For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಆರೋಗ್ಯಕ್ಕೆ 'ಬಲ ನೀಡುವ' ಆಹಾರಗಳಿವು...

By Jaya
|

ಪ್ರಸವ ಎ೦ಬುದು ಪ್ರತಿಯೋರ್ವ ಗರ್ಭಿಣಿ ಸ್ತ್ರೀಯು ಕಾತರದಿ೦ದ ಎದುರು ನೋಡುವ ಸ೦ಗತಿಯಾಗಿರುತ್ತದೆ ಹಾಗೂ ಆ ಕ್ಷಣವನ್ನು ನೆನೆದು ಆಕೆಯು ರೋಮಾ೦ಚನಗೊಳ್ಳುತ್ತಾಳೆ. ಪ್ರಸವದ ಆರ೦ಭವೆ೦ಬುದರ ಅರ್ಥವೇನೆ೦ದರೆ, 9 ತಿ೦ಗಳುಗಳ ಕಾಲದ ಆ ಕಠಿಣ ಅವಧಿಯ ನ೦ತರ, ನಿಮ್ಮ ಸ೦ತಸದ, ಕನಸಿನ ನಿಧಿಯೊ೦ದು ಮಗುವಿನ ರೂಪದಲ್ಲಿ ಈ ಪ್ರಪ೦ಚಕ್ಕೆ ಕಾಲಿಡುತ್ತಿದೆಯೆ೦ದರ್ಥ.

ಇಂತಹ ಸಂದರ್ಭದಲ್ಲಿ ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕುಡಿಯ ಉತ್ತಮ ಆರೋಗ್ಯಕ್ಕಾಗಿ ಪ್ರತಿ ಗರ್ಭವತಿಗೂ, ಕೂಡ ಅತ್ಯುತ್ತಮ ಆಹಾರ ಸೇವಿಸುವ ಅಗತ್ಯವಿದೆ. ಇಂದಿನ ದಿನಗಳಲ್ಲಿ ಕೈಗೆಟುಕುವಂತೆ ಲಭ್ಯವಿರುವ ಸಿದ್ಧ ಆಹಾರಗಳಿಗೆ ಗುಲಾಮರಾಗಿರುವ ನಾವು ಅವುಗಳ ದುಷ್ಪರಿಣಾಮಗಳನ್ನು ಅರಿಯದೇ ಉಳಿದ ನಮ್ಮ ಸಮಯ ಹಾಗೂ ಶ್ರಮವನ್ನು ಕೊಂಡಾಡುತ್ತೇವೆ.

Healthy Food Guide for Pregnant Women

ಆದರೆ ಗರ್ಭದಲ್ಲಿ ಬೆಳೆಯುತ್ತಿರುವ ಕಂದನ ಹಾಗೂ ತಾಯಿಯಾಗುತ್ತಿರುವವಳ ಆರೋಗ್ಯವನ್ನು ಪರಿಗಣಿಸಿದರೆ ಸಿದ್ಧ ಆಹಾರಗಳನ್ನು ವಿವೇಚನೆಯಿಲ್ಲದೇ ಸೇವಿಸುವುದು ಇಬ್ಬರ ಆರೋಗ್ಯಕ್ಕೂ ಮಾರಕವಾಗಬಲ್ಲದು. ಶಿಶುವಿನ ಬೆಳವಣಿಗೆಯ ಕಾಲದಲ್ಲಿ ಗರ್ಭವತಿಗೆ ಬೆಳಗಿನ ಕಾಲ ಹೆಚ್ಚು ಸುಸ್ತು ಆವರಿಸುವುದರಿಂದ ದೇಹಕ್ಕೆ ಹೆಚ್ಚಿನ ದ್ರವಾಹಾರ ಅಗತ್ಯವಾಗಿದೆ. ಬನ್ನಿ ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ, ಪುಟ್ಟ ಕಂದಮ್ಮನ ಹಾಗೂ ನಿಮ್ಮ ಆರೋಗ್ಯವನ್ನು ಸಮತೋಲನಿಂದ ಕಾಪಾಡುವಂತಹ ಕೆಲವೊಂದು ಪೌಷ್ಠಿಕಾಂಶ ಆಹಾರಗಳ ಪರಿಚಯವನ್ನು ನಿಮಗಾಗಿ ಮಾಡಿಕೊಡುತ್ತಿದ್ದೇವೆ, ಓದಿ ತಿಳಿದುಕೊಳ್ಳಿ. ಮತ್ತು ತಪ್ಪದೆ ಸೇವಿಸಲು ಆರಂಭಿಸಿ....... ಗರ್ಭಿಣಿಯರ ಆಹಾರಕ್ರಮ, ಮಿತವಾಗಿ ಸೇವಿಸಿದಷ್ಟು ಒಳ್ಳೆಯದು

ಬೀಟ್ ರೂಟ್‍
ಬೀಟ್ ರೂಟ್‍ಗಳು ಬೀಟ್‍ರೂಟ್‍ಗಳು ಸಹ ಗರ್ಭಿಣಿಯಾಗಿರುವವರಿಗೆ ಹೇಳಿ ಮಾಡಿಸಿದ ತರಕಾರಿಯಾಗಿದೆ. ಇದರ ಜೊತೆಗೆ ಇದರಲ್ಲಿ ಕಬ್ಬಿಣ ಮತ್ತು ಫೊಲಿಕ್ ಆಮ್ಲಗಳ ಪ್ರಮಾಣವು ಸಹ ಅಧಿಕವಾಗಿರುತ್ತದೆ ಮತ್ತು ವಿಟಮಿನ್ ಎ ಹಾಗು ಸಿಗಳು ಸಹ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಇದು ಗರ್ಭಿಣಿಯಾಗಿರುವಾಗ ತಿನ್ನಲೇ ಬೇಕಾದ ತರಕಾರಿಗಳಲ್ಲಿ ಒಂದಾಗಿದೆ.

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳಲ್ಲಿ ಸಮೃದ್ಧವಾದ ಸತುವಿನ ಅಂಶವಿರುತ್ತದೆ. ಸತುವು ಮಗುವಿನ ಅಂಗಾಂಗಗಳ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಅಂಶವಾಗಿರುತ್ತದೆ. ಪಾಲಕ್ ಸೊಪ್ಪುಗಳು, ಲೆಟ್ಯೂಸ್ ಮತ್ತು ಫೆನುಗ್ರೀಕ್‍ಗಳಲ್ಲಿ ಸಹ ಸತುವಿನ ಅಂಶ ಯಥೇಚ್ಛವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಮ್ಯಾಂಗನೀಸ್, ನಾರಿನಂಶ ಮತ್ತು ಇನ್ನಿತರ ವಿಟಮಿನ್‍ಗಳು ಸಹ ಇರುವುದರಿಂದ ಗರ್ಭಿಣಿಯರು ಇವುಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ.

ಹಸಿರು ಬಟಾಣಿಗಳು
ಗರ್ಭಿಣಿಯಾಗಿರುವಾಗ ಸೇವಿಸಲೇಬೇಕಾದ ತರಕಾರಿಗಳಲ್ಲಿ ಹಸಿರು ಬಟಾಣಿಗಳು ಸಹ ಒಂದು. ಇದರಲ್ಲಿ ವಿಟಮಿನ್-ಕೆಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಮಗುವಿನ ಕೇಂದ್ರಿಯ ನರ ವ್ಯೂಹದ ಬೆಳವಣಿಗೆಗೆ ಅತ್ಯಂತ ಪೂರಕವಾಗಿರುತ್ತದೆ. ಜೊತೆಗೆ ಮೂಳೆ, ಆರೋಗ್ಯ ಮತ್ತು ಸ್ನಾಯುಗಳ ಬೆಳವಣಿಗೆಗು ಸಹ ಇದು ಪ್ರಯೋಜನಕಾರಿ.

ಹಾಲು

ಹಸುವಿನ ಹಾಲಿನಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಲಭ್ಯವಿದ್ದು ಮಗುವಿನ ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿದೆ. ಅಲ್ಲದೇ ಮಾನಸಿಕವಾಗಿ ಶಾಂತವಾಗಿರಲು ಹಾಗೂ ಉದ್ವೇಗಗೊಳ್ಳದೇ ಇರಲು ರಕ್ತದಲ್ಲಿ ಸೆರೋಟೋನಿನ್ ಎಂಬ ಕಿಣ್ವ ಉತ್ಪತ್ತಿಯಾಗಲೂ ಹಾಲು ಸಹಕಾರಿಯಾಗಿದೆ. ಆದರೆ ಹಾಲುಪುಡಿಯಿಂದ ತಯಾರಿಸಿದ, ಲಾಂಗ್ ಲೈಫ್ ಮಿಲ್ಕ್ ಎಂದು ಮಾರುಕಟ್ಟೆಯಲ್ಲಿ ಸಿಗುವ (UHT Treated) ಹಾಲು, ವಿಭಿನ್ನ ಹಣ್ಣುಗಳ ರುಚಿ ಹಾಗೂ ಸ್ವಾದಗಳನ್ನು ಸೇರಿಸಿದ ಟೋನ್ಡ್ ಮಿಲ್ಕ್ ಮೊದಲಾದವುಗಳನ್ನು ಸೇವಿಸದಿರುವುದು ಒಳ್ಳೆಯದು. ಹಸುವಿನ ಹಾಲನ್ನು ಬಿಸಿ ಮಾಡಿ ಸಕ್ಕರೆ ಸೇವಿಸದೇ ಬೆಳಿಗೆ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸುವುದು ಉತ್ತಮ ನಿದ್ರೆಗೂ ಆರೋಗ್ಯಕ್ಕೂ ಸಹಕಾರಿಯಾಗಿದೆ.

ಕಿತ್ತಳೆ ಹಣ್ಣಿನ ರಸ

ತಾಜಾ ಕಿತ್ತಳೆ ಹಣ್ಣಿನ ರಸ ವಿಟಮಿನ್ ಸಿ ಆಗರವಾಗಿದೆ. ಗರ್ಭಕಾಲದಲ್ಲಿ ಹಲವು ಸೋಂಕುಗಳಿಗೆ ದೇಹ ಎದುರಾಗಬೇಕಾಗುತ್ತದೆ. ಆಗ ವಿಟಮಿನ್ ಸಿ. ಅಗತ್ಯವಾಗಿ ಬೇಕಾಗುತ್ತದೆ. ದೇಹದಿಂದ ವಿಷಕಾರಕ ವಸ್ತುಗಳನ್ನು ಹೊರಹಾಕಲೂ ವಿಟಮಿನ್ ಸಿ ಅಗತ್ಯವಿದೆ. ದಿನಕ್ಕೆ ಒಂದು ಅಥವಾ ಎರಡು ಲೋಟ ತಾಜಾ ಕಿತ್ತಳೆಗಳ ರಸವನ್ನು ಸಕ್ಕರೆ ರಹಿತವಾಗಿ ಸೇವಿಸುವುದರಿಂದ ಆರೋಗ್ಯ ಉತ್ತಮಗೊಳ್ಳುವುದು.
English summary

Healthy Food Guide for Pregnant Women

Here's some advice from nutrition experts on their top pregnancy foods. You don't need to like or eat them all, but pick and choose your favorites to give your pregnancy a nutritional boost. have a look
Story first published: Thursday, March 3, 2016, 11:17 [IST]
X
Desktop Bottom Promotion