For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ, ಈ 5 ಒಣಫಲಗಳ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ!

By Suma
|

ಸಾಮಾನ್ಯವಾಗಿ ಗರ್ಭಿಣಿಯರು ಒಣಫಲಗಳನ್ನು ತಿನ್ನಬಾರದು ಎಂದು ಹೇಳಲಾಗುತ್ತದೆ. ಆದರೆ ಗರ್ಭಿಣಿಯರು ಒಣಫಲಗಳನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ ಆದರೆ ಇದರ ಪ್ರಮಾಣ ಮಾತ್ರ ನಿಯಮಿತವಾಗಿರಬೇಕು, ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ತಜ್ಞರ ಪ್ರಕಾರ ಪ್ರತಿದಿನ ಗರ್ಭಿಣಿಯರು ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಗ್ರಾಂ ಒಣಫಲಗಳನ್ನು ಸೇವಿಸಿದರೆ ಉತ್ತಮ, ಆದರೆ ಇದಕ್ಕೂ ಹೆಚ್ಚಾಗಬಾರದು. ಅಲ್ಲದೇ ಅವರು ಎಲ್ಲಾ ಒಣಫಲಗಳನ್ನು ತಿನ್ನುವ ಬದಲಿಗೆ ಆಯ್ದ ಕೆಲವೇ ಫಲಗಳನ್ನು ಮಾತ್ರ ಸೇವಿಸಲು ಸಲಹೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಕೇವಲ ಐದು ಒಣಫಲಗಳಿದ್ದು ಮಿತಿಯ ಒಳಗೇ ಗರ್ಭಿಣಿಯರು ಸೇವಿಸಲು ಉತ್ತಮವಾಗಿದ್ದು ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ..

ಬಾದಾಮಿ

ಬಾದಾಮಿ

ಕೆಲವು ಬಾದಾಮಿಗಳನ್ನು ನೀರಿನಲ್ಲಿ ಸುಮಾರು ಆರು ಘಂಟೆಗಳಿಗೂ ಹೆಚ್ಚು ಕಾಲ ನೆನೆಸಿಟ್ಟು ಬಳಿಕ ಸೇವಿಸಬೇಕು. ಇದು ಮಗುವಿನಲ್ಲಿ ಅಲರ್ಜಿಯನ್ನು ಕಡಿಮೆ ಮಾಡುವುದು, ಗರ್ಭಿಣಿಯ ದೇಹದಲ್ಲಿ ನೀರು ತುಂಬಿಕೊಂಡು ರಕ್ತದೊತ್ತಡ ಹೆಚ್ಚಾಗುವ (preeclampsia) ತೊಂದರೆಯನ್ನು ಮತ್ತು ಮಲಬದ್ಧತೆಯಾಗುವ ಸಾಧ್ಯತೆಯಿಂದ ರಕ್ಷಿಸುತ್ತದೆ.

ಶೇಂಗಾಬೀಜ

ಶೇಂಗಾಬೀಜ

ಗರ್ಭಾವಸ್ಥೆಯಲ್ಲಿ ಸೇವಿಸಲು ಉತ್ತಮವಾಗಿರುವ ಮತ್ತು ಅಗ್ಗವಾದ ಒಣಫಲ ಎಂದರೆ ಶೇಂಗಾಬೀಜ. ಆದರೆ ಒಮ್ಮೆ ತಿನ್ನಲು ಪ್ರಾರಂಭಿಸಿದರೆ ತಡೆಯಿಲ್ಲದೇ ತಿನ್ನುತ್ತಲೇ ಹೋಗುವ ಪ್ರಭಾವ ಇದಕ್ಕೆ ಇರುವ ಕಾರಣ ಗರ್ಭಿಣಿಯರು ತಮಗೆ ವಿಧಿಸಿದ ಮಿತಿಯಷ್ಟೇ ಪ್ರಮಾಣದ ಬೀಜಗಳನ್ನು ತಂದು ಅಷ್ಟಕ್ಕೇ ನಿಲ್ಲಿಸಿಬಿಡಬೇಕು. ಅಲ್ಲದೇ ಇದಕ್ಕೆ ಉಪ್ಪು ಖಾರ ಸೇರಿಸದೇ, ಹುರಿಯದೇ, ಹಸಿಯಾಗಿಯೇ ತಿನ್ನಬೇಕು.

ದೊಡ್ಡ ಶೇಂಗಾ (Macadamia Nuts)

ದೊಡ್ಡ ಶೇಂಗಾ (Macadamia Nuts)

ಇದರಲ್ಲಿ ಒಳ್ಳೆಯ ಕೊಬ್ಬು (monounsaturated fat) ಅಥವಾ ಅಸಂತುಲಿತ ಕೊಬ್ಬು ಉತ್ತಮ ಪ್ರಮಾಣದಲ್ಲಿದೆ. ಅಲ್ಲದೇ ಪ್ರೋಟೀನು ಮತ್ತು ಫೋಲೇಟ್ ಎಂಬ ಪೋಷಕಾಂಶಗಳೂ ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿಯ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ ಪ್ರಮಾಣ ಮಿತಿಯೊಳಗಿದ್ದರೆ ಮಾತ್ರ.

ಪಿಸ್ತಾ

ಪಿಸ್ತಾ

ಪಿಸ್ತಾದಲ್ಲಿಯೂ ಉತ್ತಮ ಪ್ರಮಾಣದ ಪ್ರೋಟೀನು, ಕರಗುವ ನಾರು ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಇದು ರಕ್ತದಲ್ಲಿ ನಿಧಾನವಾಗಿ ಗ್ಲೂಕೋಸ್ ಸೇರಿಸುವ ಗುಣವುಳ್ಳದ್ದಾಗಿದೆ, ಅಂದರೆ ಕಡಿಮೆ ಗ್ಲೈಸಮಿಕ್ ಇಂಡೆಕ್ಸ್ ಮಾಪನವನ್ನು ಹೊಂದಿದೆ. ಇದೇ ಕಾರಣಕ್ಕೆ ಸ್ಥೂಲಕಾಯದ ಮತ್ತು ಮಧುಮೇಹವಿರುವ ಗರ್ಭಿಣಿಯರಿಗೆ ಇದೊಂದು ಉತ್ತಮ ಆಹಾರವಾಗಿದೆ.

ಅಕ್ರೋಟು

ಅಕ್ರೋಟು

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಹೃದಯ, ಮೆದುಳು ಮತ್ತು ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತವೆ. ಒಂದು ಅಧ್ಯಯನದ ಪ್ರಕಾರ ಗಭಾವಸ್ಥೆಯಲ್ಲಿ ಅಕ್ರೋಟು ತಿನ್ನುವ ಮೂಲಕ ಮಗುವಿನ ಮೆದುಳಿನ ಬೆಳವಣಿಗೆ, ಕಲಿಯುವ ಸಾಮರ್ಥ್ಯ ಮತ್ತು ಸ್ಮರಣಶಕ್ತಿ ಹೆಚ್ಚುತ್ತದೆ. ಆದರೆ ಇಲ್ಲಿಯೂ ಆರೋಗ್ಯ ತಜ್ಞರು ನೀಡಿದ ಪ್ರಮಾಣಮಿತಿಯ ಎಚ್ಚರಿಕೆಯನ್ನು ಪಾಲಿಸುವುದು ಅಗತ್ಯ.

English summary

Types of nuts you must eat during pregnancy

It was believed that pregnant women must avoid eating nuts. But eating nuts are completely healthy during pregnancy, although, you need to eat them in limited portions only. Nutritionist Swati Dave says that 20-25gms of nuts can be consumed per day, but not more than that. She also lists the types of nuts that you can eat.
Story first published: Monday, March 28, 2016, 20:14 [IST]
X
Desktop Bottom Promotion