For Quick Alerts
ALLOW NOTIFICATIONS  
For Daily Alerts

ಅಸ್ತಮಾ ಕಾಯಿಲೆ, ಮಹಿಳೆಯ ಬಂಜೆತನಕ್ಕೂ ಕಾರಣವಾಗಬಹುದು!

By Manu
|

ಮಗುವಿನ ತಾಯಿಯಾಗುವಂತಹ ನೈಸರ್ಗಿಕ ಪ್ರಕ್ರಿಯೆ ಕ್ಷಣ ಮಾತ್ರದಲ್ಲಿ ಸಂಭವಿಸುವಂತಹ ಪವಾಡವಲ್ಲ. ಸಿನಿಮಾಗಳಲ್ಲಿ ಧಾರವಾಹಿಗಳಲ್ಲಿ ಸ್ತ್ರೀಯು ಗರ್ಭಿಣಿಯಾಗುವುದು ನಂತರ ಆಕೆ ಶಿಶುವನ್ನು ಹೆರುವುದು, ಆ ಮಗು ದೊಡ್ಡದಾಗಿ ಬೆಳೆಯುವುದು ಇದೆಲ್ಲವೂ ಕೆಲವೇ ಗಂಟೆಗಳಲ್ಲಿ ಸಂಭವಿಸಿಬಿಡುತ್ತದೆ. ಆದರೆ ನಿಜ ಜೀವನದಲ್ಲಿ ಗರ್ಭಿಣಿಯಾಗುವುದು ಕಂದಮ್ಮನನ್ನು ಒಡಲಿನಲ್ಲಿ ಒಂಭತ್ತು ತಿಂಗಳು ಹೊರುವುದು ಹೆರುವುದು ತುಂಬಾ ದೀರ್ಘ ಕಾಲದ ಕ್ರಿಯೆಯಾಗಿದೆ.

ಈ ಸಮಯದಲ್ಲಿ ತಾಯಿಯು ದೈಹಿಕವಾಗಿ ಸಮರ್ಥಳಾಗಿರಬೇಕು ಆಕೆ ಆರೋಗ್ಯಕರವಾಗಿದ್ದಲ್ಲಿ ಮಾತ್ರವೇ ಆಕೆಗೆ ಜನಿಸುವ ಕಂದಮ್ಮ ಆರೋಗ್ಯವಾಗಿರುತ್ತದೆ ಮತ್ತು ತಾಯಿಗೂ ಹೆರಿಗೆ ಸಮಯದಲ್ಲಿ ಅಷ್ಟೊಂದು ಸಮಸ್ಯೆಗಳು ಕಾಡುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಯಾಗಲು ಕೆಲವೊಂದು ಸಮಸ್ಯೆಗಳು ಎದುರಾಗುತ್ತಿದ್ದು ಇದರಿಂದ ದಂಪತಿಗಳು ಮಕ್ಕಳನ್ನು ಪಡೆಯುವಲ್ಲಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಸ್ತಮಾ ನಿವಾರಿಸುವ ಮನೆಮದ್ದನ್ನು ನೀವೂ ಟ್ರೈ ಮಾಡಿ

ಒತ್ತಡದ ಜೀವನ ಮಟ್ಟ, ತಂತ್ರಜ್ಞಾನದ ಅಪಾಯಗಳು, ಗರ್ಭನಿರೋಧಕಗಳ ಅತಿಯಾದ ಬಳಕೆ ಹೀಗೆ ಹೆಚ್ಚಿನ ಸಮಸ್ಯೆಗಳು ತಾಯಿಯಾಗುವಲ್ಲಿ ಸ್ತ್ರೀಗೆ ನಿರ್ಬಂಧವನ್ನು ಹೇರುತ್ತಿವೆ. ನಾವು ಮೇಲೆ ತಿಳಿಸಿದಂತೆ ತಾಯಿಯಾಗಲು ಸ್ತ್ರೀಯು ಆರೋಗ್ಯವಂತಳಾಗಿರಬೇಕಾದ್ದು ಅತ್ಯವಶ್ಯಕವಾಗಿದೆ. ಇತ್ತೀಚಿನ ಅಧ್ಯಯನವೊಂದು ತಿಳಿಸಿದಂತೆ, ಗರ್ಭವತಿಯಾಗಲು ಅಸ್ತಮಾ ಕೂಡ ತೊಂದರೆಯನ್ನುಂಟು ಮಾಡುತ್ತಿದೆ ಎಂದಾಗಿದೆ.

Surprising Way Asthma Affects Your Fertility

ಅಸ್ತಮಾ ಎಂದರೇನು?
ಅಸ್ತಮಾ ಒಂದು ಗಂಭೀರ ಉಸಿರಾಟದ ಅಸ್ವಸ್ಥತೆಯಾಗಿದ್ದು, ರೋಗಿಯ ಉಸಿರಾಟದ ಹರಹುಗಳು ಊತ ಮತ್ತು ಕಿರಿದಾಗಿ ಹೆಚ್ಚುವರಿ ಲೋಳೆಯನ್ನು ಉತ್ಪಾದಿಸುತ್ತವೆ ಇದರಿಂದ ಅವರಿಗೆ ಉಸಿರಾಡಲು ತೊಂದರೆಯನ್ನುಂಟು ಮಾಡುತ್ತದೆ. ಅಸ್ತಮಾದ ರೋಗಲಕ್ಷಣಗಳೆಂದರೆ ದೀರ್ಘಕಾಲದ ಕೆಮ್ಮು, ಉಸಿರಾಟದಲ್ಲಿ ತೊಂದರೆ, ಉಬ್ಬಸ, ಉಸಿರಾಟದಲ್ಲಿ ಕಂಡುಬರುವ ತೊಂದರೆ, ಎದೆಬಿಗಿತ ಇತ್ಯಾದಿಗಳಾಗಿವೆ.

ಗರ್ಭವತಿಯಾಗುವ ಸಾಧ್ಯತೆಗಳನ್ನು ಅಸ್ತಮಾ ಕಡಿಮೆ ಮಾಡಬಹುದೇ?
ಹೊಸ ಅಧ್ಯಯನದ ಪ್ರಕಾರ ಅಸ್ತಮಾ ರೋಗವನ್ನು ಹೊಂದಿರುವ ಸ್ತ್ರೀಯು ಗರ್ಭವತಿಯಾಗುವ ಸಾಧ್ಯತೆ ಕಡಿಮೆ ಎಂದು ಕಂಡುಕೊಳ್ಳಲಾಗಿದೆ. ಈ ರೋಗಲಕ್ಷಣವನ್ನು ಹೊಂದದೇ ಇರುವವರಿಗೆ ಹೋಲಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಈ ಅಧ್ಯಯನ ಹೇಳುವಂತೆ ಅಸ್ತಮಾ ರೋಗಿಯು ಗರ್ಭವತಿಯಾಗಲು ಹೆಚ್ಚು ಸಮಯವನ್ನು ತೆಗೆದುಕೊಳ್ಳಲಿದ್ದು ಅವರ ಫಲವತ್ತತೆಯ ಮೇಲೆ ಇದು ಪರಿಣಾಮವನ್ನು ಬೀರಲಿದೆ ಎಂದಾಗಿದೆ.

ಅಸ್ತಮಾ ರೋಗಿಯು ಆದಷ್ಟು ಬೇಗನೇ ಗರ್ಭವತಿಯಾಗಬೇಕಾಗಿದ್ದು, ವಯಸ್ಸಾದಂತೆ ಅಸ್ತಮಾ ರೋಗಿಗಳು ಗರ್ಭವತಿಯಾಗುವಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದಾಗಿದೆ.

ಅಸ್ತಮಾ ಇರುವ ರೋಗಿಯು ತಮ್ಮ ಪ್ರೌಢಾವಸ್ಥೆಯ ಸಮಯದಲ್ಲಿ ದೀರ್ಘಕಾಲದ ಮೈಗ್ರೇನ್ ದಾಳಿಗೆ ತುತ್ತಾಗುತ್ತಾರೆ, ಆ ಸಮಯದಲ್ಲಿ ತಮ್ಮ ದೇಹದಲ್ಲಿ ಕೆಲವೊಂದು ಗ್ರಂಥಿಗಳ ಬದಲಾವಣೆಯನ್ನು ಅವರು ಅನುಭವಿಸುತ್ತಾರೆ ಇದು ನಂತರ ಅವರ ಬಂಜೆತನದ ಮೇಲೆ ಪ್ರಭಾವ ಬೀರುತ್ತದೆ.

ಅಸ್ತಮಾವನ್ನು ಉಪಚರಿಸುವ ಕೆಲವೊಂದು ಬಲವಾದ ಔಷಧಗಳು ಕೂಡ ಅವರುಗಳ ಬಂಜೆತನಕ್ಕೆ ಕಾರಣವಾಗಿರುತ್ತದೆ. ಅದಕ್ಕಾಗಿ ಅನುಭವಿಗಳು ಹೇಳುವಂತೆ ಸ್ತ್ರೀಯರು ಅಸ್ತಮಾಕ್ಕೆ ಹೊಂದುವಂತಹ ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಗರ್ಭವತಿಯಾಗುವ ಮುನ್ನವೇ ಸೂಕ್ತ ಔಷಧಗಳನ್ನು ಅಸ್ತಮಾ ರೋಗಿಯು ತೆಗೆದುಕೊಳ್ಳಬೇಕು. ಈ ಸಮಸ್ಯೆಗಳು ಅಸ್ತಮಾಕ್ಕೆ ತಿರುಗಬಹುದು ಜಾಗ್ರತೆ!

ಇದಕ್ಕೆ ಜೊತೆಯಾಗಿ ಅಸ್ತಮಾ ರೋಗಿಯು ಗರ್ಭವತಿಯಾಗುವ ಸಂದರ್ಭದಲ್ಲಿ ತಮ್ಮ ಉಸಿರಾಟದ ವ್ಯವಸ್ಥೆಗಳ ಬಗ್ಗೆ ಹೆಚ್ಚು ಕಾಳಜಿಯನ್ನು ತೆಗೆದುಕೊಳ್ಳಬೇಕು ಅಂತೆಯೇ ಮಾಲಿನ್ಯಾಕಾರಕಗಳು, ಧೂಮಪಾನ, ಪರೋಕ್ಷ ಧೂಮಪಾನ, ಧೂಳು ಮೊದಲಾದವುಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಬೇಕು. ಗರ್ಭವತಿಯಾಗುವ ಅಸ್ತಮಾ ರೋಗಿಗಳು ಹೆಚ್ಚುವರಿ ಸಂರಕ್ಷಣೆಯನ್ನು ಪಡೆದುಕೊಂಡಲ್ಲಿ ಆರೋಗ್ಯಕಾರಿ ಗರ್ಭಧಾರಣೆಯನ್ನು ಅವರು ಹೊಂದಬಹುದಾಗಿದೆ.

English summary

Surprising Way Asthma Affects Your Fertility

To get pregnant effortlessly, a woman must have excellent health. If she has certain disorders or ailments, prior to starting a family, they may make the process of her getting pregnant difficult. According to a recent study, asthma is also one such disorder that is known to hamper a woman's chances of getting pregnant.
X
Desktop Bottom Promotion