For Quick Alerts
ALLOW NOTIFICATIONS  
For Daily Alerts

ತಾಯ್ತನದ ಅವಧಿಯಲ್ಲಿ ಆರೋಗ್ಯದ ಆರೈಕೆ ಹೀಗಿರಲಿ

|

ಮಾನವನ ಜೀವನದಲ್ಲಿ ಬಾಲ್ಯ, ಯೌವನ ಮತ್ತು ಮದುವೆ ಈ ಮೂರು ಮಹತ್ವದ ಭಾಗಗಳು. ಅದರಲ್ಲೂ ಮಹಿಳೆಯರಿಗೆ ಮದುವೆಯಾದ ಬಳಿಕ ಮಗುವನ್ನು ಪಡೆಯುವುದು ಜೀವನ ಸಾರ್ಥಕಗೊಳಿಸಿದಂತೆ. ಮದುವೆಯಾದ ಪ್ರತಿಯೊಬ್ಬ ಮಹಿಳೆಯೂ ತನಗೆ ಮಗು ಬೇಕೆಂದು ಬಯಸುತ್ತಾಳೆ. ಗರ್ಭಿಣಿಯಾದರಂತೂ ಆಕೆಯ ಸಂತೋಷಕ್ಕೆ ಪಾರವೇ ಇಲ್ಲ. ತನ್ನ ಮಗು ಹೇಗಿರಬೇಕು, ಅದಕ್ಕೆ ಯಾವ ರೀತಿಯ ಬಟ್ಟೆ ಹಾಕಬೇಕು, ಅದಕ್ಕೆ ಯಾವ್ಯಾವ ಆಭರಣ ಹಾಕಬೇಕು ಹೀಗೆ ಗರ್ಭಿಣಿಯಾಗಿರುವಾಗಲೇ ಹಲವಾರು ರೀತಿಯ ತಯಾರಿಗಳನ್ನು ನಡೆಸಲು ಆರಂಭಿಸುತ್ತಾಳೆ.

ಆದರೆ ಗರ್ಭಧಾರಣೆಯೆನ್ನುವುದು ಅಷ್ಟು ಸುಲಭದ ಮಾತಲ್ಲ. ಗರ್ಭಧಾರಣೆ ವೇಳೆ ಹಾರ್ಮೋನು ಬದಲಾವಣೆ, ವಾಕರಿಕೆ, ವಾಂತಿ, ತಲೆಸುತ್ತು ಬರುತ್ತದೆ. ಕೆಲವು ಮಹಿಳೆಯರಿಗೆ ಗರ್ಭಿಣಿಯಾಗಿರುವ ವೇಳೆ ತಮ್ಮ ಇಷ್ಟದ ಮತ್ತು ಆರೋಗ್ಯಕರ ತಿಂಡಿಯೇ ಅಲರ್ಜಿಯನ್ನು ಉಂಟುಮಾಡುತ್ತದೆ. ಗರ್ಭಿಣಿ ಮಹಿಳೆಯ ಆಹಾರದ ಮೇಲೆ ಪರಿಣಾಮ ಉಂಟಾದಾಗ ಅದು ಆಕೆಯ ತ್ವಚೆ ಮತ್ತು ಕೂದಲಿನ ಮೇಲೆ ನೇರ ಪ್ರಭಾವ ಉಂಟು ಮಾಡುತ್ತದೆ. ಅಷ್ಟೇ ಏಕೆ ಗರ್ಭಧಾರಣೆ ವೇಳೆ ಮಹಿಳೆಯ ತ್ವಚೆ ಇನ್ನಷ್ಟು ಹೊಳೆಯಲು ಆರಂಭವಾಗುತ್ತದೆ.

ತ್ವಚೆಯ ಈ ರೀತಿಯ ಹೊಳಪನ್ನು ಯಾರೂ ಪಡೆಯಲು ಸಾಧ್ಯವಿಲ್ಲ. ಆದರೆ ಕೆಲವೊಂದು ಹಾರ್ಮೋನು ಬದಲಾವಣೆಯಿಂದಾಗಿ ಕೆಲವು ಗರ್ಭಿಣಿ ಮಹಿಳೆಯರಲ್ಲಿ ಮೊಡವೆ ಮತ್ತು ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗರ್ಭಿಣಿ ಮಹಿಳೆಯರಲ್ಲಿ ಕಂಡುಬರುವ ಕೆಲವೊಂದು ಸಾಮಾನ್ಯ ಸಮಸ್ಯೆಗಳು ಮತ್ತು ಅದಕ್ಕೆ ಪಾಲಿಸಬೇಕಾದ ಕೆಲವೊಂದು ಮುನ್ನೆಚ್ಚರಿಕೆಗಳನ್ನು ಇಲ್ಲಿ ಸೂಚಿಸಲಾಗಿದೆ ಮುಂದೆ ಓದಿ..

ಬೆಳಗಿನ ಜಾವದ ವಾಕರಿಕೆ

ಬೆಳಗಿನ ಜಾವದ ವಾಕರಿಕೆ

ಸಾಮಾನ್ಯವಾಗಿ ಗರ್ಭಿಣಿಯರಿಗೆ ಬೆಳಗಿನ ಜಾವ ಕಾಡುವ ವಾಕರಿಕೆ ಸಮಸ್ಯೆ ಅನುವಂಶೀಯವಾಗಿ ಬಂದಿರುವುದರಿಂದ, ಇದನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲ. ಹಾಗಾಗಿ ಸೂಕ್ತವಾದ ಔಷಧಿಗಳನ್ನು ಪಡೆಯಲು ತಯಾರಿ ಮಾಡಿಕೊಳ್ಳುವುದು ಜಾಣತನ.

ಸರಳ ಉಪಾಯವೆಂದರೆ ನಿಮ್ಮ ಹೊಟ್ಟೆಯನ್ನು ಎಂದಿಗೂ ಖಾಲಿ ಇರಲು ಬಿಡದಿರಿ. ಆಗಾಗ (ಅಂದರೆ ಗರಿಷ್ಠ ಮೂರು ಗಂಟೆಗಳ ಅವಧಿಯೊಳಗೆ) ಅಲ್ಪ ಆಹಾರಗಳನ್ನು ಸೇವಿಸುತ್ತಿರಿ. ಹಣ್ಣುಗಳ ರಸ ಉತ್ತಮ ಆಯ್ಕೆಯಾಗಿದೆ. ವೈದ್ಯರ ಸಲಹೆ ಪಡೆದು ವಿಟಮಿನ್ ಬಿ6 ಗುಳಿಗೆಗಳನ್ನೂ ಸೇವಿಸಬಹುದು. ಗರ್ಭಿಣಿಯರಿಗೆ ಕಾಡುವ ವಾಂತಿಯ ಸಮಸ್ಯೆ: ಫಲಪ್ರದ ಮನೆಮದ್ದು

ರಕ್ತದೊತ್ತಡವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ

ರಕ್ತದೊತ್ತಡವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ

ಸಾಮಾನ್ಯವಾಗಿ ಹೆರಿಗೆಯ ಸಮಯದಲ್ಲಿ ರಕ್ತಸ್ರಾವವೂ ಆಗುವುದರಿಂದ ಅಧಿಕ ರಕ್ತದೊತ್ತಡ ಕಂಡುಬರುತ್ತದೆ. ಕೆಲವರಿಗೆ ಸಾಮಾನ್ಯಕ್ಕೂ ಕಡಿಮೆ ಆಗಬಹುದು. ಹಾಗಾಗಿ ವೈದ್ಯರು ನಿಮ್ಮ ರಕ್ತದೊತ್ತಡವನ್ನು ಸತತವಾಗಿ ಪರಿಶೀಲಿಸುತ್ತಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುತ್ತಾರೆ. ಆದ್ದರಿಂದ ಹೆರಿಗೆಗೂ ಮುನ್ನ ವೈದ್ಯರಲ್ಲಿ ನಿಮ್ಮ ರಕ್ತದೊತ್ತಡವನ್ನು ತಪಾಸಣೆಗೊಳಪಡಿಸಿಕೊಂಡು ಹೆಚ್ಚು ಕಡಿಮೆಯಿದ್ದರೆ ಸೂಕ್ತ ಔಷಧಿಗಳ ಮೂಲಕ ತಹಬಂದಿಗೆ ತರುವುದು ಅತಿ ಅಗತ್ಯ.

ಆಹಾರ ಕ್ರಮದಲ್ಲಿ ಪ್ರೋಟೀನ್ ಹೆಚ್ಚಾಗಿರಲಿ

ಆಹಾರ ಕ್ರಮದಲ್ಲಿ ಪ್ರೋಟೀನ್ ಹೆಚ್ಚಾಗಿರಲಿ

ಗರ್ಭಿಣಿಯಾಗಿರುವಾಗ ನೀವು ತೆಗೆದುಕೊಳ್ಳುವ ಪ್ರೋಟೀನ್‌ನ ಪ್ರಮಾಣವು 10 ಗ್ರಾಂ ಗಳಷ್ಟು ಹೆಚ್ಚಾಗಬೇಕು. ನಿಮ್ಮ ಮತ್ತು ನಿಮ್ಮ ಶಿಶುವಿನ ಶರೀರಗಳ ಜೀವಕೋಶ ಮತ್ತು ಸ್ನಾಯುಗಳ ಬೆಳವಣಿಗೆಗೆ ಪ್ರೋಟೀನ್ ಸಹಕಾರಿಯಾಗಿದೆ. ಮೊಟ್ಟೆ ಮತ್ತು ಚಿಕನ್‌‌ಗಳು ಪ್ರೋಟೀನ್‌ನ ಅತ್ಯುತ್ತಮ ಆಗರಗಳಾಗಿವೆ. ನೀವು ಒಂದು ವೇಳೆ ಸಸ್ಯಹಾರಿಯಾಗಿದ್ದರೆ, ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಅನ್ನು ಪಡೆಯಲು ಎಲ್ಲಾ ವಿಧದ ಧಾನ್ಯಗಳು, ಸೋಯಾ, ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ನಿಮ್ಮ ಊಟದ ತಟ್ಟೆಯಲ್ಲಿ ಸೇರಿಸಿಕೊಳ್ಳಿರಿ

ಒತ್ತಡಕ್ಕೆ ಆಸ್ಪದ ನೀಡಬೇಡಿ

ಒತ್ತಡಕ್ಕೆ ಆಸ್ಪದ ನೀಡಬೇಡಿ

ಗರ್ಭಿಣಿಯಾಗಿರುವ ಮಹಿಳೆಯರು ಒತ್ತಡವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. ಇದು ನಿಮ್ಮ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಧಾನ್ಯ ಮಾಡಿ. ದಿನದಲ್ಲಿ ಸ್ವಲ್ಪ ಸಮಯ ಸುಮ್ಮನೆ ಕುಳಿತುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಸೂಕ್ತ ವ್ಯಾಯಮ

ಸೂಕ್ತ ವ್ಯಾಯಮ

ಸಾಮಾನ್ಯವಾಗಿ ಪ್ರಥಮ ಮತ್ತು ಕೊನೆಯ ಮೂರು ತಿಂಗಳುಗಳಲ್ಲಿ ಗರ್ಭಿಣಿಗೆ ಹೆಚ್ಚು ಸುಸ್ತು ಆವರಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಮಗುವಿನ ಬೆಳವಣಿಗೆಗೆ ಹೆಚ್ಚಿನ ರಕ್ತ ಮತ್ತು ಶಕ್ತಿಯ ಅವಶ್ಯಕತೆ ಇರುವುದರಿಂದ ಸಾಮಾನ್ಯ ಚಟುವಟಿಕೆಗಳಿಗೆ ಶಕ್ತಿ ಪೂರೈಕೆ ಕಡಿಮೆಯಾಗಿ ಸುಸ್ತು ಆವರಿಸುತ್ತದೆ. ಆದರೆ ಸುಸ್ತು ಇದೆ ಎಂದು ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವುದು ತರವಲ್ಲ. ನಿಧಾನಗತಿಯ ನಡಿಗೆಯೇ ಸರಿ, ನಿಮಗೆ ಸೂಕ್ತವಾದ ವ್ಯಾಯಮಗಳನ್ನು (ವೈದ್ಯರ ಸಲಹೆ ಪಡೆದುಕೊಳ್ಳುವುದನ್ನು ಮರೆಯಬೇಡಿ) ಸುಮಾರು ಅರ್ಧ ಗಂಟೆಯಾದರೂ ದಿನಕ್ಕೆರಡು ಬಾರಿ ಮಾಡಬೇಕು. ವ್ಯಾಯಾಮದ ಬಳಿಕ ಸುಸ್ತು ಮಾಯವಾಗುವುದನ್ನು ಕಂಡು ನೀವೇ ಬೆರಗಾಗುವಿರಿ. ಸರಿಯಾದ ವ್ಯಾಯಮ: ತಾಯಿ, ಮಗುವಿನ ಆರೋಗ್ಯಕ್ಕೆ ಪೂರಕ

ಗರ್ಭಧಾರಣೆಗೆ ದೈಹಿಕ ಕ್ಷಮತೆ ಪರೀಕ್ಷಿಸಿಕೊಳ್ಳಿ

ಗರ್ಭಧಾರಣೆಗೆ ದೈಹಿಕ ಕ್ಷಮತೆ ಪರೀಕ್ಷಿಸಿಕೊಳ್ಳಿ

ಹೊರಗಿನಿಂದ ನಮ್ಮ ದೇಹ ಹೇಗಿದ್ದರು ಒಳಗಿನ ಅಂಗಗಳ ಕ್ಷಮತೆಯ ಬಗ್ಗೆ ನಮಗೆ ಅರಿವಿರುವುದಿಲ್ಲ. ಗರ್ಭಧಾರಣೆಗೆ ನಿಮ್ಮ ದೇಹ ಸಕ್ಷಮವಾಗಿದೆಯೇ ಎಂದು ಅರಿಯಲು ವೈದರ ಕೆಲವು ಪರೀಕ್ಷೆಗಳಿಂದ ಮಾತ್ರ ಕಂಡುಹಿಡಿಯಲು ಸಾಧ್ಯ. ನಿಮ್ಮ ಕುಟುಂಬ ವೈದ್ಯರ ಅಥವಾ ಸ್ತ್ರೀರೋಗತಜ್ಞರನ್ನು ಕಂಡು ದೇಹದ ತಪಾಸಣೆ ಮಾಡಿಸಿಕೊಳ್ಳಿ. ಕೆಲವು ವಿಟಮಿನ್ ಅಥವಾ ಫೋಲಿಕ್ ಆಮ್ಲದ ಸಹಿತ ಯಾವುದಾದರೂ ಕೊರತೆಯಿದ್ದರೆ ಅದನ್ನು ಪೂರ್ಣಗೊಳಿಸಲು ಅವರು ಸಲಹೆ ನೀಡುವ ಆಹಾರ ಮತ್ತು ಔಷಧಿಗಳನ್ನು ಪಡೆದುಕೊಳ್ಳಿ.

ಗರ್ಭಿಣಿಯರು ಏನನ್ನು ಮಾಡಬಾರದು?

ಗರ್ಭಿಣಿಯರು ಏನನ್ನು ಮಾಡಬಾರದು?

ರೋಸ್ ಬರಿ (Rosemary), ಮಲ್ಲಿಗೆ, ಮತ್ತು ಡಾಲ್ಚಿನ್ನಿಗಳುಳ್ಳ ಉತ್ಪನ್ನಗಳನ್ನು ಬಳಸಬೇಡಿರಿ. ಇವೆಲ್ಲವೂ ನೈಸರ್ಗಿಕ ಘಟಕಗಳಾಗಿದ್ದರೂ ಕೂಡ, ಇವು ರಕ್ತದೊತ್ತಡವನ್ನು ಹೆಚ್ಚಿಸಬಲ್ಲವು. ಮಾತ್ರವಲ್ಲದೇ ನಿಗದಿತ ಸಮಯಕ್ಕೆ ಮೊದಲೇ ಮಗುವಿನ ಹೊರಮುಖ ಚಲನೆಗೆ ಅರ್ಥಾತ್ ಹೊಟ್ಟೆಯ ಕುಗ್ಗುವಿಕೆಗೆ (early contractions) ಪ್ರೇರೇಪಿಸಬಲ್ಲವು. ವಿಪರ್ಯಾಸವೇನೆ೦ದರೆ, ಒ೦ದು ವೇಳೆ ನೀವು ಪ್ರಸವದ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕೆ೦ದು ಬಯಸಿದಲ್ಲಿ, ನಿಮ್ಮ ಗರ್ಭಾವಸ್ಥೆಯ ಕೊನೆಯ ಕೆಲವು ತಿ೦ಗಳುಗಳ ಅವಧಿಯಲ್ಲಿ ಇವು ನಿಮಗೆ ಪೂರಕವಾಗಿ ಕೆಲಸ ಮಾಡುತ್ತವೆ. ಗರ್ಭಾವಸ್ಥೆಯ ಸ್ಥಿತಿಯಲ್ಲಿ ನಿಮ್ಮ ತ್ವಚೆಯು ಬಹಳಷ್ಟು ನಾಜೂಕಾಗಿರುವುದರಿ೦ದ, ನಿಮ್ಮ ತ್ವಚೆಯ ವ್ಯಾಕ್ಸಿಂಗ್ (waxing) ಮಾಡಿಕೊಳ್ಳುವುದು ಅಷ್ಟೊ೦ದು ಸ೦ಶ್ಲೇಷಿತ ಸುಗ೦ಧವನ್ನೊಳಗೊ೦ಡ ಯಾವುದೇ ವಸ್ತುವಿನಿ೦ದ ಆದಷ್ಟು ದೂರವಿರುವುದು ಒಳಿತು.

English summary

Healthy Tips For Pregnant Women in kannada

Pregnancy is a time when a female blossoms into a woman with an experience never felt before. Here are a few self-care tips for pregnant mothers that will help during pregnancy
X