For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ, ಆದಷ್ಟು ಪೌಡರ್, ಫೇಸ್ ಕ್ರೀಮ್‌ಗಳಿಂದ ದೂರವಿರಿ!

By Jaya subramanya
|

ಗರ್ಭಾವಸ್ಥೆ ಎಂಬುದು ಹೆಣ್ಣಿನ ಬಾಳಿನಲ್ಲಿ ಅತ್ಯಂತ ಮಧುರವಾದ ಕ್ಷಣವಾಗಿದೆ. ಒಬ್ಬ ಸ್ತ್ರೀ ಪರಿಪೂರ್ಣ ಎಂದೆನಿಸುವುದು ತಾನು ತಾಯಿಯಾಗಿ ಆ ಮಗುವನ್ನು ದೇಶದ ಉತ್ತಮ ಪ್ರಜೆಯಾಗಿ ರೂಪಿಸುವಾಗ ಎಂಬುದಾಗಿ ಮಾತೊಂದಿದೆ. ತನ್ನದೇ ರಕ್ತ ಮಾಂಸ ಹಂಚಿಕೊಂಡು ಬೆಳೆಯುವ ಮಗು ತಾಯಿಗೆ ಮುದ್ದು, ಒಂಬತ್ತು ತಿಂಗಳ ಕಾಲ ಅಮ್ಮನ ಒಡಲಿನಲ್ಲಿ ಹಾಯಾಗಿ ಬೆಚ್ಚಗಿದ್ದ ಮಗು ಹೊರಗೆ ಬರುತ್ತಲೇ ಅಳುತ್ತದೆ ಅಮ್ಮನ ಬೆಚ್ಚಗಿನ ಸಾನಿಧ್ಯ ದೊರೆತಾಗಲೇ ಅದರ ಅಳು ನಿಲ್ಲುವುದು.

ಮಗುವಿನ ತೊದಲು ಮಾತು, ನಡೆಯುವ ಕ್ಷಣ, ಕೇಕೆ ಹಾಕಿ ನಗುವುದು, ಅಮ್ಮ, ಅಪ್ಪ, ಅಜ್ಜ, ಅಜ್ಜಿ ಮೊದಲಾಗಿ ಕುಟುಂಬದ ಹೆಸರುಗಳನ್ನು ಹೇಳುವುದು ಹೀಗೆ ಮಗುವಿನ ಬಾಲ್ಯಕಾಲದ ತುಂಟಾಟಗಳು ಆಕೆಗೆ ಮಹದಾನಂದವನ್ನು ನೀಡುತ್ತದೆ. ಮಗು ಬಿದ್ದಾಗ ಕೂಡ ತುಂಟಾಟ ಮಾಡದೆಯೇ ಬಿದ್ದಲ್ಲಿಂದ ಹೇಗೆ ಏಳುವುದು ಎಂಬುದನ್ನು ತಾಯಿ ಕಂದನಿಗೆ ತಿಳಿಸಿಕೊಡುತ್ತಾಳೆ. ಜೀವನದ ಪಾಠ ನಮಗೆ ಇಲ್ಲಿಂದಲೇ ಆರಂಭವಾಗುತ್ತದೆ. ಮನೆಯೇ ಮೊದಲ ಪಾಠಶಾಲೆ ತಾಯಿ ಮೊದಲ ಗುರು ಎಂಬ ಮಾತು ಇದಕ್ಕಾಗಿಯೇ ಜನಜನಿತವಾಗಿರುವುದು.

ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ

ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಿಯು ತನ್ನ ಮತ್ತು ತನ್ನ ಗರ್ಭದೊಳಗಿರುವ ಪುಟ್ಟ ಕಂದಮ್ಮನಿಗಾಗಿ ಕೆಲವೊಂದು ತ್ಯಾಗಗಳನ್ನು ಕೆಲವೊಂದು ಮುತುವರ್ಜಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಉಳಿದ ದಿನಗಳಂತೆ ಬೇಕಾಬಿಟ್ಟಿ ಆಹಾರ ಸೇವನೆ, ಹೊರಗೆ ಅಡ್ಡಾಡುವುದು, ವ್ಯಾಯಾಮವಿಲ್ಲದೆ ಕುಳಿತಲ್ಲೇ ಇರುವುದು, ವೈದ್ಯರ ಸೂಚನೆಗಳನ್ನು ಪಾಲಿಸುವುದು ಹೀಗೆ ಕೆಲವೊಂದು ಬೇಕು ಬೇಡಗಳ ಪಟ್ಟಿಯನ್ನು ಆಕೆ ಅನುಸರಿಸಲೇಬೇಕಾಗುತ್ತದೆ.

ಇಂದಿನ ಲೇಖನದಲ್ಲಿ ಸೌಂದರ್ಯ ಸಾಮಾಗ್ರಿಗಳಿಂದ ಗರ್ಭಿಣಿ ಸ್ತ್ರೀಯರು ಏಕೆ ದೂರವಿರಬೇಕು ಎಂಬ ಮಾಹಿತಿಯನ್ನಾಗಿದೆ. ಇದೊಂದು ಹೆಚ್ಚು ಅಮೂಲಾಗ್ರ ಕಿವಿಮಾತಾಗಿದ್ದು ಸೌಂದರ್ಯ ಉಪಕರಣಗಳನ್ನು ಈ ಸಮಯದಲ್ಲಿ ಹೆಚ್ಚು ಬಳಸದೇ ಇರುವುದು ಉತ್ತಮ ಎಂಬುದಾಗಿ ನಾವು ಸಲಹೆ ನೀಡುತ್ತಿದ್ದೇವೆ. ಅದೇಕೆ ಎಂಬುದನ್ನು ಇಲ್ಲಿ ನೋಡಿ....

ಹಾನಿಕಾರಕ ರಾಸಾಯನಿಕಗಳು

ಹಾನಿಕಾರಕ ರಾಸಾಯನಿಕಗಳು

ಎಂಡೋಕ್ರೈನ್ ಡಿಸ್‌ರಪ್ಟರ್ಸ್ ಉತ್ಪನ್ನವುಳ್ಳ ಸೌಂದರ್ಯ ಸಾಮಾಗ್ರಿಗಳು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಇದು ನಿಮ್ಮ ಹಾರ್ಮೋನುಗಳ ಮೇಲೆ ಪರಿಣಾಮ ಬೀರಲಿವೆ.

ಎಂಡೋಕ್ರೈನ್ ಡಿಸ್‌ರಪ್ಟರ್ಸ್ ಹೆಸರುಗಳು

ಎಂಡೋಕ್ರೈನ್ ಡಿಸ್‌ರಪ್ಟರ್ಸ್ ಹೆಸರುಗಳು

ಬಿಪಿಎ, ಅಟ್ರಾಜಿನ್, ಫೆತಲೇಟ್ಸ್, ಡಿಯಾಕ್ಸಿನ್ ಮತ್ತು ಪರ್ಕೊಲರೇಟ್ ಎಂಡೋಕ್ರೈನ್ ಡಿಸ್‌ರಪ್ಟರ್ಸ್‌ಗಳಾಗಿವೆ.

ಅವು ಏನು ಮಾಡುತ್ತವೆ

ಅವು ಏನು ಮಾಡುತ್ತವೆ

ಇವುಗಳು ನಿಮ್ಮ ಎಂಡೋಕ್ರೈನ್ ಮೇಲೆ ಪರಿಣಾಮ ಬೀರಲಿವೆ ಇದು ಜನ್ಮ ದೋಷಗಳನ್ನು ಉಂಟುಮಾಡಲಿವೆ. ಟ್ಯೂಮರ್ ಅಂತೆಯೇ ಅಂಗಹೀನತೆಯನ್ನು ಮಗುವಿಗೆ ಉಂಟುಮಾಡಬಹುದು. ಹಾರ್ಮೋನಲ್ ಕ್ರಿಯೆಯ ಮೇಲೂ ಇದು ಪರಿಣಾಮ ಬೀರಲಿದೆ.

ನೀವು ಅವುಗಳನ್ನು ಎಲ್ಲಿ ಕಾಣಬಹುದು

ನೀವು ಅವುಗಳನ್ನು ಎಲ್ಲಿ ಕಾಣಬಹುದು

ಹೆಚ್ಚಿನ ಸೌಂದರ್ಯ ಸಾಧನಗಳಲ್ಲಿ ಇವು ಇವೆ. ಸುಗಂಧ ದ್ರವ್ಯಗಳು ಫೆತಲೇಟ್ಸ್ ಅನ್ನು ಒಳಗೊಂಡಿವೆ.

ಇದಕ್ಕೆ ಏನು ಮಾಡಬೇಕು

ಇದಕ್ಕೆ ಏನು ಮಾಡಬೇಕು

ಇಂತಹ ಪ್ರಸಾಧನಗಳನ್ನು ಬಳಸುವುದನ್ನು ಬಿಡಿ ಅಥವಾ ಬಿಪಿಎ, ಫೆತಲೇಟ್ಸ್ ಮೊದಲಾದ ರಾಸಾಯನಿಕಗಳಿಲ್ಲದೆ ಮುಕ್ತವಾಗಿರುವ ಉತ್ಪನ್ನಗಳನ್ನು ಬಳಸಿ

ಕ್ರೀಮ್‌ಗಳು

ಕ್ರೀಮ್‌ಗಳು

ಲೋಷನ್‌ಗಳು ಅಥವಾ ಕ್ರೀಮ್‌ಗಳಲ್ಲಿ ಕೂಡ ಈ ರಾಸಾಯನಿಕಗಳಿದ್ದು ಇದು ಭ್ರೂಣದ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ. ನಿಮ್ಮ ವೈದ್ಯರನ್ನು ಸಂಪರ್ಕಿಸದೆಯೇ ಇಂತಹ ವಸ್ತುಗಳನ್ನು ತ್ವಚೆಗೆ ಬಳಸದಿರಿ.

ಹೇರ್ ಡೈ

ಹೇರ್ ಡೈ

ನಿಮ್ಮ ಕೂದಲಿಗೆ ಹಚ್ಚುವ ಬಣ್ಣದಲ್ಲಿ ಅಮೋನಿಯಾ ಇದ್ದಲ್ಲಿ, ಇದು ಶ್ವಾಸಕೋಶ ಮತ್ತು ತ್ವಚೆಯ ಮೇಲೆ ದುಷ್ಪರಿಣಾಮವನ್ನು ಬೀರಲಿವೆ.

ನೇಲ್ ಪಾಲಿಶ್

ನೇಲ್ ಪಾಲಿಶ್

ಮೆಥೈಲ್ಬೆಂಜೀನ್ ಮತ್ತು ಟೊಲ್ಯುನೆ ಎಂಬಂತಹ ಹಾನಿಕಾರಕ ಅಂಶಗಳನ್ನು ನೇಲ್ ಪಾಲಿಶ್ ಒಳಗೊಂಡಿದ್ದು ಇದು ಕ್ಯಾನ್ಸರ್ ಅನ್ನು ಉಂಟುಮಾಡಲಿವೆ.

ಕೂದಲು ತೆಗೆಯುವಿಕೆ ಕ್ರೀಮ್?

ಕೂದಲು ತೆಗೆಯುವಿಕೆ ಕ್ರೀಮ್?

ನಿಮ್ಮ ತ್ವಚೆಯ ಕೂದಲನ್ನು ತೆಗೆಯುವ ಕ್ರೀಮ್ ಕೂಡ ರಾಸಾಯನಿಕ ಅಂಶವನ್ನು ಒಳಗೊಂಡಿದೆ. ಇದು ಥಿಯೋಗ್ಲೈಕೋಲಿಕ್ ಆಸಿಡ್ ಅನ್ನು ಹೊಂದಿದೆ. ಗರ್ಭಾವಸ್ಥೆಯಲ್ಲಿ ಆದಷ್ಟು ಸೌಂದರ್ಯ ಪರಿಕರಗಳನ್ನು ಬಳಸುವುದನ್ನು ಕಡಿಮೆ ಮಾಡಿ ಎಂಬುದಾಗಿಯೇ ನಾವು ಸಲಹೆ ನೀಡುತ್ತೇವೆ.

English summary

Do You Have To Stay Away From Cosmetics During Pregnancy?

Pregnancy is surely a period which demands many sacrifices from a woman. Even if you are tempted to eat your favourite junk food, you can't do that when you are pregnant. Apart from that, even cosmetics are also in the list of things that are to be avoided by pregnant women. But why? Well, exposure to certain chemicals is bad during pregnancy.
X
Desktop Bottom Promotion