Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಗರ್ಭಿಣಿಯರಿಗೆ ಕಾಡುವ ಹೊಟ್ಟೆಯುಬ್ಬರಕ್ಕೆ ಸರಳ ಟಿಪ್ಸ್
ಗರ್ಭಾವಸ್ಥೆಯಲ್ಲಿ ಹೊಟ್ಟೆಯುಬ್ಬರ ಹೆಚ್ಚು ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಗರ್ಭಾವಸ್ಥೆಯ ಆರಂಭ ಹಂತದಲ್ಲಿಯೇ ಹೊಟ್ಟೆಯುಬ್ಬರವು ಸಾಕಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಹಾರ್ಮೋನುಗಳ ಅಸಮತೋಲನವು ಹೊಟ್ಟೆಯುಬ್ಬರವನ್ನು ಗರ್ಭಾವಸ್ಥೆಯಲ್ಲಿ ಉಂಟುಮಾಡುತ್ತದೆ. ಹಾಗಿದ್ದರೆ ಈ ಸಮಸ್ಯೆಯನ್ನು ತಗ್ಗಿಸಲು ನಿಮಗೆ ನೀವೇ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಸಾಕಷ್ಟು ನೀರು ಕುಡಿಯುವುದು ಇದರಲ್ಲಿ ಒಂದಾಗಿದೆ. ಯಾವುದಾದರೂ ಒಂದು ಪರಿಹಾರವನ್ನು ಕಂಡುಕೊಳ್ಳುವ ಬದಲಿಗೆ ವೈದ್ಯರನ್ನು ಕೂಡಲೇ ಸಂಪರ್ಕಿಸುವುದು ಅತಿ ಮುಖ್ಯವಾದುದು. ಈ ಸಮಸ್ಯೆಯನ್ನು ಹೋಗಲಾಡಿಸಲು ಹಲವಾರು ಕ್ರಮಗಳಿದ್ದು ಸಕ್ಕರೆ ಪದಾರ್ಥಗಳನ್ನು ತ್ಯಜಿಸುವುದು, ಕಡಿಮೆ ತಿನ್ನುವುದು, ನಾರಿನಂಶವಿರುವ ಆಹಾರ ಪದಾರ್ಥಗಳ ಸೇವನೆ, ನಿಯಮಿತ ವ್ಯಾಯಾಮ, ಕರಿದ ಪದಾರ್ಥಗಳ ಸೇವನೆಯನ್ನು ಮಾಡದಿರುವುದು, ಒತ್ತಡಗಳಿಂದ ಬಳಲದೇ ಇರುವುದು, ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದು ಮೊದಲಾದವು. ಇದಲ್ಲದೆ ಇನ್ನಷ್ಟು ಪರಿಹಾರಗಳನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದು ಗರ್ಭಾವಸ್ಥೆಯಲ್ಲಿ ಕಾಡುವ ಹೊಟ್ಟೆಯುಬ್ಬರ ಸಮಸ್ಯೆಯನ್ನು ಹೋಗಲಾಡಿಸಲು ಇದು ಸಹಕಾರಿಯಾಗಿದೆ. ಹಾಗಿದ್ದರೆ ಆ ಪರಿಹಾರಗಳೇನು ಎಂಬುದನ್ನು ಇಲ್ಲಿ ನೋಡಿ...

ಮೆಂತೆ
ಹೊಟ್ಟೆಯುಬ್ಬರ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಮೆಂತ್ಯಬೀಜವನ್ನು ಬಳಸಿಕೊಳ್ಳಬಹುದಾಗಿದೆ. ಒಂದು ಗ್ಲಾಸ್ ನೀರಿನಲ್ಲಿ ಹಿಂದಿನ ರಾತ್ರಿ ಮೆಂತ್ಯ ಬೀಜವನ್ನು ನೆನೆಸಿಟ್ಟುಕೊಳ್ಳಿ. ಮರುದಿನ ಮುಂಜಾನೆ ಬೀಜವನ್ನು ತೆಗೆದು ಬರಿಯ ನೀರನ್ನು ಕುಡಿಯಿರಿ. ಹೊಟ್ಟೆಯುಬ್ಬರ ಸಮಸ್ಯೆಗೆ ಇದು ತ್ವರಿತ ಪರಿಹಾರ ಎಂದೆನಿಸಿದೆ.

ಒತ್ತಡವನ್ನು ನಿವಾರಿಸಿಕೊಳ್ಳಿ
ಹೊಟ್ಟೆಯುಬ್ಬರ ಮತ್ತು ಅನಾನುಕೂಲತೆಯನ್ನು ಉಂಟುಮಾಡಲು ಒತ್ತಡ ಮುಖ್ಯ ಕಾರಣವಾಗಿದೆ. ಊಟದ ಸಮಯದಲ್ಲಿ ಹೆಚ್ಚು ಗಾಳಿಯನ್ನು ಸೇವಿಸಲು ಒತ್ತಡ ಕಾರಣವಾಗಿರುತ್ತದೆ. ಇದರಿಂದ ಹೊಟ್ಟೆಯುಬ್ಬರ ಕಂಡುಬರುತ್ತದೆ. ಒತ್ತಡ ಮತ್ತು ಚಿಂತೆ ಭ್ರೂಣದ ಮೇಲೂ ಕೆಟ್ಟ ಪರಿಣಾಮವನ್ನು ಬೀರುವ ಸಾಧ್ಯತೆ ಇರುತ್ತದೆ.

ನಾರುಳ್ಳ ಆಹಾರಗಳ ಸೇವನೆ
ಸಾಕಷ್ಟು ನೀರು ಸೇವಿಸುವುದು ನಿಮ್ಮನ್ನು ಹೈಡ್ರೇಟ್ ಆಗಿ ಇರಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ, ಇದರಿಂದ ಹೊಟ್ಟೆಯುಬ್ಬರ ಮತ್ತು ಮಲಬದ್ಧತೆ ಸಮಸ್ಯೆ ಇರುವುದಿಲ್ಲ. ಸಾಕಷ್ಟು ನೀರು ಕುಡಿದು ನಿಮ್ಮ ಡಯೆಟ್‌ನಲ್ಲಿ ತಾಜಾ ಹಣ್ಣಿನ ರಸ ಮತ್ತು ನಾರಿನ ಆಹಾರಗಳು ಇರುವಂತೆ ನೋಡಿಕೊಳ್ಳಿ.

ಫೈಬರ್ ಇರುವ ಆಹಾರಗಳ ಸೇವನೆ
ನಿಮ್ಮ ಆಹಾರದಲ್ಲಿ ಫೈಬರ್ ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಕರುಳಿನ ಚಲನೆಯು ಸರಾಗವಾಗಿ ಉಂಟಾಗಿ ಹೊಟ್ಟೆಯುಬ್ಬರ ಸಮಸ್ಯೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಕರುಳಿಗೆ ಹೆಚ್ಚು ದ್ರವ್ಯರಾಶಿಯನ್ನು ಸೇರಿಸಲು ಫೈಬರ್ ಸಹಾಯ ಮಾಡುತ್ತದೆ.

ವ್ಯಾಯಮ
ಹೊಟ್ಟೆಯುಬ್ಬರದ ಸಮಸ್ಯೆಗಳನ್ನು ಹೋಗಲಾಡಿಸಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಅಗತ್ಯವಾಗಿದೆ. ದೇಹದಲ್ಲಿರುವ ಗ್ಯಾಸ್ ಅನ್ನು ಹೊರಹಾಕಲು ನಡೆಗೆ ಹೆಚ್ಚು ಸಹಾಯಕವಾಗಿದ್ದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಇದು ಉತ್ತಮವಾಗಿಸುತ್ತದೆ. ನಿಮಗೆ ಯಾವ ಬಗೆಯ ವ್ಯಾಯಾಮ ಹೊಂದುತ್ತದೆ ಎಂಬುದನ್ನು ಅರಿತುಕೊಳ್ಳಲು ವೈದ್ಯರನ್ನು ಸಂಪರ್ಕಿಸಿ.



Click it and Unblock the Notifications
