For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಗ್ರೀನ್ ಟೀ ಸೇವನೆ- ಅಪಾಯ ಕಟ್ಟಿಟ್ಟ ಬುತ್ತಿ

By Manu
|

ಹೆಣ್ಣು ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಆಕೆಯಲ್ಲಿ ನವ ಚೈತನ್ಯ ತಾಯ್ತನದ ಸುಖ ಕಂಡುಬರುತ್ತದೆ. ತನ್ನದೇ ಕರುಳ ಬಳ್ಳಿ ಒಡಲಲ್ಲಿ ತಾಯಿಯನ್ನು ಅಪ್ಪಿ ಹಿಡಿದು ಮಲಗಿರುವ ಆ ಚಿತ್ರಣ ಮನದಲ್ಲಿ ಮೂಡುತ್ತಿರುವಂತೆ ತಾಯಿಗೆ ದುಃಖ ಸಂತಸ ಜೊತೆ ಜೊತೆಗೇ ಸಂಭವಿಸುತ್ತದೆ. ಒಂಬತ್ತು ತಿಂಗಳುಗಳ ಕಾಲ ಉದರಲ್ಲಿ ಆ ಪುಟ್ಟ ಕಂದಮ್ಮನನ್ನು ಕಣ್ರೆಪ್ಪೆ ಮುಚ್ಚದೇ ತಾಯಿ ಕಾಪಾಡುತ್ತಾಳೆ. ಪ್ರಕೃತಿ ದತ್ತವಾದ ಕೊಡುಗೆಯಾಗಿರುವ ತಾಯ್ತನವೆಂಬುದು ಹೆಣ್ಣಿಗೆ ವರವಾಗಿದೆ.

ಈ ಸಮಯಗಳಲ್ಲಿ ಆಕೆ ತನ್ನ ದೇಹದ ಕಡೆಗೆ ಆರೈಕೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ತನ್ನೊಂದಿಗೆ ಇನ್ನೊಂದು ಜೀವವನ್ನು ಹೊರುವ ಒಡಲು ಕೆಟ್ಟದ್ದು ಒಳ್ಳೆಯದರ ಬಗೆಗೆ ಯೋಚಿಸಬೇಕು. ನಿಮಗೆ ಹೆಚ್ಚು ತ್ರಾಸನ್ನು ನೀಡುವ ಆಹಾರವನ್ನು ಸೇವಿಸಲೇಬಾರದು ಅಂತೆಯೇ ಬಾಯಿ ರುಚಿಯೆಂದು ಸಿಕ್ಕಸಿಕ್ಕದ್ದನ್ನೆಲ್ಲಾ ತುರುಕಬಾರದು ಇದರಿಂದ ನಂತರ ಉಂಟಾಗುವ ಸಮಸ್ಯೆಯನ್ನು ನೀವೇ ಅನುಭವಿಸಬೇಕಾಗುತ್ತದೆ.

Drinking Green Tea During Pregnancy Safe?

ಅದಕ್ಕಾಗಿ ಯಾವುದೇ ಆಹಾರವನ್ನು ತೆಗೆದುಕೊಳ್ಳುವ ಮೊದಲು ಅವರು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಗರ್ಭಿಣಿಯು ಗ್ರೀನ್ ಟೀ ಕುಡಿತಬಹುದೇ ಎಂಬ ವಿಚಾರಕ್ಕೆ ನಾವು ಬಂದಾಗ ವೈದ್ಯರು ನೀಡಿರುವ ಸಲಹೆ ಅದು ಕೆಟ್ಟದ್ದು ಎಂಬುದಾಗಿದೆ. ಈ ಮಾತು ನಿಮಗೆ ಆಶ್ಚರ್ಯವನ್ನುಂಟು ಮಾಡಬಹುದು. ಏಕೆಂದರೆ

ಉತ್ಕರ್ಷಣಾ ನಿರೋಧಿ ಅಂಶಗಳನ್ನು ಒಳಗೊಂಡಿರುವ ಗ್ರೀನ್ ಟೀ ಹತ್ತು ಹಲವು ವೈದ್ಯಕೀಯ ಪ್ರಯೋಜನಗಳನ್ನು ಪಡೆದುಕೊಂಡಿದೆ. ತ್ವಚೆಯ ಕೋಶಗಳಿಗೆ ಉಂಟಾಗುವ ಹಾನಿಯನ್ನು ತಡೆಯುತ್ತದೆ, ರಕ್ತದೊತ್ತಡದಿಂದ ದೇಹವನ್ನು ಸಂರಕ್ಷಿಸುತ್ತದೆ, ಹೃದಯ ರೋಗ ಬರದಂತೆ ಕಾಪಾಡುತ್ತದೆ ಮತ್ತು ಮದುಮೇಹಕ್ಕೆ ಬ್ರೇಕ್ ಹಾಕುತ್ತದೆ. ಬೇರೆಲ್ಲಾ ಗಿಡಮೂಲಿಕಾ ಅಂಶಗಳಿಗೆ ಹೋಲಿಸಿದಾಗ ಗ್ರೀನ್ ಟೀ ಪ್ರಥಮ ಸ್ಥಾನದಲ್ಲಿದೆ. ಕಬ್ಬಿಣ, ಕ್ಯಾಲ್ಶಿಯಮ್ ಮತ್ತು ಮೆಗ್ನೇಶಿಯಮ್ ಅಂಶಗಳನ್ನು ಇದು ಹೊಂದಿದ್ದರೂ ಗರ್ಭಿಣಿಯರಿಗೆ ಮಾತ್ರ ಇದು ನಿಷಿದ್ಧವಾಗಿದೆ.

ಸಂಶೋಧನೆಗಳು ಹೇಳುವ ಪ್ರಕಾರ, ಗರ್ಭಿಣಿಯತು ಗ್ರೀನ್ ಟೀಯನ್ನು ಸೇವಿಸಿದಾಗ ಮೂಳೆಗಳ ಮತ್ತು ಹಲ್ಲುಗಳ ಸೌಂದರ್ಯವನ್ನು ವೃದ್ಧಿಸುತ್ತದೆ. ಒಂದು ಕಪ್ ಗ್ರೀನ್ ಟೀಯಲ್ಲಿ ಕಂಡುಬರುವ ಕ್ಯಾಲ್ಶಿಯಮ್‌ ಹಲ್ಲುಗಳ ಸಮಸ್ಯೆಗಳಿಗೆ ಕಡಿವಾಣ ಹಾಕಿದರೂ ಗರ್ಭಾವಸ್ಥೆಯ ಸಂದರ್ಭದಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿಬಿಡುತ್ತದೆ. ಗ್ರೀನ್ ಟೀಯ ಇನ್ನೊಂದು ಮುಖವನ್ನು ನೋಡಿದಾಗ ಇದು ರೋಗವರ್ಧನೆಯನ್ನು ಹೆಚ್ಚಿಸಿ ಗರ್ಭಾವಸ್ಥೆಯಲ್ಲಿ ಕಂಡುಬರುವ ಯಾವುದೇ ರೋಗಕ್ಕೆ ಪೂರ್ಣವಿರಾಮವನ್ನು ಹಾಕುತ್ತದೆ. ಹಾಗಿದ್ದರೆ ಇಂದು ಗ್ರೀನ್ ಟೀ ಯ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳತ್ತ ಗಮನ ಹರಿಸೋಣ.

ಗರ್ಭಿಣಿಯಾಗಿರುವ ಎಷ್ಟು ಪ್ರಮಾಣದಲ್ಲಿ ಗ್ರೀನ್ ಟೀ ಸೇವಿಸಬೇಕು?
ಮೂಲಗಳು ಹೇಳುವಂತೆ, ದಿನದಲ್ಲಿ ಒಂದು ಕಪ್ ಗ್ರೀನ್ ಟೀಯನ್ನು ಮಾತ್ರ ಗರ್ಭಿಣಿಯರು ಸೇವಿಸಬೇಕು. ಇದಕ್ಕಿಂತ ಹೆಚ್ಚು ಸೇವಿಸುವುದು ಮಗುವಿಗೆ ತೊಂದರೆಯನ್ನು ಉಂಟುಮಾಡಬಹುದು. ಗರ್ಭಿಣಿಯಾಗಿದ್ದಾಗ ಗ್ರೀನ್ ಟೀಯಿಂದ ಉಂಟಾಗುವ ಲಾಭಗಳೇನು?ಮೂಳೆ ಮತ್ತು ಹಲ್ಲುಗಳನ್ನು ಹೊಳೆಯಿಸುವ ಗುಣವನ್ನು ಗ್ರೀನ್ ಟೀ ಹೊಂದಿದೆ ಅಂತೆಯೇ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ. ಉತ್ತಮ ಆರೋಗ್ಯಕ್ಕೆ ನಾಂದಿಯಾಗಿದೆ. ಇದು ದೇಹದ ಚಯಾಪಚಯ ಕ್ರಿಯೆ ಮತ್ತು ರೋಗವರ್ಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೆಚ್ಚು ಗ್ರೀನ್ ಟೀ ಸೇವನೆಯಿಂದ ಉಂಟಾಗುವ ಅಪಾಯಗಳೇನು?
ಹೆಚ್ಚು ಗ್ರೀನ್ ಟೀ ಸೇವನೆಯು ಗರ್ಭಿಣಿಯರ ದೇಹದಲ್ಲಿ ಹೆಚ್ಚು ಫೋಲಿಕ್ ಆಸಿಡ್ ತುಂಬಿಕೊಳ್ಳುವಂತೆ ಮಾಡುತ್ತದೆ. ಇದು ಮಗುವಿಗೆ ಹಾನಿಕರವಾಗಿದೆ. ಹೆಚ್ಚು ಗ್ರೀನ್ ಟೀ ಸೇವನೆಯಿಂದ ಭ್ರೂಣಕ್ಕೆ ಸಂಭವಿಸುವ ಅಪಾಯಗಳೇನು? ಅಧ್ಯಯನಗಳ ಪ್ರಕಾರ, ಹೆಚ್ಚು ಪ್ರಮಾಣದಲ್ಲಿ ಗ್ರೀನ್ ಟೀಯನ್ನು ಸೇವಿಸುವುದರಿಂದ ಜನಿಸದ ಮಗುವಿನ ನರಕೊಳವೆಯಲ್ಲಿ ದೋಷಗಳನ್ನು ಉಂಟುಮಾಡಬಹುದು. ತರಕಾರಿಗಳಿಂದ ದೊರೆಯುವ ಕಬ್ಬಿಣದ ಅಂಶವನ್ನು ಗ್ರೀನ್ ಟೀ ತಡೆಯುವುದರಿಂದ ಊಟದ ಸಮಯದಲ್ಲಿ ಇದನ್ನು ಸೇವಿಸಬಾರದು.

ಅಡ್ಡಪರಿಣಾಮಗಳು
ಗ್ರೀನ್ ಟೀಯು ಇಜಿಸಿಜಿಯನ್ನು ಒಳಗೊಂಡಿದೆ. ಎಪಿಗ್ಯಾಲೊಕ್ಟಿಕನ್ ದೇಹದಲ್ಲಿ ಬಳಕೆಯಾಗುವ ಫೋಲೇಟ್‎ಗೆ ಹಾನಿಯನ್ನು ಉಂಟುಮಾಡುತ್ತದೆ. ಗರ್ಭಿಣಿಯರ ದೇಹದಲ್ಲಿ ಸಾಕಷ್ಟು ಫೋಲೇಟ್ ಇಲ್ಲವೆಂದಾದಲ್ಲಿ ತನ್ನ ಉದರಲ್ಲಿರುವ ಮಗುವಿಗೆ ಹಾನಿ ಖಂಡಿತ. ಅಂತೆಯೇ ಪ್ರತೀ ಟೀ ಕೂಡ ಕೆಫಿನ್ ಅಂಶವನ್ನು ಹೊಂದಿರುವುದರಿಂದ ಫೋಟಸ್‎ಗೆ ಇದು ಹಾನಿಯನ್ನುಂಟು ಮಾಡುವುದು ಖಂಡಿತ.

ಗರ್ಭಾವಸ್ಥೆಯಲ್ಲಿ ಸೇವಿಸಬಹುದಾದ ಸುರಕ್ಷಿತ ಚಹಾಗಳೇನು?
ಬೆಳಗ್ಗಿನ ಕಾಯಿಲೆಗೆ ಕೊಂಚ ಆರಾಮವನ್ನು ನೀಡುವುದಕ್ಕಾಗಿ ಗ್ರೀನ್ ಟೀ ಸೇವನೆಯನ್ನು ಗರ್ಭಿಣಿಯರು ಮಾಡಬಹುದಾಗಿದೆ, ಪುದೀನಾ ಚಹಾ ವಾಕರಿಕೆ ಮತ್ತು ಹೊಟ್ಟೆ ತೊಳೆಸುವಿಕೆಯನ್ನು ಕಡಿಮೆ ಮಾಡುತ್ತದೆ, ರಾಸ್ಪ್‎ಬೆರ್ರಿ ಚಹಾ ಗರ್ಭಕೋಶವನ್ನು ಉತ್ತೇಜಿಸಿ ಪ್ರಸೂತಿಗೆ ಸಹಾಯ ಮಾಡುತ್ತದೆ.

X
Desktop Bottom Promotion