For Quick Alerts
ALLOW NOTIFICATIONS  
For Daily Alerts

ಚೋಟುದ್ದ ನುಗ್ಗೆಯಲ್ಲಿದೆ ಲೆಕ್ಕಕ್ಕೆ ಸಿಗದ ಆರೋಗ್ಯ ಗುಣಗಳು

By Jaya
|

ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ಅಪೂರ್ವವಾದ ಘಟ್ಟವಾಗಿದ್ದು ಪ್ರತಿಯೊಬ್ಬ ಹೆಣ್ಣು ಕೂಡ ಈ ಕ್ಷಣಕ್ಕಾಗಿ ಕಾಯುತ್ತಿರುತ್ತಾಳೆ. ನವ ಮಾಸ ತನ್ನ ಉದರದಲ್ಲಿ ತನ್ನದೇ ರಕ್ತ ಮಾಂಸ ಹಂಚಿಕೊಂಡು ಬೆಳೆಯುವ ಪುಟ್ಟ ಕಾಲುಗಳನ್ನು ನೋಡಲು ಆಕೆ ತವಕಿಸುತ್ತಿರುತ್ತಾಳೆ. ಗರ್ಭಿಣಿಯು ಈ ಸಮಯದಲ್ಲಿ ಹೆಚ್ಚಿನ ನಾಜೂಕಿನ ದೇಹವನ್ನು ಪಡೆದುಕೊಂಡಿರುವುರಿಂದ ಮತ್ತು ದೈಹಿಕ ಬದಲಾವಣೆಗಳಿಗೆ ಆಕೆ ಒಗ್ಗಿಕೊಳ್ಳಬೇಕಾಗಿರುವುದರಿಂದ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ತಾನು ಧರಿಸುವ ದಿರಿಸು, ಕುಳಿತುಕೊಳ್ಳುವ ನಿಲ್ಲುವ ಭಂಗಿ, ಕೆಲಸ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ನಡೆದಾಡುವಾಗ ಅನುಸರಿಸಬೇಕಾದ ನಿಯಮಗಳು ಹೀಗೆ ಆಕೆ ಮಾಡುವ ಪ್ರತಿಯೊಂದು ಕಾರ್ಯವನ್ನೂ ಹೆಚ್ಚಿನ ಮುತುವರ್ಜಿಯಿಂದ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ತಿನ್ನುವ ಬಯಕೆಗಳು ಅಧಿಕವಾಗಿರುವುದರಿಂದ ಆ ವಿಷಯದಲ್ಲಿ ಕೂಡ ಹೆಚ್ಚಿನ ಜಾಗರೂಕತೆಯನ್ನು ಮಾಡಬೇಕು. ಮಗುವಿನ ಆರೋಗ್ಯದ ಮೇಲೂ ಸೇವಿಸುವ ಆಹಾರ ಪರಿಣಾಮ ಬೀರುವುದರಿಂದ ಗರ್ಭಿಣಿ ತೆಗೆದುಕೊಳ್ಳಬೇಕಾದ ಆಹಾರ ಹೆಚ್ಚಿನ ಪ್ರೋಟೀನ್ ವಿಟಮಿನ್‎ಗಳನ್ನು ಕೂಡಿ ಆರೋಗ್ಯವಂತವಾಗಿರಬೇಕು.

ಇಂದಿನ ಲೇಖನದಲ್ಲಿ ಆಕೆ ತೆಗೆದುಕೊಳ್ಳಬೇಕಾದ ಪ್ರಮುಖ ತರಕಾರಿ ನುಗ್ಗೆಕಾಯಿಯ ವಿಶೇಷತೆಗಳನ್ನು ತಿಳಿಸಲಿದ್ದೇವೆ. ಎಲ್ಲಾ ತರಕಾರಿ ಹಣ್ಣುಗಳ ಸೇವನೆ ಗರ್ಭಾವಸ್ಥೆಯಲ್ಲಿ ಉತ್ತಮವಾಗಿದ್ದರೂ ನುಗ್ಗೆಕಾಯಿ ಕೆಲವೊಂದು ಧನಾತ್ಮಕ ಅಂಶಗಳನ್ನು ಹೊಂದಿ ಗರ್ಭಿಣಿಯರು ಸೇವಿಸುವ ತರಕಾರಿ ಪಟ್ಟಿಯಲ್ಲಿ ಮೇಲ್ಮಟ್ಟದಲ್ಲಿದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಗರ್ಭಿಣಿಯರಿಗೆ ವರದಾನವಾಗಿದ್ದು ಇಂತಹ ಸಂದರ್ಭದಲ್ಲಿ ಉಂಟಾಗುವ ಹಲವಾರು ದೈಹಿಕ ಕಿರಿಕಿರಿಗಳನ್ನು ದೂರಮಾಡಲು ಸಹಾಯಕವಾಗಿದೆ. ಹಾಗಿದ್ದರೆ ಅದೇನು ಎಂಬುದನ್ನು ಮುಂದೆ ಓದಿ..

ಮಗುವಿನ ಜನನಕ್ಕೆ ಸಹಕಾರಿ

ಮಗುವಿನ ಜನನಕ್ಕೆ ಸಹಕಾರಿ

ಹೆರಿಗೆ ನೋವನ್ನು ಕಡಿಮೆ ಮಾಡಿ ಮಗು ಜನಿಸಲು ನುಗ್ಗೆಕಾಯಿ ಸಹಕಾರಿಯಾಗಿದೆ. ಹೆಚ್ಚು ಪ್ರಮಾಣದ ರಕ್ತ ಸ್ರಾವವನ್ನು ಕುಗ್ಗಿಸಿ ಹೆರಿಗೆಯ ಸಮಯದಲ್ಲಿ ಉಂಟಾಗುವ ಸಂಕಷ್ಟಗಳನ್ನು ನಿವಾರಿಸುತ್ತದೆ.

ಬೆಳಗ್ಗಿನ ಸಮಯದ ಕಿರಿಕಿರಿ ನಿವಾರಣೆ

ಬೆಳಗ್ಗಿನ ಸಮಯದ ಕಿರಿಕಿರಿ ನಿವಾರಣೆ

ಗರ್ಭಿಣಿಯರಿಗೆ ಬೆಳಗ್ಗಿನ ಸಮಯದಲ್ಲಿ ಉಂಟಾಗುವ ದೈಹಿಕ ಕಾಯಿಲೆಗಳನ್ನು ದೂರಮಾಡಲು ನುಗ್ಗೆಕಾಯಿ ಸಹಕಾರಿ. ವಾಕರಿಕೆ, ತಲೆನೋವು ಹೊಟ್ಟೆ ತೊಳೆಸುವಿಕೆ ಅಂತೆಯೇ ಬೆಳಗ್ಗಿನ ಕಿರಿಕಿರಿಗಳನ್ನು ನಿವಾರಿಸುತ್ತದೆ.

ಆರೋಗ್ಯಕರ ಮೂಳೆಗಳು

ಆರೋಗ್ಯಕರ ಮೂಳೆಗಳು

ನುಗ್ಗೆಕಾಯಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಕಬ್ಬಿಣ, ಕ್ಯಾಲ್ಶಿಯಂ ಮತ್ತು ವಿಟಮಿನ್‎ಗಳು ಇವೆ. ಇದರಿಂದ ಆರೋಗ್ಯಯುತ ಬಲಿಷ್ಟ ಮೂಳೆಗಳನ್ನು ನುಗ್ಗೆಕಾಯಿ ಉತ್ತೇಜಿಸುತ್ತದೆ. ರಕ್ತ ಶುದ್ಧೀಕರಣದಲ್ಲಿ ನುಗ್ಗೆಕಾಯಿ ಪಾತ್ರ ಹಿರಿದಾದುದು.

ಹಾನಿಕಾರಕ ಸೋಂಕುಗಳ ನಿವಾರಣೆ

ಹಾನಿಕಾರಕ ಸೋಂಕುಗಳ ನಿವಾರಣೆ

ಬ್ಯಾಕ್ಟೀರಿಯಾ ನಿರೋಧಕ ಅಂಶಗಳನ್ನು ನುಗ್ಗೆಕಾಯಿ ಹೊಂದಿರುವುದರಿಂದ ಗರ್ಭಾವಸ್ಥೆಯಲ್ಲಿ ಕಂಡುಬರುವ ಗಂಟಲು, ಚರ್ಮ ಮತ್ತು ಎದೆಯ ಸೋಂಕುಗಳನ್ನು ನಿವಾರಿಸುತ್ತದೆ.

ಹೊಟ್ಟೆಯ ಅಸ್ವಸ್ಥತೆಗಳನ್ನು ದೂರಮಾಡುತ್ತದೆ

ಹೊಟ್ಟೆಯ ಅಸ್ವಸ್ಥತೆಗಳನ್ನು ದೂರಮಾಡುತ್ತದೆ

ಹೊಟ್ಟೆಯ ಅಸ್ವಸ್ಥತೆಗಳನ್ನು ದೂರಮಾಡಲು ನುಗ್ಗೆಕಾಯಿ ಸಹಾಯಕ. ಎಳನೀರಿನೊಂದಿಗೆ ನುಗ್ಗೆಕಾಯಿಯನ್ನು ಸೇವಿಸುವುದು ಅತಿಸಾರ ಮತ್ತು ಕಾಮಾಲೆಯನ್ನು ದೂರಮಾಡುತ್ತದೆ.

ಮಧುಮೇಹ ನಿಯಂತ್ರಣ

ಮಧುಮೇಹ ನಿಯಂತ್ರಣ

ಗರ್ಭಾವಸ್ಥೆಯಲ್ಲಿನ ಮಧುಮೇಹವನ್ನು ನಿಯಂತ್ರಿಸಲು ನುಗ್ಗೆಕಾಯಿ ಸಹಕಾರಿಯಾಗಿದೆ. ರಕ್ತದ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಟ್ಟು ಈ ಸಂದರ್ಭದಲ್ಲಿ ಕಾಡುವ ತೊಂದರೆಗಳನ್ನು ನಿವಾರಿಸುತ್ತದೆ. ಗರ್ಭಧಾರಣೆಯ ಮಧುಮೇಹವಾದ ಮೆಲ್ಲಿಟಸ್ ಅನ್ನು ನಿಯಂತ್ರಣದಲ್ಲಿಡಲು ನುಗ್ಗೆ ಸಹಾಯಕವಾಗಿದೆ.


English summary

Health Benefits Of Drumstick In Pregnancy

Pregnancy is a phase of a woman's life, wherein she has to follow a strict diet and eat the right kind of foods for the well-being of both the baby and mother. Drumsticks are one of the must-have foods that has to be included in the diet of a pregnant woman. It is also one of the foods women crave for during pregnancy. It is totally safe to eat this in pregnancy. Drumstick is a good source of calcium, carotene phosphorous and vitamin C. Both drumstick and its leaves are equally beneficial to be consumed during pregnancy.
X
Desktop Bottom Promotion