ಗರ್ಭಿಣಿಯರೇ, ನೆನಪಿಡಿ 'ಎನರ್ಜಿ ಡ್ರಿಂಕ್' ಕಡೆ ಕಣ್ಣೆತ್ತಿಯೂ ನೋಡಬೇಡಿ!

By: Arshad
Subscribe to Boldsky

ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಮನೆಯ ಹಿರಿಯರು ಗರ್ಭವತಿಗೆ ಸಲಹೆ ನೀಡಿಯೇ ಇರುತ್ತಾರೆ. ಆದರೆ ಈ ಪಟ್ಟಿಯಲ್ಲಿ ಎನರ್ಜಿ ಡ್ರಿಂಕ್ ಎಂಬ ಅಪಾಯಕಾರಿ ಪೇಯ ಇರುವುದೇ ಇಲ್ಲ!

ಗರ್ಭಾವಸ್ಥೆಯಲ್ಲಿ ಈ ಪೇಯವನ್ನು ಕುಡಿಯುವುದು ಎಷ್ಟು ಸುರಕ್ಷಿತ? ಎನರ್ಜಿ ಎಂದರೆ ಶಕ್ತಿ ನೀಡುವ ಪೇಯ ಅಪಾಯಕಾರಿಯಾಗುವುದಾದರೂ ಹೇಗೆ? ಗರ್ಭಾವಸ್ಥೆಯಲ್ಲಿ ಇದನ್ನು ಏಕೆ ಸೇವಿಸಬಾರದು ಎಂಬ ಪ್ರಶ್ನೆಗಳಿಗೆ ಉತ್ತರ ಪಡೆಯಲು ಮುಂದೆ ಓದಿ..

 ಈ ಪೇಯದಲ್ಲಿ ಏನೇನಿದೆ?

ಈ ಪೇಯದಲ್ಲಿ ಏನೇನಿದೆ?

ಈ ಪೇಯದಲ್ಲಿ ವಿಟಮಿನ್ ಬಿ, ಕಾರ್ಬೋಹೈಡ್ರೇಟುಗಳು ಹಾಗೂ ಸಾಕಷ್ಟು ಕೆಫೀನ್ ಸಹಾ ಇರುತ್ತದೆ. ಆದರೆ ಇವು ಹಾನಿಕಾರಕವಲ್ಲವಲ್ಲ? ಗರ್ಭಾವಸ್ಥೆಯಲ್ಲಿ ಇವು ಹೇಗೆ ಹಾನಿ ಎಸಗುತ್ತವೆ? ಆದರೆ ಇದರಲ್ಲಿರುವ ಅಗಾಧ ಪ್ರಮಾಣದ ಕೆಫೀನ್ ಗರ್ಭಾವಸ್ಥೆಯಲ್ಲಿ ಮಾರಕವಾದ ವಸ್ತುವಾಗಿವೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಈ ಪೇಯ ಬೇಡ.

ಆದರೂ, ಎಷ್ಟು ಪ್ರಮಾಣ ಮೀರಿದರೆ ಇದು ಹಾನಿಕರ?

ಆದರೂ, ಎಷ್ಟು ಪ್ರಮಾಣ ಮೀರಿದರೆ ಇದು ಹಾನಿಕರ?

ಒಂದು ದಿನದ ಅವಧಿಯಲ್ಲಿ 200mg ಯಷ್ಟು ಕೆಫೀನ್ ಮೀರಿದರೆ ಇದು ಆರೋಗ್ಯಕ್ಕೆ ಮಾರಕ. ಒಂದು ವೇಳೆ ನಿಮಗೆ ಟೀ,ಕಾಫಿ ಅಥವಾ ಕೆಫೀನ್ ಇರುವ ತಿಂಡಿಗಳು ಇಷ್ಟವಿದ್ದರೆ ಇವುಗಳ ಸೇವನೆಯಿಂದ ಈಗಾಗಲೇ ಸಾಕಷ್ಟು ಕೆಫೀನ್ ನಿಮ್ಮ ದೇಹವನ್ನು ಸೇರಿರುತ್ತದೆ. ಆದರೆ ಎನರ್ಜಿ ಡ್ರಿಂಕ್ ಕುಡಿದರೆ ಈ ಪ್ರಮಾಣ ಅತಿ ಹೆಚ್ಚಾಗುತ್ತದೆ.

ಗರ್ಭಿಣಿಯರೇ ತಂಪು ಪಾನೀಯ ಕಡೆ ಕಣ್ಣೆತ್ತಿಯೂ ನೋಡಬೇಡಿ!

ಆದರೂ ಕೊಂಚವೇ ಕುಡಿಯಬಹುದಲ್ಲ?

ಆದರೂ ಕೊಂಚವೇ ಕುಡಿಯಬಹುದಲ್ಲ?

ಕೆಲವರು ಅಂದುಕೊಂಡಂತೆ ಕೊಂಚ ಪ್ರಮಾಣದಲ್ಲಿ ಕುಡಿದರೆ ಏನೂ ತೊಂದರೆ ಇಲ್ಲ. ಆದರೆ ಗರ್ಭಾವಸ್ಥೆಯಲ್ಲಿ ಕುಡಿಯದಿರುವುದೇ ಒಳ್ಳೆಯದು. ಏಕೆಂದರೆ ಪ್ರತಿ ಬ್ರಾಂಡ್ ನ ಪೇಯದಲ್ಲಿಯೂ ಈ ಪ್ರಮಾಣ ಹೆಚ್ಚು ಕಡಿಮೆಯಾಗುತ್ತಿರುತ್ತದೆ. ಅಲ್ಲದೇ ದಿನದ ಇತರ ಅವಧಿಯಲ್ಲಿ ಸೇವಿಸಿದ್ದ ಇತರ ಪೇಯಗಳಲ್ಲಿರುವ ಕೆಫೀನ್ ನಿಮಗೆ ಗೊತ್ತಿಲ್ಲದಂತೆಯೇ ಗರಿಷ್ಟ ಮಿತಿಯನ್ನು ದಾಟಿರಬಹುದು. ಆದ್ದರಿಂದ ನಿಮ್ಮ ಲೆಕ್ಕಾಚಾರ ನಿಮಗೇ ಗೊತ್ತಿಲ್ಲದಂತೆ ಏರುಪೇರಾಗಿ ಆರೋಗ್ಯಕ್ಕೆ ಮಾರಕವಾಗಬಹುದು. ಆದ್ದರಿಂದ ಗರ್ಭಾವಸ್ಥೆಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುವುದು ಸಲ್ಲದು.

ಈ ಬಗ್ಗೆ ನಡೆದ ಸಂಶೋಧನೆಗಳಿಂದ ಏನಾದರೂ ಅಪಾಯವಾಗಿರುವುದು ಕಂಡುಬಂದಿದೆಯೇ?

ಈ ಬಗ್ಗೆ ನಡೆದ ಸಂಶೋಧನೆಗಳಿಂದ ಏನಾದರೂ ಅಪಾಯವಾಗಿರುವುದು ಕಂಡುಬಂದಿದೆಯೇ?

ಗರ್ಭಾವಸ್ಥೆಯಲ್ಲಿ ಕೆಫೀನ್ ಸೇವನೆಯಿಂದ ಕೆಲವು ತೊಂದರೆಗಳು ಎದುರಾಗುವುದನ್ನು ಕೆಲವು ಸಂಶೋಧನೆಗಳು ದೃಢೀಕರಿಸಿವೆ. ಆದರೆ ಈ ಸಂಶೋಧನೆ ಎನರ್ಜಿ ಡ್ರಿಂಕ್ ಮೇಲೆ ನಡೆಸಲಾಗಿದೆಯೇ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರಕುವುದಿಲ್ಲ.

ಇದರ ಅಡ್ಡ ಪರಿಣಾಮಗಳೇನು?

ಇದರ ಅಡ್ಡ ಪರಿಣಾಮಗಳೇನು?

ಇದರಲ್ಲಿರುವ ಅತಿ ಹೆಚ್ಚಿನ ಸಕ್ಕರೆ ಅನಗತ್ಯವಾಗಿ ಹೆಚ್ಚಿನ ಕ್ಯಾಲೋರಿಗಳನ್ನು ನೀಡುತ್ತದೆ ಹಾಗೂ ಇದು ದೇಹದಲ್ಲಿ ಕೊಬ್ಬು ಸಂಗ್ರಹಗೊಳ್ಳಲು ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಲು ನೆರವಾಗುತ್ತದೆ.

ಇದು ಗರ್ಭದಲ್ಲಿರುವ ಮಗುವಿಗೆ ಅಪಾಯವುಂಟುಮಾಡುತ್ತದೆಯೇ?

ಇದು ಗರ್ಭದಲ್ಲಿರುವ ಮಗುವಿಗೆ ಅಪಾಯವುಂಟುಮಾಡುತ್ತದೆಯೇ?

ಕೆಫೀನ್ ಹೆಚ್ಚಿದ್ದಷ್ಟೂ ಮಗುವಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಅಲ್ಲದೇ ತಾಯಿಗೆ ಹೃದಯದ ತೊಂದರೆಗಳನ್ನೂ ಎದುರಿಸುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಗೊತ್ತಿದ್ದೂ ಗೊತ್ತಿದ್ದೂ ಕೆಫೀನ್ ಸೇವಿಸುವುದು ಸರ್ವಥಾ ಜಾಣತನದ ಕ್ರಮವಲ್ಲ. ಆದ್ದರಿಂದ ಎಷ್ಟೇ ಇಷ್ಟವಿದ್ದರೂ ಗರ್ಭಾವಸ್ಥೆಯಲ್ಲಿ ಎನರ್ಜಿ ಡ್ರಿಂಕ್ ಬೇಡವೇ ಬೇಡ.

English summary

Are Energy Drinks Safe During Pregnancy?

Are energy drinks safe during pregnancy? You may have already prepared a list of foods that can be eaten and those that are to be avoided during pregnancy. But you might have missed out one item in the list of foods to be avoided during pregnancy. It is energy drinks! Are energy drinks safe during pregnancy? If you are wondering why seemingly harmless energy drinks must be avoided during pregnancy, read on to know about the reasons.
Subscribe Newsletter