For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ, ಇಂತಹ ಆಹಾರಗಳಿಂದ ಆದಷ್ಟು ದೂರವಿರಿ...

By Jaya subramanya
|

ಮಹಿಳೆ ಗರ್ಭಿಣಿಯಾದಾಗ ಆಕೆಯ ಸಂಪೂರ್ಣ ಜೀವನ ಬದಲಾಗುತ್ತದೆ. ತನ್ನ ಉದರದೊಳಗೆ ಆಕೆ ಇನ್ನೊಂದು ಜೀವವನ್ನು ಇಟ್ಟುಕೊಂಡು ಅದನ್ನು ಕಾಪಾಡುವ ಹೊಣೆ ಹೊತ್ತಿರುತ್ತಾಳೆ. ಇದಕ್ಕಾಗಿ ಆಕೆ ತನಗೆ ಇಷ್ಟವಾಗಿರುವ ಬಹಳಷ್ಟು ಸಂಗತಿಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಮಗುವಿನ ಆರೋಗ್ಯ ಆಕೆಗೆ ಹೆಚ್ಚು ಮುಖ್ಯವಾಗಿರುವುದರಿಂದ ಈ ನಿರ್ಧಾರ ಆಕೆಗೆ ಸಂತಸವನ್ನೇ ಉಂಟುಮಾಡುತ್ತದೆ. ಗರ್ಭಿಣಿಯರಿಗಾಗಿ ಶಕ್ತಿದಾಯಕ ಸಸ್ಯಾಹಾರಿ ಆಹಾರಗಳು

ತನ್ನ ಆಹಾರ ವಿಧಾನದಲ್ಲಿ ಆಕೆ ಬಹಳಷ್ಟು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆರೋಗ್ಯಕರ ಆಹಾರ ಪದ್ಧತಿಗೆ ಹೊಂದಿಕೊಳ್ಳುವುದು ಕೊಂಚ ಕಷ್ಟವೆನಿಸಿದರೂ ಮಗುವಿಗಾಗಿ ಆಕೆ ಪಾಲಿಸಲೇಬೇಕಾಗುತ್ತದೆ. ತನಗೆ ಮತ್ತು ತನ್ನ ಮಗುವಿಗಾಗಿ ಆಹಾರ ಸೇವನೆಯನ್ನು ಆಕೆ ಮಾಡಬೇಕಾಗುತ್ತದೆ. ಇನ್ನು ಮನೆಯಲ್ಲಿರುವ ಹಿರಿಯರು ಆಕೆ ಚೆನ್ನಾಗಿ ತಿನ್ನಬೇಕೆಂದು ಹೇಳಿ ಆಕೆಗೆ ಆರೈಕೆ ಮಾಡುತ್ತಾರೆ. ಆದರೆ ಈ ಆಹಾರಗಳು ಆಕೆಗೆ ಎಷ್ಟು ಹಾನಿಕಾರಕ ಎಂಬುದು ಗೊತ್ತಿದೆಯೇ? ಗರ್ಭಿಣಿಯರೇ, ಈ 5 ಒಣಫಲಗಳ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ!

ಗರ್ಭಾವಸ್ಥೆಯಲ್ಲಿ ಅಧಿಕ ಆಹಾರ ಸೇವನೆ ಕೂಡ ಕೆಲವೊಂದು ಕಾಯಿಲೆಗಳನ್ನು ಉಂಟುಮಾಡುತ್ತದೆ. ಕೆಲವೊಂದು ಆಹಾರಗಳು ಆಕೆಗೆ ಮತ್ತು ಮಗುವಿಗೆ ಸಮಾನ ದುಷ್ಪರಿಣಾಮವನ್ನು ಉಂಟುಮಾಡಬಹುದು. ಗರ್ಭಪಾತ, ಮಗುವಿನ ಜನನ ಸಮಯದಲ್ಲಿ ಉಂಟಾಗುವ ನ್ಯೂನತೆಗಳು, ಸೋಂಕುಗಳು, ಅಕಾಲ ಜನನ ಹೀಗೆ ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗಿದ್ದರೆ ಇಂದಿನ ಲೇಖನದಲ್ಲಿ ಗರ್ಭಿಣಿಯರು ಸೇವಿಸಲೇಬಾರದ ಕೆಲವೊಂದು ನೈಸರ್ಗಿಕ ಆಹಾರಗಳನ್ನು ತಿಳಿದುಕೊಳ್ಳೋಣ...

ಪಾಶ್ಚರೀಕರಿಸದ ಹಾಲಿನಿಂದ ಮಾಡಿದ ಚೀಸ್

ಪಾಶ್ಚರೀಕರಿಸದ ಹಾಲಿನಿಂದ ಮಾಡಿದ ಚೀಸ್

ಯಾವುದೇ ರೀತಿಯ ಚೀಸ್ ಅದನ್ನು ಪಾಶ್ಚರೀಕರಿಸಿಲ್ಲದ ಹಾಲಿನಿಂದ ಮಾಡಿದೆ ಎಂದಾದಲ್ಲಿ ಇದು ಗರ್ಭಿಣಿಯರಿಗೆ ಹಾನಿಕಾರಕವಾಗಿದೆ. ಇದು ಇ ಕೋಲಿಯನ್ನು ಒಳಗೊಂಡಿರುವುದರಿಂದ ಇದು ಮಗು ಮತ್ತು ತಾಯಿಯ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ಸೋಂಕುಗಳನ್ನು ಉಂಟುಮಾಡುತ್ತದೆ.

ಮೀನು

ಮೀನು

ಮೀನಿನ ಕೆಲವೊಂದು ವೈವಿಧ್ಯತೆಗಳು ಪಾದರಸವನ್ನು ಒಳಗೊಂಡಿರುತ್ತದೆ. ಇದು ತಾಯಿಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುವುದರ ಮೂಲಕ ಮಗುವಿಗೆ ಅಂಗವೈಕಲ್ಯವನ್ನು ತಂದೊಡ್ಡುವ ಸಾಧ್ಯತೆ ಇರುತ್ತದೆ. ಮೆಕ್ರೇಲ್, ಸ್ವೋರ್ಡ್ ಫಿಶ್, ಶಾರ್ಕ್ ಮೊದಲಾದುವನ್ನು ಸೇವಿಸಬಾರದು.

ಬೇಯಿಸಿದ ಸೀಫುಡ್

ಬೇಯಿಸಿದ ಸೀಫುಡ್

ಫ್ರಿಡ್ಜ್‎ನಲ್ಲಿರಿಸಿದ ಸೀಫುಡ್ ನಂತರ ಅದನ್ನು ಗ್ರಿಲ್‎ನಲ್ಲಿ ಬೇಯಿಸುವುದು ಲಿಸ್ಟಿರಿಯಾ ಎಂಬ ಬ್ಯಾಕ್ಟೀರಿಯಾವನ್ನು ಒಳಗೊಂಡಿರುತ್ತದೆ. ಇದು ಮಗುವಿಗೆ ಮತ್ತು ತಾಯಿಗೆ ಬೇರೆ ಬೇರೆ ರೋಗಗಳನ್ನು ಉಂಟುಮಾಡಬಹುದು.

ಹೆಚ್ಚುವರಿ ಕೆಫೇನ್ ಸೇವನೆ

ಹೆಚ್ಚುವರಿ ಕೆಫೇನ್ ಸೇವನೆ

ಗರ್ಭಾವಸ್ಥೆಯಲ್ಲಿ ಆದಷ್ಟು ಕೆಫೇನ್ ಪದಾರ್ಥಗಳನ್ನು ಕಡಿಮೆ ಸೇವಿಸುವುದು ಒಳಿತು. ಕಾಫಿ, ಕೆಫೇನ್ ಬೆರೆತ ತಂಪು ಪಾನೀಯಗಳನ್ನು ತೆಗೆದುಕೊಳ್ಳಲೇಬಾರದು. ಅಧ್ಯಯನಗಳು ಹೇಳುವಂತೆ ಕೆಫೇನ್ ನಿರ್ಜೀವ ಶಿಶು ಜನನ, ಮಗುವಿನ ಸಾವು ಮತ್ತು ಕಡಿಮೆ ತೂಕದ ಮಗುವಿನ ಜನನಕ್ಕೆ ಕಾರಣವಾಗುತ್ತದಂತೆ.

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ

ಹಸಿ ಪಪ್ಪಾಯಿಯನ್ನು ಸೇವಿಸುವುದು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತದೆ, ಇದರಿಂದ ಗರ್ಭಪಾತ ಮತ್ತು ಅಕಾಲಿಕ ಜನನ ಉಂಟಾಗುವ ಅಪಾಯ ಇರುತ್ತದೆ ಎಂಬುದಾಗಿ ಅಧ್ಯಯನಗಳು ಹೇಳುತ್ತಿವೆ. ಕಳಿತ ಪಪ್ಪಾಯವನ್ನು ಗರ್ಭಿಣಿಯರು ಸುರಕ್ಷಿತವಾಗಿ ಸೇವನೆ ಮಾಡಬಹುದು.

ಸರಿಯಾಗಿ ಬೇಯಿಸದ ಮಾಂಸ

ಸರಿಯಾಗಿ ಬೇಯಿಸದ ಮಾಂಸ

ಗರ್ಭಿಣಿ ಸ್ತ್ರೀಯರಿಗೆ ನೀಡುತ್ತಿರುವ ಮಾಂಸವನ್ನು ಚೆನ್ನಾಗಿ ಬೇಯಿಸಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಸರಿಯಾಗಿ ಬೇಯಿಸಿಲ್ಲದ ಮಾಂಸ ಇ ಕೋಲಿಯನ್ನು ಒಳಗೊಂಡಿರುತ್ತದೆ ಇದು ಬೇರೆ ಬೇರೆ ಸೋಂಕುಗಳನ್ನು ತಂದೊಡ್ಡುತ್ತವೆ ಮತ್ತು ರೋಗ ರುಜಿನಗಳಿಗೆ ಕಾರಣವಾಗುತ್ತದೆ ಇದು ತಾಯಿ ಮಗುವಿಗೆ ಒಳ್ಳೆಯದಲ್ಲ.

English summary

Natural Ingredients You Must Totally Avoid During Pregnancy

The minute a woman becomes pregnant, her entire life takes a new turn. She is now responsible for another living being growing inside her and all her habits, whether good or bad, will directly influence the health of her unborn baby. So, it is very important for a new mother to develop a healthy lifestyle. So, we have made a list of natural foods that you need to stay away from if you are pregnant. Do make sure to avoid these.
X
Desktop Bottom Promotion