For Quick Alerts
ALLOW NOTIFICATIONS  
For Daily Alerts

ಮೂರನೇ ತಿಂಗಳಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು?

ಗರ್ಭಿಣಿಯರು ಮೂರನೇ ತಿಂಗಳ ಅವಧಿಯಲ್ಲಿ ಸೇವಿಸುವ ಆಹಾರಗಳ ಬಗ್ಗೆ, ದೈಹಿಕ ಚಟುವಟಿಕೆಯ ಬಗ್ಗೆ ಅತೀವ ಕಾಳಜಿ ವಹಿಸಬೇಕು. ಏಕೆಂದರೆ ಇವುಗಳಲ್ಲಿ ಕೊಂಚ ಏರುಪೇರಾದರೂ ಗರ್ಭಪಾತದ ಸಾಧ್ಯತೆ ಹೆಚ್ಚುತ್ತದೆ.

By Manu
|

ಗರ್ಭಾವಸ್ಥೆ ಪ್ರತಿ ಹೆಣ್ಣಿನ ಒಂದು ಕನಸು ಹಾಗೂ ತಾಯ್ತನದ ಅನುಭವದ ರೋಮಾಂಚನದ ಅವಧಿಯಾಗಿದೆ. ಅದರಲ್ಲಿ ಪ್ರಥಮ ಮೂರು ತಿಂಗಳು ಅತಿ ಮುಖ್ಯವಾಗಿದ್ದು ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಈ ಸಮಯದಲ್ಲಿ ಸೇವಿಸುವ ಆಹಾರಗಳ ಬಗ್ಗೆ, ದೈಹಿಕ ಚಟುವಟಿಕೆಯ ಬಗ್ಗೆ ಅತೀವ ಕಾಳಜಿ ವಹಿಸಬೇಕು. ಏಕೆಂದರೆ ಇವುಗಳಲ್ಲಿ ಕೊಂಚ ಏರುಪೇರಾದರೂ ಗರ್ಭಪಾತದ ಸಾಧ್ಯತೆ ಹೆಚ್ಚುತ್ತದೆ.

ಈ ಅವಧಿಯಲ್ಲಿ ಸೇವಿಸುವ ಪ್ರತಿ ಆಹಾರವೂ ತಾಯಿಯಾಗುವವಳ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮೂರನೆಯ ತಿಂಗಳಲ್ಲಿ ದೇಹ ಹಲವು ಪ್ರಮುಖ ಬದಲಾವಣೆಗಳಿಗೆ ಒಳಪಡುತ್ತದೆ. ಇದುವರೆಗೆ ಅನುಭವಕ್ಕೆ ಬರದೇ ಇದ್ದ ಮಗುವಿನ ಇರುವಿಕೆ ಈಗ ನಿಧಾನವಾಗಿ ಗಮನಕ್ಕೆ ಬರತೊಡಗುತ್ತದೆ. ಈ ಸಮಯದಲ್ಲಿಯೇ ಮಗುವಿನ ಹೃದಯ, ಮೂತ್ರಪಿಂಡ, ಕಣ್ಣುಗಳು, ಜನನಾಂಗಗಳು, ಧ್ವನಿಪೆಟ್ಟಿಗೆ ಮೊದಲಾದವುಗಳ ಮೊದಲ ಜೀವಕೋಶಗಳು ರೂಪುಗೊಳ್ಳತೊಡಗುತ್ತವೆ.

ಆದ್ದರಿಂದ ಈ ಅವಧಿಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುವುದು ತಾಯಿಗೆ ಅಗತ್ಯವಾಗಿದೆ. ಪ್ರಥಮವಾಗಿ ಪ್ರತಿ ಗರ್ಭಿಣಿಗೂ ನೀಡುವ ಎಚ್ಚರಿಕೆ ಏನೆಂದರೆ ಯಾವುದೇ ಸಮಯದಲ್ಲಿ ಪಪ್ಪಾಯಿಯನ್ನು ಸೇವಿಸಕೂಡದು. ಏಕೆಂದರೆ ಇದು ಗರ್ಭಪಾತಕ್ಕೆ ನೇರವಾದ ಗುಳಿಗೆಯಾಗಿದೆ.

ಆರನೆಯ ತಿಂಗಳಿನಲ್ಲಿ ಗರ್ಭಾವಸ್ಥೆಯ ಕಾಳಜಿ ಹೇಗೆ?

ಅಷ್ಟೇ ಅಲ್ಲ, ಸಂರಕ್ಷಕ, ಕೃತಕ ಬಣ್ಣ, ಕೃತಕ ರುಚಿ ಸೇರಿಸಿದ ಯಾವುದೇ ಆಹಾರ ನಿಮಗೆ ಸಲ್ಲದು. ವಿಶೇಷವಾಗಿ ಬುರುಗು ಬರುವ ಲಘು ಪಾನೀಯಗಳೂ ನಿಮಗೆ ಸೂಕ್ತವಲ್ಲ. ಹಣ್ಣಿನ ಆಕರ್ಷಕ ಚಿತ್ರಗಳನ್ನು ಮುದ್ರಿಸಿ ಹಣ್ಣಿನರಸ ಎಂಬಂತೆ ಆ ಹಣ್ಣಿನ ರುಚಿ ಇರುವ ಕೃತಕ ದ್ರವಗಳನ್ನೂ(fruit flavoured drink) ಸೇವಿಸುವುದು ನಿಮಗೆ ಸಲ್ಲದು. ಯಾವುದೇ ಆಹಾರಗಳನ್ನು ತಿನ್ನುವ ಮುನ್ನ ನಿಮ್ಮ ವೈದ್ಯರ ಬಳಿ ಸಲಹೆ ಪಡೆದುಕೊಳ್ಳುವುದು ಅಗತ್ಯ. ಇನ್ನುಳಿದಂತೆ ಆಹಾರ ತಜ್ಞರು ಸಲಹೆ ಮಾಡುವ ಆಹಾರಗಳಲ್ಲಿ ಪ್ರಮುಖವಾದುದನ್ನು ಸಂಗ್ರಹಿಸಿ ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ....

ವಿಟಮಿನ್ ಬಿ6 ಆಹಾರಗಳು

ವಿಟಮಿನ್ ಬಿ6 ಆಹಾರಗಳು

ಗರ್ಭಾವಸ್ಥೆಯಲ್ಲಿ ವಾಂತಿ, ಬಳಲಿಕೆ ಸಾಮಾನ್ಯವಾಗಿರುತ್ತದೆ. ಇದಕ್ಕಾಗಿ ವಿಟಮಿನ್ ಬಿ6 ಆಹಾರಗಳನ್ನು ನೀವು ಸೇವಿಸಬೇಕಾಗುತ್ತದೆ. ಸಾಧ್ಯವಾದಷ್ಟು ಆಹಾರದಲ್ಲಿ ಲಿಂಬೆ-ಕಿತ್ತಳೆ ಜಾತಿಯ ಹಣ್ಣುಗಳ ರಸ, ಮೊಟ್ಟೆಗಳು, ಹಸಿರು ಮತ್ತು ದಪ್ಪನೆಯ ಎಲೆಗಳು, ಆಲೂಗಡ್ಡೆ ಮೊದಲಾದವು ಇರುವಂತೆ ನೋಡಿಕೊಳ್ಳಿ

ಕಿತ್ತಳೆ ಹಣ್ಣು, ಗರ್ಭಿಣಿಯರ ಪಾಲಿಗೆ ಇದು ಚಿನ್ನದಂತಹ ಹಣ್ಣು

ತಾಜಾ ಹಣ್ಣುಗಳು

ತಾಜಾ ಹಣ್ಣುಗಳು

ಹಣ್ಣುಗಳಲ್ಲಿ ನೈಸರ್ಗಿಕ ವಿಟಮಿನ್‌ಗಳಿದ್ದು ನೀರಿನಂಶ, ನೈಸರ್ಗಿಕ ಸಕ್ಕರೆ, ಉತ್ಕರ್ಷಣ ನಿರೋಧಿ ಅಂಶಗಳಿವೆ. ನಿಮ್ಮ ದೈನಂದಿನ ಆಹಾರದಲ್ಲಿ ತಾಜಾ ಹಣ್ಣುಗಳನ್ನು ಸೇವಿಸುವುದರಿಂದ ನಿಮಗೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ. ದಿನದಲ್ಲಿ ಕನಿಷ್ಠ ಪಕ್ಷ 2 ಹಣ್ಣುಗಳನ್ನು ಸೇವಿಸಿ.

ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ

ಕಾರ್ಬೋಹೈಡ್ರೇಟ್ಸ್

ಕಾರ್ಬೋಹೈಡ್ರೇಟ್ಸ್

ಬ್ರೆಡ್, ಗೋಧಿ, ಅಕ್ಕಿ ಮತ್ತು ಆಲೂಗಡ್ಡೆಗಳಲ್ಲಿ ಸರಳವಾಗಿರುವ ಕಾರ್ಬೋಹೈಡ್ರೇಟ್‌ಗಳಿದ್ದು ನಿಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯ ಶಕ್ತಿಯನ್ನು ಪೂರೈಸುವಲ್ಲಿ ಇದು ನೆರವನ್ನು ನೀಡಲಿದೆ. ಸಕ್ಕರೆ ಆಹಾರಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ ಇದರಿಂದ ದೇಹದಲ್ಲಿ ಕೊಬ್ಬು ಸೇರ್ಪಡೆಗೊಳ್ಳಬಹುದು. ಆದ್ದರಿಂದ ನೀವು ಸೇವಿಸುವ ಆಹಾರವನ್ನು ಆರಿಸುವಾಗ ಹೆಚ್ಚು ಕಾಳಜಿಯನ್ನು ವಹಿಸಿಕೊಳ್ಳಿ.

ಕಬ್ಬಿಣ ಮತ್ತು ಫೋಲೆಟ್ ಅಂಶ

ಕಬ್ಬಿಣ ಮತ್ತು ಫೋಲೆಟ್ ಅಂಶ

ಗರ್ಭಾವಸ್ಥೆಯಲ್ಲಿ ಕಬ್ಬಿಣ ಸತ್ವ ಮತ್ತು ಪೋಲೆಟ್ ಇರುವ ಆಹಾರಗಳನ್ನು ಸೇವಿಸಬೇಕು. ಭ್ರೂಣದ ಬೆಳವಣಿಗೆ ಮತ್ತು ಆರೋಗ್ಯಕ್ಕಾಗಿ ಇಂತಹ ಆಹಾರಗಳು ಅತ್ಯಗತ್ಯವಾಗಿರುತ್ತವೆ. ಬೀಟ್‌ರೂಟ್, ಚಿಕ್ಕು, ಓಟ್‌ಮೀಲ್, ಬ್ರಕೋಲಿ, ಮೊಟ್ಟೆ ಹಾಗೂ ಹಸಿರು ಸೊಪ್ಪುಗಳನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿ.

ಹುಟ್ಟುವ ಮಗು 'ಬುದ್ಧಿವಂತ' ಆಗಬೇಕೇ? ಆಹಾರಕ್ರಮ ಹೀಗಿರಲಿ

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಮಗು ಮತ್ತು ತಾಯಿಯ ಆರೋಗ್ಯಕ್ಕಾಗಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸುವುದು ಅತ್ಯುತ್ತಮವಾಗಿದೆ. ಮಗುವಿಗೆ ಬೇಕಾಗಿರುವ ಕ್ಯಾಲ್ಶಿಯಂ ಮತ್ತು ಮಿನರಲ್‌ಗಳು ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಹೇರಳವಾಗಿರುತ್ತವೆ. ಆದ್ದರಿಂದ ನಿಮ್ಮ ದೈನಂದಿನ ಆಹಾರದಲ್ಲಿ ಹಾಲಿನ ಉತ್ಪನ್ನಗಳನ್ನು ಸೇರಿಸುವುದನ್ನು ಮರೆಯದಿರಿ.

English summary

Foods To Eat And Avoid During Your Third Month Of Pregnancy ...

During the third month of pregnancy, the body goes through some huge changes. The foetus starts to show rapid movements during the third month of pregnancy. The body is all set to undergo a major transformation. Even though there is a list of do's and don'ts in pregnancy, it is always better to consult a doctor before adding anything to the diet. Hence, in this article, we at Boldsky will be listing out some of the foods that a pregnant woman must eat in the third month of pregnancy.
X
Desktop Bottom Promotion