ಗರ್ಭಾವಸ್ಥೆಯಲ್ಲಿ 'ಬಿಪಿ' ಸಮಸ್ಯೆ ಕಾಡಿದರೆ, ಪಥ್ಯಾಹಾರ ಹೀಗಿರಲಿ...

By: Deepu
Subscribe to Boldsky

ಮಹಿಳೆ ಗರ್ಭ ಧರಿಸಿದ ಬಳಿಕ ಆಕೆಯಲ್ಲಿ ಹಲವಾರು ರೀತಿಯ ದೈಹಿಕ ಹಾಗೂ ಆರೋಗ್ಯ ಬದಲಾವಣೆಗಳು ಕಾಣಿಸಿಕೊಳ್ಳುವುದು ಸಹಜ. ಗರ್ಭ ಧರಿಸಿದ ಹೆಚ್ಚಿನ ಮಹಿಳೆಯರಲ್ಲಿ ಸಮಸ್ಯೆಗಳು ಕಂಡುಬರುವುದು. ಅದರಲ್ಲೂ ಗರ್ಭಧಾರಣೆಯ ಮೊದಲ ಹಂತದಲ್ಲಿ ರಕ್ತದೊತ್ತಡವು ಕುಸಿಯುವುದು ಕೂಡ ಪ್ರಮುಖ ಸಮಸ್ಯೆ. ಕಡಿಮೆ ರಕ್ತದೊತ್ತಡವೆಂದರೆ ಅಪಧಮನಿಯಲ್ಲಿ ರಕ್ತದೊತ್ತಡವು ಕಡಿಮೆಯಾಗುವುದು. ಇದರಿಂದ ರಕ್ತ ಸಂಚಾರದ ಮೇಲೆ ಅಸಾಮಾನ್ಯ ಪರಿಣಾಮ ಉಂಟಾಗುವುದು.

ಗರ್ಭಧಾರಣೆ ವೇಳೆ ಕಾಲಿನಲ್ಲಿ ರಕ್ತ ಸಂಚಯನವಾಗುವುದು ಕೂಡ ರಕ್ತದೊತ್ತಡ ಕಡಿಮೆಯಾಗಲು ಪ್ರಮುಖ ಕಾರಣವಾಗಿದ್ದು, ಮೆದುಳು ಮತ್ತು ದೇಹದ ಇತರ ಭಾಗಗಳಿಗೆ ಸರಿಯಾಗಿ ರಕ್ತ ಪೂರೈಕೆಯಾಗುವುದಿಲ್ಲ. ಇದರಿಂದಾಗಿ ಗರ್ಭಿಣಿಯರಲ್ಲಿ ನಿಶ್ಯಕ್ತಿ ಮತ್ತು ಹಗುರ ತಲೆನೋವು ಕಾಣಿಸುವುದು. ನಿರ್ಜಲೀಕರಣದಿಂದಲೂ ರಕ್ತದೊತ್ತಡ ಕುಸಿಯುವುದು. 

ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ಜೀವಕ್ಕೆ ಸಂಚಕಾರ

ಅಲ್ಲದೆ ಹೆಚ್ಚು ನೀರು ಸೇವಿಸದೆ ಇರುವುದು ಮತ್ತು ಬಿಸಿಲಿಗೆ ಮೈಯೊಡ್ಡಿಕೊಳ್ಳುವ ಕಾರಣ ನಿರ್ಜಲೀಕರಣವಾಗಬಹುದು. ದೇಹದಲ್ಲಿರುವ ನೀರಿನಾಂಶವು ದೇಹದ ರಕ್ತಸಂಚಾರದ ಮೇಲೆ ನೇರ ಪರಿಣಾಮ ಬೀರುವುದು. ಗರ್ಭಧಾರಣೆ ವೇಳೆ ರಕ್ತದೊತ್ತಡ ಕುಸಿಯುವ ಸಾಮಾನ್ಯ ಲಕ್ಷಣಗಳು ನಿಶ್ಯಕ್ತಿ, ಆಯಾಸ, ದೃಷ್ಟಿ ಮಂದವಾಗುವುದು ಮತ್ತು ಅಸಾಮಾನ್ಯ ಎದೆಬಡಿತ.

ಈ ಲಕ್ಷಣಗಳು ಗರ್ಭದಲ್ಲಿರುವ ಮಗು ಮತ್ತು ತಾಯಿಯ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ಸಮಯಕ್ಕೆ ಮೊದಲೇ ಹರಿಗೆ, ಮಗುವಿನಲ್ಲಿ ಅಂಗವೈಕಲ್ಯ ಮತ್ತು ತಾಯಿಯಲ್ಲಿ ದೃಷ್ಟಿ ಮಾಂದ್ಯತೆ ಕಾಣಿಸಿಕೊಳ್ಳಬಹುದು. ರಕ್ತದೊತ್ತಡ ಕುಸಿಯದಂತೆ ಏನು ಮಾಡಬೇಕು ಎಂದು ಮುಂದೆ ಓದುತ್ತಾ ತಿಳಿಯಿರಿ....

ಸಣ್ಣ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸುತ್ತಾಯಿರಿ

ಸಣ್ಣ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸುತ್ತಾಯಿರಿ

ಗರ್ಭಿಣಿ ಮಹಿಳೆಯರಲ್ಲಿ ರಕ್ತದೊತ್ತಡ ಕುಸಿದಂತೆ ಮಾಡಲು ದಿನದಲ್ಲಿ ಹಲವಾರು ಸಲ ಸಣ್ಣ ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸಬೇಕು. ದಿನದಲ್ಲಿ ಐದು ಸಲ ಊಟ ಮಾಡಲು ಕೆಲವು ಗರ್ಭಿಣಿಯರಿಗೆ ಸೂಚಿಸಲಾಗುತ್ತದೆ.

ಕಡಿಮೆ ಕಾರ್ಬ್ ಇರುವ ಆಹಾರ

ಕಡಿಮೆ ಕಾರ್ಬ್ ಇರುವ ಆಹಾರ

ಆಲೂಗಡ್ಡೆ, ಬ್ರೆಡ್, ಪಾಸ್ತಾ ಇತ್ಯಾದಿಯಂತಹ ಹೆಚ್ಚಿನ ಕಾರ್ಬ್ಸ್ ಇರುವ ಆಹಾರ ಕಡೆಗಣಿಸಿ.

ಹೆಚ್ಚೆಚ್ಚು ನೀರು ಕುಡಿಯಿರಿ...

ಹೆಚ್ಚೆಚ್ಚು ನೀರು ಕುಡಿಯಿರಿ...

ಗರ್ಭಿಣಿ ಮಹಿಳೆಯರು ಯಾವಾಗಲೂ ಹೆಚ್ಚಿನ ನೀರಿನಾಂಶ ಸೇವನೆ ಮಾಡುತ್ತಾ ಇರುವುದು ಅಗತ್ಯ. ಅದರಲ್ಲೂ ನೀರು, ಜ್ಯೂಸ್ ಅಥವಾ ಇತರ ಆರೋಗ್ಯಕಾರಿ ಪಾನೀಯ ಸೇವಿಸಬೇಕು.

ಚಿಟಿಕೆ ಉಪ್ಪು-ಸ್ವಲ್ಪ ಸಕ್ಕರೆಯನ್ನು ನೀರಿಗೆ ಹಾಕಿ ಕಲಸಿಕೊಂಡು ಕುಡಿಯಿರಿ

ಚಿಟಿಕೆ ಉಪ್ಪು-ಸ್ವಲ್ಪ ಸಕ್ಕರೆಯನ್ನು ನೀರಿಗೆ ಹಾಕಿ ಕಲಸಿಕೊಂಡು ಕುಡಿಯಿರಿ

ರಕ್ತದೊತ್ತಡ ಕುಸಿದಾಗ ಒಂದು ಚಿಟಿಕೆ ಉಪ್ಪು ಮತ್ತು ಸ್ವಲ್ಪ ಸಕ್ಕರೆಯನ್ನು ಒಂದು ಲೋಟ ನೀರಿಗೆ ಹಾಕಿ ಕಲಸಿಕೊಂಡು ಕುಡಿಯಿರಿ. ಈ ನೀರನ್ನು ದಿನದಲ್ಲಿ ಎರಡು ಸಲ ಸೇವಿಸಿದರೆ ಒಳ್ಳೆಯದು. ಆದರೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಅಗತ್ಯ. ಈ ನಾಲ್ಕು ಕ್ರಮಗಳನ್ನು ಪಾಲಿಸಿದರೆ ಗರ್ಭಿಣಿ ಮಹಿಳೆಯರಲ್ಲಿ ಕಾಣಿಸುವಂತಹ ರಕ್ತದೊತ್ತಡವು ಕಡಿಮೆಯಾಗುವುದು.

ಕಡಿಮೆ ರಕ್ತದೊತ್ತಡದಿ೦ದ ಬಳಲುತ್ತಿದ್ದೀರಾ? ಇಲ್ಲಿದೆ ಪರಿಹಾರ

English summary

Low Blood Pressure During Pregnancy

Low blood pressure during pregnancy is caused basically due the tendency of blood pooling in the leg during pregnancy. This makes less blood available to the brain and the rest of the body. Thus, one may feel dizziness and light-headedness during pregnancy. The next cause of low blood pressure during pregnancy is dehydration. Factors contributing to dehydration is lack of fluid intake and exposure to heat. Inappropriate fluid in the body can directly effect the way blood flows in the body.
Subscribe Newsletter