For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಗರ್ಭಿಣಿಯರು 'ಬಿಳಿ ಅಕ್ಕಿ'ಯ ಅನ್ನ ಸೇವಿಸಬಾರದು!!

By Manu
|

ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರಿಗೆ ತಾತ್ಕಾಲಿಕವಾದ ಮಧುಮೇಹ ಕಾಡುತ್ತದೆ. ಈ ಮಹಿಳೆಯರು ಒಂದು ವೇಳೆ ತಮ್ಮ ಪ್ರಮುಖ ಆಹಾರವಾಗಿ ಸಂಸ್ಕರಿತ ಧಾನ್ಯಗಳು, ಉದಾಹರಣೆಗೆ ಬಿಳಿ ಅನ್ನವನ್ನು (ಬೆಳ್ತಿಗೆ) ಸೇವಿಸುತ್ತಿದ್ದರೆ ಇವರ ಮಕ್ಕಳಿಗೆ ಏಳು ವಯಸ್ಸಿಗೇ ಸ್ಥೂಲಕಾಯ ಆವರಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಒಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.

ಅದರಲ್ಲೂ ಸಂಸ್ಕರಿತ ಧಾನ್ಯಗಳು ಕಾರ್ಬೋಹೈಡ್ರೇಟುಗಳ ಪ್ರಮುಖ ಮೂಲವಾಗಿದ್ದು ಇವುಗಳ ಸೇವನೆಯಿಂದ ಟೈಪ್ -2 ಮಧುಮೇಹ, ಸ್ಥೂಲಕಾಯ ಹಾಗೂ ಹೃದಯಸಂಬಂಧಿ ಕಾಯಿಲೆಗಳು ಆವರಿಸುವ ಸಾಧ್ಯತೆ ಹೆಚ್ಚಿರುತ್ತದೆ...

ಸಂಶೋಧನೆಯಲ್ಲಿ ಕಂಡುಕೊಂಡಂತೆ

ಸಂಶೋಧನೆಯಲ್ಲಿ ಕಂಡುಕೊಂಡಂತೆ

ಸಂಶೋಧನೆಯಲ್ಲಿ ಕಂಡುಕೊಂಡಂತೆ ಗರ್ಭಾವಸ್ಥೆಯಲ್ಲಿ ತಾತ್ಕಾಲಿಕ ಮಧುಮೇಹ ಅಥವಾ ರಕ್ತದಲ್ಲಿ ಅಧಿಕ ಪ್ರಮಾಣದ ಸಕ್ಕರೆಯನ್ನು ಹೊಂದಿದ್ದ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿತ ಧಾನ್ಯಗಳನ್ನು (ಅಂದರೆ ದಿನವೊಂದಲ್ಲಿ 156 ಗ್ರಾಂಗೂ ಹೆಚ್ಚು) ಸೇವಿಸಿದ ಮಹಿಳೆಯರಿಗೆ ಜನಿಸಿದ ಮಕ್ಕಳು ಏಳು ವರ್ಷದವರಾಗುತ್ತಲೇ ಸ್ಥೂಲಕಾಯ ಹೊಂದಿರುತ್ತಾರೆ.

ಕಡಿಮೆ ಪ್ರಮಾಣದ ಸಂಸ್ಕರಿತ ಧಾನ್ಯ ಸೇವಿಸಿದ ಮಹಿಳೆಯರಿಲ್ಲಿ...

ಕಡಿಮೆ ಪ್ರಮಾಣದ ಸಂಸ್ಕರಿತ ಧಾನ್ಯ ಸೇವಿಸಿದ ಮಹಿಳೆಯರಿಲ್ಲಿ...

ಈ ಮಹಿಳೆಯರಿಗೆ ಹೋಲಿಸಿದರೆ ಇದೇ ತೊಂದರೆ ಇರುವ, ಆದರೆ ಕಡಿಮೆ ಪ್ರಮಾಣದ ಸಂಸ್ಕರಿತ ಧಾನ್ಯ ಸೇವಿಸಿದ (ಅಂದರೆ ದಿನವೊಂದರಲ್ಲಿ 37ಗ್ರಾಂಗೂ ಕಡಿಮೆ) ಮಹಿಳೆಯರಿಗೆ ಜನಿಸಿದ ಮಕ್ಕಳಲ್ಲಿ ಸ್ಥೂಲಕಾಯ ಆವರಿಸುವ ಸಾಧ್ಯತೆ ಕಡಿಮೆ ಇರುತ್ತದೆ.

ಮಕ್ಕಳಲ್ಲಿ ಸ್ಥೂಲಕಾಯ

ಮಕ್ಕಳಲ್ಲಿ ಸ್ಥೂಲಕಾಯ

ಗರ್ಭಾವಸ್ಥೆಯಲ್ಲಿ ಸೇವಿಸುವ ಆಹಾರಕ್ಕೂ ಹಾಗೂ ನಂತರ ಜನಿಸಿದ ಮಕ್ಕಳು ಏಳು ವರ್ಷದವರಾಗುತ್ತಲೂ ಸ್ಥೂಲಕಾಯ ಹೊಂದುವ ಸಾಧ್ಯತೆಯ ಬಗ್ಗೆ ಅಧ್ಯಯನ ನಡೆಸಿದ ಸಂಶೋಧಕರು ಮಕ್ಕಳಿಗೆ ಈ ಕಾರಣದ ಹೊರತಾಗಿಯೂ ಇತರ ಕಾರಣಗಳಿಂದ, ಉದಾಹರಣೆಗೆ ದೈಹಿಕ ಚಟುವಟಿಕೆ, ತರಕಾರಿ, ಹಣ್ಣು ಮತ್ತು ಸಿಹಿತಿಂಡಿಗಳ ಸೇವನೆ ಇತ್ಯಾದಿಗಳಿಂದಲೂ ಸ್ಥೂಲಕಾಯ ಆವರಿಸುವ ಸಾಧ್ಯತೆಗಳನ್ನು ಕಡಿಮೆಗೊಳಿಸಿದ ಬಳಿಕವೂ ಸ್ಥೂಲಕಾಯ ತಪ್ಪದೇ ಆವರಿಸಿದೆ ಎಂದು ಅಮೇರಿಕಾದ National Institutes of Health ಸಂಸ್ಥೆಯ Eunice Kennedy Shriver National Institute of Child Health and Human Development ವಿಭಾಗದ ಕ್ಯೂಲಿನ್ ಝಾಂಗ್ ರವರು ವಿವರಿಸುತ್ತಾರೆ.

ಮಕ್ಕಳಿಗೆ ಕಾಡುವ ಸ್ಥೂಲಕಾಯ, ಎಂದಿಗೂ ನಿರ್ಲಕ್ಷಿಸದಿರಿ

ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆ

ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆ

ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಗಳಿಂದ ಕಂಡುಬಂದ ವರದಿಗಳ ಪ್ರಕಾರ ಗರ್ಭಾವಸ್ಥೆಯಲ್ಲಿ ಸೇವಿಸುವ ಸಂಸ್ಕರಿತ ಧಾನ್ಯಗಳಿಂದ ಪಡೆಯುವ ಕಾರ್ಬೋಹೈಡ್ರೇಟುಗಳು ಗರ್ಭದಲ್ಲಿರುವ ಶಿಶುವಿಗೆ ಮುಂದಿನ ದಿನಗಳಲ್ಲಿ ಸ್ಥೂಲಕಾಯ ಆವರಿಸುವ ಸೂಚನೆಯನ್ನು ನೀಡುವ ಮೂಲಕ ಸ್ಥೂಲಕಾಯಕ್ಕೆ ನಾಂದಿಯಾಗುತ್ತದೆ.

ಅಮೇರಿಕಾದ ವೈದ್ಯಕೀಯ ಪ್ರಕಾರ

ಅಮೇರಿಕಾದ ವೈದ್ಯಕೀಯ ಪ್ರಕಾರ

ಅಮೇರಿಕಾದ ವೈದ್ಯಕೀಯ ಪ್ರಕಟಣೆಯಾದ American Journal of Clinical Nutrition ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಸಂಶೋಧಕರು ಗರ್ಭಾವಸ್ಥೆಯಲ್ಲಿ ಮಧುಮೇಹ ಹಾಗೂ ಹೆಚ್ಚಿನ ಅನ್ನ ತಿನ್ನುವ 918 ತಾಯಂದಿರು ಮತ್ತು ಅವರಿಗೆ ಜನಿಸಿದ ಮಕ್ಕಳ ಆರೋಗ್ಯಕ ಅಂಕಿಅಂಶಗಳನ್ನು ಕಲೆಹಾಕಿ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.

ಮಕ್ಕಳಲ್ಲಿ ಸ್ಥೂಲಕಾಯಕ್ಕೂ ಹಾರ್ಮೋನುಗಳಿಗೂ ಸಂಬಂಧವಿದೆಯೇ?

English summary

eating-white-rice-in-pregnancy-may-up-kids-obesity-risk

Children born to women with gestational diabetes and whose diet included high proportions of refined grains such as white rice, may have a higher risk of obesity by age seven, according to a study. Refined grains, which are a major source of dietary carbohydrates, have been related to Type 2 diabetes, obesity and heart disease.
X
Desktop Bottom Promotion