

ವಿಶ್ರಾಂತಿಯೂ ಅಗತ್ಯ

ಗರ್ಭಿಣಿಯಾದಾಗ ಅನೇಕ ಸಣ್ಣ ಪುಟ್ಟ ಆರೋಗ್ಯದ ಬದಲಾವಣೆ ಹಾಗೂ ತೊಂದರೆಗಳು ಉಂಟಾಗುತ್ತಲೇ ಇರುತ್ತದೆ. ಈ ಕುರಿತು ನೀವು ನಿರ್ಲಕ್ಷ್ಯ ಧೋರಣೆ ತೋರಬಾರದು. ಆದಷ್ಟು ವಿಶ್ರಾಂತಿಯನ್ನು ಪಟೆಯಬೇಕು. ಉಪವಾಸ ಮಾಡುತ್ತಿದ್ದೀರಿ ಎಂದಾದರೆ ನಿದ್ರೆಗೆ ಮೊರೆ ಹೋಗಿ, ವಿಶ್ರಾಂತಿ ಪಡೆಯುವುದು ಸೂಕ್ತ.

ಆರೋಗ್ಯ ಪಾನೀಯ ಅಗತ್ಯ

ಆರೋಗ್ಯ ಪಾನೀಯ ಅಗತ್ಯ

ಉಪವಾಸ ಮಾಡುತ್ತಿದ್ದೀರಿ ಎಂದಾದರೆ ದ್ರವ ರೂಪದ ಪದಾರ್ಥವನ್ನು ಆದಷ್ಟು ಹೆಚ್ಚು ಸೇವಿಸಬೇಕು. ಸಾಕಷ್ಟು ಪ್ರಮಾಣದ ತಾಜಾ ಮಜ್ಜಿಗೆ, ಹಣ್ಣಿನ ರಸ, ಹಾಲು ಹಾಗೂ ನೀರನ್ನು ಸೇವಿಸಬೇಕು.

English summary

Navratri Fasting Tips For Pregnant Women

During the first trimester, your baby is in a very sensitive stage. It is better not to observe fast during this period. Similarly, fasting during the third trimester of pregnancy is also not safe. However, if you feel healthy and are strong enough then you can fast but only with the due consultation with your doctor. Besides Navratri fasting rules are not too strict and you can fast by consuming the healthy fasting dishes from time to time.
X
Desktop Bottom Promotion