ಅಕಾಲಿಕ ಗರ್ಭಪಾತ ತಡೆಯಲು ಆಯುರ್ವೇದದ ಉಪಚಾರ

By: Divya
Subscribe to Boldsky

ಮನೆಯಲ್ಲಿ ಒಂದು ಪುಟ್ಟ ಮಗುವಿನ ನಗು-ಅಳು ಏನೇ ಇದ್ದರೂ ಚಂದ. ಅಂತಹ ಮಗುವಿನ ಸ್ವಾಗತಕ್ಕೆ ಮನೆಯವರೆಲ್ಲಾ ಸಿದ್ಧರಾಗಿರುತ್ತಾರೆ. ಅವರ ಸಂಭ್ರಮ ಪೂರ್ಣಗೊಳ್ಳುವ ಮೊದಲೇ ಅವಗಢ ಉಂಟಾದರೆ ಸಹಿಸಲಾಗದಷ್ಟು ನೋವುಂಟಾಗುವುದು ಸಹಜ. ಅನೇಕ ಕನಸುಗಳ ಹೊತ್ತು ಗರ್ಭಿಣಿಯಾದವರಿಗೆ ಅಕಾಲಿಕವಾಗಿ ಮಗುವನ್ನು ಕಳೆದುಕೊಳ್ಳುವ ದುಃಖ ಮಾನಸಿಕ ಆರೋಗ್ಯ ಕೆಡಿಸುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.

ಗರ್ಭಪಾತದಿಂದ ಪಾರಾಗಲು ಈ 8 ಆಹಾರಗಳಿಂದ ದೂರವಿರಿ!

ಗಮನಕ್ಕೆ ಬಾರದ ಅವಗಢ ಅಥವಾ ಸೇವಿಸಿದ್ದ ಔಷಧಗಳ ಅಡ್ಡಪರಿಣಾಮ ಅಥವಾ ಅಸಂಬದ್ಧವಾದ ಜೀವನ ಶೈಲಿಯಿಂದ ಗರ್ಭಪಾತ ಉಂಟಾಗಬಹುದು. ಹಾಗಾಗಿ ವೈದ್ಯರ ಸಲಹೆ, ಸೂಕ್ತ ಜೀವನ ಕ್ರಮ ಮತ್ತು ಉತ್ತಮ ಹವ್ಯಾಸದಿಂದ ಗರ್ಭಪಾತವಾಗುವುದನ್ನು ತಡೆಯಬಹುದು. ಗರ್ಭಿಣಿಯು ತನ್ನ ಮತ್ತು ಮಗುವಿನ ಆರೋಗ್ಯದ ಕುರಿತು ಸೂಕ್ತ ಅರಿವು ಹಾಗೂ ಕಾಳಜಿಯನ್ನು ಹೊಂದಿರಬೇಕು. ಈ ವಿಚಾರಕ್ಕೆ ಸಂಬಂಧಿಸಿದ ಕೆಲವು ಸಲಹೆಗಳು ಇಲ್ಲಿವೆ... 

ಸಲಹೆ-1

ಸಲಹೆ-1

ಗರ್ಭಿಣಿಯರು ಸುಲಭವಾಗಿ ಜೀರ್ಣವಾಗುವ ಸಾತ್ವಿಕ ಆಹಾರವನ್ನು ಸೇವಿಸಬೇಕು. ಮಸಾಲೆಯುಕ್ತ, ಮಾಂಸ, ಎಣ್ಣೆಯುಕ್ತ ಆಹಾರ ಪದಾರ್ಥಗಳನ್ನು ಕಡಿಮೆ ಅಥವಾ ಅವುಗಳಿಂದ ದೂರ ಇರಬೇಕು

ಸಲಹೆ-2

ಸಲಹೆ-2

ಗರ್ಭಿಣಿಯರು ಮನಸ್ಸಿಗೆ ಒತ್ತಡವನ್ನುಂಟುಮಾಡುವ ಕೆಲಸದಿಂದ ದೂರ ಇರಬೇಕು. ಕಚೇರಿಯಲ್ಲಿ ಅತಿಯಾಗಿ ಕೆಲಸ ಮಾಡುವುದು ಅಥವಾ ರಾತ್ರಿ ಪಾಳಿಕೆಲಸಕ್ಕೆ ಹೋಗಿ ನಿದ್ರೆಗೆಡುವುದು ತಪ್ಪಿಸಿದರೆ ಗರ್ಭಪಾತದ ಸಮಸ್ಯೆಯಿಂದ ದೂರ ಇರಬಹುದು.

ಚೀಸ್ ತಿಂದರೂ ಗರ್ಭಪಾತವಾಗಬಹುದು ಜೋಪಾನ!

ಸಲಹೆ-3

ಸಲಹೆ-3

ಉಸಿರಾಟದ ವ್ಯಾಯಾಮ, ಚಿನ್ನಗಿ ನಿದ್ರೆ ಮತ್ತು ಧ್ಯಾನ ಮಾಡುವುದರಿಂದ ದೇಹದ ಆರೋಗ್ಯ ಕ್ರಮಬದ್ಧವಾಗಿರುತ್ತದೆ.

ಸಲಹೆ-4

ಸಲಹೆ-4

ಲಘು ವ್ಯಾಯಾಮ, ಮಿತವಾದ ವಾಕಿಂಗ್ ಮತ್ತು ಸೂಕ್ತ ಯೋಗಾಸನ ಮಾಡುವುದರಿಂದ ಗರ್ಭಪಾತವನ್ನು ತಡೆಯಬಹುದು.

ಸಲಹೆ-5

ಸಲಹೆ-5

ಆಯುರ್ವೇದದ ಪ್ರಕಾರ ಗರ್ಭಿಣಿಯರು ತ್ರಿಪಾಲ ಚೂರ್ಣವನ್ನು ಸೇವಿಸಬೇಕು. ಇದು ಸಮತೋಲನವನ್ನು ಕಾಪಾಡಿ ಗರ್ಭಪಾತ ಆಗುವುದನ್ನು ತಡೆಯುತ್ತದೆ.

ಸಲಹೆ-6

ಸಲಹೆ-6

ಗರ್ಭಿಣಿಯರು ಮದ್ಯದ ಚಟದಿಂದ ದೂರವುಳಿಯುವುದೇ ಒಳ್ಳೆಯದು. ಅಲ್ಲದೆ ಸ್ವಚ್ಛವಾದ ವಾತಾವರಣ ಮತ್ತು ಒತ್ತಡ ರಹಿತ ಮನಸ್ಸಿನಿಂದ ಇರಬೇಕು.

ಎರಡೆರಡು ಬಾರಿ ಗರ್ಭಪಾತವಾದರೆ, ಮುನ್ನೆಚ್ಚರಿಕೆ ಕ್ರಮ ಹೀಗಿರಲಿ

English summary

Ayurveda Tips To Prevent Miscarriage

Miscarriages cause lots of emotional pain for any couple that is eagerly waiting to welcome a new soul into this world. A miscarriage could occur due to many reasons. Though some of them cannot be prevented, some can be prevented by making certain lifestyle changes. Therefore, here are some necessary steps to take in order to prevent miscarriage.
Subscribe Newsletter