For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಮುಂಜಾನೆಯ ನಡಿಗೆ, ಆರೋಗ್ಯದ ಕಡೆಗೆ...

By Jaya subramanya
|

ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ಅವಿಸ್ಮರಣೀಯವಾದುದು. ತನ್ನದೇ ಕರುಳ ಕುಡಿಯನ್ನು ಗರ್ಭದಲ್ಲಿ ಒಂಬತ್ತು ತಿಂಗಳುಗಳ ಕಾಲ ಹೊತ್ತು ಕಣ್ರೆಪ್ಪೆಯಂತೆ ಕಾಪಾಡಿಕೊಳ್ಳುವ ಆ ಅನುಭವವನ್ನು ಅನುಭವಿಸಿಯೇ ತೀರಬೇಕು. ಗರ್ಭಾವಸ್ಥೆಯ ಸಂದರ್ಭದಲ್ಲಿ ತಾಯಿಯಾದವಳು ಹೆಚ್ಚುವರಿ ಕಾಳಜಿಯನ್ನು ಮಾಡಬೇಕಾಗುತ್ತದೆ. ಪ್ರತಿ ತಿಂಗಳು ವೈದ್ಯರನ್ನು ಕಾಣುವುದು ಜೊತೆಗೆ ಅವರು ತಿಳಿಸಿದ ಪಥ್ಯಗಳನ್ನು ಅನುಸರಿಸುವುದರೊಂದಿಗೆ ಕೆಲವೊಂದು ವ್ಯಾಯಮಗಳನ್ನು ಮಾಡಬೇಕಾಗುತ್ತದೆ. ಇದರ ಜೊತೆಗೆ ಗರ್ಭಿಣಿಯರು ಮಾಡಬೇಕಾಗಿರುವ ಮುಖ್ಯ ಚಟುವಟಿಕೆಗಳಲ್ಲಿ ನಡೆಯುವುದೂ (ವಾಕಿಂಗ್) ಕೂಡ ಒಂದು.

ದೇಹದ ಆಯಾಸ ಸುಸ್ತನ್ನು ಪರಿಹರಿಸಿ ಒತ್ತಡವನ್ನು ನಿವಾರಿಸುವ ಸಾಮರ್ಥ್ಯ ನಡೆಯುವುದಕ್ಕೆ ಇದ್ದು, ಗರ್ಭಾವಸ್ಥೆಯ ಕಾಲದಲ್ಲಿ ನಡೆದಾಡುವುದರಿಂದ ಸರಳವಾದ ಹೆರಿಗೆ ಸ್ತ್ರೀಯ ಪಾಲಾಗುತ್ತದೆ. ವಾಕಿಂಗ್ ಮಾಡಲು ನಿಮಗೆ ಹೆಚ್ಚುವರಿ ವ್ಯವಸ್ಥೆಗಳ ಅಗತ್ಯವೇನಿಲ್ಲ. ನಿಮ್ಮನ್ನು ನೀವು ಸಿದ್ಧಪಡಿಸಿಕೊಳ್ಳುವುದು ಮತ್ತು ಒಂದು ಜೊತೆ ಶೂಗಳನ್ನು ನೀವು ಹೊಂದಿದ್ದರೆ ಸಾಕು.

ನಿಮ್ಮ ಒಳಿತಿಗಾಗಿ ನಡೆಸುವ ಈ ಕ್ರಿಯೆಯಲ್ಲಿ ಯಾವುದೇ ಹಿಂಜರಿಕೆ ಬೇಡವೇ ಬೇಡ. ಕೆಲವು ನಿಮಿಷಗಳ ನಡೆದಾಡುವಿಕೆಯಿಂದ ನೀವು ಮಹತ್ತರವಾದ ಬದಲಾವಣೆಗಳನ್ನು ಕಂಡುಕೊಳ್ಳಬಲ್ಲಿರಿ. ಹಾಗಿದ್ದರೆ ತಡಮಾಡದೇ ನಡೆಯುವ ಕ್ರಿಯೆಗೆ ನಿಮ್ಮನ್ನು ಒಗ್ಗಿಸಿಕೊಳ್ಳಿ ಜೊತೆಗೆ ಕೆಳಗಿನ ಸ್ಲೈಡರ್‌ಗಳಲ್ಲಿ ವಾಕಿಂಗ್ ಮಾಡುವುದರಿಂದ ಉಂಟಾಗುವ ಪ್ರಯೋಜನಗಳನ್ನು ಕಂಡುಕೊಳ್ಳಿ...

ಒತ್ತಡ ನಿವಾರಣೆ

ಒತ್ತಡ ನಿವಾರಣೆ

ಗರ್ಭಾವಸ್ಥೆಯ ಸಂದರ್ಭದಲ್ಲಿ, ಎಲ್ಲಾ ಮಹಿಳೆಯರ ಮನಸ್ಸು ಪರಿವರ್ತನೆಯಾಗುತ್ತಿರುತ್ತದೆ. ಒಮ್ಮೊಮ್ಮೆ ಸಂತಸ, ಒಮ್ಮೊಮ್ಮೆ ಖಿನ್ನತೆ ನಿಮ್ಮನ್ನು ಆವರಿಸಿಕೊಳ್ಳುತ್ತದೆ. ನಡೆಯುವುದರಿಂದ ನಿಮ್ಮ ದೇಹದಲ್ಲಿ ಈ ಬದಲಾವಣೆಗಳು ಮಾಯಗೊಂಡು ಮನಸ್ಸು ಪಕ್ವಗೊಳ್ಳುತ್ತದೆ. ಅಂತೆಯೇ ಎಂಡೋರ್‎ಫಿನ್ಸ್ ಕೆಮಿಕಲ್‎ಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಆದ್ದರಿಂದ ಖಿನ್ನರಾಗಿದ್ದಾಗ ನಡೆದಾಡಿ.

ಮಲಬದ್ಧತೆ ನಿವಾರಣೆ

ಮಲಬದ್ಧತೆ ನಿವಾರಣೆ

ನಿಮ್ಮ ಮಲಬದ್ಧತೆಯನ್ನು ನೀಗಿಸುವ ಶಕ್ತಿ ನಡೆಯುವಿಕೆಗೆ (ವಾಕಿಂಗ್) ಗೆ ಇದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ವಾಕ್ ಮಾಡುವುದರಿಂದ ಸಕ್ರಿಯ ಕರುಳಿನ ಚಲನೆಗೆ ಇದು ಸಹಕಾರವನ್ನು ನೀಡುತ್ತದೆ. 15-20 ನಿಮಿಷಗಳ ಕಾಲ ಬ್ರಿಸ್ಕ್ ವಾಕ್ ಕರುಳಿನ ಸರಳ ಚಲನೆಗೆ ಅನುವು ಮಾಡಿಕೊಡುತ್ತದೆ.

ಆಯಾಸದ ಪರಿಹಾರ

ಆಯಾಸದ ಪರಿಹಾರ

ಗರ್ಭಾವಸ್ಥೆಯಲ್ಲಿ, ಪ್ರಥಮ ತ್ರೈಮಾಸಿಕದಲ್ಲಿ ಮಹಿಳೆಯರು ಹೆಚ್ಚು ದುರ್ಬಲರು ಮತ್ತು ಅಶಕ್ತತೆಯನ್ನು ಅನುಭವಿಸುತ್ತಾರೆ. ಅಂತೆಯೇ ಮೂರನೇ ತ್ರೈಮಾಸಿಕದಲ್ಲೂ ಇದು ಪುನರಾವರ್ತನೆಯಾಗುತ್ತದೆ. ಆದಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಉತ್ತಮ ಸಲಹೆಯಾಗಿದೆ. ಅಂತೆಯೇ ಹೆಚ್ಚು ವಿಶ್ರಾಂತಿ ಕೂಡ ದೇಹಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಆದ್ದರಿಂದ ಕೊಂಚ ಹೊತ್ತು ನಡೆದಾಡುವುದರಿಂದ ಆಯಾಸ ಪರಿಹಾರವಾಗಿ ದೇಹ ಹಗುರಾಗುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಗರ್ಭಾವಸ್ಥೆಯ ಸಂದರ್ಭದಲ್ಲಿ ರಕ್ತದೊತ್ತಡ ಏರಿಕೆಯಾಗುತ್ತದೆ; ಅಂತೆಯೇ ಅಧಿಕ ರಕ್ತದೊತ್ತಡವು ಪ್ರಿಕ್ಲಾಂಪ್ಸಿಯಾಗೆ ಕಾರಣವಾಗುತ್ತದೆ. ನಿತ್ಯವೂ ನಡೆದಾಡುವುದರಿಂದ ನಿಮ್ಮ ರಕ್ತದೊತ್ತಡವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬಹುದು. ಗರ್ಭಾವಸ್ಥೆಯಲ್ಲಿ ನಡೆದಾಡುವುದರ ಮುಖ್ಯ ಪ್ರಯೋಜನ ಇದಾಗಿದೆ.

ಉತ್ತಮ ನಿದ್ದೆ

ಉತ್ತಮ ನಿದ್ದೆ

ಬ್ರಿಸ್ಕ್ ಅಥವಾ 30 ನಿಮಷಗಳ ನಡೆಯುವಿಕೆಯು ಗರ್ಭಾವಸ್ಥೆಯಲ್ಲಿ ಉತ್ತಮ ನಿದ್ದೆಯನ್ನು ಒದಗಿಸುತ್ತದೆ. ಗರ್ಭಾವಸ್ಥೆಯಲ್ಲಿ ನಡೆದಾಡುವುದರ ಪ್ರಯೋಜನದಲ್ಲಿ ನಿದ್ದೆ ಕೂಡ ಒಂದು.

English summary

Benefits Of Walking During Pregnancy

The moment a woman conceives, she enters the period of pregnancy, which comes as a blessing to her, as it is the foremost step towards motherhood. Pregnancy is the most beautiful phase in a woman’s life and this is also an occasion when you have to be very cautious and healthy both mentally and physically. through this article to acquaint yourself with the various benefits of walking during pregnancy. Have a look.
X
Desktop Bottom Promotion