ಹೊಟ್ಟೆಯಲ್ಲಿರುವಾಗಲೇ ಮಗು, ಅಮ್ಮನೊಂದಿಗೆ ಮಾತನಾಡಲು ಶುರು ಮಾಡುತ್ತದೆ!

Posted By: Jaya Subramanya
Subscribe to Boldsky

ತಾಯಿ ಮತ್ತು ಮಗುವಿನ ಬಾಂಧವ್ಯ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದುದು. ಇವರಿಬ್ಬರ ಸಂಬಂಧವನ್ನು ವಿವರಿಸಲು ಪದಗಳು ಸಾಲದು. ತಾಯಿ ಗರ್ಭಾವಸ್ಥೆಯಲ್ಲಿಯೇ ತನ್ನ ಮಗುವಿನ ಚಲನ ವಲನಗಳನ್ನು ಅರಿತುಕೊಳ್ಳುವುದು ಇದಕ್ಕಾಗಿಯೇ. ಮಗುವಿನ ಮತ್ತು ತಾಯಿಯ ಆರೋಗ್ಯದ ದೃಷ್ಟಿಯಲ್ಲಿ ಮೊದಲ ಮೂರು ತಿಂಗಳು ಹೆಚ್ಚಿನ ಕಾಳಜಿಯನ್ನು ತಾಯಿ ವಹಿಸಬೇಕು. ತಾಯಿಯಾಗುವುದು ಯಾವುದೇ ಹೆಣ್ಣಿಗೆ ಅತ್ಯಂತ ಸಂತಸದ ಕ್ಷಣ, ಮೊದಲ ಮೂರು ತಿಂಗಳು ತಾಯಿಗೆ ಬಳಲಿಕೆ ಸುಸ್ತು ಹೆಚ್ಚಾಗಿರುತ್ತದೆ.

ವಾಂತಿ, ತಲೆಸುತ್ತು, ಹೊಟ್ಟೆ ತೊಳೆಸುವಿಕೆ ಹೀಗೆ ಮೊದಲಾದ ಕಾಯಿಲೆಗಳನ್ನು ತಾಯಿಯು ಅನುಭವಿಸುತ್ತಾರೆ. ಅಂತೆಯೇ ಮಾಸಗಳು ಕಳೆದಂತೆ ಮಗುವು ತಾಯಿಯ ಚಲನೆಗಳಿಗೆ ಪ್ರತಿಸ್ಪಂದಿಸುತ್ತದೆ. ತಾಯಿಯ ಸ್ಪರ್ಶದ ಅನುಭವವನ್ನು ಮಗುವು ಅನುಭವಿಸಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಮಗು ಮೈಮುರಿಯುವುದು, ಒದೆಯುವುದು ಮೊದಲಾದ ಕ್ರಿಯೆಗಳು ತಾಯಿಯ ಗಮನಕ್ಕೆ ಬರುತ್ತದೆ.

ಗರ್ಭಾವಸ್ಥೆಯಲ್ಲಿ ಕಾಡುವ ಸಮಸ್ಯೆಗಳಿಗೆ ಸುಲಭ ಪರಿಹಾರಗಳು

ಇಂದಿನ ಲೇಖನದಲ್ಲಿ ನೀವು ಮಗುವಿನೊಂದಿಗೆ ಯಾವ ರೀತಿಯಲ್ಲಿ ಸಂವಹನ ನಡೆಸುವುದು ಎಂಬುದನ್ನು ತಿಳಿಸುತ್ತಿದ್ದೇವೆ. ಮಗುವು ತಾಯಿಯ ಗರ್ಭದಲ್ಲಿರುವಾಗಲೇ ತಾಯಿಯೊಂದಿಗೆ ಸಂವಹನ ನಡೆಸಲು ಆರಂಭಿಸುತ್ತದೆ. ಇದರಿಂದ ತಾಯಿ ಮತ್ತು ಮಗುವಿನ ಅನುಬಂಧ ಗಟ್ಟಿಯಾಗುತ್ತದೆ.... 

 ಸಂಭಾಷಣೆ ನಡೆಸಿ

ಸಂಭಾಷಣೆ ನಡೆಸಿ

23 ನೇ ವಾರದಲ್ಲಿ ಭ್ರೂಣವು ಮಾತುಗಳನ್ನು ಆಲಿಸಲು ಆರಂಭಿಸುತ್ತದೆ. ಮೊತ್ತ ಮೊದಲನೆಯದಾಗಿ ಮಗುವು ತಾಯಿಯ ಮಾತುಗಳನ್ನು ಆಲಿಸಲು ಪ್ರಾರಂಭಿಸುತ್ತದೆ. ತಾಯಿಯ ಹೃದಯದ ಬಡಿತವನ್ನು ಆಲಿಸಲು ತೊಡಗುತ್ತದೆ. ಅದಕ್ಕಾಗಿಯೇ ಮಗುವು ಜನಿಸಿದೊಡನೆ ತನ್ನ ತಾಯಿಯ ಮಾತುಗಳನ್ನು ಆಲಿಸಲು ಮುಂದಾಗುತ್ತದೆ. ಮಗುವಿನೊಂದಿಗೆ ನೀವು ಆಡುವ ಮಾತುಗಳನ್ನು ಕೇಳಿಸಲು ಆರಂಭಿಸುತ್ತದೆ. ಮಗುವಿನೊಂದಿಗೆ ಸಂಭಾಷಿಸಲು ತೊಡಗಿ. ಇದರಿಂದ ನಿಮ್ಮ ಮಗು ಹಾಗೂ ನಿಮ್ಮ ನಡುವಿನ ಬಾಂಧವ್ಯ ಉತ್ತಮವಾಗಿರುತ್ತದೆ.

ಸಂಗೀತವನ್ನು ಆಸ್ವಾದಿಸಿ

ಸಂಗೀತವನ್ನು ಆಸ್ವಾದಿಸಿ

ಸಂಗೀತವು ನಿಮ್ಮ ಆತ್ಮಕ್ಕೆ ಆನಂದವನ್ನುಂಟು ಮಾಡುತ್ತದೆ. ನೀವು ಹೆಚ್ಚಿನ ಒತ್ತಡದಲ್ಲಿದ್ದಾಗ ಸಂಗೀತವನ್ನು ಆಲಿಸಿ ಮತ್ತು ಮಗುವಿಗೂ ಇದರಿಂದ ಖುಷಿ ಸಿಗುತ್ತದೆ. ಸಂಗೀತದ ಆಸ್ವಾದನೆಯಲ್ಲಿ ನೀವು ಮತ್ತು ಮಗು ಇಬ್ಬರು ಮಾತ್ರ ಇರುವುದು ಆದ್ದರಿಂದ ಸಾಧ್ಯವಾದಲ್ಲಿ ನೀವೇ ಹಾಡಿ.

 ಮಸಾಜ್ ಮಾಡಿ

ಮಸಾಜ್ ಮಾಡಿ

ನೀವು ಹೊಟ್ಟೆಯನ್ನು ಮುಟ್ಟಿದಾಗ ಮಗುವು ಆ ಸ್ಪರ್ಶವನ್ನು ಆನಂದಿಸುತ್ತದೆ. ಮಗುವು ತಾಯಿ ಹಾಗೂ ಇತರರ ನಡುವಿನ ಸ್ಪರ್ಶವನ್ನು ಗಮನಿಸುತ್ತದೆ. ನೀವು ವಿಶ್ರಾಂತಿ ತೆಗೆದುಕೊಳ್ಳಲು ಕುಳಿತಿರುವಾಗ ಸ್ವಲ್ಪ ಹೊತ್ತು ಹೊಟ್ಟೆಯ ಮೇಲೆ ಕೈಯಾಡಿಸಿ, ಮಸಾಜ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಮಗುವಿಗೆ ನಿಮ್ಮ ಸ್ಪರ್ಶದ ಆನಂದ ಸಿಗುತ್ತದೆ.

ಒದೆತವನ್ನು ಆಸ್ವಾದಿಸಿ

ಒದೆತವನ್ನು ಆಸ್ವಾದಿಸಿ

ಎರಡನೇ ತಿಂಗಳಿನಲ್ಲಿಯೇ ಮಗುವು ಹೊಟ್ಟೆಯಲ್ಲಿ ಕೈಕಾಲು ಆಡಿಸಲು, ಒದೆಯಲು ಆರಂಭಿಸುತ್ತದೆ. ಭ್ರೂಣದ ಸುತ್ತಲೂ ಮಗುವು ತಿರುಗಲು ಆರಂಭಿಸುತ್ತದೆ. ಈ ಒದೆತಗಳು ನಿಮ್ಮ ಮತ್ತು ಮಗುವಿನ ಸಂವಹನ ಆರಂಭಿಸಲು ಸೂಚನೆಯಾಗಿದೆ.

ತಾಯಿ ಮತ್ತು ತಂದೆಯ ಒಳಗೊಳ್ಳುವಿಕೆ

ತಾಯಿ ಮತ್ತು ತಂದೆಯ ಒಳಗೊಳ್ಳುವಿಕೆ

ಒಂಭತ್ತು ತಿಂಗಳ ಈ ಪ್ರಯಾಣದಲ್ಲಿ ತಾಯಿಯೊಂದಿಗೆ ಮಗುವಿನ ತಂದೆಯ ಒಳಗೊಳ್ಳುವಿಕೆ ಕೂಡ ಅತಿ ಮುಖ್ಯವಾದುದು. ಆದ್ದರಿಂದ ತಂದೆಯ ಸಾಮಿಪ್ಯ ಕೂಡ ಮಗುವಿಗೆ ದೊರೆಯುವಂತೆ ಮಾಡಿ. ತಾಯಿ ಮತ್ತು ತಂದೆ ಜೊತೆಯಾಗಿ ಮಗುವಿನೊಂದಿಗೆ ಮಾತನಾಡಿ.

ಪರಿಸರವನ್ನು ಆಸ್ವಾದಿಸಿ

ಪರಿಸರವನ್ನು ಆಸ್ವಾದಿಸಿ

ಗರ್ಭಾವಸ್ಥೆಯಲ್ಲಿ ಆನಂದ ಮತ್ತು ವಿಶ್ರಾಂತಿಯನ್ನು ತಾಯಿ ಹೆಚ್ಚು ಪಡೆಯಬೇಕು. ನಿಮ್ಮ ಮನೆಯ ಸಮೀಪವಿರುವ ಉದ್ಯಾನವನಕ್ಕೆ ಹೋಗಿ ಅಲ್ಲಿ ಸುತ್ತಾಡಿ ಮತ್ತು ಅಲ್ಲಿನ ತಂಪು ಗಾಳಿಯನ್ನು ಆಸ್ವಾದಿಸಿ. ಹಸಿರನ್ನು ಆನಂದಿಸಿ. ನೀವು ನಡೆಯುವಾಗ ನೀವು ನೋಡುತ್ತಿರುವ ಅಂಶವನ್ನು ಮಗುವಿನೊಂದಿಗೆ ಸಂವಹನ ನಡೆಸಿ. ನಡೆಯುವಿಕೆಯನ್ನು ನಿಮ್ಮ ದೈನಂದಿನ ಹವ್ಯಾಸದಲ್ಲಿ ಅಳವಡಿಸಿಕೊಳ್ಳಿ. ಇದು ನಿಮ್ಮ ಹೆರಿಗೆ ಸಮಯಕ್ಕೆ ಸಹಾಯ ಮಾಡುತ್ತದೆ.

ಸುಖವಾದ ಸ್ನಾನವನ್ನು ಮಾಡಿ

ಸುಖವಾದ ಸ್ನಾನವನ್ನು ಮಾಡಿ

ನಿಮ್ಮ ಮನಸ್ಸು ಮತ್ತು ದೇಹವನ್ನು ಹಗುವಾಗಿರಿಸುವುದರಿಂದ ಮಗುವಿಗೂ ಆನಂದವನ್ನು ನೀಡುತ್ತದೆ. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನವನ್ನು ಮಾಡಿ. ಮೃದುವಾದ ಸಂಗೀತವನ್ನು ಆಸ್ವಾದಿಸಿಕೊಂಡು ಸ್ನಾನವನ್ನು ಮಾಡಿ. ನೀರು ಹೆಚ್ಚು ಬಿಸಿಯಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಗರ್ಭಾವಸ್ಥೆಯ ಯೋಗಾಭ್ಯಾಸ ಮಾಡಿ

ಗರ್ಭಾವಸ್ಥೆಯ ಯೋಗಾಭ್ಯಾಸ ಮಾಡಿ

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರು ಮಾಡಬಹುದಾದ ಕೆಲವೊಂದು ಯೋಗಗಳನ್ನು ಅಭ್ಯಾಸ ನಡೆಸಿ. ಇದರಿಂದ ಸರಳವಾದ ಉಸಿರಾಟ ಗರ್ಭಿಣಿಯದಾಗುತ್ತದೆ. ತಜ್ಞರ ಸಹಾಯದಿಂದ ಸುರಕ್ಷಿತವಾದ ಯೋಗಾಭ್ಯಾಸವನ್ನು ನಡೆಸಿ. ಎರಡನೆಯ ಗರ್ಭಾವಸ್ಥೆಯಿಂದ ಯೋಗ ಮಾಡಲು ಆರಂಭಿಸಿ ಅದಕ್ಕೂ ಮುಂಚೆ ಯಾವ ಬಗೆಯ ಯೋಗವನ್ನು ಮಾಡಬೇಡಿ..ಯಾವುದಕ್ಕೂ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯಿರಿ...

English summary

how-to-develop-more-bonding-with-your-baby-bump

The relationship between a mother and child is the most beautiful one in the world. There are no words to describe it to the point. Something that is going to last a lifetime starts earlier on in the womb even before the first meeting happens.Strange, isn't it? In this practical world, it is not quite possible but the mother-child bond is an exception.There are many ways to spend time with your baby bump and listed below are eight of them. Check them out.