For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಆರೋಗ್ಯಕ್ಕೆ ಹೇಳಿ ಮಾಡಿಸಿದ ಹಣ್ಣುಗಳು

By Deepu
|

ಗರ್ಭಿಣಿಯರು ಸಾಮಾನ್ಯರಂತೆ ಆಹಾರವನ್ನು ಸೇವಿಸಲು ಆಗುವುದಿಲ್ಲ. ಅವರ ದೇಹ ಪ್ರಕೃತಿಗೆ ಕೆಲವೊಂದು ಆಹಾರಗಳು ಒಪ್ಪುತ್ತವೆ ಮತ್ತು ಕೆಲವೊಂದು ಒಪ್ಪುವುದಿಲ್ಲ. ಹಾಗಾಗಿ ಅವರಿಗೆ ವಿಶೇಷವಾದ ಡಯಟ್‌ ಬೇಕಾಗುತ್ತದೆ. ಗರ್ಭಿಣಿಯರ ಆರೋಗ್ಯದ ಮೇಲೆ ಅವರು ಸೇವಿಸುವ ಆಹಾರದ ಪೋಷಕಾಂಶಗಳು ವಿಶೇಷವಾದ ಪಾತ್ರವನ್ನು ನಿರ್ವಹಿಸುತ್ತವೆ. ಹಣ್ಣು ಮತ್ತು ತರಕಾರಿಗಳಲ್ಲಿ ಪೋಷಕಾಂಶಗಳು ತಕ್ಷಣಕ್ಕೆ ಸಿಗುತ್ತವೆ.

ಗರ್ಭಿಣಿಯರಿಗೆ ಸೇವಿಸಲು ವ್ಯಾಪಕ ಶ್ರೇಣಿಯ ಹಣ್ಣುಗಳು ಲಭ್ಯವಿದ್ದರು ಸಹ ಗರ್ಭಿಣಿಯರು ಕೆಲವು ಹಣ್ಣುಗಳನ್ನು ಮಾತ್ರ ಸೇವಿಸಲು ಆಗುತ್ತದೆ. ಏಕೆಂದರೆ ಕೆಲವು ಹಣ್ಣುಗಳು ಮಾತ್ರವೇ, ತಾಯಿ ಮತ್ತು ಮಗು ಇಬ್ಬರಿಗೂ ಕ್ಷೇಮವಾಗಿರುತ್ತವೆ. ಯಾವ ಹಣ್ಣುಗಳನ್ನು ಸೇವಿಸಬೇಕು ಮತ್ತು ಸೇವಿಸಬಾರದು ಎಂದು ತಿಳಿದುಕೊಳ್ಳಲು ಗರ್ಭಿಣಿಯಾದಾಗ ಒಬ್ಬ ಪೋಷಕಾಂಶ ತಜ್ಞರನ್ನು ಸಂಪರ್ಕಿಸಿ. ಕಿತ್ತಳೆ ಹಣ್ಣು, ಗರ್ಭಿಣಿಯರ ಪಾಲಿಗೆ ಇದು ಚಿನ್ನದಂತಹ ಹಣ್ಣು

ಕೆಲವೊಂದು ಹಣ್ಣುಗಳನ್ನು ನೀವು ಪ್ರತಿದಿನದ ಆಹಾರದಲ್ಲಿ ಸೇವಿಸಬೇಕಾಗುತ್ತದೆ. ಅವುಗಳಲ್ಲಿ ಅಗತ್ಯವಾದ ಖನಿಜಾಂಶಗಳು, ವಿಟಮಿನ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಣ್ಣುಗಳಲ್ಲಿರುವ ಫಾಲಿಕ್ ಆಮ್ಲವು ಭ್ರೂಣದಲ್ಲಿರುವ ನ್ಯೂನತೆಗಳನ್ನು ನಿವಾರಿಸುತ್ತದೆ. ನೀವು ಗರ್ಭಿಣಿಯಾಗಿರುವಾಗ ಯಾವ ಯಾವ ಹಣ್ಣುಗಳನ್ನು ಸೇವಿಸಬೇಕು ಎಂದು ಇಂದು ಬೋಲ್ಡ್‌ ಸ್ಕೈ ನಿಮಗೆ ತಿಳಿಸಿಕೊಡುತ್ತದೆ. ಬನ್ನಿ ಅವು ಯಾವುದು ಎಂದು ತಿಳಿದುಕೊಳ್ಳೋಣ...

ಅಪ್ರಿಕಾಟ್

ಅಪ್ರಿಕಾಟ್

ಅಪ್ರಿಕಾಟ್‌ಗಳಲ್ಲಿ ವಿಟಮಿನ್ ಎ, ಸಿ, ಇ ಅಧಿಕ ಪ್ರಮಾಣದಲ್ಲಿರುತ್ತವೆ. ಜೊತೆಗೆ ಬೀಟಾ-ಕೆರೊಟೀನ್, ರಂಜಕ, ಸಿಲಿಕಾನ್, ಕಬ್ಬಿಣಾಂಶ, ಪೊಟಾಶಿಯಂ ಸಹ ಅಧಿಕ ಪ್ರಮಾಣದಲ್ಲಿರುತ್ತದೆ. ಇವುಗಳೆಲ್ಲವು ಮಗುವಿನ ಬೆಳವಣಿಗೆಗೆ ಅತ್ಯಾವಶ್ಯಕವಾಗಿ ಬೇಕು. ಅಲ್ಲದೆ ಇವು ಅನಿಮಿಯಾವನ್ನು ಸಹ ನಿವಾರಿಸುತ್ತದೆ.

ಚೆರ್ರಿಗಳು

ಚೆರ್ರಿಗಳು

ಚೆರ್ರಿಗಳು ವಿಟಮಿನ್ ಸಿ ಯ ಅದ್ಭುತ ಆಕರಗಳು. ಇವುಗಳು ಇನ್‌ಫೆಕ್ಷನ್ ಮತ್ತು ಶೀಟ ಹಾಗು ಅಲರ್ಜಿಗಳನ್ನು ತೊಲಗಿಸುತ್ತದೆ. ಅಲ್ಲದೆ ಇದು ಮಗುವಿಗೆ ರಕ್ತ ಪೂರೈಸಲು ಮತ್ತು ಪ್ಲಾಸೆಂಟಾದ ಬೆಳವಣಿಗೆಗೆ ಸಹಕರಿಸುತ್ತದೆ. ಜೊತೆಗೆ ಇದು ಗರ್ಭಿಣಿಯರಿಗೆ ಉತ್ತಮ ನಿದ್ದೆಗೆ ಸಹಕರಿಸುತ್ತದೆ.

ದ್ರಾಕ್ಷಿ

ದ್ರಾಕ್ಷಿ

ದ್ರಾಕ್ಷಿಗಳು ಸಹ ಗರ್ಭಿಣಿಯರು ಸೇವಿಸಬೇಕಾದ ಉತ್ತಮ ಹಣ್ಣುಗಳಾಗಿರುತ್ತವೆ. ಇದರಲ್ಲಿ ಗ್ಲೂಕೋಸ್, ಮೆಗ್ನಿಷಿಯಂ, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಫಾಲಿಕ್ ಆಮ್ಲಗಳು ಹೆಚ್ಚಿಗೆ ಇರುತ್ತವೆ. ಇದು ಭ್ರೂಣಕ್ಕೆ ಅಗತ್ಯವಿರುವ ಹಲವಾರು ಕಿಣ್ವಗಳನ್ನು ಒದಗಿಸುತ್ತದೆ.

ಸೀಬೆ ಹಣ್ಣು

ಸೀಬೆ ಹಣ್ಣು

ಸೀಬೆಗಳನ್ನು ಗರ್ಭಿಣಿಯರು ಹೆಚ್ಚಾಗಿ ಇಷ್ಟಪಡುತ್ತಾರೆ. ಇದರಲ್ಲಿ ವಿಟಮಿನ್ ಸಿ ಮತ್ತು ಇ ಹಾಗು ಫ್ಲಾವೊನಾಯ್ಡ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುವ ಹಣ್ಣಾಗಿದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಕಿವಿ

ಕಿವಿ

ಕಿವಿ ಹಣ್ಣುಗಳು ವಿಟಮಿನ್ ಸಿ,ಇ, ಪೊಟಾಶಿಯಂ, ರಂಜಕ, ಫಾಲಿಕ್ ಆಮ್ಲ ಮತ್ತು ಡಯಟೆರಿ ಫೈಬರ್ ಹಾಗು ಮೆಗ್ನಿಷಿಯಂ ಅನ್ನು ಹೊಂದಿರುತ್ತದೆ. ಕಿವಿ ಹಣ್ಣಿನಲ್ಲಿ ಉಪಶಮನಕಾರಿ ಅಂಶಗಳು ಹೆಚ್ಚಿಗೆ ಇದ್ದು, ಶ್ವಾಸಕೋಶಕ್ಕೆ ಇದರಿಂದ ಒಳ್ಳೆಯದಾಗುತ್ತದೆ. ಪ್ಲಾಸೆಂಟಾವು ಕಬ್ಬಿಣಾಂಶವನ್ನು ಹೀರಿಕೊಳ್ಳಲು ಕಿವಿ ಹಣ್ಣು ಸಹಕರಿಸುತ್ತದೆ.

English summary

Nutritious Fruits To Eat During Pregnancy

Pregnancy demands a special diet. It is important to eat nutritious foods during pregnancy. Nutrition plays a vital role during pregnancy. Nutrition is readily available in the form of fruits and veggies. There are some of the fruits that you should include in your pregnancy diet. In this article, we at Boldsky will be listing out some of the nutritious fruits that should be consumed during pregnancy. Read on to know more about it.
Story first published: Friday, February 5, 2016, 13:07 [IST]
X
Desktop Bottom Promotion