For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ 'ಮಾನಸಿಕ ಒತ್ತಡಕ್ಕೆ' ಆಸ್ಪದ ನೀಡಬೇಡಿ

By Deepu
|

ಗರ್ಭಿಣಿಯರಿಗೆ ಸಲಹೆ ಕೊಡುವವರೇ ಮೂರು ಹೆತ್ತವಳು, ಆರು ಹೆತ್ತವಳಿಗೆ ಹೇಳಿದಂತೆ ಎಂಬ ಗಾದೆ ಮಾತಿನಂತೆ, ಹೆಚ್ಚು. ಈ ಬಗ್ಗೆ ಅನುಭವವಿಲ್ಲದವರೂ ತಾವು ಕೇಳಿದ ವಿಷಯಗಳನ್ನು ಅನ್ವಯಿಸಲು ಪ್ರಯತ್ನಿಸುತ್ತಾರೆ. ಊಟ ಹೀಗೆ ಮಾಡು, ನಿದ್ದೆ ಹೀಗೆ ಮಾಡು, ನಡೆಯಬೇಡ ಎಂಬೆಲ್ಲಾ ವಿಷಯಗಳಿಗೆ ಹಲವಾರು ಸಲಹೆಗಳು ಪುಕ್ಕಟೆಯಾಗಿ ದೊರಕುತ್ತವೆ. ಆದರೆ ಗರ್ಭಿಣೆ ಎದುರಿಸುವ ಮಾನಸಿಕ ಒತ್ತಡದ ವಿಷಯ ಬಂದಾಗ ಎಲ್ಲರ ಬತ್ತಳಿಕೆ ಖಾಲಿ!

ಹೌದು, 'ಮಾನಸಿಕ ಒತ್ತಡ' ಮಾತ್ರ ಗರ್ಭಿಣಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ. ಇದಕ್ಕೆಲ್ಲಾ ಕಾರಣ ಹಲವು ಇರಬಹುದು. ಉದಾಹರಣೆಗೆ ಉದ್ಯೋಗ-ಮನೆಯ ವಾತಾವರಣ, ಹೆರಿಗೆಯ ಕುರಿತು ಭಯ, ಭಾರವನ್ನು ಹೊತ್ತು ತಿರುಗುವ ಆತಂಕ, ಏನಾಗುತ್ತದೆಯೋ, ಅಮ್ಮ ಇದ್ದರೆ ಚೆನ್ನಾಗಿತ್ತು ಎನ್ನುವ ದುಗುಡಗಳೆಲ್ಲಾ ಗರ್ಭಿಣಿಗೆ ಆವರಿಸಿ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಸಣ್ಣ ಪುಟ್ಟ ತಪ್ಪುಗಳು 'ತಾಯ್ತನದ ಸುಖಕ್ಕೆ' ಮಾರಕವಾಗಬಹುದು!

ಆದರೆ ಆತಂಕದ ವಿಷಯವೇನೆಂದರೆ, ಇದೇ ಒತ್ತಡವು ಮುಂದುವರಿದು ಅದನ್ನು ಕಡೆಗಣಿಸಲು ಸಾಧ್ಯವೇ ಇಲ್ಲವೆಂದಾದರೆ ಆಗ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹೆಚ್ಚಿನ ಮಹಿಳೆಯರಲ್ಲಿ ಗರ್ಭಧಾರಣೆ ವೇಳೆ ಒತ್ತಡ ಮತ್ತು ಖಿನ್ನತೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಹಾಗಾದರೆ ಒತ್ತಡವನ್ನು ತಡೆಯುವುದು ಹೇಗೆ? ಮುಂದೆ ಓದಿ...

Tips To Reduce Stress During Pregnancy

ಸ್ನೇಹಿತರೊಂದಿಗೆ ಕಾಲ ಕಲೆಯಿರಿ
ನೀವು ಗರ್ಭಿಣಿಯರಾಗಿದ್ದಾಗ ನಿಮ್ಮ ಸ್ನೇಹಿತರೊಂದಿಗೆ ಇರಿ. ಅವರು ನಿಮ್ಮಲ್ಲಿ ಧನಾತ್ಮಕ ಮನೋಭಾವವನ್ನು ಉದ್ದೀಪಿಸುತ್ತಾರೆ. ಇದು ನಿಮಗೆ ಒತ್ತಡವನ್ನು ನಿಯಂತ್ರಿಸಿಕೊಳ್ಳಲು ನೆರವು ನೀಡುತ್ತದೆ. ಗರ್ಭಿಣಿ ಸ್ತ್ರೀ ಮಾತ್ರ ತಿಳಿದಿರುವ ಗರ್ಭಾವಸ್ಥೆಯ ಸತ್ಯಗಳು

ಇಷ್ಟದ ತಿನಿಸನ್ನು ಸೇವಿಸಿ
ನಿಮಗೆ ಏನಾದರೂ ತಿನ್ನಬೇಕೆಂದು ಬಯಕೆಯಿದ್ದರೆ ಖಂಡಿತ ನಿಮ್ಮ ಆಸೆಯನ್ನು ಪೂರೈಸಿಕೊಳ್ಳಿ. ಆದರೆ ಆರೋಗ್ಯಕರವಾದುದರ ಕಡೆ ಗಮನವಿರಲಿ. ನಿಮ್ಮ ಬಯಕೆಗಳ ಕಡೆ ಗಮನ ನೀಡಿದರೆ ಒತ್ತಡ ತಾನೇ ತಾನಾಗಿ ಹೊರಟು ಹೋಗುತ್ತದೆ. ಆದರೆ ತಿನ್ನುವ ವಿಷಯದಲ್ಲಿ ಹಿರಿಯರ ಸಲಹೆ ಪಡೆದುಕೊಳ್ಳಿ

ಖುಷಿ ನೀಡುವಂತಹ ಪುಸ್ತಕಗಳನ್ನು ಓದಿ
ಬೋರಾಗುವಂತಹ ಪುಸ್ತಕಗಳನ್ನು ದೂರವಿಟ್ಟು ಖುಷಿ ನೀಡುವಂತಹ ಪುಸ್ತಕಗಳನ್ನು ಓದಿ. ಇದರಿಂದ ನಿಮ್ಮಲ್ಲಿ ಖುಷಿಯಾಗುವಂತಹ ಆಲೋಚನೆಗಳು ಉದ್ದೀಪನಗೊಳ್ಳುತ್ತದೆ ಮತ್ತು ಇದರಿಂದ ನೀವು ಒತ್ತಡದಿಂದ ಮುಕ್ತರಾಗಿ ಖುಷಿಯಾಗಿರುತ್ತೀರಿ.

ಸೂಕ್ತವಾದ ಹವ್ಯಾಸ ಬೆಳೆಸಿಕೊಳ್ಳಿ
ಗರ್ಭಾವಸ್ಥೆಯಲ್ಲಿ ಸುರಕ್ಷಿತ ಎಂದೆನಿಸುವ ಹವ್ಯಾಸಗಳನ್ನು ರೂಢಿಸಿಕೊಳ್ಳಿ ಉದಾಹರಣೆಗೆ ಚಿತ್ರಕಲೆ, ಸಂಗೀತ ಇತ್ಯಾದಿ. ನಿಮ್ಮನ್ನು ಕೊಂಚ ಚಟುವಟಿಕೆಯಿಂದ ಇರಿಸಿಕೊಳ್ಳುವುದು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ನಿಮ್ಮನ್ನು ನಿರಾಳಗೊಳಿಸುತ್ತದೆ.

ಧ್ಯಾನದ ಮೊರೆ ಹೋಗಿ
*ನಿಮಗೆ ಆರಾಮವೆನಿಸುವ ಭಂಗಿಯಲ್ಲಿ ಚಕ್ಕಲೆಮಕ್ಕಲೆ ಕುಳಿತುಕೊಳ್ಳಿ. ಆರಾಮ ಅನ್ನಿಸದಿದ್ದರೆ ಕುರ್ಚಿಯ ಮೇಲೂ ಕುಳಿತುಕೊಳ್ಳಹುದು. ಸಾಧ್ಯವಾದಷ್ಟು ಬೆನ್ನುಮೂಳೆ ನೆಟ್ಟಗೇ ಇರಲಿ.
*ಮನಸ್ಸು ಸೆಳೆಯುವ ಯಾವುದೇ ವಸ್ತು ಎದುರಿಗಿರದಂತೆ ನೋಡಿಕೂಳ್ಳಿ. ಕಣ್ಣುಮುಚ್ಚಿಕೊಂಡು ನಿಮ್ಮ ಗಮನವನ್ನು ಒಂದು ವಿಷಯದತ್ತ ಕೇಂದ್ರೀಕರಿಸಿ.


*ಈ ಸಮಯದಲ್ಲಿ ಕೇವಲ ಧನಾತ್ಮಕ ವಿಚಾರಗಳು ಆವರಿಸಲಿ. ಉದಾಹರಣೆಗೆ ನನಗೆ ಹುಟ್ಟಲಿರುವ ಮಗು ಉತ್ತಮ ವ್ಯಕ್ತಿಯಾಗಿದ್ದು ಸಮಾಜದಲ್ಲಿ ಮನ್ನಣೆ ಮತ್ತು ಗೌರವ ಪಡೆಯುತ್ತಾನೆ/ತ್ತಾಳೆ ಇತ್ಯಾದಿ.
*ಪ್ರತಿದಿನ ಒಂದೇ ಸಮಯವನ್ನು ಆಯ್ದುಕೊಂಡು ಆ ಪ್ರಕಾರವೇ ಅನುಸರಿಸಿ. ಇದರಿಂದ ಹೆರಿಗೆಯ ಸಮಯದಲ್ಲಿ ಮಾತ್ರವಲ್ಲ ಮುಂದಿನ ಜೀವನದಲ್ಲಿಯೂ ಒತ್ತಡವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ.
English summary

Tips To Reduce Stress During Pregnancy

When a woman is pregnant, she has to make sure to keep her mind always calm and composed. Getting worried for unimportant things which happen around her will only lead to problems for the foetus. Stress during pregnancy can also lead to much more problems for both the mother and the growing baby.
Story first published: Friday, July 29, 2016, 20:32 [IST]
X
Desktop Bottom Promotion