Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಿನಕ್ಕೆ ಎರಡೇ ಎರಡು ಖರ್ಜೂರ, ಲಾಭಗಳು ಅಪಾರ!
ಕಾಯಿಲೆಯಿಂದ ಚೇತರಿಸಿಕೊಳ್ಳುವವರಿಗೆ ಖರ್ಜೂರ ಅಮೃತಸಮಾನವಾಗಿದೆ. ನಿಯಮಿತವಾದ ಖರ್ಜೂರದ ಸೇವನೆಯಿಂದ, ಆರೋಗ್ಯ ವೃದ್ಧಿಸಿಕೊಳ್ಳಬಹುದು...
ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರ ಅಗತ್ಯವೇ ಬೀಳದಷ್ಟು ಆರೋಗ್ಯ ಉತ್ತಮವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಸೇಬು ಹಣ್ಣನ್ನು ದಿನಿತ್ಯ ಸೇವಿಸಲು ಆಗದಿದ್ದರೆ, ಇದರ ಲಾಭವನ್ನು ಎರಡು ಖರ್ಜೂರಗಳನ್ನು ತಿನ್ನುವುದರಿಂದಲೂ ಪಡೆದುಕೊಳ್ಳಬಹುದೆಂದು ಅನುಭವದಿಂದ ಹಿರಿಯರು ಹೇಳುತ್ತಾರೆ. ಇದಕ್ಕೆ ಹಸಿ ಖರ್ಜೂರಗಳೇ ಆಗಬೇಕೆಂದೇನಿಲ್ಲ, ಒಣ ಖರ್ಜೂರವೂ ಆಗಬಹುದು. ಆರೋಗ್ಯದ ಆಗರ ಖರ್ಜೂರದ ಔಷಧೀಯ ಗುಣಗಳೇನು?
ಖರ್ಜೂರಗಳಲ್ಲಿರುವ ಖನಿಜಗಳು ಮತ್ತು ಅಮೈನೋ ಆಮ್ಲಗಳು ಒಣಗಿದ ಬಳಿಕವೂ ಹಾಗೇ ಉಳಿಯುವ ಕಾರಣ ನಿಮ್ಮ ಇಷ್ಟದ ಖರ್ಜೂರಗಳನ್ನು ಆಯ್ದುಕೊಳ್ಳಬಹುದು. ಪಾಕಶಾಲೆಯಲ್ಲಿ ಸಿಹಿ ಸಿಹಿ ಖರ್ಜೂರದ ಹೊಸ ಪಾಯಸ
ಬನ್ನಿ, ದಿನಕ್ಕೆರಡು ಖರ್ಜೂರಗಳನ್ನು ಕೆಲವು ವಾರಗಳಾದರೂ ತಿನ್ನುವುದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ....

ಹೃದಯದ ಕ್ಷಮತೆಗೆ
ಹೃದಯದ ಕ್ಷಮತೆ ಉತ್ತಮಗೊಳ್ಳಲು ಎರಡು ಖರ್ಜೂರಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಟ್ಟು ಮರುದಿನ ಈ ಖರ್ಜೂರಗಳನ್ನು ಬೀಜ ನಿವಾರಿಸಿ ನೀರಿನೊಂದಿಗೇ ಕಡೆದು ಕುಡಿಯಿರಿ...ಹೊಸ ರುಚಿ: ಖರ್ಜೂರ ಕಾಫಿ ಮಿಲ್ಕ್ ಶೇಕ್ ರೆಸಿಪಿ

ದಿನಕ್ಕೆ ಎರಡು ಖರ್ಜೂರ....
ನಿತ್ಯವೂ ಸೇವಿಸುವ ಎರಡು ಖರ್ಜೂರಗಳಲ್ಲಿರುವ ಪೊಟ್ಯಾಶಿಯಂ ಪ್ರಮಾಣ ಹೃದಯ ಸ್ತಂಭನದ ಸಾಧ್ಯತೆಯನ್ನು 39% ರಷ್ಟು ಕಡಿಮೆಗೊಳಿಸುತ್ತದೆ ಎಂದು ಸಂಶೋಧನೆಯೊಂದು ಪ್ರಕಟಿಸಿದೆ.

ಜೀರ್ಣಕ್ರಿಯೆಗೆ ಸಹಕಾರಿ
ಇದರಲ್ಲಿರುವ ಕರಗುವ ನಾರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಒಂದೇ ವಾರದಲ್ಲಿ ಮಲಬದ್ಧತೆ ಸಮಸ್ಯೆಯ ತೊಂದರೆಯನ್ನು ಇಲ್ಲವಾಗಿಸುತ್ತದೆ.

ಹಾಲಿನಲ್ಲಿ ನೆನೆಸಿಟ್ಟ ಖರ್ಜೂರ...
ಎರಡು ಖರ್ಜೂರಗಳನ್ನು ಒಂದು ಲೋಟ ಹಾಲಿನಲ್ಲಿ ನೆನೆಸಿಟ್ಟು ಇದಕ್ಕೆ ಒಂದು ಚಮಚ ಜೇನು ಬೆರೆಸಿ ಕುದಿಸಿ ಕುಡಿಯುವ ಮೂಲಕ ಲೈಂಗಿಕ ಶಕ್ತಿ ಹೆಚ್ಚುತ್ತದೆ.

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ....
ಪ್ರತಿದಿನ ಸೇವಿಸುವ ಎರಡು ಖರ್ಜೂರಗಳಿಂದ 20-25mg ನಷ್ಟು ಮೆಗ್ನೀಶಿಯಂ ದೊರಕುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು
ಖರ್ಜೂರದಲ್ಲಿರುವ ಗಂಧಕ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

ಮಲಬದ್ಧತೆ ಸಮಸ್ಯೆಗೆ....
ಒಂದು ವೇಳೆ ನೀವು ಮಲಬದ್ಧತೆಯಿಂದ ಬಳಲುತ್ತಿದ್ದರೆ ಒಂದು ಲೋಟ ನೀರಿನಲ್ಲಿ ಎರಡು ಖರ್ಜೂರಳನ್ನು ರಾತ್ರಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಈ ನೀರನ್ನು ಕುಡಿದು ಖರ್ಜೂರವನ್ನೂ ತಿನ್ನುವ ಮೂಲಕ ಮಲಬದ್ಧತೆಯನ್ನು ದೂರಾಗಿಸಬಹುದು.

ರಕ್ತಹೀನತೆಯಾಗದಂತೆ...
ಖರ್ಜೂರದಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯಾಗದಂತೆ ತಡೆಯುತ್ತದೆ.

ಜೀರ್ಣಾಂಗ ಸ್ನೇಹಿ....
ಮೊಸರಿನಲ್ಲಿರುವಂತೆಯೇ ಖರ್ಜೂರದಲ್ಲಿಯೂ ಹೊಟ್ಟೆಯಲ್ಲಿರುವ ಜೀರ್ಣಾಂಗ ಸ್ನೇಹಿ ಬ್ಯಾಕ್ಟೀರಿಯಾಗಳಿಗೆ ಪೂರಕವಾದ ಪೋಷಕಾಂಶಗಳಿರುವ ಕಾರಣ, ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಆಮಶಂಕೆ ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.



Click it and Unblock the Notifications