ಗರ್ಭಾವಸ್ಥೆಯಲ್ಲಿನ ಒತ್ತಡದಿಂದ ಮಕ್ಕಳಲ್ಲಿ ನ್ಯೂನತೆ!

By: Jaya subramanya
Subscribe to Boldsky

ಒತ್ತಡವು ನಮ್ಮ ದೇಹದ ಆರೋಗ್ಯದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ನೀವು ನಿಯತಕಾಲಿಕೆ ಮತ್ತು ಅಂತರ್ಜಾಲ ಮಾಹಿತಿಗಳಲ್ಲಿ ಕಂಡಿರುತ್ತೀರಿ. ನಮ್ಮನ್ನು ಹೆಚ್ಚು ಒತ್ತಡವು ಬಾಧಿಸಿದಂತೆ ನಾವು ಕುಗ್ಗಿ ಹೋಗುತ್ತೇವೆ. ಖಿನ್ನತೆ, ಬೇಸರ ನಮ್ಮನ್ನು ಆವರಿಸಿಬಿಡುತ್ತದೆ. ಸಾಮಾನ್ಯರಲ್ಲಿ ಒತ್ತಡವು ಈ ರೀತಿ ಪ್ರಭಾವವನ್ನು ಬೀರಿದೆ ಎಂದಾದಲ್ಲಿ ಗರ್ಭಿಣಿ ಮತ್ತು ಆಕೆಯ ನವಜಾತ ಶಿಶುವಿನ ಮೇಲೆ ಎಷ್ಟು ಕೆಟ್ಟ ಪ್ರಭಾವವನ್ನು ಬೀರಬಹುದು ಎಂಬುದನ್ನು ಅರಿತಿದ್ದೀರಾ?

ಗರ್ಭಿಣಿಯರಲ್ಲಿ ಹಲವಾರು ಕಾರಣಗಳಿಗಾಗಿ ಒತ್ತಡವು ತಲೆದೋರಬಹುದಾಗಿದೆ. ಹೆರಿಗೆ ನೋವು, ಮಗು ಜನಿಸಿದ ನಂತರ ಮುಂದೆ ಕಾಡಲಿರುವ ಜವಬ್ದಾರಿಗಳು, ಆಕೆಯಲ್ಲುಂಟಾಗುವ ದೈಹಿಕ ಬದಲಾವಣೆಗಳು ಹೀಗೆ ಒತ್ತಡವು ಗರ್ಭಿಣಿಯರನ್ನು ಅನೇಕ ವಿಧದಲ್ಲಿ ಕಾಡಬಹುದಾಗಿದೆ.

ಇನ್ನು ಹೆಚ್ಚಿನ ಪರಿಸ್ಥಿತಿಗಳಲ್ಲಿ, ಹೆಚ್ಚುವರಿ ಮಟ್ಟದ ಒತ್ತಡಕ್ಕೆ ಆಕೆ ಒಳಗಾಗುತ್ತಾಳೆ ಎಂದಾದಲ್ಲಿ, ಗರ್ಭಪಾತ, ಶಿಶುವಿನ ಪೂರ್ವ ಜನನ ಮೊದಲಾದ ಸಮಸ್ಯೆಗಳು ತಲೆದೋರಬಹುದಾಗಿದೆ. ಆದ್ದರಿಂದ ಗರ್ಭಿಣಿಯು ಆದಷ್ಟು ಒತ್ತಡದಿಂದ ಮುಕ್ತವಾಗಿರಬೇಕಾಗುತ್ತದೆ. ಒತ್ತಡವನ್ನು ನಿಯಂತ್ರಿಸಬಹುದಾದ ಸುಲಭ ಮಾರ್ಗಗಳು

Can Stress During Pregnancy Lead To Autism In Kids?
 

ತಾಯಿಯು ಗರ್ಭಾವಸ್ಥೆಯಲ್ಲಿ ಒತ್ತಡಕ್ಕೆ ಒಳಗಾಗಿದ್ದರೆ ಮಕ್ಕಳಲ್ಲಿ ಇದರ ಪರಿಣಾಮದಿಂದಾಗಿ ಸ್ವಲೀನತೆ ನ್ಯೂನತೆಗಳು ಕಂಡುಬರಬಹುದಾಗಿದೆ ಎಂಬುದಾಗಿ ಹೊಸ ಅಧ್ಯಯನವೊಂದು ತಿಳಿಸಿದೆ. ಇದು ಮಕ್ಕಳ ಸ್ಮರಣೆ ಶಕ್ತಿ ಮತ್ತು ಕಲಿಯುವಿಕೆ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಗರ್ಭಾವಸ್ಥೆಯಲ್ಲಿ ಕಾಡುವ ಒತ್ತಡವು ಮಕ್ಕಳಲ್ಲಿ ಆಟಿಸಮ್ (ಸ್ವಲೀನತೆ) ಅನ್ನು ಹೇಗೆ ಉಂಟುಮಾಡುತ್ತದೆ ಎಂಬುದನ್ನು ನೋಡೋಣ.

ಗರ್ಭಾವಸ್ಥೆಯಲ್ಲಿ ಕಾಡುವ ಒತ್ತಡದಿಂದ ಮಗುವಿಗೆ ಸ್ವಲೀನತೆ ಹೇಗೆ ಬರುತ್ತದೆ?

ಇತ್ತೀಚೆಗೆ ತಂಡವೊಂದು ತಾಯಂದಿರ ಗುಂಪಿನಲ್ಲಿ ಅಧ್ಯಯನವೊಂದನ್ನು ನಡೆಸಿತು. ಸ್ವಲೀನತೆ ಮಕ್ಕಳೊಂದಿಗೆ ತಾಯಂದಿರನ್ನು ಈ ಸಮೀಕ್ಷೆಯು ಅಧ್ಯಯನ ಮಾಡಿದ್ದು ಇದರಲ್ಲಿ ಹೆಚ್ಚಿನ ತಾಯಂದಿರು ತಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗಿರುವುದು ಕಂಡುಬಂದಿದೆ.

ಗರ್ಭಾವಸ್ಥೆಯಲ್ಲಿ ಹೆಚ್ಚಿನ ಒತ್ತಡಕ್ಕೆ ಒಳಗಾದ ತಾಯಂದಿರಲ್ಲಿ ಜೀನ್ 5 - HTTLPR ಹೆಚ್ಚುರಿಯಾಗಿ ಪತ್ತೆಯಾಗಿದೆ. ಇದರಿಂದಾಗಿ ಅವರು ಹೆಚ್ಚು ಒತ್ತಡವನ್ನು ಅನುಭವಿಸಿದ್ದಾರೆ ಕೂಡ. ಈ ಜೀನ್ ಕೆಲವು ಮಕ್ಕಳಲ್ಲಿ ಸ್ವಲೀನತೆಯನ್ನು ಅಭಿವೃದ್ಧಿಪಡಿಸಲು ಕಾರಣವಾಗಿದೆ. ಮಕ್ಕಳಲ್ಲಿ ಕಲಿಯುವಿಕೆ ಸಮಸ್ಯೆ ಮತ್ತು ಅಭಿವೃದ್ಧಿ ತೊಡಕನ್ನುಂಟು ಮಾಡುವ ಸ್ವಲೀನತೆಯು ಅರಿವಿನ ಕಾರ್ಯಗಳನ್ನು ದುರ್ಬಲಗೊಳಿಸಿ ಜೀವನವನ್ನು ಖಾಲಿಯಾಗಿಸಿಬಿಡುತ್ತದೆ. ಜೀವನದ ರೂಪು ರೇಷೆಗೆ ಕುಂದನ್ನು ಉಂಟುಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಒತ್ತಡ ನಿಯಂತ್ರಣ ಕೆಲ ಟಿಪ್ಸ್

Can Stress During Pregnancy Lead To Autism In Kids?
 

ಸ್ವಲೀನತೆಯು ಹೆಚ್ಚಿನ ಲಕ್ಷಣಗಳನ್ನು ಹೊಂದಿದ್ದು ಸಂವಹನದಲ್ಲಿ ತೊಡಕು, ಸೂಕ್ತವಲ್ಲದ ಸಾಮಾಜಿಕ ಬೆರೆಯುವಿಕೆ, ಆತ್ಮಹಾನಿ ಮೊದಲಾದವು ಸಾಮಾನ್ಯವಾಗಿದೆ. ಸಂಶೋಧಕರು ಹೇಳುವಂತೆ ಆದಷ್ಟು ತಾಯಿಯಾದವಳು ಗರ್ಭಾವಸ್ಥೆ ಸಮಯದಲ್ಲಿ ತಮ್ಮನ್ನು ನಿರಾಳರನ್ನಾಗಿ ಇರಿಸಿಕೊಳ್ಳಬೇಕು. ಒತ್ತಡ ರಹಿತರಾಗಿ ಅವರು ಚಟುವಟಿಕೆಯಿಂದಿರಬೇಕು ಎಂದಾಗಿದೆ. ಮಗುವಿನ ಜನನವಾಗುವವರೆಗೂ ಅವರು ನಿರಾಳವಾಗಿದ್ದುಕೊಂಡು ಆರಾಮವಾಗಿರುವಂತೆ ಮನೆಯವರು ಅಂತೆಯೇ ಸ್ವತಃ ತಾಯಿ ಜಾಗರೂಕತೆಯನ್ನು ವಹಿಸಬೇಕು.

English summary

Can Stress During Pregnancy Lead To Autism In Kids?

Surely, most of us would have heard about the ill effects stress can have on our health. Magazines and the internet is full of information on how stress can impair your health. So, naturally, it is no different when it comes to stress affecting the health of a pregnant women and her unborn child.. Let us see how stress during pregnancy is related to autism in kids.
Please Wait while comments are loading...
Subscribe Newsletter