For Quick Alerts
ALLOW NOTIFICATIONS  
For Daily Alerts

ಎರಡೆರಡು ಬಾರಿ ಗರ್ಭಪಾತವಾದರೆ, ಮುನ್ನೆಚ್ಚರಿಕೆ ಕ್ರಮ ಹೀಗಿರಲಿ

By Manu
|

ಪ್ರಕೃತಿಯು ಸ್ತ್ರೀಗೆ ನೀಡುವ ವರಪ್ರಸಾದವೇ ತಾಯ್ತನ. ಮಗುವಿನ ಜನನ ಯಾವ ತಾಯಿಗೂ ಪುಳಕವನ್ನುಂಟು ಮಾಡುವಂತಹ ಮಧುರ ಭಾವನೆಯಾಗಿದೆ. ವರವಾದ ಈ ಕೊಡುಗೆಯನ್ನು ಆಕೆ ಬಹು ಜೋಪಾನವಾಗಿ ಕಾಯ್ದುಕೊಳ್ಳಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಕೊಂಚ ಯಾಮಾರಿದರೂ ತಾಯಿ ಮತ್ತು ಮಗುವಿಗೆ ತೊಂದರೆ. ಈ ಅಪಾಯ ಜೀವನ ಪರ್ಯಂತ ನೋವಾಗಿ ಪರಿಣಮಿಸಲೂಬಹುದು.

ಆದರೆ ನೈಸರ್ಗಿಕ ಪ್ರಕ್ರಿಯೆಯಾದ ತಾಯ್ತನದಲ್ಲಿ ಸಣ್ಣ ಎಡವುವಿಕೆಯು ದೊಡ್ಡ ರೋದನಕ್ಕೆ ಕಾರಣವಾಗುತ್ತದೆ. ತಾಯಿಯಾಗುವಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧಳಾಗಿರಬೇಕು. ಇನ್ನೊಂದು ಜೀವವನ್ನು ತನ್ನೊಂದಿಗೆ ಉದರಲ್ಲಿ ಕಾಪಾಡುವ ಆಕೆಗೆ ಅಸಡ್ಡೆ ಎಂಬುದು ಹತ್ತಿರ ಸುಳಿಯಲೇಬಾರದು. ಮನೆಮಂದಿಯ ಪ್ರೀತಿ ಕಾಳಜಿಗಿಂತಲೂ ನೀವು ನಿಮ್ಮನ್ನು ಮೊದಲು ಪ್ರೀತಿಸಬೇಕು ಅಂತೆಯೇ ನಿಮ್ಮ ಬಗ್ಗೆ ಆದಷ್ಟು ನೀವು ಕಾಳಜಿ ತೆಗೆದುಕೊಳ್ಳಬೇಕು.

Is Getting Pregnant Easy After Two Miscarriages?

ಅದಾಗ್ಯೂ ಕೆಲವೊಂದು ವಿಷಮ ಸ್ಥಿತಿಗಳಲ್ಲಿ ನಿಮ್ಮ ಮಗುವನ್ನು ನೀವು ಕಳೆದುಕೊಳ್ಳುವಂತಹ ಸ್ಥಿತಿ ಬಂದೊದಗುತ್ತದೆ. ಗರ್ಭಪಾತ ಸಮಸ್ಯೆಗಳುಂಟಾದಾಗ ತಾಯಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತಗೊಳ್ಳುತ್ತಾಳೆ. ಒಂದು ರೀತಿಯ ಭಯ ಆಕೆಯನ್ನು ಕಾಡುತ್ತದೆ. ಇನ್ನೊಮ್ಮೆ ತಾಯಿಯಾಗಲು ನನ್ನಿಂದ ಸಾಧ್ಯವೇ ಎಂಬ ಹೆದರಿಕೆ ಮನಸ್ಸನ್ನು ಆವರಿಸುತ್ತದೆ. ಇನ್ನು ಎರಡೆರಡು ಬಾರಿ ಗರ್ಭಪಾತ ಉಂಟಾದ ತಾಯಿಯ ಮನಸ್ಥಿತಿಯನ್ನು ಯೋಚನೆ ಮಾಡಲೂ ಆಗುವುದಿಲ್ಲ. ಸ್ತ್ರೀಯರು ಗರ್ಭಪಾತ ಮಾಡಿಕೊಳ್ಳಲು ಕಾರಣಗಳೇನು?

ಈ ಸಮಯದಲ್ಲಿ ಮನೆಯವರ ಬೆಂಬಲ ಆಕೆಗೆ ಬೇಕಾಗುತ್ತದೆ. ಆಕೆಯನ್ನು ಸಂತೈಸುವವರು ಧೈರ್ಯತುಂಬುವವರು ಆಕೆಯ ಸಮೀಪ ಇರಬೇಕು. ಎರಡು ಬಾರಿ ಗರ್ಭಪಾತ ಉಂಟಾದ ನಂತರ ಇನ್ನು ತಮಗೆ ಮಗು ಹೆರಲು ಸಾಧ್ಯವೇ ಇಲ್ಲ ಎಂಬುದು ಅವರ ಮನದಾಳದಲ್ಲಿ ನಾಟಿರುತ್ತದೆ. ಆದರೆ ಇದು ನಿನ್ನಿಂದ ಸಾಧ್ಯ ಎಂಬುದನ್ನು ಆಕೆಗೆ ಮನವರಿಕೆ ಮಾಡಿಕೊಟ್ಟು ಅವರು ಮನೋರೋಗಿಯಾಗಲು ಬಿಡಬಾರದು. ಇನ್ನು ವಿಜ್ಞಾನ ಲೋಕ ಹೇಳುಂತೆ ಎರಡು ಬಾರಿ ಗರ್ಭಪಾತ ಉಂಟಾದ ನಂತರವೂ ಹೆಣ್ಣು ತಾಯಿಯಾಗಬಹುದು ಇದರಲ್ಲಿ ಯಾವುದೇ ಅನುಮಾನ ಬೇಡ ಎಂದಾಗಿದೆ.

ಪರಿಣಿತರ ಮಾತು
ಹೆಚ್ಚಿನ ಮಹಿಳೆಯರಲ್ಲಿ ಗರ್ಭಪಾತದಂತಹ ಸಮಸ್ಯೆಗಳು ಅತಿ ಕಡಿಮೆ ಉಂಟಾಗುತ್ತದೆ. ಎರಡು ಗರ್ಭಪಾತದ ನಂತರ ಮೂರನೆಯದ್ದೂ ಗರ್ಭಪಾತಕ್ಕೆ ಕಾರಣವಾಗುತ್ತದೆ ಎಂಬುದು 26 ಶೇಕಡಾ ನಿಜವಲ್ಲ. ಗರ್ಭಪಾತದ ನಂತರವೂ ಆಕೆ ತಾಯಿಯಾಗಿ ಮಗುವನ್ನು ಹೆತ್ತ ಹಲವಾರು ಉದಾಹರಣೆಗಳಿವೆ. ಗರ್ಭಪಾತವಾದಾಗ ತಿನ್ನಬಾರದ ಆಹಾರಗಳು

ಆದ್ದರಿಂದ ಗರ್ಭಪಾತ ಉಂಟಾದಾಗ ಧೈರ್ಯಗೆಡದೇ ಇನ್ನೊಂದು ಮಗುವಿಗಾಗಿ ಸಿದ್ಧರಾಗಿ, ಧೈರ್ಯದಿಂದ ಈ ಮಗುವನ್ನು ಜೋಪಾನ ಮಾಡುವ ವಾಗ್ದಾನವನ್ನು ತೆಗೆದುಕೊಳ್ಳಿ. ಸಾಕಷ್ಟು ವಿಶ್ರಾಂತಿಯನ್ನು ನೀವು ಪಡೆಯಲೇಬೇಕಾಗುತ್ತದೆ. ನಿಮ್ಮ ಆರೋಗ್ಯದ ಮೇಲೆ ಅಸಡ್ಡೆ ತೋರದಿರುವುದು ಒಳಿತು.

ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು
ಗರ್ಭಪಾತ ಉಂಟಾದ ಬಳಿಕ ಮತ್ತೊಮ್ಮೆ ನೀವು ಗರ್ಭಧರಿಸಿದ್ದೀರಿ ಎಂದಾದಲ್ಲಿ ಹುಟ್ಟುತ್ತಿರುವ ಮಗವಿನ ಬಗ್ಗೆ ನೀವು ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ಅಂತೆಯೇ ಗರ್ಭಪಾತದಂತಹ ಅಪಾಯಗಳು ಉಂಟಾಗದಂತೆ ಈ ಪರೀಕ್ಷೆಗಳು ತಡೆಯುತ್ತವೆ.

ರಕ್ತಪರೀಕ್ಷೆ, ವರ್ಣತಂತುವಿನ ಪರೀಕ್ಷೆ, ಅಲ್ಟ್ರಾ ಸೌಂಡ್ಸ್, ಹಿಸ್ಟ್ರಿಯೊಸ್ಕೊಪೀಸ್, ಮುಂತಾದುವು. ಮಹಿಳೆಯ ರಕ್ತದಲ್ಲಿ ಈ ಸಮಸ್ಯೆಗಳನ್ನು ಪತ್ತೆಹಚ್ಚಲು ಈ ಪರೀಕ್ಷೆಗಳು ನೆರವಾಗಲಿದ್ದು, ಗರ್ಭಪಾತಕ್ಕೆ ಕಾರಣವಾಗುವ ಹಾರ್ಮೋನು ವ್ಯವಸ್ಥೆ ಮತ್ತು ಗರ್ಭಾಶಯದ ಸಮಸ್ಯೆಗಳನ್ನು ಪತ್ತೆಹಚ್ಚುತ್ತದೆ.

ಈ ಪರೀಕ್ಷೆಗಳು ಆಕೆಯ ಸಮಸ್ಯೆಗಳನ್ನು ಎತ್ತಿ ತೋರಿಸಲಿದ್ದು ಇದರಿಂದ ಆಕೆ ಪೂರ್ವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದಾಗಿದೆ ಅಂತೆಯೇ ಪರಿಣಿತರ ಮಾರ್ಗದರ್ಶನದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಭವಿಷ್ಯದಲ್ಲಿ ಗರ್ಭಪಾತ ಉಂಟಾಗದಂತೆ ಎಚ್ಚರಿಕೆ ವಹಿಸಲು ಆರೋಗ್ಯಕರ ಜೀವನ ಪದ್ಧತಿಯನ್ನು ಆಕೆ ಅನುಸರಿಸಬೇಕು.

ಎರಡು ಗರ್ಭಪಾತದ ನಂತರ ಮಹಿಳೆಯು ಪುನಃ ಗರ್ಭಧರಿಸಿದ್ದಾಳೆ ಎಂದಾದಲ್ಲಿ ಆಕೆ ಪ್ರಿ ನಟಲ್ ವಿಟಮಿನ್‎ಗಳು ಮತ್ತು ನಾರುಳ್ಳ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಿಯಮಿತ ನ್ಯೂಟ್ರಿಶಿಯಸ್ ಡಯೆಟ್ ಅನ್ನು ಆಕೆ ಅನುಸರಿಸಬೇಕು. ವೈದ್ಯರೊಂದಿಗೆ ಸಮಾಲೋಚಿಸಿ ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಸೂಕ್ತ. ಅಂತೆಯೇ ಮಾನಸಿಕ ಸ್ಥೈರ್ಯ ಮತ್ತು ಸಿದ್ಧತೆಯನ್ನು ನೀವು ಮಾಡಿಕೊಳ್ಳಲೇಬೇಕಾಗುತ್ತದೆ.

Story first published: Friday, April 22, 2016, 10:05 [IST]
X
Desktop Bottom Promotion