For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಆರೋಗ್ಯಕ್ಕೆ ಬೇಕು, ಒಂದು ತುಂಡು ಬೆಲ್ಲ..!

By Jaya subramanya
|

ಹೂವೊಂದು ಬೇಕು ಬಳ್ಳಿಗೆ, ಮಗುವೊಂದು ಬೇಕು ಹೆಣ್ಣಿಗೆ ಎಂಬ ಹಾಡು ತಾಯ್ತನದ ಮಹತ್ವವನ್ನು ತಿಳಿಸುತ್ತದೆ. ಹೌದು ತಾಯಿಯಾಗುವುದು ಪ್ರತಿಯೊಂದು ಹೆಣ್ಣಿಗೂ ಇರುವ ಮಹತ್ವಾಕಾಂಕ್ಷೆ. ಆಕೆಯ ಜೀವನವನ್ನು ಪರಿಪೂರ್ಣವಾಗಿಸುವ ಒಂದು ಸುಂದರ ಅನುಭವ. ಆದರೂ ಈ ಅವಧಿಯಲ್ಲಿ ಗರ್ಭಿಣಿಯರು ತೀವ್ರ ತೆರನಾದ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇಂತಹ ಸಮಯದಲ್ಲಿ ಮನೆಯ ಹಿರಿಯರು, ವೈದ್ಯರು, ಗರ್ಭಿಣಿತರು ಹೆಚ್ಚಿನ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಬೇಕು ಎಂಬುದಾಗಿಯೇ ಸಲಹೆ ನೀಡುತ್ತಾರೆ. ಸಾಮಾನ್ಯವಾಗಿ, ಮಗುವಿನ ಪೋಷಣೆ ಹೆಣ್ಣಿನ ಉದರದೊಳಗೆ ನಡೆಯುತ್ತಿರುವ ಸಂದರ್ಭದಲ್ಲಿ ದೇಹಕ್ಕೆ ಹೆಚ್ಚುವರಿ ಶಕ್ತಿಯ ಅಗತ್ಯವಿರುತ್ತದೆ. ಪ್ರೋಟೀನ್ ಭರಿತ ಆಹಾರಗಳು ಆಕೆಗೆ ಶಕ್ತಿಯನ್ನು ನೀಡುವಲ್ಲಿ ಸಹಾಯಕವಾಗಿದೆ. ವಿಟಮಿನ್ ಭರಿತ ತರಕಾರಿಗಳು, ಹಣ್ಣುಗಳು, ಬೇಳೆ ಕಾಳುಗಳು, ನಟ್ಸ್ ಹೀಗೆ ತರೇಹವಾರಿ ಆಹಾರಗಳನ್ನು ಆಕೆ ಸಮಯಕ್ಕೆ ಸರಿಯಾಗಿ ಸೇವಿಸುತ್ತಿರಬೇಕು. ಬೆಲ್ಲದಲ್ಲಿರುವ ಅದ್ಭುತ ಆರೋಗ್ಯಕರ ಗುಣಗಳು

ಅಲ್ಲದೆ, ತಮ್ಮ ದೇಹಾರೋಗ್ಯದ ಮೇಲೂ ಆಕೆ ಗಮನ ನೀಡುವುದು ಆಕೆಯನ್ನು ಸುದೃಢಗೊಳಿಸುವುದಲ್ಲದೆ ಮಗುವಿನ ಆರೋಗ್ಯವನ್ನೂ ಸುಧಾರಿಸುತ್ತದೆ. ಆಕೆ ಅಪೌಷ್ಟಿಕ ಆಹಾರವನ್ನು ಸೇವಿಸಿದಾಗ ಅದು ಪರಿಣಾಮ ಬೀರುವುದು ಮಗುವಿನ ಮೇಲಾಗಿದೆ. ವಾಂತಿ, ಆಯಾಸ, ಸುಸ್ತು ಮೊದಲಾದ ದೈಹಿಕ ಕಾಯಿಲೆಗಳು ಆಕೆಯನ್ನು ಕಾಡುತ್ತದೆ. ಹಾಗಿದ್ದರೆ ಗರ್ಭಿಣಿಯರ ಆಹಾರ ಪದ್ಧತಿ ಹೇಗಿರಬೇಕು ಎಂಬುದು ನಿಮ್ಮ ಸಮಸ್ಯೆಯಾಗಿದ್ದರೆ ಅದು ಸಮತೋಲಿತವಾಗಿರಬೇಕು ಎಂಬುದಾಗಿ ವೈದ್ಯಲೋಕ ತಿಳಿಸುತ್ತದೆ. ತರಕಾರಿಗಳು, ಹಣ್ಣುಗಳೊಂದಿಗೆ ಆಕೆ ತುಸು ಪೋಷಕಾಂಶಭರಿತವಾಗಿರುವ ಇತರೆ ಆಹಾರಗಳನ್ನು ಸೇವಿಸಬೇಕಾಗುತ್ತದೆ. ಗರ್ಭಿಣಿಯರಿಗೆ ನೀಡುವ ಆಹಾರಗಳಲ್ಲಿ ಬೆಲ್ಲ ಕೂಡ ಅತ್ಯುತ್ತಮವಾಗಿದೆ. ಗರ್ಭಾವಸ್ಥೆ ಡಯೆಟ್‎ಗಳಲ್ಲಿ ಒಂದಾಗಿರುವ ಬೆಲ್ಲವು ತಾಯಿಗೆ ಬೇಕಾಗಿರುವ ಆರೋಗ್ಯ ಪ್ರಯೋಜನಗಳಿಂದ ಕೂಡಿ ಅತ್ಯುತ್ತಮ ಎಂದೆನಿಸಿದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಬೆಲ್ಲವನ್ನು ಏನೂ ಭಯವಿಲ್ಲದೆ ಸೇವಿಸಬಹುದಾಗಿದೆ.

ಕಬ್ಬಿಣದ ಕೊರತೆ ಮತ್ತು ಅನೀಮಿಯಾವನ್ನು ಬೆಲ್ಲ ದೂರಮಾಡುತ್ತದೆ. ಮಗುವಿನ ಆರೋಗ್ಯಕರ ತೂಕವನ್ನು ಬೆಲ್ಲವು ನಿರ್ವಹಿಸುತ್ತದೆ. ನಿಯಮಿತ ಆಹಾರ ಕ್ರಮದಲ್ಲಿ ಇದನ್ನು ಸೇವಿಸುವುದು ಎದೆಹಾಲಿನ ಕಲ್ಮಶಗಳನ್ನು ಹೊರಹಾಕಲು ಸಹಾಯಕ. ಗರ್ಭಾವಸ್ಥೆಯ ಏಳು ತಿಂಗಳ ನಂತರ ಕೂಡ ಬೆಲ್ಲವನ್ನು ಸೇವಿಸಬಹುದೆಂದು ಶಿಫಾರಸು ಮಾಡಲಾಗಿದ್ದು ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ ಕ್ಯಾನ್ಸರ್, ಹೃದಯ ರೋಗ, ಕಣ್ಣಿನ ಪೊರೆ ಮತ್ತು ಇತರ ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ತ್ವಚೆಗೂ ಉತ್ತಮವಾಗಿರು ಬೆಲ್ಲವು ರಾಡಿಕಲ್‎ಗಳನ್ನು ದೂರಮಾಡಿ ವಯಸ್ಸಾಗುವಿಕೆಯನ್ನು ತಡೆಯುತ್ತದೆ. ಅಂತೆಯೇ ದೋಷರಹಿತ ತ್ವಚೆಯನ್ನು ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಬೆಲ್ಲವನ್ನು ಸೇವಿಸುವುದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳಿದ್ದು ಅದು ಏನು ಎಂಬುದನ್ನು ಕೆಳಗಿನ ಸ್ಲೈಡರ್‎ಗಳಿಂದ ತಿಳಿದುಕೊಳ್ಳಿ...

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ಗರ್ಭಾವಸ್ಥೆಯ ಸಂದರ್ಭದಲ್ಲಿ ರಕ್ತವನ್ನು ಶುದ್ಧೀಕರಿಸಲು ಬೆಲ್ಲ ಸಹಾಯಕ. ಉತ್ತಮ ಆರೋಗ್ಯವನ್ನು ನೀಡುವುದರ ಮೂಲಕ ಹುಟ್ಟಲಿರುವ ಶಿಶುವಿಗೂ ಉತ್ತಮವಾಗಿದೆ.

ಅನೀಮಿಯಾವನ್ನು ದೂರಮಾಡುತ್ತದೆ

ಅನೀಮಿಯಾವನ್ನು ದೂರಮಾಡುತ್ತದೆ

ಕೆಂಪು ರಕ್ತ ಕಣಗಳನ್ನು ಹೆಚ್ಚುಮಾಡಿ ಗರ್ಭಿಣಿಯರಿಗೆ ಉಂಟಾಗುವ ಅನೀಮಿಯಾವನ್ನು ದೂರಾಗಿಸುತ್ತದೆ. ಸೋಂಕುಗಳು ಮತ್ತು ಇತರ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಇದು ನೀಡುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.

ಕೀಲು ನೋವನ್ನು ದೂರಾಗಿಸುತ್ತದೆ

ಕೀಲು ನೋವನ್ನು ದೂರಾಗಿಸುತ್ತದೆ

ಮೂಳೆಗಳನ್ನು ಮತ್ತು ಕೀಲುಗಳನ್ನು ಪೋಷಣೆ ಮಾಡಿ ಅವುಗಳನ್ನು ಬಲಪಡಿಸುವ ಕಾರ್ಯವನ್ನು ಬೆಲ್ಲ ಮಾಡುತ್ತದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಉಂಟಾಗುವ ಕೀಲುನೋವನ್ನು ಕಡಿಮೆ ಮಾಡಿ ಕೀಲು ಗಡಸಾಗುವುದನ್ನು ತಡೆಯುತ್ತದೆ.

ನೀರಿನ ಧಾರಣೆಯನ್ನು ಕಡಿಮೆ ಮಾಡುತ್ತದೆ

ನೀರಿನ ಧಾರಣೆಯನ್ನು ಕಡಿಮೆ ಮಾಡುತ್ತದೆ

ಬೆಲ್ಲದಲ್ಲಿರುವ ಖನಿಜಾಂಶಗಳು ಮತ್ತು ಹೆಚ್ಚುವರಿ ಪೊಟಾಶಿಯಮ್ ಗರ್ಭಿಣಿಯ ದೇಹದಲ್ಲಿರುವ ನೀರಿನ ಧಾರಣೆಯನ್ನು ಕಡಿಮೆ ಮಾಡುತ್ತದೆ. ಪೊಟಾಶಿಯಮ್ ದೇಹದಲ್ಲಿರುವ ಎಲೆಕ್ಟ್ರೋಲೈಟ್ ಅನ್ನು ಸಮತೋಲನ ಮಾಡುತ್ತದೆ. ಈ ಮೂಲಕ ಗರ್ಭಾವಸ್ಥೆಯಲ್ಲಿ ಉಂಟಾಗುವ ಬಾವು ಮತ್ತು ನೋವು ಎದುರಿಸಲು ಇದು ಸಹಾಯ ಮಾಡುತ್ತದೆ.

ಆರೋಗ್ಯಕರ ಹೆರಿಗೆಗೆ ಸಹಾಯಕ

ಆರೋಗ್ಯಕರ ಹೆರಿಗೆಗೆ ಸಹಾಯಕ

ಆರೋಗ್ಯಕರ ಹೆರಿಗೆಗೆ ಸಹಾಯಕವಾಗಿರುವ ಫೋಲೇಟ್ ಬೆಲ್ಲದಲ್ಲಿದೆ. ಭ್ರೂಣದ ಸೂಕ್ತ ಅಭಿವೃದ್ಧಿಗೆ ಬೆಲ್ಲ ಸಹಾಯಕ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಬೆಲ್ಲದಲ್ಲಿ ಸೋಡಿಯಮ್ ಅಂಶ ಕಡಿಮೆಯಾಗಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಇದನ್ನು ಸೇವಿಸುವುದು ಕಿಡ್ನಿ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಿ ಹೃದಯ ಸಂಬಂಧಿ ರೋಗಗಳನ್ನು ತಡೆಯುತ್ತದೆ.

English summary

Benefits Of Eating Jaggery In Pregnancy

Jaggery is one of the must-have foods to be included in a pregnancy diet. It has various health benefits associated with it for expecting mothers. Jaggery is totally safe to be consumed during pregnancy. Consuming it prevents the risk of iron deficiency and anaemia. It helps to maintain a healthy weight of the baby.in this article, we at Boldsky will be listing out some of the amazing benefits of eating jaggery in pregnancy. Read on to know more about it.
Story first published: Tuesday, March 1, 2016, 20:34 [IST]
X
Desktop Bottom Promotion