Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಗರ್ಭಿಣಿಯರು ಮರೆಯದೇ ತಿನ್ನಬೇಕಾದ ಹಣ್ಣು ಖರ್ಜೂರ...
ಗರ್ಭಿಣಿಯಾದಾಗ ಯಾವೆಲ್ಲಾ ಆಹಾರವನ್ನು ಸ್ವೀಕರಿಸಬೇಕು? ಯಾವೆಲ್ಲಾ ಆಹಾರದಿಂದ ದೂರ ಇರಬೇಕು? ಎನ್ನುವ ಗೊಂದಲ ಸಾಮಾನ್ಯವಾಗಿ ಇರುತ್ತದೆ. ಕೆಲವು ಆರೋಗ್ಯಕರವಾದ ಆಹಾರವಾಗಿದ್ದರೂ ಗರ್ಭಿಣಿಯರ ದೇಹಕ್ಕೆ ಒಗ್ಗುವುದಿಲ್ಲ. ಗರ್ಭಾವಸ್ಥೆಯಲ್ಲಿ ಉಂಟಾಗುವ ವಾಂತಿ, ಆಯಾಸ ಹಾಗೂ ಒಂದು ಬಗೆಯ ಬಳಲಿಕೆ ಊಟ-ತಿಂಡಿಯಿಂದ ದೂರ ಇರುವಂತೆ ಮಾಡುತ್ತದೆ. ಖರ್ಜೂರ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು
ಇಂತಹ ಸಂದರ್ಭದಲ್ಲಿ ಯಾವ ಗೊಂದಲವಿಲ್ಲದೆ ಸೇವಿಸಬಹುದಾದ ಒಂದು ಪುಟ್ಟ ಹಣ್ಣು ಖರ್ಜೂರ. ಇದು ಗರ್ಭಿಣಿಯರಿಗೆ ವರದಾನವಾಗುವ ಹಣ್ಣು ಎಂದರೆ ತಪ್ಪಾಗಲಾರದು. ಗರ್ಭಿಣಿಯರು ಬಯಸಿ ತಿನ್ನುವ ಹಣ್ಣುಗಳಲ್ಲಿ ಇದೂ ಒಂದು. ಈ ಪುಟ್ಟ ಹಣ್ಣನ್ನು ಸವಿಯುವುದರಿಂದ ತಾಯಿ ಹಾಗೂ ಮಗುವಿನ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಜೊತೆಗ ನೈಸರ್ಗಿಕವಾದ ಸಕ್ಕರೆಅಂಶವಿರುವುದರಿಂದ ಕೊಬ್ಬು ಹೆಚ್ಚಾಗುವುದನ್ನು ನಿಯಂತ್ರಿಸುತ್ತದೆ. ದಿನಕ್ಕೆ ಎರಡೇ ಎರಡು ಖರ್ಜೂರ, ಲಾಭಗಳು ಅಪಾರ!
ಇದರಲ್ಲಿ ಸಮೃದ್ಧವಾದ ಪೊಟ್ಯಾಸಿಯಮ್ ಹಾಗೂ ಕಡಿಮೆ ಪ್ರಮಾಣದ ಸೋಡಿಯಂ ಇರುವುದರಿಂದ ನರಮಂಡಲದ ಕಾರ್ಯಗಳು ಸರಾಗವಾಗಿರುತ್ತವೆ. ತಾಯಿಯ ದೇಹದಲ್ಲಿಯೇ ಒಂದಾಗಿರುವ ಮಗುವಿಗೂ ಆರೋಗ್ಯ ನೀಡುವ ಖರ್ಜೂರದಿಂದ ಯಾವೆಲ್ಲಾ ಪ್ರಯೋಜನ ಪಡೆಯಬುದು ಎಂಬುದನ್ನು ತಿಳಿಯೋಣ ಬನ್ನಿ...

ಪೊಟ್ಯಾಸಿಯಮ್
ರಕ್ತದೊತ್ತಡವನ್ನು ಕಾಪಾಡುವ ಈ ಅಂಶ ಗರ್ಭಿಣಿಯರಿಗೆ ಹೆಚ್ಚು ಸಹಕಾರಿ. ಗರ್ಭಾವಸ್ಥೆಯಲ್ಲಿರುವವರ ದೇಹದಲ್ಲಿ ನೀರಿನಂಶ ಸಮತೋಲನದಲ್ಲಿರುವಂತೆ ಮಾಡುತ್ತದೆ. ಜೊತೆಗೆ ಹೃದಯ, ಜೀರ್ಣಾಂಗ ವ್ಯವಸ್ಥೆ ಹಾಗೂ ಸೂಕ್ತವಾದ ಸ್ನಾಯುವಿನ ಕಾರ್ಯನಿವಣೆಗೆ ಸಹಕಾರಿ.

ನಾರಿನಂಶ
ಆರೋಗ್ಯಕರ ಜೀರ್ಣಕಾರಿ ವ್ಯವಸ್ಥೆಗೆ ನಾರಿನಂಶದ ಪಾತ್ರ ಮಹತ್ವವಾದದ್ದು. ಈ ಹಣ್ಣು ಉತ್ತಮ ನಾರಿನಂಶವನ್ನು ಹೊಂದಿದೆ. ಗರ್ಭಾವಸ್ಥೆಯಲ್ಲಿ ಇರುವಾಗ ಉಂಟಾಗುವ ಮಲಬದ್ಧತೆ, ಕೊಲೆಸ್ಟ್ರಾಲ್ ಸಮಸ್ಯೆ ಹಾಗೂ ಕೆಲವು ಸೋಂಕುಗಳನ್ನು ತಡೆಗಟ್ಟುವಲ್ಲಿ ಸಹಾಯಮಾಡುತ್ತದೆ.

ಫೋಲೇಟ್
ಖರ್ಜೂರದಲ್ಲಿ ಫೋಲೇಟ್‍ನ ಪ್ರಮಾಣ ಸಮೃದ್ಧವಾಗಿದೆ. ಇದು ಹೊಸ ಕೋಶಗಳ ರಚನೆಗೆ ಸಹಾಯಮಾಡುತ್ತದೆ. ಶಿಶುವಿನ ಮೆದುಳು ಹಾಗೂ ಬೆನ್ನುಹುರಿಯ ಆರೋಗ್ಯಕರ ಬೆಳವಣಿಗೆಗೆ ಸಹಾಯವಾಗುತ್ತದೆ.

ವಿಟಮಿನ್ ಕೆ
ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಲ್ಲಿ ಸಹಕಾರಿ. ಗರ್ಭಿಣಿಯರಿಗೆ ಈ ವಿಟಮಿನ್ ಬಹಳ ಅಗತ್ಯವಾಗಿರುತ್ತದೆ. ಮಗುವಿನ ಅಸ್ತಿಪಂಜರ ಹಾಗೂ ಮೂಳೆಗಳ ಬೆಳವಣಿಗೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.

ಪ್ರೋಟೀನ್‍ಗಳು
ಖರ್ಜೂರ ಪ್ರೋಟೀನ್‍ಗಳ ಆಗರವಾಗಿದೆ. ದೇಹಕ್ಕೆ ಅಗತ್ಯವಾದ ಅಮೈನೊ ಆಮ್ಲಗಳನ್ನು ಒದಗಿಸಿ ಭ್ರೂಣದ ಬೆಳವಣಿಗೆಗೆ ಬೇಕಾದ ಪ್ರೋಟಿನ್‍ಗಳನ್ನು ಒದಗಿಸುತ್ತದೆ.



Click it and Unblock the Notifications
