For Quick Alerts
ALLOW NOTIFICATIONS  
For Daily Alerts

ಮೂರನೆಯ ತಿಂಗಳಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೀಗಿರಲಿ...

By Manu
|

ತಾಯಿಯಾಗುವುದು ಎಂದರೆ ಅದೊಂದು ರೀತಿಯಲ್ಲಿ ಸ್ವರ್ಗ ಸದೃಶವಾದ ಅನುಭವ. ಒಂಬತ್ತು ತಿಂಗಳು ತನ್ನ ಕಂದಮ್ಮನನ್ನು ಉದರಲ್ಲಿ ಹೊತ್ತು ಅದರ ಸಾಮೀಪ್ಯವನ್ನು ಅರಿತುಕೊಂಡು ತನ್ನದೇ ರಕ್ತ ಮಾಂಸ ಹಂಚಿಕೊಂಡು ಭೂಮಿಗೆ ಬರುವ ವೇಳೆ ಹೆಣ್ಣು ಜನ್ಮ ಸಾರ್ಥಕವಾಗಿಯಿತು ಎಂಬ ವಿಶಿಷ್ಟ ಅನುಭೂತಿ ಮನದಲ್ಲಿ ಮೂಡುತ್ತದೆ. ತಾಯಿ ಕಂದನನ್ನು ಗರ್ಭದಲ್ಲಿ ಧರಿಸುವ ಸಂದರ್ಭ ಅದೇನೂ ನಿರಾಯಾಸವಾದ ಕೆಲಸವಾಗಿರುವುದಿಲ್ಲ.

ಮಗುವು ಅನುಭವಿಸುವುದನ್ನು ತಾಯಿ ಕೂಡ ಅನುಭವಿಸುತ್ತಾಳೆ. ಶಿಶುವಿನ ಪ್ರತಿಯೊಂದು ಚಲನವಲನಗಳ ಸ್ಪರ್ಶ ಆಕೆಗೆ ಅರಿವಾಗುತ್ತದೆ. ಅಂತೆಯೇ ಮಗು ಅನುಭವಿಸುವ ಕಿರಿಕಿರಿಯನ್ನು ತಾಯಿ ಕೂಡ ಅನುಭವಿಸುತ್ತಾಳೆ. ವಾಂತಿ, ತಲೆಸುತ್ತು, ಹೊಟ್ಟೆಯುಬ್ಬರ, ಆಯಾಸ, ಬಳಲಿಕೆ, ಕೋಪ, ಹೀಗೆ ಪ್ರತಿಯೊಂದು ಅನುಭವಗಳನ್ನು ಆಕೆ ಅನುಭವಿಸುತ್ತಾಳೆ.

ಹೀಗೆ ಪ್ರತಿಯೊಂದು ತಿಂಗಳಲ್ಲೂ ತಾಯಿಗೆ ಒಂದೊಂದು ರೀತಿಯ ಅನುಭವವಾಗುತ್ತದೆ. ಗರ್ಭದಲ್ಲಿರುವ ಶಿಶುವು ಬೆಳೆಯುತ್ತಾ ಬಂದಂತೆ ಅದರ ಸ್ವಭಾವಕ್ಕೆ ಅನುಗುಣವಾಗಿ ತಾಯಿ ಕೂಡ ಅದೇ ರೀತಿಯ ಮಾನಸಿಕ ಮತ್ತು ದೈಹಿಕ ಸ್ಥಿತಿಯನ್ನು ಪಡೆದುಕೊಳ್ಳುತ್ತಾಳೆ.

ಅದಕ್ಕೆ ತಕ್ಕಂತೆ ಗರ್ಭಿಣಿ ಸ್ತ್ರೀಯು ಪ್ರತಿಯೊಂದು ತಿಂಗಳಲ್ಲೂ ಸೇವಿಸಬೇಕಾಗಿರುವ ಆಹಾರ ಮತ್ತು ಅನುಸರಿಸಬೇಕಾದ ಪಥ್ಯ ಕ್ರಮಗಳ ಬಗ್ಗೆ ಅರಿವನ್ನು ತಿಳಿಸಿ ಹೇಳಬೇಕು. ಮನೆಯಲ್ಲಿ ಹಿರಿಯರಿದ್ದ ಸಂದರ್ಭದಲ್ಲಿ ಏನು ಸೇವಿಸಬೇಕು, ಏನು ಸೇವಿಸಬಾರದು ಮೊದಲಾದ ಕ್ರಮಗಳನ್ನು ತಿಳಿಸಿಕೊಡುತ್ತಾರೆ.

ಜೊತೆಗೆ ನೀವೂ ಕೂಡ ಕೆಲವೊಂದು ವಿಷಯಗಳನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ನಡೆದುಕೊಂಡಲ್ಲಿ ನೀವು ಅನುಭವಿಸುವ ಸುಸ್ತು ಬಳಲಿಕೆ ಕೊಂಚವಾದಾರೂ ಕಡಿಮೆಯಾಗುತ್ತದೆ. ಇಂದಿನ ಲೇಖನದಲ್ಲಿ ನಿಮ್ಮ ಮೂರನೇ ಮಾಸದಲ್ಲಿ ನೀವು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂಬ ಮಾಹಿತಿಯನ್ನು ನಾವು ಇಂದಿಲ್ಲಿ ತಿಳಿಸುತ್ತಿದ್ದೇವೆ.

ವಿಟಮಿನ್ B6 ಹೆಚ್ಚಿರುವ ಆಹಾರಗಳು

ವಿಟಮಿನ್ B6 ಹೆಚ್ಚಿರುವ ಆಹಾರಗಳು

ಮೂರನೆಯ ತಿಂಗಳಲ್ಲಿ ಸೇವಿಸುವ ಆಹಾರಗಳಲ್ಲಿ ವಿಟಮಿನ್ B6 ಹೆಚ್ಚಿರುವಂತೆ ನೋಡಿಕೊಳ್ಳುವುದು ತಜ್ಞರು ಸೂಚಿಸುವ ಕ್ರಮವಾಗಿದೆ. ಇದರಿಂದ ವಾಕರಿಕೆ ಮತ್ತು ಸುಸ್ತು ಕಡಿಮೆಯಾಗುತ್ತದೆ. ಅಲ್ಲದೇ ಇದರಿಂದ ಬದಲಾಗುವ ಭಾವೋದ್ವೇಗವೂ ಕಡಿಮೆಯಾಗುತ್ತದೆ. ಸಾಧ್ಯವಾದಷ್ಟು ಆಹಾರದಲ್ಲಿ ಲಿಂಬೆ ಜಾತಿಯ ಹಣ್ಣುಗಳ ರಸ, ಮೊಟ್ಟೆಗಳು, ಹಸಿರು ಮತ್ತು ದಪ್ಪನೆಯ ಎಲೆಗಳು, ಆಲೂಗಡ್ಡೆ ಮೊದಲಾದವು ಇರುವಂತೆ ನೋಡಿಕೊಳ್ಳಿ.

ತಾಜಾ ಹಣ್ಣುಗಳು

ತಾಜಾ ಹಣ್ಣುಗಳು

ತಾಜಾ ಹಣ್ಣುಗಳಲ್ಲಿ ಹೆಚ್ಚಿನ ವಿಟಮಿನ್ನುಗಳು, ನೈಸರ್ಗಿಕ ಸಕ್ಕರೆ, ಆಂಟಿ ಆಕ್ಸಿಡೆಂಟುಗಳು, ಕರಗುವ ಮತ್ತು ಕರಗದ ನಾರು ಹಾಗೂ ಮುಖ್ಯವಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿದ್ದು ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯವಾಗಿದೆ. ನಿಮ್ಮ ನಿತ್ಯದ ಆಹಾರದಲ್ಲಿ ಕನಿಷ್ಟ ಎರಡಾದರೂ ಹಣ್ಣುಗಳಿರುವಂತೆ ನೋಡಿಕೊಳ್ಳಿ.

ಕಾರ್ಬೋಹೈಡ್ರೇಟುಗಳು

ಕಾರ್ಬೋಹೈಡ್ರೇಟುಗಳು

ಇಡಿಯ ಗೋಧಿಯ ಬ್ರೆಡ್, ಅಕ್ಕಿ, ಆಲುಗಡ್ಡೆಗಳಲ್ಲಿ ಉತ್ತಮ ಪ್ರಮಾಣದ, ಸುಲಭವಾಗಿ ಜೀರ್ಣಗೊಳ್ಳುವ ಕಾರ್ಬೋಹೈಡ್ರೇಟುಗಳಿದ್ದು ದೇಹದ ಚಟುವಟಿಕೆ ಮತ್ತು ದೇಹದಲ್ಲಿ ಆಗುತ್ತಿರುವ ಬದಲಾವಣೆಗೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಆದರೆ ಈ ಆಹಾರಗಳಲ್ಲಿ ಸಕ್ಕರೆ ಹೆಚ್ಚಿರದಂತೆ ನೋಡಿಕೊಳ್ಳುವುದೂ ಅಗತ್ಯ. ಇದರಿಂದ ದೇಹ ಅಗತ್ಯಕ್ಕಿಂತಲೂ ಹೆಚ್ಚು ತೂಕ ಪಡೆದುಕೊಳ್ಳುವ ಮೂಲಕ ಸ್ಥೂಲಕಾಯ ಎದುರಾಗಬಹುದು.

ಕಬ್ಬಿಣ ಮತ್ತು ಫೋಲೇಟ್

ಕಬ್ಬಿಣ ಮತ್ತು ಫೋಲೇಟ್

ಗರ್ಭಾವಸ್ಥೆಯ ಎಲ್ಲಾ ತಿಂಗಳುಗಳಲ್ಲಿ ಕಬ್ಬಿಣ ಮತ್ತು ಫೋಲೇಟ್ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. ಏಕೆಂದರೆ ಮಗುವಿನ ಬೆಳವಣಿಗೆಗೆ ಇವು ಅಗತ್ಯವಾಗಿದ್ದು ಈ ಅಂಶಗಳು ಹೆಚ್ಚಿರುವ ಆಹಾರಗಳನ್ನು ನಿತ್ಯವೂ ಸೇವಿಸಬೇಕು. ಮೂರನೆಯ ತಿಂಗಳಲ್ಲಿ ಕೊಂಚ ಹೆಚ್ಚಾಗಿಯೇ ಸೇವಿಸುವುದು ಉತ್ತಮ. ಬೀಟ್ ರೂಟ್, ಚಿಕ್ಕು ಹಣ್ಣು, ಓಟ್ಸ್, ಬ್ರೊಕೋಲಿ, ಮೊಟ್ಟೆ ಮತ್ತು ಹಸಿಯಾಗಿ ತಿನ್ನಬಹುದಾದ ಎಲೆಗಳು ಮತ್ತು ತರಕಾರಿಗಳಲ್ಲಿ ಈ ಅಂಶಗಳು ಹೆಚ್ಚಿರುತ್ತವೆ.

ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು

ಗರ್ಭಿಣಿಯ ಮತ್ತು ಮಗುವಿನ ಆರೋಗ್ಯಕ್ಕೆ ಅಗತ್ಯವಿರುವ ಹೆಚ್ಚಿನ ಪೋಷಕಾಂಶಗಳನ್ನು ಹಾಲು ನೀಡುತ್ತದೆ. ಮೂರನೆಯ ತಿಂಗಳ ಬಳಿಕ ಮಗುವಿನ ಮೂಳೆಗಳು ರೂಪುಗೊಳ್ಳತೊಡಗುವ ಕಾರಣ ಈ ಅವಧಿಗೂ ಮುನ್ನ ತಾಯಿಯ ದೇಹದಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇರುವುದು ಅವಶ್ಯ. ಆದ್ದರಿಂದ ನಿತ್ಯವೂ ಹಾಲು ಕುಡಿಯುವ ಮೂಲಕ ಕ್ಯಾಲ್ಸಿಯಂ ಸಹಿತ ಇತರ ಖನಿಜಗಳನ್ನು ತಾಯಿಯ ದೇಹ ಪಡೆಯಲು ಸಾಧ್ಯ. ಆದರೆ ಹಾಲನ್ನು ನೇರವಾಗಿ ಕುಡಿದರೆ ಕ್ಯಾಲ್ಸಿಯಂ ದೇಹಕ್ಕೆ ಲಭಿಸುವ ಪ್ರಮಾಣ ಅತಿ ಕಡಿಮೆ ಇರುವ ಕಾರಣ ಕೊಂಚ ಜೇನು ಸೇರಿಸಿ ಕುಡಿಯುವ ಮೂಲಕ ಹಾಲಿನಲ್ಲಿರುವ ಕ್ಯಾಲ್ಸಿಯಂನ ಗರಿಷ್ಟ ಪ್ರಮಾಣವನ್ನು ಪಡೆದುಕೊಳ್ಳಬಹುದು.

English summary

Foods To Eat In The Third Month Of Pregnancy

Pregnancy is a phase where a woman has to be more careful about the choice of foods she makes. The foods that a lady eats during pregnancy can have an effect on the development of her baby. During the third month of pregnancy, the body goes through some huge changes. The foetus starts to show rapid movements during the third month of pregnancy.
X
Desktop Bottom Promotion