For Quick Alerts
ALLOW NOTIFICATIONS  
For Daily Alerts

ಗಂಡು ಮಗು ಬೇಕೆಂಬ ಬಯಕೆಯೇ? ಹಾಗಾದರೆ ಆಹಾರ ಕ್ರಮ ಹೀಗಿರಲಿ....

By Hemanth
|

ಹಿಂದಿನಿಂದಲೂ ನಮ್ಮಲ್ಲಿ ಗಂಡು ಬೇಕೆಂಬ ಅಭಿಲಾಷೆ ಹೆಚ್ಚಿನ ಮಂದಿಯಲ್ಲಿತ್ತು. ಗಂಡು ಮಗು ಹುಟ್ಟಿದರೆ ಆತನಿಂದ ವಂಶೋದ್ಧಾರವಾಗುವುದು ಎನ್ನುವ ಕಲ್ಪನೆ ಜನರಲ್ಲಿದೆ. ಆದರೆ ಗಂಡು ಹಾಗೂ ಹೆಣ್ಣು ಮಕ್ಕಳಲ್ಲಿ ಭೇದ-ಭಾವ ಮಾಡಬಾರದು. ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸಶಕ್ತರು.

ಹಿಂದೆ ಗಂಡು ಮಗು ಬೇಕೆಂಬ ಅತಿಯಾದ ಹುಚ್ಚಿನಿಂದ ಗರ್ಭದಲ್ಲಿರುವ ಹೆಣ್ಣು ಮಗುವನ್ನು ಕೊಂದು ಬಿಡುತ್ತಾ ಇದ್ದರು. ಭ್ರೂಣದಲ್ಲಿರುವ ಮಗುವಿನ ಲಿಂಗಪತ್ತೆಯನ್ನು ಕಾನೂನು ಪ್ರಕಾರವಾಗಿ ನಿಷೇಧಿಸಿದ ಬಳಿಕ ಇಂತಹ ಕೃತ್ಯ ಕಡಿಮೆಯಾಗಿದ್ದರೂ ಕೆಲವರು ಕಾನೂನು ಬಾಹಿರವಾಗಿ ನಡೆಯುತ್ತಲೇ ಇದೆ.

ಹುಟ್ಟುವ ಮಗು 'ಬುದ್ಧಿವಂತ' ಆಗಬೇಕೇ? ಆಹಾರಕ್ರಮ ಹೀಗಿರಲಿ

ಆದರೆ ಬೋಲ್ಡ್ ಸ್ಕೈ ಹೇಳಲು ಹೊರಟಿರುವುದು ಯಾವ ಆಹಾರ ತಿಂದರೆ ಗಂಡು ಮಗುವನ್ನು ಪಡೆಯಬಹುದು ಎನ್ನುವ ಬಗ್ಗೆ. ಆದರೆ ಈ ಆಹಾರ ತಿಂದರೆ ಗಂಡು ಮಗುವೇ ಆಗಲಿದೆ ಎನ್ನುವ ಬಗ್ಗೆ ಯಾವುದೇ ಗ್ಯಾರಂಟಿಯಿಲ್ಲ. ಈ ಆಹಾರಗಳನ್ನು ಸೇವಿಸುವುದರಿಂದ ಗಂಡು ಮಗುವಾಗುವ ಸಾಧ್ಯತೆ ಹೆಚ್ಚಿದೆ.

ಹಿಂದಿನಿಂದಲೂ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಗಂಡು ಮಗುವನ್ನು ಪಡೆಯುತ್ತಾ ಇದ್ದರು. ಇದರಲ್ಲಿ ಲೈಂಗಿಕ ಕ್ರಿಯೆ ನಡೆಸುವ ಭಂಗಿ, ಗರ್ಭಧರಿಸುವ ಸಮಯ ಮತ್ತು ತಿಂಗಳ ಮುಟ್ಟಾಗುವ ಸಮಯವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಯಾವ ಆಹಾರ ತಿಂದರೆ ಗಂಡು ಮಗುವಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಯಿರಿ...

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಹೆಚ್ಚಿನ ಮಟ್ಟದ ಪೊಟಾಶಿಯಂ ಇದೆ. ಇದು ಗಂಡು ಮಗುವಾಗುವ ಸಾಧ್ಯತೆ ಹೆಚ್ಚಿಸುತ್ತದೆ. ಗರ್ಭದಲ್ಲಿ ಗಂಡು ವೀರ್ಯವು ಉಳಿಯುವಂತೆ ಪೊಟಾಶಿಯಂ ನೆರವಾಗುವುದು. ಮಗು ಪಡೆಯಬೇಕೆಂದಿರುವವರು ದಿನದಲ್ಲಿ ಎರಡು ಬಾಳೆಹಣ್ಣು ತಿನ್ನಿ.

ಸೀರಲ್

ಸೀರಲ್

ಗಂಡು ವೀರ್ಯವು ತುಂಬಾ ಸೂಕ್ಷ್ಮವಾಗಿರುತ್ತದೆ. ಇದು ಉಳಿಯಲು ಸಮೃದ್ಧ ಪೋಷಕಾಂಶಗಳು ಇರುವ ಆಹಾರ ಬೇಕಾಗುತ್ತದೆ. ಪೋಷಕಾಂಶಗಳು ಅಧಿಕವಾಗಿರುವ ಆಹಾರ ಸೇವನೆ ಮಾಡುವ ಮಹಿಳೆಯರು ಗಂಡು ಮಗು ಹೆರುವ ಸಾಧ್ಯತೆ ಹೆಚ್ಚಿದೆ.

ಅಣಬೆ

ಅಣಬೆ

ಆರೋಗ್ಯಕರ ವೀರ್ಯಬೇಕೆಂದರೆ ಆಗ ವಿಟಮಿನ್ ಡಿ ಅಗತ್ಯವಾಗಿ ಬೇಕೇಬೇಕು. ಅಣಬೆಯಲ್ಲಿ ವಿಟಮಿನ್ ಡಿ ಮತ್ತು ಪೊಟಾಶಿಯಂ ಅಧಿಕವಾಗಿದೆ. ಗಂಡು ಮಗು ಬೇಕೆಂದು ಬಯಸುವಂತಹ ದಂಪತಿ ಅಣಬೆಯುಕ್ತ ಆಹಾರ ಸೇವನೆ ಮಾಡಬೇಕು.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ತಾಯಿಯ ಸಂಪೂರ್ಣ ಆರೋಗ್ಯ ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಹಿತಕರವಾಗಿರುವಂತಹ ವಾತಾವರಣದಲ್ಲಿ ಮಾತ್ರ ಗಂಡು ಮಗು ಪಡೆಯಬಹುದಾಗಿದೆ. ಇದರಿಂದ ಗಂಡು ಮಗು ಪಡೆಯಬೇಕೆಂದರೆ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಕು.

ಪಿಷ್ಠವಿರುವ ಆಹಾರ

ಪಿಷ್ಠವಿರುವ ಆಹಾರ

ಗಂಡು ಮಗುವನ್ನು ಪಡೆಯಬೇಕಾದರೆ ಹೆಚ್ಚಿನ ಗ್ಲೂಕೋಸ್ ಇರುವ ಆಹಾರ ಸೇವಿಸಬೇಕು. ಅನ್ನ ಮತ್ತು ಆಲೂಗಡ್ಡೆ ಸೇವನೆ ಮಾಡಿದರೆ ಅದರಿಂದ ಉನ್ನತ ಮಟ್ಟದ ಕ್ಯಾಲರಿ ಮತ್ತು ಗ್ಲೂಕೋಸ್ ದೇಹಕ್ಕೆ ಲಭ್ಯವಾಗುತ್ತದೆ.

ಮೀನು ಪದಾರ್ಥ

ಮೀನು ಪದಾರ್ಥ

ಮೀನು ಹಾಗೂ ಸಮುದ್ರದಲ್ಲಿ ಸಿಗುವ ಇತರ ಆಹಾರಗಳಲ್ಲಿ ಗಂಡು ವೀರ್ಯವು ಹೆಚ್ಚಾಗಿ ಬೆಳೆಯಲು ಬೇಕಾಗಿರುವ ಖನಿಜಾಂಶವಿದೆ. ವೀರ್ಯದ ಗಣತಿಯು ಹೆಚ್ಚಾಗಿರುವ ಸಮಯದಲ್ಲಿ ಗಂಡು ಮಗುವಾಗುವ ಸಾಧ್ಯತೆ ಹೆಚ್ಚಿದೆ. ಸತು ಇರುವಂತಹ ಸಮುದ್ರದ ಆಹಾರ ಸೇವನೆ ಮಾಡಿ.

ಉಪ್ಪಿರುವ ಆಹಾರ

ಉಪ್ಪಿರುವ ಆಹಾರ

ಗಂಡು ಮಗುವನ್ನು ಪಡೆಯಲು ಸೋಡಿಯಂ ಮತ್ತು ಪೊಟಾಶಿಯಂ ಇರುವ ಸಮತೋಲನದ ಅಹಾರ ಸೇವನೆ ಮಾಡಬೇಕು. ಉಪ್ಪಿನಾಂಶ ಹೆಚ್ಚಾಗಿರುವ ಕೆಲವೊಂದು ಆಹಾರಗಳನ್ನು ಸೇವನೆ ಮಾಡಿದರೆ ಅದರಿಂದ ಗಂಡು ಮಗು ಆಗುವುದು. ಚಿಪ್ಸ್, ಫ್ರೆಂಚ್ ಫಿಂಗರ್ ಇತ್ಯಾದಿ. ಗರ್ಭಿಣಿಯಾದ ಬಳಿಕ ಉಪ್ಪಿನ ಸೇವನೆ ಕಡಿಮೆ ಮಾಡಿ. ಇಲ್ಲವಾದರೆ ರಕ್ತದೊತ್ತಡ ಮಟ್ಟವು ಹೆಚ್ಚಾಗುವುದು.

ಟೊಮೆಟೊ

ಟೊಮೆಟೊ

ಟೊಮೆಟೊ ದೇಹದಲ್ಲಿ ಸೋಡಿಯಂ ಮತ್ತು ಪೊಟಾಶಿಯಂನ್ನು ನಿಯಂತ್ರಣದಲ್ಲಿಡುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡ ಅಧಿಕವಾಗಿದೆ. ಗಂಡು ಮಗು ಪಡೆಯಲು ಇದು ಸರಿಯಾದ ಮಟ್ಟದಲ್ಲಿ ಪಿಎಚ್ ಮಟ್ಟವನ್ನು ಕಾಪಾಡುತ್ತದೆ.

English summary

Foods To Conceive A Baby Boy

These foods to conceive a boy naturally are not magic pills. There is no guarantee that you will end up having a boy and not a girl if you eat these foods. However, these foods to conceive a boy will certainly increase your chances of having a male child. This is not an old wives' tale but there are scientific reasons that make these foods favour the conception of a baby boy. There are several other ways to know how to conceive a baby boy. Some of these tricks are sex positions, the time of conception and even the date of your menstrual cycle.
X
Desktop Bottom Promotion