ಗರ್ಭಧಾರಣೆಯ ಸಮಯದಲ್ಲಿ ತೂಕ ಕಡಿಮೆ ಮಾಡುವ ಸರಳೋಪಾಯಗಳು

By: Poornima Hegde
Subscribe to Boldsky

ಗರ್ಭಧಾರಣೆ ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಹೆಚ್ಚಿನವು ಮಹಿಳೆಗೆ ಮೊದಲ ಅನುಭವವಾದ ಕಾರಣ ಆಸಕ್ತಿ ಹುಟ್ಟಿಸಬಹುದು. 

ಆದರೆ ಹೆಚ್ಚಿನ ಮಹಿಳೆಯರು ದ್ವೇಷಿಸುವ ಒಂದೇ ವಿಷಯ ಎಂದರೆ ದೇಹ ತೂಕದಲ್ಲಿ ಹೆಚ್ಚಳ. ಮಗುವಿನ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಪೂರಕವಾಗಿ ಸ್ವಲ್ಪ ಮಟ್ಟಿನ ದೇಹ ತೂಕ ಹೆಚ್ಚಾಗುವುದು ಸಾಮಾನ್ಯವಾಗಿದೆ. ಹೊಟ್ಟೆಯ ತೂಕ ದೇಹ ತೂಕದ ಮೇಲೆ ಪರಿಣಾಮ ಬೀರುವುದೂ ಸುಳ್ಳಲ್ಲ.

ಸುರಕ್ಷಿತ ಕ್ರಮಗಳೊಂದಿಗೆ ತೂಕ ಕಡಿಮೆ ಮಾಡಿದರೆ ಇದು ಮಹಿಳೆಗೆ ಮತ್ತು ಮಗುವಿಗೆ ಉತ್ತಮ. ಮಹಿಳೆಯ ದೇಹ ತೂಕ ಮಗುವಿಗೆ ಜನ್ಮ ನೀಡುವಾಗಲೂ ಬಹಳ ನೆರವಾಗುತ್ತದೆ. ಗರ್ಭಧಾರಣೆ ಆದ ಬಳಿಕ ಬಹಳ ತೂಕ ಹೆಚ್ಚಾಗುತ್ತಿದೆ ಎಂದಾದರೆ ಕೂಡಲೆ ಕಡಿಮೆ ಮಾಡುವ ಸುರಕ್ಷಿತ ಕ್ರಮಗಳತ್ತ ಗಮನ ವಹಿಸಿ. ಗರ್ಭಧಾರಣೆಯ ಬಳಿಕ ಹಾಗೂ ಮಗುವಿಗೆ ಜನ್ಮ ನೀಡುವ ಮುನ್ನ ದೇಹ ತೂಕ ಕಡಿಮೆ ಮಾಡುವುದು ಸುಲಭ, ನಂತರ ಸ್ವಲ್ಪ ಕಷ್ಟವಾಗಬಹುದು.

Safe Ways To Lose Weight During Pregnancy

ದೇಹ ತೂಕ ಕಡಿಮೆ ಮಾಡಬೇಕು ಎಂದ ಕೂಡಲೇ ನಿಮ್ಮದೇ ಆದ ಯಾವುದಾದರೂ ಕ್ರಮಗಳನ್ನು ಪಾಲಿಸಿ ಕಡಿಮೆ ಮಾಡಲು ಹೋಗಬೇಡಿ. ಸರಿಯಾದ ಸುರಕ್ಷಿತ ಕ್ರಮಗಳು ತಾಯಿಯ ಮತ್ತು ಮಗುವಿನ ಆರೋಗ್ಯಕ್ಕೆ ಅನಿವಾರ್ಯ. ವೈಜ್ಞಾನಿಕವಾದ ಕ್ರಮಗಳನ್ನೇ ಪಾಲಿಸುವುದು ಅಗತ್ಯ. ಇಲ್ಲಿ ಕೆಲವು ಸುರಕ್ಷಿತ ಮತ್ತು ಬೇಗನೆ ಪರಿಣಾಮ ಬೀರುವ ಮಾರ್ಗಗಳನ್ನು ನೀಡಲಾಗಿದೆ.

ಗರ್ಭಿಣಿಯರೇ ಏರೋಬಿಕ್ಸ್ ವ್ಯಾಯಾಮದ ಬಗ್ಗೆ ಕೇಳಿದಿರಾ?

ಡಯಟಿಂಗ್ (ಆಹಾರ ಕ್ರಮ)

ಗರ್ಭಧಾರಣೆ ಅವಧಿಯಲ್ಲಿ ಬಹಳ ಕಟ್ಟುನಿಟ್ಟಾದ ಆಹಾರ ಸೇವನಾ ಕ್ರಮಗಳನ್ನು ಪಾಲಿಸುವುದು ಸಾಧ್ಯವಿಲ್ಲ. ಆದರೆ ನೀವು ನಿಮ್ಮ ಆಹಾರ ಕ್ರಮದಲ್ಲಿರುವ ಕೆಲವು ಆರೋಗ್ಯಕ್ಕೆ ಸಹಾಯಕವಲ್ಲದ ಅಂಶಗಳನ್ನು ಬಿಡಬಹುದು. ಸಂಸ್ಕರಿಸಿದ ಮತ್ತು ಫಾಸ್ಟ್ ಫುಡ್ ಅನ್ನು ಬಿಟ್ಟುಬಿಡಿ. ಆರೋಗ್ಯಕರ ಆಹಾರವನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುವುದೇ ಈ ಅವಧಿಯ ಡಯಟಿಂಗ್.

ವಾಯುವಿಹಾರ

ಪ್ರತಿದಿನ ವಾಯುವಿಹಾರಕ್ಕೆ ತೆರಳಿದರೆ ಬಹಲ ಮಟ್ಟಿಗೆ ತೂಕ ಹೆಚ್ಚಾಗುವುದನ್ನು ತಡೆಯಬಹುದು. ಆದರೆ ನೀವು ವೈದ್ಯಕೀಯವಾಗಿ ವಾಯುವಿಹಾರಕ್ಕೆ ತಯಾರಾಗಿದ್ದೀರಿ ಎಂದು ಖಾತರಿ ಮಾಡಿಕೊಳ್ಳಿ. ಇದು ನಿಮ್ಮ ದೇಹ ತೂಕವನ್ನು ನಿಯಂತ್ರಣದಲ್ಲಿಡುವ ಒಂದು ಸುರಕ್ಷಿತ ವಿಧಾನವಾಗಿದೆ.

ಆರೋಗ್ಯಕರ ತಿನಿಸುಗಳು

ನಿಮ್ಮ ನಿಯಮಿತ ಆಹಾರಗಳ ನಡುವೆ ಏನಾದರೂ ತಿಂಡಿ ಸೇವಿಸುವುದನ್ನು ಹೆಚ್ಚಿನ ವೈದ್ಯರು ಸಲಹೆ ಮಾಡುತ್ತಾರೆ. ಆದರೆ ಇದು ಆರೋಗ್ಯಕರ ಆಹಾರವಾಗಿದೆಯೇ ಎಂದು ಪರೀಕ್ಷಿಸಿ.

ನಿರ್ಜಲೀಕರಣ ಆಗದಂತೆ ನಿಗಾ ವಹಿಸಿ

ಸಾಕಷ್ಟು ನೀರು ಕುಡಿಯಿರಿ. ನಿರ್ಜಲೀಕರಣ ಸಮಸ್ಯೆ ಎದುರಾಗದಂತೆ ಕಾಳಜಿ ವಹಿಸಿ. ಇದು ಹೆಚ್ಚಿನ ತೂಕ ಬರದಂತೆ ತಡೆಯುವುದರಲ್ಲೂ ಸಹಾಯ ಮಾಡುತ್ತದೆ.

ಭ್ರೂಣದ ಮೇಲೆ ಪರೋಕ್ಷ ಧೂಮಪಾನದ ಪರಿಣಾಮಗಳು

ವ್ಯಾಯಾಮ

ನಿಮ್ಮ ವೈದ್ಯಕೀಯ ಸಲಹೆಗಾಗರರ ಬಳಿಯಲ್ಲಿ ಸಲಹೆಗಳನ್ನು ಪಡೆದು ವ್ಯಾಯಾಮವನ್ನು ಆರಂಭಿಸಿ. ಆದರೆ ಬಹಳ ತೀವ್ರವಾದ ಆಸನಗಳಿರುವ ವ್ಯಾಯಾಮಗಳೆಲ್ಲಾ ಬೇಡ. ಸುಲಭವಾಗಿ ಮಾಡಬಹುದಾದ ವ್ಯಾಯಾಮಗಳನ್ನಷ್ಟೇ ಮಾಡಿದರೆ ಸಾಕು.

ಯೋಗ

ಹೆಚ್ಚಿನ ವ್ಯಾಯಾಮ ಮಾಡಲು ಸಾಧ್ಯ ಆಗದೇ ಹೋದರೆ ಚಿಂತೆಯಿಲ್ಲ. ಸರಳವಾದ ಯೋಗದಿಂದಲೂ ಸಾಕಷ್ಟು ಪ್ರಯೋಜನ ಪಡೆಯಬಹುದಾಗಿದೆ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಗಳೆರಡರಲ್ಲೂ ಸಹಾಯಕ. ಇದು ಹೆಚ್ಚಿನ ತೂಕ ನಿಮ್ಮನ್ನು ಬಾಧಿಸದಂತೆ ತಡೆಯುತ್ತದೆ. ನಿಮ್ಮ ಬಯಕೆಗಳ ಬಗ್ಗೆ ಕಾಳಜಿ ವಹಿಸಿ: ಗರ್ಭಧಾರಣೆಯ ಸಮಯದಲ್ಲಿ ವಿಶೇಷ ತಿಂಡಿಗಳ ಬಗ್ಗೆ ಬಯಕೆ ಸಾಮಾನ್ಯವಾದ ವಿಷಯವಾಗಿದೆ. ಆದರೆ ಈ ನಿಮ್ಮ ಬಯಕೆಗಳನ್ನು ಆರೋಗ್ಯಕರ ರೀತಿಯಲ್ಲಿ ನಿಯಂತ್ರಿಸುತ್ತಿದ್ದೀರಿ ಎಂಬ ಬಗ್ಗೆ ಗಮನ ವಹಿಸಿ. ಆಸೆಗಳು ಬಂದಾಗ ಸೇವಿಸದೇ ಇರಬೇಕಾಗಿಲ್ಲ ಆದರೆ ಹೆಚ್ಚಾಗಿ ಆಹಾರ ಸೇವಿಸದಂತೆ ನಿಯಂತ್ರಣದಲ್ಲಿಡಿ.

ತೂಕದ ಬಗ್ಗೆ ಗಮನ ಇರಲಿ

ತೂಕವನ್ನು ನಮೂದಿಸಿದ ಚಾರ್ಟ್ ಒಂದನ್ನು ಸಿದ್ಧಮಾಡಿಟ್ಟುಕೊಳ್ಳುವುದು ಬಹಳ ಪ್ರಯೋಜನಕಾರಿ. ಇದು ತೂಕ ಹೆಚ್ಚಾಗುವುದನ್ನು ನಿಯಂತ್ರಿಸಲು ಮತ್ತು ಗಮನದಲ್ಲಿಡಲು ಸಹಾಯಕ. ತೂಕ ಹೆಚ್ಚಾದ ಬಳಿಕ ಕಡಿಮೆ ಮಾಡುವ ಬದಲು ಹೆಚ್ಚಾದಗಂತೆ ನೋಡಿಕೊಳ್ಳುವುದೇ ಬಹಳ ಸುಲಭ.

English summary

Safe Ways To Lose Weight During Pregnancy

Pregnancy brings many changes in your physical and emotional status. Most of these will be exciting for you as an experience of motherhood. But, what all women hate after getting pregnant is the associated weight gain.
Story first published: Friday, June 20, 2014, 11:30 [IST]
Please Wait while comments are loading...
Subscribe Newsletter