ದೀಪಾವಳಿ ಹಬ್ಬ ಬರುತ್ತಿದೆ, ಗರ್ಭಿಣಿಯರೇ ಎಚ್ಚರ ವಹಿಸಿ...

By: Jaya subramanya
Subscribe to Boldsky

ಗರ್ಭಾವಸ್ಥೆಯಲ್ಲಿರುವಾಗ ಹೆಣ್ಣಿಗೆ ಪ್ರತಿಯೊಂದು ಹೆಜ್ಜೆಯನ್ನೂ ಮುನ್ನೆಚ್ಚರಿಕೆಯಿಂದ ಇಡಬೇಕಾಗುತ್ತದೆ. ಅದರಲ್ಲೂ ಆಕೆ ತನ್ನೊಂದಿಗೆ ತನ್ನ ಮಗುವನ್ನೂ ಕಾಪಾಡುವುದು ಮುಖ್ಯವಾಗಿರುವುದರಿಂದ ಹೆಣ್ಣಿಗೆ ತಾಯ್ತನವೆಂಬುದು ಕೊಂಚ ಜವಬ್ದಾರಿಯ ಕಾರ್ಯವೇ ಆಗಿದೆ. ಇನ್ನೇನು ದೀಪಾವಳಿ ಸಮೀಪದಲ್ಲಿ ಆಗಮಿಸುತ್ತಿದೆ.

ಈ ಸಂದರ್ಭದಲ್ಲಿ ಮನೆಗೆ ಬರುವ ನೆಂಟರಿಷ್ಟರು, ಹಬ್ಬದ ಸಂಭ್ರಮ ಹೀಗೆ ಆಕೆ ಕೂಡ ಮನೆಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಇದ್ದೇ ಇರುತ್ತದೆ. ಆದರೆ ಹಬ್ಬದ ಸಂಭ್ರಮದಲ್ಲಿ ಪೂರ್ಣವಾಗಿ ಮುಳುಗಿ ಹೋಗದಂತೆ ಕೂಡ ಆಕೆ ಎಚ್ಚರವಹಿಸಬೇಕಾಗುತ್ತದೆ. ದೀಪಾವಳಿಯ ಸಂಭ್ರಮದಲ್ಲಿ ಪಟಾಕಿಗಳು ಇದ್ದೇ ಇರುತ್ತವೆ. ಈ ರಾಸಾಯನಿಕಗಳು ತಾಯಿ ಮತ್ತು ಮಗುವಿಗೆ ಹಾನಿಯನ್ನುಂಟು ಮಾಡಬಹುದಾಗಿವೆ. 

ದೀಪಾವಳಿಯ ಅವಧಿಯಲ್ಲಿ ಗರ್ಭಿಣಿ ಸ್ತ್ರೀಯರು ಎಚ್ಚರಿಕೆಯಿಂದಿರಬೇಕು!

ಹಾಗಿದ್ದರೆ ಹಬ್ಬದ ಸಂಭ್ರಮದಲ್ಲಿ ಕೂಡ ನಿಮ್ಮ ರಕ್ಷಣೆಯನ್ನು ನೀವು ಹೇಗೆ ಮಾಡಿಕೊಳ್ಳಬಹುದು ಎಂಬ ಕೆಲವೊಂದು ಸಲಹೆಗಳೊಂದಿಗೆ ನಾವು ಬಂದಿದ್ದು ಇದು ನಿಮ್ಮನ್ನು ಹೊಗೆ, ಧೂಳು ಮೊದಲಾದವುಗಳಿಂದ ಹೇಗೆ ಗರ್ಭಿಣಿಯನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ತಿಳಿಸಲಿದೆ. ಹಾಗಿದ್ದರೆ ಬನ್ನಿ ಆ ಸಲಹೆಗಳೇನು ಎಂಬುದನ್ನು ಅರಿತುಕೊಳ್ಳೋಣ...

ಹೊಗೆ, ಧೂಳಿನಿಂದ ದೂರವಿರಿ

ಹೊಗೆ, ಧೂಳಿನಿಂದ ದೂರವಿರಿ

ಪಟಾಕಿಗಳು ಸುಟ್ಟು ಸ್ಟೋಟಗೊಂಡಾಗ ಇವುಗಳಲ್ಲಿರುವ ರಾಸಾಯನಿಕಗಳಾದ ಕಾರ್ಬನ್ ಮೋನೋಕ್ಸೈಡ್ ಮತ್ತು ನಿಟ್ರಸ್ ಆಕ್ಸೈಡ್ ಹಾನಿಕಾರಕ ಗ್ಯಾಸ್‌ಗಳಾಗಿವೆ. ಇದನ್ನು ಉಸಿರಾಡುವುದು ಗರ್ಭಿಣಿಗೆ ಅಪಾಯವನ್ನುಂಟು ಮಾಡಬಹುದು. ಈ ಸಂದರ್ಭದಲ್ಲಿ ದೂರವಿರುವುದು ಉಚಿತವಾಗಿದೆ. ಇಲ್ಲದಿದ್ದರೆ ಮಾಸ್ಕ್‌ಗಳನ್ನು ಧರಿಸಿ ಇಂತಹ ವಾತಾವರಣಲ್ಲಿ ಒಳಿತಾಗಿದೆ.

ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡದಿರಿ

ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡದಿರಿ

ನೀವು ಮನೆಯೊಡತಿಯಾಗಿದ್ದಲ್ಲಿ ದೀಪಾವಳಿ ಸಮಯದಲ್ಲಿ ಹೆಚ್ಚಿನ ಕೆಲಸಗಳನ್ನು ನೀವು ನಿಮ್ಮನ್ನು ತೊಡಗಿಸಿಕೊಳ್ಳಬೇಕಾಗುತ್ತದೆ. ಆದರೆ ಕೆಲಸ ಕಾರ್ಯಗಳನ್ನು ಮಾಡದೇ ಇರಿ ಎಂದು ನಾವು ಇಲ್ಲಿ ಹೇಳುತ್ತಿಲ್ಲ. ಬದಲಿಗೆ ಅತಿಯಾಗಿ ಕೆಲಸಗಳನ್ನು ನಿಮ್ಮನ್ನು ತೊಡಗಿಸಿಕೊಳ್ಳದಿರಿ. ಮನೆಯನ್ನು ಸ್ವಚ್ಛಗೊಳಿಸುವಾಗ ಮಾಸ್ಕ್‌ಗಳನ್ನು ಧರಿಸಿ ಇಲ್ಲದಿದ್ದರೆ ಮನೆಗೆಲಸದವರನ್ನು ನೇಮಿಸಿಕೊಂಡು ಈ ಕೆಲಸವನ್ನು ಮುಗಿಸಿ.

ಹತ್ತಿಯ ಬಟ್ಟೆಗಳನ್ನು ಧರಿಸಿ

ಹತ್ತಿಯ ಬಟ್ಟೆಗಳನ್ನು ಧರಿಸಿ

ನೀವು ಪಟಾಕಿಗಳನ್ನು ಸುಡುವ ಸಂದರ್ಭದಲ್ಲಿ ಆದಷ್ಟು ಹತ್ತಿಯ ಬಟ್ಟೆಗಳನ್ನು ಧರಿಸುವುದು ಒಳಿತು. ಏಕೆಂದರೆ ಸಮಯ ಸಂದರ್ಭಗಳು ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಆದ್ದರಿಂದ ಹತ್ತಿಯ ಬಟ್ಟೆಗಳನ್ನು ಧರಿಸಿಕೊಂಡೇ ಓಡಾಡುವುದು ಒಳಿತು.

ಹೆಚ್ಚಿನ ಸದ್ದುಗದ್ದಲಗಳಿಂದ ದೂರವಿರಿ

ಹೆಚ್ಚಿನ ಸದ್ದುಗದ್ದಲಗಳಿಂದ ದೂರವಿರಿ

ಗರ್ಭಿಣಿಯರು ಹಚ್ಚು ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರಂತೆ. ಆದ್ದರಿಂದ ಹೆಚ್ಚಿನ ಸದ್ದುಗದ್ದಲಗಳಿಂದ ನಿಮಗೆ ಕಿರಿಕಿರಿಯುಂಟಾಗುವುದು ಸಹಜವಾಗಿರುತ್ತದೆ. ನಿಮ್ಮ ಸ್ಥಳದಲ್ಲಿ ಭಾರೀ ಸದ್ದುಮಾಡುವ ಪಟಾಕಿಗಳನ್ನು ಸ್ಫೋಟಿಸುತ್ತಿದ್ದಾರೆ ಎಂದಾದಲ್ಲಿ ಆ ಸ್ಥಳದಿಂದ ದೂರವಿರುವುದು ಒಳಿತಾಗಿದೆ. ಅಂತೆಯೇ ಹೆಚ್ಚಿನ ಸಂಗೀತಗಳಿಂದ ಕೂಡ ದೂರವಿರಿ.

ಕಿರಿಕಿರಿಯುಂಟು ಮಾಡುವ ವಸ್ತುಗಳಿಂದ ದೂರವಿರಿ

ಕಿರಿಕಿರಿಯುಂಟು ಮಾಡುವ ವಸ್ತುಗಳಿಂದ ದೂರವಿರಿ

ಈ ಸಮಯದಲ್ಲಿ ಗರ್ಭಿಣಿಯ ದೇಹವು ಹೆಚ್ಚು ಸೂಕ್ಷ್ಮವಾಗಿರುವುದರಿಂದ ಆಕೆ ಮತ್ತು ಆಕೆಯ ಮನೆಯವರು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಬ್ಬದ ಸಮಯದಲ್ಲಿ ಕೆಲವರು ಮನೆಗಳಿಗೆ ಪೇಂಟ್ ಹಚ್ಚುತ್ತಾರೆ. ಇದರ ವಾಸನೆ ಕೂಡ ಗರ್ಭಿಣಿಗೆ ಅಸಹನೆಯನ್ನುಂಟು ಮಾಡಬಹುದು. ಭ್ರೂಣಕ್ಕೆ ಅಪಾಯವನ್ನು ತರಬಹುದು. ಧೂಳಿನಿಂದ ಕೂಡ ಆದಷ್ಟು ದೂರವಿರುವುದು ಆಕೆಗೆ ಒಳಿತಾಗಿದೆ.

ನಿಮ್ಮ ಆಹಾರವನ್ನು ಗಮನಿಸಿ

ನಿಮ್ಮ ಆಹಾರವನ್ನು ಗಮನಿಸಿ

ಹಬ್ಬದ ಸಂದರ್ಭದಲ್ಲಿ ಬಗೆಬಗೆ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುತ್ತಾರೆ. ಆದರೆ ಗರ್ಭಿಣಿಯರು ಆಹಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು. ಬೇಕಾಬಿಟ್ಟಿಯಾಗಿ ಆಹಾರ ಸೇವನೆ ಮಾಡದೇ ಎಷ್ಟು ಬೇಕೋ ಅಷ್ಟು ಅಂದರೆ ಹಿತಮಿತವಾಗಿ ಆಹಾರವನ್ನು ಸೇವಿಸುವುದು ಒಳಿತಾಗಿದೆ.

ತುರ್ತು ಪರಿಸ್ಥಿತಿಯ ವಸ್ತುಗಳು ನಿಮ್ಮ ಬಳಿ ಸದಾ ಇರಲಿ

ತುರ್ತು ಪರಿಸ್ಥಿತಿಯ ವಸ್ತುಗಳು ನಿಮ್ಮ ಬಳಿ ಸದಾ ಇರಲಿ

ದೀಪಾವಳಿಯನ್ನು ಗರ್ಭಿಣಿ ಕೂಡ ಆನಂದಿಸಬೇಕು. ಆದರೆ ಆನಂದದ ಜೊತೆಗೆ ನಿಮ್ಮನ್ನು ನೀವು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯವಾಗಿದೆ. ಆದ್ದರಿಂದ ಈ ಕೆಲವೊಂದು ವಸ್ತುಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ

ನೀರಿನ ಟ್ಯೂಬ್

ಅಗ್ನಿರಕ್ಷಕ

ಜೀವ ಉಳಿಸುವ ಔಷಧಗಳು

ಮೆಡಿಕಲ್ ಕಿಟ್

ತುರ್ತು ಪರಿಸ್ಥಿತಿ ಸಂಖ್ಯೆಗಳು, ಆಂಬುಲೆನ್ಸ್, ಅಗ್ನಿಶಾಮಕ ದಳದ ಸಂಖ್ಯೆ ಇದರಲ್ಲಿ ಒಳಗೊಂಡಿರಲಿ.

English summary

How To Survive Diwali When Pregnant

If you are pregnant, you need to be cautious and take precautions for your well-being and that of your unborn child. Today, let us take a look at the ways that you can protect yourself from the adverse effects of the Diwali season. We shall talk about tips and precautions that can be takenby a mother to be. Read on to know more.
Subscribe Newsletter