For Quick Alerts
ALLOW NOTIFICATIONS  
For Daily Alerts

ನೋಡಿ ಈ ಆಹಾರಗಳೆಲ್ಲಾ ಗರ್ಭಿಣಿಯರ ಆರೋಗ್ಯಕ್ಕೆ ಬಹಳ ಒಳ್ಳೆಯದು...

By Jays Subramanya
|

ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಮಹಿಳೆಯರಿಗೆ ಸೂಕ್ತ ಪೋಷಕ ಆಹಾರಗಳನ್ನು ನೀಡುವುದು ವಾಡಿಕೆಯಾಗಿದೆ. ಹಿಂದಿನ ಕಾಲದಲ್ಲಿಯೂ ಗರ್ಭಿಣಿ ಮಹಿಳೆಯರ ಆರೋಗ್ಯ ವಿಷಯದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಲಾಗುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯವನ್ನು ಮೂರು ತಿಂಗಳಿನಲ್ಲಿಯೇ ಕಾಪಾಡಿಕೊಂಡಿದ್ದರೆ ಮುಂದೆ ಭವಿಷ್ಯದಲ್ಲಿ ಉಂಟಾಗು ವಿಪತ್ತುಗಳನ್ನು ತಪ್ಪಿಸಬಹುದು ಎಂಬುದು ಇದರ ಹಿಂದಿರುವ ಉದ್ದೇಶವಾಗಿದೆ.

ಹಿರಿಯರ ಕಾಲದಿಂದಲೂ ಗರ್ಭಾವಸ್ಥೆಯಲ್ಲಿ ಮಹಿಳೆಗೆ ಉತ್ತಮ ಪೋಷಕಾಂಶವುಳ್ಳ ಆಹಾರವನ್ನು ನೀಡುತ್ತಾ ಬಂದಿದ್ದೇವೆ. ಇಂದಿನ ದಿನಗಳಲ್ಲಿ ಅಂದು ದೊರಕುತ್ತಿದ್ದು ಅಷ್ಟೊಂದು ಉತ್ತಮ ಆಹಾರಗಳು, ಸೌಲಭ್ಯಗಳೂ ದೊರಕದೇ ಇದ್ದರೂ ಕೆಲವೊಮ್ಮೆ ಅಂತಹ ಆಹಾರಗಳನ್ನು ನಾವು ಹುಡುಕಿಕೊಂಡು ಸೇವಿಸಬೇಕಾಗುತ್ತದೆ.

ಒಮ್ಮೊಮ್ಮೆ ಗರ್ಭಿಣಿಯರಿಗೆ ತಾವು ಯಾವ ಆಹಾರ ಸೇವಿಸಿದರೆ ಉತ್ತಮ ಯಾವುದನ್ನು ಸೇವಿಸಬಾರದು ಎಂಬ ಅರಿವು ತಿಳುವಳಿಕೆ ಇರುವುದಿಲ್ಲ ಅದಕ್ಕೆಂದೇ ಇಂದಿನ ಲೇಖನದಲ್ಲಿ ಅತ್ಯುತ್ತಮವಾಗಿರುವ ಆಹಾರ ವಸ್ತುಗಳ ಪಟ್ಟಿಯನ್ನು ನಾವು ಸಿದ್ಧಪಡಿಸಿದ್ದು ಇದರಿಂದ ನಿಮಗೆ ಮತ್ತು ನಿಮ್ಮ ಮಗುವಿಗೆ ಸೂಕ್ತ ಶಕ್ತಿ ದೊರೆಯುವುದು ಖಂಡಿತ.

ಈ ಪಟ್ಟಿಯಲ್ಲಿರುವ ಆಹಾರ ವಸ್ತುಗಳು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಹಾಲಿನ ಉತ್ಪನ್ನಗಳು, ನೀರು, ಮಾಂಸ ಮೊದಲಾದವುಗಳಾಗಿವೆ. ಗರ್ಭಾವಸ್ಥೆಯಲ್ಲಿ ನಿಮಗೆ ಮತ್ತು ನಿಮ್ಮ ಮಗುವಿಗೆ ಸೂಕ್ತವಾದ ಪೋಷಕಾಂಶವನ್ನು ಒದಗಿಸಬೇಕಾಗುತ್ತದೆ. ನೀವು ಈ ದಿನಗಳಲ್ಲಿ ಸೇವಿಸುವ ಆಹಾರವು ಮುಂದೆ ಶಿಶುವಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂಬುದಾಗಿ ವೈದ್ಯರು ಹೇಳುತ್ತಾರೆ. ಆದ್ದರಿಂದ ಈ ಸಮಯದಲ್ಲಿ ಸರಿಯಾದ ಆಹಾರ ಆಯ್ಕೆಯನ್ನು ನೀವು ಮಾಡಬೇಕಾಗುತ್ತದೆ. ಹಾಗಿದ್ದರೆ ನಿಮ್ಮ ಮಗುವಿಗೆ ಉತ್ತಮವಾಗಿರುವ ಮತ್ತು ನಿಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಆಹಾರ ವಸ್ತುಗಳನ್ನು ನೋಡೋಣ..

ದಾಳಿಂಬೆ

ದಾಳಿಂಬೆ

ಬೇಗನೇ ಹೆರಿಗೆಯಾಗುವುದು, ಹೆರಿಗೆ ಸಮಯದಲ್ಲಿನ ಕಷ್ಟಗಳನ್ನು ನಿವಾರಿಸಲು ದಾಳಿಂಬೆ ಸಹಕಾರಿಯಾಗಿದೆ. ಫೊಲೆಟ್, ವಿಟಮಿನ್ ಕೆ, ವಿಟಮಿನ್ ಸಿ, ಐರನ್ ಮತ್ತು ಫೈಬರ್ ಅನ್ನು ಈ ಹಣ್ಣು ಒಳಗೊಂಡಿದೆ. ತಿಂಗಳಲ್ಲಿ ಇದನ್ನು ನೀವು ನಿತ್ಯವೂ ಸೇವಿಸುತ್ತೀರಿ ಎಂದಾದಲ್ಲಿ ನಿಮ್ಮ ಹಿಮೊಗ್ಲೊಬೀನ್ ಮಟ್ಟ ಹೆಚ್ಚುತ್ತದೆ.

ನಟ್ಸ್

ನಟ್ಸ್

ಬಾದಾಮಿ, ಗೇರುಬೀಜ, ವಾಲ್‌ನಟ್ಸ್, ಪೀನಟ್ಸ್, ಪಿಸ್ತಾ ಮೊದಲಾದ ನಟ್ಸ್‌ಗಳು ಕೊಬ್ಬು, ಪ್ರೊಟೀನ್, ವಿಟಮಿನ್‌ಗಳು ಹಾಗೂ ಮಿನರಲ್‌ಗಳನ್ನು ಒಳಗೊಂಡಿವೆ. ನಿಗದಿತ ಸಮಯಕ್ಕಿಂತ ಮಗುವಿನ ಜನನ ಮೊದಲಾದ ಸಮಸ್ಯೆಗಳನ್ನು ತಡೆಗಟ್ಟಲು ಇವುಗಳಲ್ಲಿರುವ ಮೆಗ್ನೇಶಿಯಂ ಸಹಾಯ ಮಾಡುತ್ತದೆ. ದಿನದಲ್ಲಿ ಸ್ನ್ಯಾಕ್ ರೂಪದಲ್ಲಿ ಇದನ್ನು ನಿಮಗೆ ಸೇವಿಸಬಹುದು

ಕಪ್ಪು ದ್ರಾಕ್ಷಿ

ಕಪ್ಪು ದ್ರಾಕ್ಷಿ

ಇದು ರಕ್ತದಲ್ಲಿನ ಹಿಮೊಗ್ಲೊಬೀನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟುಕೊಂಡು ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ. ದ್ರಾಕ್ಷಿ ನೆನೆಸಿಟ್ಟ ನೀರನ್ನೂ ಸೇವಿಸಬೇಕು. ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುತ್ತದೆ.

ಬೀಟ್‌ರೂಟ್

ಬೀಟ್‌ರೂಟ್

ಗರ್ಭಾವಸ್ಥೆಯಲ್ಲಿ ಉಂಟಾಗುವ ಹಲವಾರು ಸಮಸ್ಯೆಗಳನ್ನು ಮಟ್ಟ ಹಾಕಲು ಬೀಟ್‌ರೂಟ್ ಸಹಕಾರಿಯಾಗಿದೆ. ಇದು ರಕ್ತವನ್ನು ಶುದ್ಧೀಕರಿಸಿ ಕಬ್ಬಿಣದ ಮಟ್ಟವನ್ನು ವರ್ಧಿಸುತ್ತದೆ. ಅಂತೆಯೇ ಗರ್ಭಿಣಿಯರಲ್ಲಿ ರಕ್ತಹೀನತೆಯನ್ನು ಇದು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಅಂತೆಯೇ ಸಂಧಿ ನೋವು ಮತ್ತು ಕಾಲುಗಳು ಊದಿಕೊಳ್ಳುವುದನ್ನು ತಡೆಯುತ್ತದೆ.

ಖರ್ಜೂರ

ಖರ್ಜೂರ

ಐರನ್ ಮತ್ತು ಪೊಲೇಟ್‌ಗಳನ್ನು ಖರ್ಜೂರ ಒಳಗೊಂಡಿದೆ. ಮಲಬದ್ಧತೆಯನ್ನು ನಿವಾರಿಸುವ ಅಗತ್ಯ ಪೋಷಕಾಂಶಗಳನ್ನು ಖರ್ಜೂರ ಪಡೆದುಕೊಂಡಿದೆ. 36 ನೇ ವಾರದಿಂದ ಆರು ಖರ್ಜೂರಗಳನ್ನು ಸೇವಿಸುವುದರಿಂದ ಹೆರಿಗೆಯನ್ನು ಸುಸೂತ್ರವಾಗಿ ಮಾಡುತ್ತದೆ. ಗರ್ಭಾಶಯದ ಸಂಕೋಚನದಲ್ಲಿ ನೆರವಾಗುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ದಿನಕ್ಕೆ ಒಂದು ಬಾಳೆಹಣ್ಣು ಸೇವನೆಯಿಂದ ಮಲಬದ್ಧತೆ ಸಮಸ್ಯೆ ಗರ್ಭಿಣಿಯರಲ್ಲಿ ದೂರವಾಗುತ್ತದೆ. ಇದಕ್ಕಿಂತ ಸರಳ ಆಹಾರ ಇನ್ನೊಂದಿಲ್ಲ ಎಂದೇ ಹೇಳಬಹುದು. ಹೆಚ್ಚಿನ ಪೊಟಾಶಿಯಂ ಅನ್ನು ಒಳಗೊಂಡಿದೆ. ಇದು ಗರ್ಭಾವಸ್ಥೆಯಲ್ಲಿ ಕರುಳಿನ ಕುಗ್ಗುವಿಕೆಯೊಂದಿಗೆ ವ್ಯವಹರಿಸುವಲ್ಲಿ ಸಹಾಯ ಮಾಡುತ್ತದೆ. ಮೊದಲ ತ್ರೈಮಾಸಿಕದಲ್ಲಿ ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಬೆಳಗ್ಗಿನ ಸುಸ್ತು, ವಾಕರಿಕೆಯನ್ನು ತಡೆಗಟ್ಟಬಹುದು.

ಕಿತ್ತಳೆ

ಕಿತ್ತಳೆ

C ಜೀವಸತ್ವ ಹೇರಳವಾಗಿರುವ ಹಣ್ಣು ಕಿತ್ತಳೆಯಾಗಿದೆ. ಇದಲ್ಲದೆ, ಇದು 90% ನಷ್ಟು ನೀರು ಹೊಂದಿದೆ, ಇದು ಹೈಡ್ರೀಕರಿಸಿದ ಅಗತ್ಯವನ್ನು ಪೂರೈಸುತ್ತದೆ. ಕೆಲವು ಮಹಿಳೆಯರಲ್ಲಿ ವಾಕರಿಕೆ ಮತ್ತು ವಾಂತಿ ಮಾಡುವಿಕೆಯ ಸಮಯದಲ್ಲಿ ಇದು ಕೊಂಚ ಸಮಾಧಾನವನ್ನು ಉಂಟುಮಾಡುತ್ತದೆ. ಕಿತ್ತಳೆಯು ಫೈಬರ್ ಮತ್ತು ಫೋಲೇಟ್ ಅನ್ನು ಹೊಂದಿದೆ.

ಅಂಜೂರದ ಹಣ್ಣುಗಳು

ಅಂಜೂರದ ಹಣ್ಣುಗಳು

ಕಬ್ಬಿಣದ ಅಂಶವನ್ನು ಒಳಗೊಂಡಿವೆ. ಇದು ಎರಡನೆಯ ಮತ್ತು ಮೂರನೇ ತ್ರೈಮಾಸಿಕದ ಸಮಯದಲ್ಲಿ ಜರಾಯು ಬೆಳವಣಿಗೆಗೆ ಬಹಳ ಬೇಕಾಗುತ್ತದೆ. ಈ ಆರೋಗ್ಯಕರ ತಿಂಡಿ ನಿಮ್ಮ ಮಗುವಿನ ಒಸಡುಗಳು ಮತ್ತು ಹಲ್ಲುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಡಿಎನ್ಎ ಸೂತ್ರೀಕರಣ ಮತ್ತು ಅಂಗಾಂಶದ ಬೆಳವಣಿಗೆಗೆ ಅಗತ್ಯವಿರುವ ಸತುವನ್ನು ಸಹ ಹೊಂದಿದೆ.

ಸಾಲ್ಮನ್

ಸಾಲ್ಮನ್

ಒಮೆಗಾ -3 ಕೊಬ್ಬಿನಾಮ್ಲವನ್ನು ಹೊಂದಿರುವ ಸಮುದ್ರಾಹಾರದ ಉತ್ತಮ ಮೂಲವೆಂದರೆ ಸಾಲ್ಮನ್. ಮಗುವಿಗೆ ಬೇಕಾಗುವಷ್ಟು ಪೋಷಕಾಂಶಗಳನ್ನು ಪಡೆಯಲು ವಾರಕ್ಕೆ ಎರಡು ರಿಂದ ಮೂರು ಬಾರಿ ಸಾಲ್ಮನ್ ಊಟ ಮಾಡಿದರೆ ಸಾಕು. ಇದು ಭ್ರೂಣದ ಕಣ್ಣು ಮತ್ತು ಮಿದುಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡುತ್ತದೆ. ವಿಟಮಿನ್ ಡಿ ಕೂಡ ಸಾಲ್ಮನ್‌ನಲ್ಲಿ ಸಮೃದ್ಧವಾಗಿದೆ.

ಮೊಟ್ಟೆ

ಮೊಟ್ಟೆ

ಮೊಟ್ಟೆಗಳಲ್ಲಿ ಎಗ್ ಕೋಲೀನ್ ಇದ್ದು ಇದು ಗರ್ಭದಲ್ಲಿ ಮಗುವಿನ ಮೆದುಳಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ಅಮೈನೋ ಆಮ್ಲಗಳು ಮತ್ತು ಮಗುವಿನ ಬೆಳವಣಿಗೆಯನ್ನು ಬೆಂಬಲಿಸುವ ಕೆಲವು ಆರೋಗ್ಯಕರ ಕೊಬ್ಬುಗಳೊಂದಿಗೆ ಪ್ರೋಟೀನ್‌ಗಳನ್ನು ಹೊಂದಿದೆ. ಆದಾಗ್ಯೂ, ಸಾಲ್ಮನ್‌ನಲ್ಲಿನ ವಿಷವನ್ನು ತಡೆಗಟ್ಟಲು ಅದನ್ನು ತಿನ್ನುವ ಮುಂಚೆ ಮೊಟ್ಟೆಯನ್ನು ಬೇಯಿಸಿ ನಂತರ ಸಾಲ್ಮನ್ ಅಡುಗೆ ತಯಾರಿ ಉತ್ತಮ ವಿಧಾನವಾಗಿದೆ.

ಮೊಸರು

ಮೊಸರು

ಒಂದು ಕಪ್ ಮೊಸರು ಒಂದು ಕಪ್ ಹಾಲಿನಂತೆ ಉತ್ತಮವಾಗಿರುತ್ತದೆ, ವಾಸ್ತವವಾಗಿ ಹಾಲಿಗಿಂತ ಹೆಚ್ಚಾಗಿ ಮೊಸರು ಹೆಚ್ಚು ಕ್ಯಾಲ್ಸಿಯಂ ಹೊಂದಿದೆ. ಇದಲ್ಲದೆ, ಮೊಸರು ಸಹ ಪ್ರೋಟೀನ್ ಮತ್ತು ಫೋಲಿಕ್ ಆಮ್ಲದೊಂದಿಗೆ ರಚಿಸಲ್ಪಟ್ಟಿದೆ. ಇದನ್ನು ಯಾವುದೇ ಹಣ್ಣಿನೊಂದಿಗೆ ಕೂಡಾ ಸೇವಿಸಬಹುದು. ದಿನದಲ್ಲಿ ನಾಲ್ಕು ಬಾರಿ (1200 ಮಿಗ್ರಾಂ) ಯೋಗರ್ಟ್ ಸೇವನೆಯನ್ನು ಮಾಡಬಹುದು.

ಬ್ರೊಕೊಲಿ ಮತ್ತು ಹಸಿರು ತರಕಾರಿಗಳು

ಬ್ರೊಕೊಲಿ ಮತ್ತು ಹಸಿರು ತರಕಾರಿಗಳು

ಬ್ರೋಕೊಲಿ ಮತ್ತು ಹಸಿರು ಎಲೆಗಳ ತರಕಾರಿಗಳನ್ನು ತಿನ್ನುವುದಕ್ಕೆ ವೈದ್ಯರು ಶಿಫಾರಸು ಮಾಡುತ್ತಾರೆ. ಏಕೆಂದರೆ, ಗರ್ಭಧಾರಣೆಯ ಮೊದಲ ತಿಂಗಳಲ್ಲಿ ಜನನ ದೋಷಗಳು, ಮೊದಲಾದ ತೊದರೆಗಳು ಸಂಭವಿಸಿದಲ್ಲಿ ಇವುಗಳು ಬೆನ್ನೆಲುಬು ಮತ್ತು ಮಿದುಳಿನ ದೋಷಗಳನ್ನು ತಡೆಯುತ್ತವೆ. ಶತಾವರಿಯ, ಪಾಲಕ, ಕೋಸುಗಡ್ಡೆ, ಮೊದಲಾದ ತರಕಾರಿಗಳು ಜನನ ದೋಷಗಳೊಂದಿಗೆ ವ್ಯವಹರಿಸುವ ರೀತಿಯಲ್ಲಿ ಪೌಷ್ಠಿಕಾಂಶ ಫಾಲಿಕ್ ಆಮ್ಲವವನ್ನು ಒಳಗೊಂಡಿವೆ.

ಬೇಳೆಕಾಳುಗಳು

ಬೇಳೆಕಾಳುಗಳು

ಮಿದುಳಿನ ಬೆಳವಣಿಗೆ ಮತ್ತು ಮಗುವಿನ ನರಮಂಡಲದ ಬೆಳವಣಿಗೆಗೆ ಫೋಲಿಕ್ ಆಮ್ಲ ಅಗತ್ಯವಿದೆ. ಇದು ಬೇಳೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ ಮತ್ತು ಅವುಗಳು ಕರುಳಿನ-ಸ್ನೇಹಿಯಾಗಿರುತ್ತವೆ. ನರ ದೋಷಗಳನ್ನು ತಡೆಗಟ್ಟಲು ಬೇಳೆಗಳನ್ನು ಮೊದಲ ತ್ರೈಮಾಸಿಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಲು ಶಿಫಾರಸು ಮಾಡಲಾಗಿದೆ. ಬೇಳೆಗಳು ಕಬ್ಬಿಣ, ಪ್ರೋಟೀನ್ ಮತ್ತು ವಿಟಮಿನ್ ಬಿ 6 ಅನ್ನು ಕೂಡಾ ನೀಡುತ್ತವೆ.

ಬೆಲ್ ಪೆಪ್ಪರ್ಸ್

ಬೆಲ್ ಪೆಪ್ಪರ್ಸ್

ಇದನ್ನು ಮೂರು ಬಾರಿ ಸೇವಿಸುವುದು ಉತ್ತಮ ಏಕೆಂದರೆ ಇದು ವಿಟಮಿನ್ ಸಿಯನ್ನು ಹೊಂದಿದೆ. ಬೀಟಾ ಕ್ಯಾರಟಿನ್ ಅನ್ನು ಇದು ಗರ್ಭಿಣಿಯರಿಗೆ ನೀಡುತ್ತದೆ. ಆದ್ದರಿಂದ ನಿಮ್ಮ ಸಲಾಡ್‌ಗಳಲ್ಲಿ, ಪಾಸ್ತಾ, ಪಲ್ಯದಲ್ಲಿ ಇದನ್ನು ಹೆಚ್ಚು ಬಳಸಿಕೊಂಡು ಸೇವಿಸಿ. ಭ್ರೂಣದ ಬೆಳವಣಿಗೆಗೆ ಇದು ಪೂರಕವಾಗಿದೆ.

ಅವೊಕಾಡೊ

ಅವೊಕಾಡೊ

ಮಗುವಿನ ಬೆಳವಣಿಗೆಗೆ ಅಗತ್ಯವಾಗಿರುವ ಫೊಲಿಕ್ ಆಸಿಡ್ ಅನ್ನುವ ಅವೊಕಾಡೊ ಒಳಗೊಂಡಿದೆ. ಐರನ್ ಅಂಶವನ್ನು ಇದು ಹೊಂದಿದ್ದು ಬೆಳಗ್ಗಿನ ಕಾಯಿಲೆಗಳಿಗೆ ಇದು ಒಳ್ಳೆಯ ಔಷಧವಾಗಿದೆ. ನಿಮ್ಮ ಟೋಸ್ಟ್‌ನಲ್ಲಿ ಸ್ನ್ಯಾಕ್ಸ್‌ನಂತೆ ಇದನ್ನು ಬಳಸಿಕೊಳ್ಳಿ. ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.

ಲೀನ್ ಮೀಟ್

ಲೀನ್ ಮೀಟ್

ಕೆಂಪು ಮಾಂಸ ಇಲ್ಲವೇ ರೆಡ್ ಮೀಟ್ ಹೆಚ್ಚಿನ ಪ್ರಮಾಣದ ಪ್ರೊಟೀನ್ ಅನ್ನು ಒಳಗೊಂಡಿದೆ. ಮೂರನೇ ಮತ್ತು ಎರಡನೇ ಮಾಸದಲ್ಲಿ ಮಗುವಿನ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. ಐರನ್ ಅಂಶವನ್ನು ಇದು ಹೊಂದಿದ್ದು ಶಿಶುವಿನ ಮೆದುಳಿನ ಬೆಳವಣಿಗೆಗೆ ಬೇಕಾಗಿರುವ ಆಮ್ಜನಕದ ಪೂರೈಕೆಯನ್ನು ಇದು ಮಾಡುತ್ತದೆ. ಎರಡು ವಾರಕ್ಕೊಮ್ಮೆ ಇದರ ಸೇವನೆ ಮಾಡಬೇಕು.

ಬೆರ್ರಿಗಳು

ಬೆರ್ರಿಗಳು

ವಿಟಮಿನ್‌ಗಳು ಮತ್ತು ಮಿನರಲ್‌ಗಳು ಇದರಲ್ಲಿ ಹೆಚ್ಚಾಗಿದ್ದು ಮಗು ಮತ್ತು ತಾಯಿಗೆ ಉತ್ತಮವಾಗಿದೆ. ಇಲಾಗಿಕ್ ಆಸಿಡ್ ಇದರಲ್ಲಿದ್ದು ಕ್ಯಾನ್ಸರ್‌ ತಡೆಗಟ್ಟಲು ಸಹಕಾರಿಯಾಗಿದೆ. ಕೆಲವೊಂದು ಬೆರ್ರಿಗಳು ಗರ್ಭಿಣಿಯರಲ್ಲಿ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತವೆ.

ಸಿಹಿಗೆಣಸು

ಸಿಹಿಗೆಣಸು

ಇದನ್ನು ಸೇವಿಸುವುದರಿಂದ ಗರ್ಭಿಣಿಯರಲ್ಲಿ ವಿಟಮಿನ್ ಅಂಶ ಹೆಚ್ಚುವರಿಯಾಗಲಿದೆ. ಬೀಟಾ ಕ್ಯಾರಟಿನ್ ಇದರಲ್ಲಿದ್ದು ಇದು ವಿಟಮಿನ್ ಆಗಿ ಪರಿವರ್ತನೆಗೊಂಡು ಗರ್ಭಿಣಿಯರ ದೇಹವನ್ನು ಸೇರುತ್ತದೆ. ಇದು ನಾರಿನಂಶವನ್ನು ಹೊಂದಿದ್ದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಅಂತೆಯೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.

ಮಾವಿನ ಹಣ್ಣು

ಮಾವಿನ ಹಣ್ಣು

ಕಾಲಿನ ಸೆಳೆತಕ್ಕೆ ಮಾವಿನ ಹಣ್ಣು ಉತ್ತಮವಾಗಿದ್ದು, ಸೆಳೆತದಿಂದ ಉಂಟಾಗುವ ದೇಹದ ತೂಕವನ್ನು ಸಮತೋಲನದಲ್ಲಿರಿಸಲು ಮಾವಿನ ಹಣ್ಣು ಸಹಕಾರಿಯಾಗಿದೆ. ಹಣ್ಣುಗಳ ರಾಜನಾಗಿರುವ ಮಾವು ಸೇವಿಸಲು ಉತ್ತಮ ಆಯ್ಕೆ ಎಂದೆನಿಸಿದೆ. ಇದರಲ್ಲಿರುವ ಮೆಗ್ನೇಶಿಯಂ ಸೆಳೆತಗಳನ್ನು ನಿವಾರಿಸುತ್ತದೆ.

ನೀರು

ನೀರು

ಡಿಹೈಡ್ರೇಶನ್ ಪೂರ್ವ ಹೆರಿಗೆಯ ತೊಂದರೆಗೆ ಕಾರಣವಾಗಿದೆ. ಆದ್ದರಿಂದ ನೀರು ಗರ್ಭಿಣಿಗೆ ಅತಿಮುಖ್ಯವಾಗಿದೆ. ಮಗುವಿಗೆ ತಲುಪಬೇಕಾಗಿರುವ ನ್ಯೂಟ್ರಿಶಿಯನ್ ರವಾನೆಯನ್ನು ನೀರು ಮಾಡುತ್ತದೆ. ಸಾಮಾನ್ಯ ಜನರಿಗಿಂತ ಎರಡು ಪಟ್ಟು ನೀರು ಸೇವನೆಯನ್ನು ಮಹಿಳೆ ದಿನವೊಂದಕ್ಕೆ ಮಾಡಬೇಕು ಎಂಬುದಾಗಿ ಶಿಫಾರಸು ಮಾಡಲಾಗಿದೆ.

English summary

20 Good Foods For Pregnant Ladies

Food is one factor that determines a person. The type of food that a person eats routinely shapes up the body and its well-being subsequently. These foods may or may not be to the person's liking and there might not be any regulation in having them. For a normal life lead, this type of food intake is absolutely fine as long as there aren't any health issues. Sometimes, there comes a juncture in life when food must be given utmost importance to and one such phase is pregnancy. Some rules must be followed of what to eat and what not to eat for a healthy baby to be born.
X
Desktop Bottom Promotion